POLICE BHAVAN KALABURAGI

POLICE BHAVAN KALABURAGI

12 June 2011

GULBARGA DIST REPORTED CRIMES

ಶಹಾಬಾದ ನಗರ ಠಾಣೆ :ಶ್ರೀ ಬಸವರಾಜ ತಂದೆ ಶರಣಯ್ಯಾ ಮಠಪತಿ ರವರು, ನನ್ನ ಹಳೆ ಗೆಳೆಯ ಶಿಗ್ಗಾಂವ ತಾಲ್ಲೂಕಿನ ಪಾಣೆಗಟ್ಟಿ ಗ್ರಾಮದ ಮಂಜುನಾಥ ತಂದೆ ಶಿವಲಿಂಗಯ್ಯ ಹಿರೇಮಠ ಈತನು ನನಗೆ ಸುಮಾರು ದಿನಗಳಿಂದ ತನ್ನ ಮೊಬೈಲ ನಂಬರದಿಂದ ನನ್ನ ಮೊಬೈಲ ನಂಬರಿಗೆ ನೇದ್ದಕ್ಕೆ ಕರೆಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು, ಪೋನ ಯಾಕೆ ರಿಸೀವ ಮಾಡುತ್ತಿಲ್ಲಾ ಅಂತಾ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾನೆ. ಕಳುಹಿಸಬೇಡ ಅಂತಾ ಹೇಳಿದರೂ ಅವಾಚ್ಯ ಶಬ್ದಗಳಿಂದ ಬೈಯ್ದು, ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವಲಘಾಣಗಾಪುರ ಠಾಣೆ :ಶ್ರೀ ಲಕ್ಷ್ಮಣ ತಂದೆ ಕಾಮಣ್ಣಾ ಕಾಂಬಳೆ ಸಾ: ಸಂಗಾಪುರ ರವರು, ದಿ: 11-06-11 ರಂದು ಮಧ್ಯಾಹ್ನ ನಾನು ಹೊಲಕ್ಕೆ ಹೋಗುವಾಗ ನಮ್ಮೂರಿನ ಯಲ್ಲಾಲಿಂಗ ತಂದೆ ಮಲ್ಲೇಶಿ ಪೂಜಾರಿ ಇತನು ನನ್ನನು ತಡೆದು ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಘಾಣಗಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಪುರ ಠಾಣೆ :ಶ್ರೀ ಶಮಶೋದ್ದೀನ್ ತಂದೆ ಎಸ್ ಹಸನ ಹುಸೇನ್ ಸಾ|| ಪಾಚಾಪುರ ಎರಿಯಾ ರೋಜಾ ಗುಲಬರ್ಗಾ ರವರು, ದಿ:30-05-11 ರಂದು ಸಾಯಂಕಾಲ ಸುಪರಮಾರ್ಕೇಟದ ಮಹಾರಾಜ ಹೋಟಲ್ ಬಳಿ ನಿಲ್ಲಿಸಿದ್ದ ನನ್ನ ಹಿರೋ ಹೋಂಡಾ ಸ್ಪ್ಲೆಂಡರ ಪ್ಲಸ್ ನಂ. ಕೆಎ 32 ಕೆ 1671 ಅಂದಾಜು ರೂ. 23,000/- ಮೌಲ್ಯದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMESಕುಖ್ಯಾತ ಅಂತರ ರಾಜ್ಯ ರಸ್ತೆ ದರೋಡೆ ಕೋರರ ಬಂಧನ

ಖಚಿತ ಮಾಹಿತಿ ಮೇರೆಗೆ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು
ಮಾನ್ಯಶ್ರೀ ಪ್ರವೀಣ ಪವಾರ ಮಧುಕರ ಜಿಲ್ಲಾ ಪೊಲೀಸ ಅಧೀಕ್ಷಕರು ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಗುಲಬರ್ಗಾ ನಗರದ ಕೇಂದ್ರ ಬಸ್ಸ ನಿಲ್ದಾಣ ಹಾಗೂ ನಗರದ ಹೊರ ವಲಯದ ರಾಣೇಶ ಪೀರ್ ದರ್ಗಾ ದ ಹತ್ತಿರ ದಾಳಿ ಮಾಡಿ 4 ಕುಖ್ಯಾತ ದರೋಡೆಖೋರರನ್ನು ಬಂಧಿಸಿ ಸದರಿಯವರಿಂದ ದರೋಡೆಗೊಳಗಾದ ಸುಮಾರು 2 ಲಕ್ಷ ಮೌಲ್ಯದ ಬಂಗಾರದ ಆಭರಣಗಳು ಮೊಬೈಲ್ ಫೋನ್ ಗಳು ನಗದು ಹಣ ಹಾಗೂ ದರೋಡೆಗೆ ಬಳಸಿದ ಆಟೋರಿಕ್ಷಾ ವಾಹನ ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಂಡು 4 ಜನ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದಿನಾಂಕ:05-06-2011 ರ ರಾತ್ರಿ ಒಂದೇ ದಿನ ಎರಡು ರಸ್ತೆ ದರೋಡೆ ಪ್ರಕರಣಗಳು ವರದಿಯಾಗಿದ್ದು ಒಂದು ಪ್ರಕರಣ ಫರತಾಬಾದ್ ಠಾಣೆಯಲ್ಲಿ ದಾಖಲಾಗಿದ್ದು ಇನ್ನೊಂದು ಪ್ರಕರಣ ಆಳಂದ ರಸ್ತೆಯಲ್ಲಿ ಘಟಿಸಿದ್ದು ಈ ಬಗ್ಗೆ ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ಶ್ರೀ ಖಾಜಾ ಹುಸೇನ್ ಇನಾಮದಾರ್ ಜೆಸ್ಕಾಂ ಇಂಜಿನಿಯರ್ ನರೋಣಾ ರವರ ಫಿರ್ಯಾದಿ ಮೇಲೆ ಪ್ರಕರಣ ದಾಖಲಾಗಿರುತ್ತದೆ. ಶ್ರೀ ಖಾಜಾ ಹುಸೇನ್ ಇನಾಮದಾರ್ ರವರು ನರೋಣಾದಿಂದ ತಮ್ಮ ಸಂಭಂಧಿಕರೊಂದಿಗೆ ಗುಲಬರ್ಗಾಕ್ಕೆ ಬರುವ ಕಾಲಕ್ಕೆ ದರೋಡೆಕೋರರು ಖಾಜಾ ಹುಸೇನ್ ರವರ ವಾಹನವನ್ನು ತಡೆಗಟ್ಟಿ ಅವರಿಗೆ ಚಾಕು ಹಾಗೂ ಬಡಿಗೆಯಿಂದ ಹೊಡೆಬಡೆ ಮಾಡಿ ಅವರ ಬಳಿಯಿದ್ದ ನಗದು ಹಣ, ಬಂಗಾರದ ಆಭರಣಗಳು, ಮೊಬೈಲ್ ಫೋನ್ ಗಳು, ಕಾಗದ ಪತ್ತಗಳನ್ನು ದೋಚಿ ಪರಾರಿಯಾಗಿದ್ದು ಈ ಸದರಿ ಪ್ರಕರಣಗಳ ಪತ್ತೆಗಾಗಿ ಮಾನ್ಯಶ್ರೀ ಬಿ, ವ್ಹಿ ಯಲ್ಲಪ್ಪ ಹೆಚ್ಚುವರಿ ಎಸ್‌ಪಿ ಸಾಹೇಬರು ಗುಲಬರ್ಗಾ ಹಾಗೂ ಶ್ರೀ ಎಮ್‌, ವ್ಹಿ, ಸೂರ್ಯವಂಶಿ ಡಿವೈಎಸ್‌ಪಿ ಗ್ರಾಮೀಣ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಿದ್ದು ರಚನೆ ಮಾಡಿದ್ದು. ಸದರಿ ವಿಶೇಷ ತಂಡದಲ್ಲಿ ಶ್ರೀ ರವಿ ಡಿಸಿ ಐಪಿಎಸ್‌ (ಪ್ರೋ) ಹಾಗೂ ಶ್ರೀ ಬಿ, ಪಿ ಚಂದ್ರಶೇಖರ ಪಿಐ, ಶ್ರೀ ಬಸೀರ ಪಟೇಲ ಪಿಐ , ಶ್ರೀಮತಿ ವಿಜಯಲಕ್ಷ್ಮಿ ಸಿಪಿಐ ಗ್ರಾಮೀಣ ಹಾಗೂ ಶ್ರೀ ಆರ್‌, ವ್ಹಿ ಹಳಗೋದಿ ಪಿಎಸ್‌ಐ ಗ್ರಾಮೀಣ ಠಾಣೆ ಹಾಗೂ ಪಂಡಿತ ಸಗರ ಪಿಎಸ್‌ಐ ವಿವಿ ಠಾಣೆ ಗುಲಬರ್ಗಾ ಹಾಗೂ ಸಿಬ್ಬಂದಿಯವರಾದ ಲಕ್ಕಪ್ಪ ಹೆಚ್‌ಸಿ 36, ಪ್ರಭುಲಿಂಗ ಹೆಚ್‌ಸಿ 359, ಮೊಹಿಜ್ಜೋದ್ದೀನ ಪಿಸಿ 690, ಆನಂದ ಪಿಸಿ 986, ಪ್ರಭಾಕರ ಪಿಸಿ 44 ಚನ್ನಬಸವಯ್ಯ ಪಿಸಿ 1049 , ನರಸಿಂಹಲು
ಪಿಸಿ 08 ಅಸ್ಲಂ ಪಾಶಾ ಪಿಸಿ 966 ಕಂಠೆಪ್ಪ ಪಿಸಿ 796, ಹಾಗೂ ಗುಲಬರ್ಗಾ ಗ್ರಾಮೀಣ ಠಾಣೆ ಜೀಪ ಚಾಲಕ ಮಲ್ಲಿಕಾರ್ಜುನ ಪಿಸಿ 1694 ಹಾಗೂ ಪಾರುಬಾಯಿ ಮಪಿಸಿ 1253 ವಿವಿ ಠಾಣೆ ಗುಲಬರ್ಗಾ ಇರುತ್ತಾರೆ. ಸದರಿ ಎಲ್ಲರೂ ಕೂಡಿ ದಿನಾಂಕ 11/6/2011 ರಂದು ಗುಲಬರ್ಗಾ ಗ್ರಾಮೀಣ ಠಾಣೆಯ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ ಅಧಿಕಾರಿಗಳು ಅತ್ಯಂತ ವೈಜ್ಞಾನಿಕ ರೀತಿಯಿಂದ ತನಿಖೆ ಕೈಕೊಂಡು ಪ್ರಕರಣ ಪತ್ತೆ ಹಚ್ಚಿ ಆರೋಪಿತರಾದ 1) ಮಹ್ಮದಮೋಸೀನ ತಂ/ ಮಹ್ಮದ ಮೌಲಾಲಿ ವ: 19 ಜಾ:ಮುಸ್ಲಿಂ ಉ:ವಿದ್ಯಾರ್ಥಿ ಸಾ: ಎಸ್‌ಎಮ್‌ ಕೃಷ್ಣಾ ಕಾಲನಿ ಗುಲ್ಬರ್ಗಾ 2) ಪ್ರಕಾಶ ತಂದೆ ಮಹಾದೇವಪ್ಪ ವಠಾರ ಸಾ; ಕರೆಬೋಸಗಾ 3. ಶೇಖ ಸುಲ್ತಾನ ತಂದೆ ಶೇಖ ಸಲೀಮ ಸಾ: ಎಸ್‌ಎಮ್‌ ಕೃಷ್ಣಾ ಕಾಲನಿ ಗುಲ್ಬರ್ಗಾ 4. ಶೇಖಸಲೀಮ ತಂದೆ ಶೇಖ ಯಾಸೀನಸಾಬ ಆಟೋ ನಂ ಕೆಎ 32 4942 ಸಾ: ಎಸ್‌ಎಮ್‌ ಕೃಷ್ಣಾ ಕಾಲನಿ ಗುಲ್ಬರ್ಗಾ ಈ ನಾಲ್ಕು ಜನರನ್ನು ದಸ್ತಗಿರಿ ಮಾಡಿ ಅವರುಗಳ ರಸ್ತೆ ದರೋಡೆಯಲ್ಲಿ ದೋಚಿದಂತಹ 1. ಎರಡು ನೋಕಿಯೋ ಮೋಬೈಲ, 2 ಒಂದು ರಿಲಾಯನ್ಸ್‌ ಮೋಬೈಲ 3. ಒಂದು ಬೋರಮಳ ಸರ 4.ಕಿವಿ ಓಲೆ 5) ಆಟೋ ನಂ ಕೆ 32 4942 ಹಾಗೂ ಎಟಿಎಮ್‌‌ ಕಾರ್ಡ ಗುರುತಿನ ಪತ್ರಗಳನ್ನು ವಗೈರೆ ಒಟ್ಟು 2 ಲಕ್ಷ್ ಕಿಮ್ತತಿನ ವಸ್ತುಗಳನ್ನು ದರೋಡೆ ಕೋರರಿಂದ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ತಲೆ ಮರೆಯಿಸಿಕೊಂಡ ಆರೋಪಿತರ ಪತ್ತೆ ಕಾರ್ಯ ಜಾರಿಯಲ್ಲಿ ಇರುತ್ತದೆ. ತನಿಖೆ ನಂತರ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸದರಿ ತಂಡವು ವೈಜ್ಞಾನಿಕ ರೀತಿಯಿಂದ ತನಿಖೆ ಕೈಕೊಂಡು ರಸ್ತೆ ದರೋಡೆ ಪ್ರಕರಣವನ್ನು ಪತ್ತೆ ಮಾಡಿದ ಕಾರ್ಯಾವನ್ನು ಮಾನ್ಯ ಎಸ್‌‌ಪಿ ಸಾಹೇಬರು ಮೆಚ್ಚುಗೆ ವ್ಯಕ್ತಪಡಿಸಿದರು.