POLICE BHAVAN KALABURAGI

POLICE BHAVAN KALABURAGI

07 November 2016

KALABURAGI DISTRICT REPORTED CRIMES.

ಯಡ್ರಾಮಿ ಠಾಣೆ : ದಿನಾಂಕ 06-11-2016 ರಂದು ಬೆಳಿಗ್ಗೆ 11;00 ಗಂಟೆಗೆ ಫಿರ್ಯಾದಿ ಜಹಿರಾಬೇಗಂ ಗಂಡ ಲಾಲಸಾಬ ಚೌಧರಿ ಸಾ|| ಯಡ್ರಾಮಿ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಿಕಿಕೃತ ಮಾಡಿದ ಅರ್ಜಿ ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ ನನಗೆ 1] ಫಾತಿಮಾಬೇಗಂ, 2] ಹುಸೇನಬಿ, 3] ಹುಸೇನ, 4] ದಾವುದ, 5] ಫೌಜಿಯಾಬೇಗಂ ಅಂತಾ 05 ಜನ ಮಕ್ಕಳಿರುತ್ತಾರೆ. ನನ್ನ ಹಿರಿ ಮಗಳು ಇವಳು ನಮ್ಮೂರ ಉರದು ಶಾಲೆಯಲ್ಲಿ ಈ ವರ್ಷ 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುತ್ತಾಳೆ. ಈಗ ಕೆಲವು ತಿಂಗಳಿಂದ ನಮ್ಮೂರ ರಮೇಶ ತಂದೆ ಬಸಪ್ಪ ದುಮ್ಮದ್ರಿ ಈತನು ನನ್ನ ಮಗಳು ಶಾಲೆಗೆ ಹೋದಾಗಲೆಲ್ಲಾ ಚುಡಾಯಿಸುತ್ತಾ, ನಾನು ನಿನಗೆ ಬಿಡುವುದಿಲ್ಲಾ ಮದುವೆಯಾಗುತ್ತೇನೆ ಅಂತಾ ಅವಳಿಗೆ ತೊಂದರೆ ಕೊಡುತ್ತಿರುತ್ತಾನೆ ಅಂತಾ ಆಗಾಗ ನನ್ನ ಮಗಳು ನಮ್ಮ  ಮುಂದೆ ಹೇಳುತ್ತಾ ಬಂದಿರುತ್ತಾಳೆ, ಆಗ ನಾನು ರಮೇಶ ದುಮ್ಮದ್ರಿಗೆ ಈತನಿಗೆ ತಿಳವಳಿಕೆ ಹೇಳಿದರು ಸಹ ಕೇಳದೆ ಹಾಗೆ ಚುಡಾಯಿಸುತ್ತಾ ಬಂದಿರುತ್ತಾನೆ. ದಿನಾಂಕ  02-11-2016 ರಂದು ಬೆಳಿಗ್ಗೆ 10-00 ಗಂಟೆಗೆ ನನ್ನ ಮಗಳು ಶಾಲೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿರುತ್ತಾಳೆ. ನಂತರ ಸಾಯಂಕಾಲ 6 ಗಂಟೆಯಾದರು ನನ್ನ ಮಗಳು ಮರಳಿ ಮನೆಗೆ ಬರಲಿಲ್ಲಾ, ಆಗ ನಾನು ಮತ್ತು ನನ್ನ ಗಂಡ ಹಾಗು ನಮ್ಮ ಅಣ್ಣ ಖಾಜಾಹುಸೇನ ತಂದೆ ಅಬ್ದುಲಸಾಬ ಚೌಧರಿ ರವರು ಕೂಡಿ ಯಡ್ರಾಮಿ ಗ್ರಾಮದಲ್ಲಿ ಎಲ್ಲಾ ಕಡೆ ಹುಡಕಾಡಿದರು ಸಿಗಲಿಲ್ಲಾ, ನಂತರ ನನ್ನ ಗಂಡ ಮತ್ತು ನಮ್ಮ ಅಣ್ಣ ಖಾಜಾಹುಸೇನ ಹಾಗು ಸುಬಾನಅಲಿ ತಂದೆ ಬುರಾನಸಾಬ ಚೌಧರಿ ರವರು ಕೂಡಿ ಜೇವರ್ಗ, ಕಲಬುರಗಿ, ಶಹಾಪೂರ, ಯಾದಗೀರ, ಶೊರಾಪೂರ ಮಳ್ಳಿ. ನಾಗರಳ್ಳಿ ಹಾಗು ಇತರೆ ಕಡೆಗಳಲ್ಲಿ ಹುಡಕಾಡಿದರು ನಮ್ಮ ಮಗಳು ಪತ್ತೆಯಾಗಿರುವುದಿಲ್ಲಾ. ನನ್ನ ಮಗಳಾದ ಇವಳಿಗೆ ರಮೇಶ ದುಮ್ಮದ್ರಿ ಈತನು ಮದುವೆಯಾಗುತ್ತೇನೆ ಅಂತಾ ಪುಸ್ಲಾಯಿಸಿ, ರಮೇಶ ಈತನು ತನ್ನ ಗೆಳೆಯರಾದ ಮಹೇಶ ತಂದೆ ಸಾಯಬಣ್ಣ ನಡುವಿನಮನಿ, ಹಣಮಂತ ತಂದೆ ಅಡವೆಪ್ಪ ನಡುವಿನಮನಿ ರವರ ಸಹಾಯದಿಂದ ದಿನಾಂಕ 02-11-2016 ರಂದು ಬೆಳಿಗ್ಗೆ 10-30 ಗಂಟೆಯಿಂದ 11-00 ಗಂಟೆ ಮದ್ಯದಲ್ಲಿ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ. ನನ್ನ ಮಗಳಿಗೆ ಇಲ್ಲಿಯವರೆಗೆ ಹುಡುಕಾಡಿದರು ಸಿಕ್ಕಿರುವದಿಲ್ಲಾ. ಆದ್ದರಿಂದ ಇಂದು ಪಿರ್ಯಾದಿ ಕೊಡಲು ತಡವಾಗಿ ಠಾಣೆಗೆ ಬಂದಿದ್ದು ಇರುತ್ತದೆ.  ಕಾರಣ ಅಪ್ರಾಪ್ತ ವಯಸ್ಸಿನ ನನ್ನ ಮಗಳು ಫಾತಿಮಾಬೇಗಂ ಇವಳಿಗೆ ರಮೇಶ ದುಮ್ಮದ್ರಿ ಇತನು ಮಹೇಶ ನಡುವಿನಮನಿ, ಹಣಮಂತ ನಡುವಿನಮನಿ  ರವರ ಸಹಾಯದಿಂದ ಅವಳಿಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುತ್ತಾರೆ. ಆದ್ದರಿಂದ ಮೇಲ್ಕಕಂಡ 03 ಜನರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲಾದ ಬಗ್ಗೆ ವರದಿ.