ಹಲ್ಲೆ
ಪ್ರಕರಣಗಳು :
ಕಮಲಾಪೂರ ಠಾಣೆ : ದಿನಾಂಕ: 12/08/2014 ರಂದು ಮಧ್ಯಾಹ್ನ 03-00 ಗಂಟೆಯ ಸುಮಾರಿಗೆ ಅಶೋಕ ತಂದೆ ಮೋನು ಚವ್ಹಾನ ಸಾ : ದಿನಸಿ ಕೆ ತಾಂಡಾ ಇವರ ಅತ್ತಿಗೆಯ ತಮ್ಮನಾದ ಸಂಜು ತಂದೆ ರಾಮು ರಾಠೋಡ ಈತನು
ನನ್ನ ಅಣ್ಣ ಮಾರುತಿ ಈತನಿಗೆ ಫೋನ್ ಮಾಡಿ ಶಶಿಕಲಾ ಇವಳನ್ನು ಕರೆದುಕೊಂಡು
ಹೋಗುವ ಸಂಭಂದ ನಾವು ಕಮಲಾಫೂರದಲ್ಲಿ ಪಂಚಾಯತಿ ಹಾಕಿದ್ದೇವೆ, ನೀವು ಬರಬೇಕು ಅಂತಾ ಹೇಳಿದ ಮೇರೆಗೆ ನಾನು , ನನ್ನ ಅಣ್ಣ ಮಾರುತಿ, ತಮ್ಮ ಪಿಂಟೂ ಮತ್ತು ತಾಯಿಯಾದ ಸೀತಾಬಾಯಿ ಕೂಡಿಕೊಂಡು ನಮ್ಮ ತಾಂಡಾದ .ಮೋತಿರಾಮ ತಂದೆ ಗೇಮಾ ಕಾರಬಾರಿ. ಮುಕುಂದ ತಂದೆ ಶಂಕರ ರಾಠೋಡ ರವರನ್ನು
ಕರೆದುಕೊಂಡು ಮಧ್ಯಾಹ್ನ 04-00 ಗಂಟೆ ಸುಮಾರಿಗೆ ಕಮಲಾಫೂರದ ಹುಮನಾಬಾದ ರಸ್ತೆಗಿರುವ ಮಿನರಲ್ ವಾಟರ ಕೇಂದ್ರದ ಹತ್ತಿರ ಬಂದಿದ್ದು, ಇಲ್ಲಿ ರಾಜನಾಳ ತಾಂಡಾದ ನಮ್ಮ ಅತ್ತಿಗೆ 1. ಶಶಿಕಲಾ ಮತ್ತು ಅವರ ಮನೆಯವರು ಇದ್ದರು . ಆಗ ನಾವು ಪಂಚಾಯತಿ ಮಾಡುತ್ತಿದ್ದಾಗ ನಮ್ಮ ಅತ್ತಿಗೆ ಶಶಿಕಲಾ ಇವಳು ನಮ್ಮನ್ನು ನೋಡಿ ನಮ್ಮ ಲಂಬಾಣಿ ಭಾಷೆಯಲ್ಲಿ ಈ ಅಶ್ಯಾ,ಪಿಂಟ್ಯಾ,ಮತ್ತು ಸೀತಾಬಾಯಿ ಇವರು ಜೀವಂತವಾಗಿ ತಾಂಡಾದಲ್ಲಿ ಇರುವ ವರೆಗೆ ನಾನು ನನ್ನ ಗಂಡನ ಹತ್ತಿರ ಹೋಗುವುದಿಲ್ಲ, ಈ ಜಗಳಕ್ಕೆ ಇದೇ ರಂಡಿ ಮಕ್ಕಳು ಕಾರಣರಾಗಿರುತ್ತಾರೆ ಅಂತಾ
ಹೇಳುತ್ತಿದ್ದಾಗ ನಾವು ಬಾಂಬೇಕ್ಕೆ ಹೋಗುತ್ತೇವೆ, ನಿವೇ ಇಲ್ಲಿ ಇರಿ ಅಂತಾ ಹೇಳುತ್ತಿದ್ದಾಗ ಒಮ್ಮಿಲೇ 2. ಸಂಜು ತಂದೆ ರಾಮು ರಾಠೋಡ, 3. ರಾಮು ತಂದೆ ಧರ್ಮು ರಾಠೋಢ ಮತ್ತು 4. ಪಿಂಟೂ ತಂದೆ ರಾಮು ರಾಠೋಡ ಇವರು ಈ ರಂಡಿ ಮಕ್ಕಳು ಜೀವಂತ ಇರುವ ವರೆಗೆ ನಮ್ಮ ತಂಗಿಗೆ ನೆಮ್ಮದಿ ಇರುವುದಿಲ್ಲ ,ಮೊದಲು ಇವರಿಗೆ ಒಂದು ಗತಿ ಕಾಣಿಸಬೇಕು ಅಂತಾ ನಮ್ಮ ಲಂಭಾಣಿ ಬಾಷೆಯಲ್ಲಿ ಬೈಯ್ದಾಡುತ್ತಾ ನನ್ನೊಂದಿಗೆ ತೆಕ್ಕಿ ಮಸ್ತಿ ಮಾಡುತ್ತಾ ನನಗೆ ನೆಲದ ಮೇಲೆ ಎತ್ತಿ ಬಿಸಾಡಿ ಸಂಜು, ರಾಮು ಮತ್ತು ಪಿಂಟೂ ಕೂಡಿಕೊಂಡು ನನಗೆ ತಮ್ಮ ಕೈಯಿಂದಹೊಡೆಯುತ್ತಾ ಕಾಲಿನಿಂದ ಒದೆಯುತ್ತಾ ಗುಪ್ತಗಾಯ ಪಡಿಸಿರುತ್ತಾರೆ ಜಗಳ ಬಿಡಿಸಲು ಬಂದ ನನ್ನ ತಾಯಿ ಸೀತಾಬಾಯಿಗೆ 5. ಬಾಬು ತಂದೆ ರಾಮು ರಾಠೋಡ, ರಾಮುತಂದೆ ಧರ್ಮು ರಾಠೋಡ ಇವರು ಅಡ್ಡಗಟ್ಟಿ ನಿಲ್ಲಿಸಿ ತೆಲೆಯ ಕೂದಲು ಮತ್ತು ಗಗರಿ ಹಿಡಿದು ಎಳೆದಾಡಿ ತಮ್ಮ ಕೈಗಳಿಂದ ಹೊಡೆಯುತ್ತಾ ಮಾನಭಂಗ ಮಾಡುತ್ತಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಸಂಗೀತಾ ಗಂಡ ರವೀಂದ್ರನಾಥ ಘಂಟಿ ಇವರಿಗೆ ನನಗೆ ಪರಿಚಯದ ಮಿನಾಕ್ಷಿ ಗಂಡ ಭೀಮಾಶಂಕರ
ಇವರ ಹತ್ತಿರ ನಾನು ಸ್ಕೀಮ್ ಸಲುವಾಗಿ ಹಣವನ್ನು ತೆಗೆದುಕೊಂಡಿದ್ದು ಅದರಲ್ಲಿ ಅರ್ದ ಹಣ
ಕೊಟ್ಟಿದ್ದು ಇನ್ನುಳಿದ ಹಣ ಕೊಡಬೇಕಿದ್ದು ದಿನಾಂಕಃ 12/08/2014 ರಂದು ಸಾಯಂಕಾಲ 07:00 ಪಿ.ಎಂ.
ದ ಸುಮಾರಿಗೆ ದರ್ಶನಾಪೂರ ಲೇಔಟ ಜಿ.ಡಿ.ಎ ಕಾಲೋನಿಯಲ್ಲಿರುವ ಮೀನಾಕ್ಷಿ ಇವರ ಮನೆಗೆ ಹಣದ ವಿಷಯದ
ಬಗ್ಗೆ ಮಾತನಾಡಲು ನಾನು ಹೋದಾಗ ಮೀನಾಕ್ಷಿ ಇವಳು ಉಳಿದ ಹಣ ನನಗೆ ಯಾವಾಗ ಕೊಡುತ್ತಿ ನಿನ್ನ
ಗಂಡನಿಗೆ ಕೊಟ್ಟ ಹಣವನ್ನು ಇವತ್ತೇ ಕೊಟ್ಟು ಹೋಗಬೇಕು ರಂಡಿ ಭೋಸಡಿ ಅಂತಾ ಅವಾಚ್ಯವಾಗಿ ಬೈದು
ನನಗೆ ಮುಂದಕ್ಕೆ ಹೋಗದಂತೆ ತಡೆ ಹಿಡಿದು ಕೈಗಳಿಂದ ಹೊಡೆ ಬಡೆ ಮಾಡಿ ಕೂದಲು ಹಿಡಿದು ಜಗ್ಗಾಡಿ ಬಲಕೈಯನ್ನು
ತಿರುವಿದಳು. ನೀನು ಹಣ ಕೊಡದಿದ್ದರೇ ನಿನಗೆ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾಳೆ.
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಗೊವಿಂದ ರೆಡ್ಡಿ
ತಂದೆ ಅನಂತ ರೆಡ್ಡಿ ಕೆ.ಎ.ಎಸ್ ಅಪರ ಜಿಲ್ಲಾಧಿಕಾರಿಗಳು ಗುಲಬರ್ಗಾ ಇವರು ದಿನಾಂಕ 08-08-2014 ರಂದು ಸಂಜೆ 05:00 ಗಂಟೆ ಸುಮಾರಿಗೆ ತಾವು ವಾಸವಿರುವ ಐವನಶಾಹಿ ಕಾಲೋನಿಯಲ್ಲಿರುವ ಪಿ.ಡಬ್ಲೂ.ಡಿ ಕ್ವಾಟರ್ಸ ಡಿ 67 ನೇದ್ದರ ಕೀಲಿ ಹಾಕಿಕೊಂಡು ತರಬೇತಿ ಕುರಿತು ಮೈಸೂರಕ್ಕೆ ಹೋಗಿದ್ದು ದಿನಾಂಕ 12-08-2014 ರಂದು 10 ಗಂಟೆ ಸುಮಾರಿಗೆ ಕಛೇರಿ ಸಿಬ್ಬಂದಿಯವರು ಫೋನ ಮಾಡಿ ಮನೆಯ ಬಾಗಿಲ ಕೀಲಿ ಮುರದಿದ್ದು ಇದೆ ಅಂತಾ ತಿಳಿಸಿದ ಮೇರೆಗೆ ದಿನಾಂಕ 13-08-2014 ರಂದು 40 ಪಿ.ಎಮ್ ಕ್ಕೆ ಮನೆಗೆ ಬಂದು ನೋಡಲಾಗಿ ಮನೆಯಲ್ಲಿಯ ಬಂಗಾರದ ಆಭರಣಗಳು ಹಾಗು
ನಗದು ಹಣ ಒಟ್ಟು ಅ.ಕಿ 7,60,000/-- ರೂ ಯಾರೋ ಕಳ್ಳರು ನಾವು ಮನೆಯಲ್ಲಿ ಇಲ್ಲದಾಗ ಬಾಗಿಲ ಕೀಲಿ ಮುರಿದು ಮನೆಯಲ್ಲಿಯ ಬಂಗಾರದ ಆಭರಣ ಮತ್ತು ನಗದು ಹಣ ಕಳ್ಳತನ
ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಸುನೀಲಕುಮಾರ ತಂದೆ ರುಕ್ಕಪ್ಪಾ ಖಣಗೆ ಸಾ;ಶರಣಸಿರಸಗಿ ಮಡ್ಡಿ ಅಫಜಲಪೂರ ರೋಡ ಗುಲಬರ್ಗಾ ಇವರು ದಿನಾಂಕ. 13-08-2014 ರಂದು ರಾತ್ರಿ. 8-15 ಗಂಟೆಯ ಸುಮಾರಿಗೆ ಮೋಬಾಯಿಲ ರಿಚಾರ್ಜ ಮಾಡಿಕೊಂಡು ಮರಳಿ ಮನೆಗೆ ಹೋಗುತ್ತಿರುವಾಗ ಗುಲಬರ್ಗಾ ಅಫಜಲಪೂರ ರೋಡನ ಶರಣಶಿರಸಗಿ ನಿಸರ್ಗಾ ಕಾಲೂನಿ ಕ್ರಾಸ ಹತ್ತಿರ ರೋಡಿನ ಎಡಬದಿಗೆ ನಡೆದುಕೊಂಡು ಹೋಗುತ್ತಿರುವಾಗ ಅದೇವೇಳಗೆ ನನ್ನ ಹಿಂದಿನಿಂದ ಗುಲಬರ್ಗಾ ಕಡೆಯಿಂದ ಒಂದು ಟಿ.ವಿ.ಎಸ್. ವೇಗಾ ಸ್ಕೂಟಿ ನಂ.ಕೆ.ಎ.32 ಇ.ಸಿ.0668 ನೆದ್ದರ ಚಾಲಕ ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನನಗೆ ಜೋರಾಗಿ ಡಿಕ್ಕಿ ಹೊಡೆದು ನನಗೆ ಗಾಯಗೊಳಿಸಿದ್ದು, ಅಲ್ಲದೆ ಸದರಿ ಸ್ಕೂಟಿ ಮೋಟಾರ ಸೈಕಲ ಚಾಲಕ ತನ್ನ ಮೋಟಾರ ಸೈಕಲದೊಂದಿಗೆ ಜೋರಾಗಿ ಕೆಳಗೆ ಬಿದ್ದಿರಿಂದ ಆತನಿಗೆ ತಲೆಗೆ , ಹಣೆಗೆ , ಮುಖಕ್ಕೆ ಭಾರಿ ಪೆಟ್ಟಾಗಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ ಸದರಿ ಮೋಟಾರ ಸೈಕಲ ಚಾಲಕ ಮೃತನ ಹೆಸರು ನಾಗರಾಜ ತಂದೆ ಲಿಂಗಮ್ಮಾ ಚಿದ್ರಿ ಸಾ;ಕರುಣೆಶ್ವರ ಕಾಲೂನಿ ಗುಲಬರ್ಗಾ ಇರುತ್ತದೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಮಾಹಾತ್ಮಾ
ಬಸವೇಶ್ವರ ನಗರ ಠಾಣೆ : ಶ್ರೀಮತಿ ಕುಸಮಾವತಿ ಗಂಡ ಮಾರುತಿ ವಾಗ್ದರಗಿ ಇವರ ಗಂಡನಾದ
ಮಾರುತಿ ತಂದೆ ಲಕ್ಕಪ್ಪಾ ವಾಗ್ದರಗಿ ಈತನು ಗುಲಬರ್ಗಾ ನಗರದ ರಾಜಾಪೂರ ರಿಂಗ್ ರೋಡ್ ಸಮೀಪ ಇರುವ
ವಿ.ಟಿ.ಯು ಕಾಲೇಜನಲ್ಲಿ ಸೆಕ್ಯೂರಿಟಿ ಗಾರ್ಡ ಅಂತಾ ಕೆಲಸ ಮಾಡುತ್ತಿದ್ದು, ಆಗಾಗ ವಾರದಲ್ಲಿ 02 ಸಲ ಅಂಬಲಗಿ ಗೆ ಬಂದು ಹೋಗುವುದು
ಮಾಡುತ್ತಿದ್ದನು. ದಿನಾಂಕಃ 13/08/2014 ರಂದು 08:00 ಎ.ಎಂ. ಸುಮಾರಿಗೆ ನನ್ನ ಮೈದುನಾದ ರಮೇಶ
ಈತನು ಫೋನ್ ಮಾಡಿ ಹೇಳಿದ್ದೇನೆಂದರೇ, ಅಣ್ಣನಾದ ಮಾರುತಿ ಈತನಿಗೆ ಗುಲಬರ್ಗಾ ಸೇಡಂ ರೋಡಿನ ವಿರೇಂದ್ರ ಪಾಟೀಲ ಬಡವಣೆಯ ಕಮಾನ ದಿಂದ
ಸ್ವಲ್ಪ ಮುಂದೆ ರೋಡಿನಲ್ಲಿ ಯಾವುದೋ ವಾಹನ ಅತಿವೇಗ ಮತ್ತು ನಿಸ್ಕಾಳಜಿತನದಿಮದ ಚಲಾಯಿಸಿ ಅಪಘಾತ
ಪಡಿಸಿ ಹೋಗಿದ್ದರಿಂದ ಈತನಿಗೆ ತಲೆಗೆ, ಹೊಟ್ಟೆಗೆ, ಮುಂಡಿಯ ಕೆಳಗಡೆ, ದೇಹದ ಇತರೆ ಕಡೆಗಳಲ್ಲಿ ಭಾರಿ ರಕ್ತಗಾಯ ಹೊಂದಿ ಸ್ಥಳದಲ್ಲಿ
ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.