POLICE BHAVAN KALABURAGI

POLICE BHAVAN KALABURAGI

09 August 2016

KALABURAGI DISTRICT PRESS NOTE

ಪತ್ರಿಕಾ ಪ್ರಕಟಣೆ
                ಮಾನ್ಯ ಸರ್ವೋಚ್ಛ  ನ್ಯಾಯಾಲಯದ ನಿರ್ದೇಶನದಂತೆ ಕಲಬುರಗಿ ಆರಕ್ಷಕ ಅಧೀಕ್ಷಕರವರಾದ ಶ್ರೀ. ಎನ್.ಶಶಿಕುಮಾರ ರವರ  ನೇತೃತ್ವದಲ್ಲಿ ಹಾಗೂ ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮತ್ತು ಮಕ್ಕಳ ಉಚಿತ ಸಹಾಯವಾಣಿ, ಕಾರ್ಮಿಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾನೂನು ಮಹಾವಿದ್ಯಾಲಯ, ಸ್ವಯಂ ಸೇವಾ ಸಂಸ್ಥೆ ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ವಾರಸ್ಸು ರಹಿತ ಮಕ್ಕಳ ಹಾಗೂ ಬಾಲ ಕಾರ್ಮಿಕ ನಿರತ ಮಕ್ಕಳ ಮತ್ತು ಕಾಣೆಯಾದ ಮಕ್ಕಳ ಹಾಗೂ ನಿರಾಶ್ರಿತ ಮಕ್ಕಳು ಮತ್ತು ತೊಂದರೆಯಲ್ಲಿರುವ ಮಕ್ಕಳ ಪತ್ತೆ ಹಾಗೂ ಪುನರ್ವಸತಿ ಒದಗಿಸುವ ಹಿನ್ನಲೆಯಲ್ಲಿ ಕಾಣೆಯಾದ ಮಕ್ಕಳನ್ನು ಪತ್ತೆ ಹಚ್ಚಿ ಪಾಲಕರಿಗೆ ಒಪ್ಪಿಸುವ ಆಪರೇಷನ್ ಮುಸ್ಕಾನ-2 ಎಂಬ ವಿನೂತನ ಯೋಜನೆಯನ್ನು ಕಲಬುರಗಿ  ಜಿಲ್ಲೆಯಾದ್ಯಾಂತ ಕಾರ್ಯಾರಂಭ ಮಾಡಿದ್ದು ಈ ದಿಶೆಯಲ್ಲಿ ಬಿಕ್ಷಾಟನೆಯಲ್ಲಿ ತೊಡಗಿದ 90 ಮಕ್ಕಳು ಹಾಗೂ ವಿವಿಧ ಬಾಲ ಕಾರ್ಮಿಕ ಕೆಲಸದಲ್ಲಿ ತೊಡಗಿದಂತಹ  24 ಮಕ್ಕಳು ಹೀಗೆ ಒಟ್ಟು 114 ಮಕ್ಕಳನ್ನು ಪತ್ತೆ ಹಚ್ಚಿದ್ದು ಅವರಲ್ಲಿ 23 ಜನ ಹೆಣ್ಣು ಮಕ್ಕಳಿದ್ದು 91 ಜನ ಗಂಡು ಮಕ್ಕಳಿರುತ್ತಾರೆ, ಇವರನ್ನು ಮುಂದಿನ ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಿ ಬಾಲಕರ ಬಾಲ ಮಂದಿರ ಮತ್ತು ಬಾಲಕಿಯರ ಬಾಲ ಮಂದಿರದಲ್ಲಿ ತಾತ್ಕಾಲಿಕ ಪುನರ್ವಸತಿ ಒದಗಿಸಲಾಗಿದೆ.
                ಅಲ್ಲದೆ, ಕಾರ್ಯಾಚರಣೆಯಲ್ಲಿ ಬಿಕ್ಷೆ ಬೇಡುತಿದ್ದ 7 ಜನ ವಯಸ್ಕ ಬಿಕ್ಷುಕರನ್ನು ಪತ್ತೆ ಹಚ್ಚಿ ನಿರ್ಗತಿಕರ ಪುನರ್ವಸತಿ ಕೇಂದ್ರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಹಾಗೆಯೇ ಇಲಾಖೆಯಲ್ಲಿ ಕಾಣೆಯಾದ ಪ್ರಕರಣಗಳು 2011 ರಿಂದ ಇಲ್ಲಿಯ ವರೆಗೆ ಒಟ್ಟು 42 ಪ್ರಕರಣಗಳು ತನಿಖೆಯಲ್ಲಿದ್ದು, ಈ ಕಾರ್ಯಾಚರಣೆಯಲ್ಲಿಯೇ ಪತ್ತೆ ಕಾರ್ಯವು ಅತೀ ಚುರುಕಾಗಿ ನಡೆಯುತಿದ್ದು, ಸದರ ಕಾರ್ಯಾಚರಣೆಯು  ಆಗಸ್ಟ ಮಾಸಾಂತ್ಯದವರೆಗೆ ಮುಂದುವರೆಯಲಿದ್ದು ಸಾರ್ವಜನಿಕರು ಈ ದಿಶೆಯಲ್ಲಿ ಸಹಕರಿಸುವದು, ಮೇಲೆ ನಮೂದ ಮಾಡಿದ ಮಾಹಿತಿ ಕಂಡು ಬಂದಲ್ಲಿ ಪೊಲೀಸ ಕಂಟ್ರೋಲ್ ರೂಮಿನ ದೂರವಾಣಿ ಸಂಖ್ಯೆ 100 ಅಥವಾ ಮಕ್ಕಳ ಉಚಿತ ಸಹಾಯವಾಣೆ  1098 ಗೆ  ತಿಳಿಸತಕ್ಕದ್ದು.
                                                                                                         ಪೊಲೀಸ ಅಧೀಕ್ಷಕರು
                                                                                                                ಕಲಬುರಗಿ

Kalaburagi District Reported Crimes

ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ವಿಜಯಲಕ್ಷ್ಮಿ ಗಂಡ ಸಿದ್ದು ಕೋಗನೂರ ಸಾ: ಹಾವಳಗಾ ಇವರ ಗಂಡನಾದ ಸಿದ್ದು ತಂದೆ ಪರಮೇಶ್ವರ ಕೋಗನೂರ ದಿನಾಲು ಮಧ್ಯ ಸೇವನೆ ಮಾಡಿಯೇ ಮನೆಗೆ ಬರುತ್ತಿದ್ದನು ನಾವು ಎಷ್ಟು ಹೇಳಿದರು ಕೇಳದೆ ದಿನಾಲು ಮಧ್ಯಪಾನ ಸೇವನೆ ಮಾಡುತ್ತಿದ್ದನು. ಹಿಗಿದ್ದು ದಿನಾಂಕ:05/08/2016 ರಂದು 12:00 ಪಿಎಮ್‌ ಸುಮಾರಿಗೆ ನಾನು ನಮ್ಮ ಅತ್ತೆ ಮನೆಯಲ್ಲಿದ್ದಾಗ ನನ್ನ ಗಂಡ ಎಂದಿನಂತೆ ಮದ್ಯಪಾನ ಮಾಡಿ ಮನೆಗೆ ಬಂದು ನಮಗೆ ಮಧ್ಯಪಾನದ ಅಮಲಿನಲ್ಲಿ ನಾನು ಇವತ್ತು ಸಾಯುತ್ತೇನೆ ನನಗೆ ಜೀವನ ಬೇಸರವಾಗಿದೆ ಅಂತಾ ಅಂದನು ನಾವು ಮಧ್ಯಪಾನದ ನಶೆಯಲ್ಲಿ ಹಾಗೆ ಅನ್ನುತ್ತಾರೆ ಅಂತಾ ಸುಮ್ಮನಿದ್ದೆವು. ನಂತರ ನನ್ನ ಗಂಡ ಮನೆಯ ಕೋಣೆಯಲ್ಲಿ ಹೋದ ನಂತರ ನಮಗೆ ನನ್ನ ಗಂಡ ಚೀರಾಡುವುದನ್ನು ಕೇಳಿ ನಾನು ನಮ್ಮ ಅತ್ತೆ ಗಾಬರಿಯಾಗಿ ಹೋಗಿ ನೋಡಿದಾಗ ನನ್ನ ಗಂಡ ಮನೆಯಲ್ಲಿದ್ದ ಸೀಮೆ ಎಣ್ಣೆ ತನ್ನ ಮೈಮೇಲೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ಚೀರಾಡುತ್ತಿದ್ದನು  ನಾವು ಗಾಬರಿಗೋಡು ಚೀರಾಡುತ್ತಿದ್ದಾಗ ನಮ್ಮ ಅಣ್ಣ ತಮ್ಮಕಿಯ ಶಂಕರ ತಂದೆ ಅರ್ಜುನ ಕೋಗನೂರ ಇವರು ಬಂದಿದ್ದು ನಂತರ ನಾನು ನಮ್ಮ ಅತ್ತೆ ಹಾಘೂ ಶಂಕರ ಕುಡಿಕೊಂಡು ನನ್ನ ಗಂಡನಿಗೆ ಹತ್ತಿದ ಬೆಂಕಿ ಬಟ್ಟೆಯಿಂದ ನಂದಿಸಿ ನನ್ನ ಗಂಡನಿಗೆ ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಅಫಜಲಪೂರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಹೆಚ್ಚಿನ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೆ ನನ್ನ ಗಂಡ ಇಂದು ದಿನಾಂಕ: 08/08/2016 ರಂದು 06:30 ಎಎಮ್‌ಕ್ಕೆ ಸರಕಾರಿ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:08/08/2016 ರಂದು ಸಾಯಂಕಾಲ ಮದೀನಾ ಕಾಲೋನಿ ಗ್ರೀನ್‌ ಸರ್ಕಲ್‌ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ  ರಸ್ತೆಯ ಮೇಲೆ ನಿಂತು ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹೀತಿ ಮೇರೆಗೆ ಶ್ರೀ ಡಬ್ಲೂ.ಹೆಚ್‌‌.ಕೊತ್ವಾಲ್‌ ಪಿ.ಎಸ್‌‌.ಐ ರಾಘವೇಂದ್ರ ನಗರ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗ್ರೀನ್‌ ಸರ್ಕಲ್‌‌ ಹತ್ತಿರ ಹೋಗಿ ಒಂದು ಮನೆಯ ಮರೆಯಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಬೀದಿ ಲೈಟಿನ ಬೆಳಕಿನಲ್ಲಿ ನಿಂತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ ಒಂದು ರೂ ಗೆ 90 ರೂ ಕೊಡುತ್ತೇನೆ ಅಂತಾ ಕೂಗುತ್ತಾ ರಸ್ತೆಗೆ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಒಂದು ಮಟಕಾ ನಂಬರ ಚೀಟಿ ಬರೆದು ಸಾರ್ವಜನಿಕರಿಗೆ ಕೊಡುತ್ತಾ ಇನ್ನೊಂದು ಚೀಟಿ ತನ್ನ ಹತ್ತಿರ ಇಟ್ಟು ಕೊಳ್ಳುತ್ತಿದ್ದನು ಇದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಆತನ  ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಅಬ್ದುಲ್‌‌ ಹಮೀದ ತಂದೆ ಲಾಡ್ಲೇಸಾಬ ಶೇಖ ಸಾ:ಗ್ರೀನ್‌ ಸರ್ಕಲ್‌‌ ಹತ್ತಿರ ಮದೀನಾ ಕಾಲೋನಿ ಕಲಬುರಗಿ  ಅಂತಾ ತಿಳಿಸಿದ್ದನು ಆತನ ಅಂಗಶೋಧನೆ ಮಾಡಲು ಮಟಕಾ ಜುಜಾಟಕ್ಕೆ ಸಂಬಂದಿಸಿದ ನಗದು ಹಣ 1770=00 ರೂ ಮತ್ತು 6 ಮಟಕಾ ನಂಬರ ಬರೆದ ಚೀಟಿಗಳು ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:08/08/2016 ರಂದು ರಾತ್ರಿ ರಾಘವೇಂದ್ರ ನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಸಂತೋಷ ಕಾಲೋನಿಯಲ್ಲಿರುವ ಆದರ್ಶ ಐ.ಟಿ.ಐ ಕಾಲೇಜ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಬೀದಿ ಲೈಟಿನ ಬೆಳಕಿನಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ್‌ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶ್ರೀ ಡಬ್ಲೂ.ಹೆಚ್‌‌.ಕೊತ್ವಾಲ್‌‌ ಪಿ.ಎಸ್‌‌.ಐ ರಾಘವೇಂದ್ರ ನಗರ ಪೊಲೀಸ ಠಾಣೆಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಐ.ಟಿ.ಐ ಕಾಲೇಜ ಹತ್ತಿರ ಹೋಗಿ ಕಂಪೌಂಡ ಮರೆಯಲ್ಲಿ ನಿಂತು ನೋಡಲು  ಸಾರ್ವಜನಿಕ ಬೀದಿ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದ  ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ್‌ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಇಸ್ಪೀಟ್‌ ಜೂಜಾಟ ಆಡುತ್ತಿದ್ದು  ಇದನ್ನು ನಾನು ಖಚಿತ ಪಡಿಸಿಕೊಂಡು ದಾಳಿ ಮಾಡಿ 9 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿದ್ದು ಅವರು ತಮ್ಮ ತಮ್ಮ ಹೆಸರು 1) ಗಣೇಶ ತಂದೆ ಶೇಷರಾವ ಕಾಳೆ ಸಾ:ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ. 2) ಅಮರ ತಂದೆ ಅಂಬಾದಾಸ ತೂವರ ಸಾ:ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ 3) ಹಣಮಂತ ತಂದೆ ಸುಭಾಸ ಚಿಂತಪಳ್ಳಿ  ಸಾ:ಗಂಗಾನಗರ ಕಲಬುರಗಿ. 4) ಸನ್ನಿ ತಂದೆ ಕೃಷ್ಣಾ ದೇಶಪಾಂಡೆ ಸಾ:ಬಾಳೆ ಲೇ ಔಟ ಕಲಬುರಗಿ 5)ಮಡಿವಾಳಪ್ಪಾ ತಂದೆ ಲಿಂಗಣ್ಣಾ ಪರೀಟ ಸಾ:ಕಾಂತಾ ಕಾಲೋನಿ ಅಫಜಲಪೂರ ರೋಡ ಕಲಬುರಗಿ 6)ಸಂತೋಷ ತಂದೆ ಸುಭಾಸ ಜಾದವ ಸಾ:ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ 7)ಪ್ರಕಾಶ ತಂದೆ ಕೀಶನರಾವ ಜಾದವ ಸಾ:ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ 8) ಮಹೇಶ ಕುಮಾರ ತಂದೆ ಅಶೋಕರಾವ ಕುಲಕರ್ಣೇ ಸಾ:ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ 9)ದೀಪಕ ತಂದೆ ಅನಂತರಾವ ವಿಕೊಳೆ ಸಾ:ಬ್ಯಾಂಕ ಕಾಲೋನಿ ಹಳೆ ಜೇವರ್ಗಿ ರಸ್ತೆ ಕಲಬುರಗಿ ಅಂಥಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 23700/-ರೂ  ಮತ್ತು 52 ಇಸ್ಪೀಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವರದಕ್ಣೆ ಕಿರುಕಳ ಪ್ರಕರಣ
ಗ್ರಾಮೀಣ ಠಾಣೆ  : ಶ್ರೀಮತಿ ಸಾಲಿಯಾಬಿ ಗಂಡ ಖಾಸಿಮಸಾಬ ಕೊಂಚೂರ ಸಾ: ಬಿರಾಳ [ಕೆ], ತಾ: ಜೇವರಗಿ ಸದ್ಯ ಕರೀಂ ನಗರ ಡಬರಾಬಾದ ರೋಡ್, ಕಲಬುರಗಿ  ಇವರ ಲಗ್ನವು ಈಗ 8-9 ವರ್ಷಗಳ ಹಿಂದೆ ಬಿರಾಳ ಗ್ರಾಮದ ಖಾಸೀಮಸಾಬ ತಂದೆ ಮಹಿಬೂಬಸಾಬ ಕೊಂಚೂರ ಎಂಬುವವನೊಂದಿಗೆ ನನ್ನ ತಂದೆ, ತಾಯಿ ಹಾಗೂ ನಮ್ಮ ಗ್ರಾಮದ ಹಿರಿಯರಾದ ಅಬೇದ ಪಟೇಲ್ ಮತ್ತು ಶಾಬೋದ್ದಿನ ಇವರ ಮಧ್ಯಸ್ಥಿಕೆಯಲ್ಲಿ ನನ್ನ ಗಂಡ ಖಾಸೀಮಸಾಬ ಹಾಗೂ ಅತ್ತೆ ಮಹಿಬೂಬಿ ಹಾಗೂ ನಾದೀನಿಯರಾದ ರಜೀಯಾ ಬೇಗಂ, ವಜೀರಬಿ, ಬಾಬುಮಿಯಾ,ಮೊಹ್ಮದ ಮತ್ತು ಮಹಿಬೂಬಸಾಬ, ಇವರೆಲ್ಲರ ಬೇಡಿಕೆಯಂತೆ ಲಗ್ನ ಕಾಲಕ್ಕೆ ವರದಕ್ಷಿಣೆ ಮತ್ತು ವರೋಪಚಾರವಾಗಿ ನಮ್ಮ ತಂದೆ ತಾಯಿಯವರು ಐದು ತೊಲೆ ಬಂಗಾರ, 51,000/- ರೂ. ನಗದು ಹಣ ಹಾಗೂ ನಮ್ಮ ಮುಸ್ಲಿಂ ಸಂಪ್ರದಾಯದಂತೆ ಕೊಡುವಂತಹ ಎಲ್ಲಾ ಮಂಚ, ಅಲ್ಮಾರಿ ಹಾಗೂ ಎಲ್ಲಾ ರೀತಿಯ ಹಾಂಡೆ, ಬಾಂಡೆಗಳನ್ನು ಕೊಟ್ಟು ನಮ್ಮೂರಿನಲ್ಲಿಯೆ ಎರಡುವರೆ ಲಕ್ಷ ರೂಪಾಯಿ ಖರ್ಚು ಮಾಡಿ ಅದ್ದೂರಿಯಾಗಿ ಲಗ್ನ ಮಾಡಿಕೊಟ್ಟಿದ್ದು ಮದುವೆಯ ನಂತರ ನಾನು ಗಂಡನ ಮನೆಗೆ ನಡೆಯಲು ಹೋದಾಗ, ನನಗೆ ಆರು ತಿಂಗಳವರೆಗೆ ಗಂಡ ಮತ್ತು ಗಂಡನ ಮನೆಯವರು ಎಲ್ಲರು ಚೆನ್ನಾಗಿ ನೋಡಿಕೊಂಡು ತದನಂತರ ನನಗೆ ಅಡುಗೆ ಮಾಡಲು ಬರುವುದಿಲ್ಲ, ನಿನಗೆ ಬಿಟ್ಟು ಬೇರೆಯವರಿಗೆ ಲಗ್ನ ಮಾಡಿಕೊಂಡಿದ್ದರೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ವರದಕ್ಷಿಣೆ ಬರುತ್ತಿತ್ತು ಅಂತ ಸಣ್ಣ ಪುಟ್ಟ ಮನೆಯ ವಿಷಯದಲ್ಲಿ ಗಂಡ, ಅತ್ತೆ, ನಾದೀನಿಯರಾದ ರಜೀಯಾ ಬೇಗಂ, ವಜೀರಬಿ, ಗಂಡನ ತಮ್ಮನಾದ ಮೊಹ್ಮದ, ನಾದೀನಿಯ ಗಂಡನಾದ ಬಾಬುಮಿಯಾ ಹಾಗೂ ಬಾಬುಮಿಯಾನ ಮಗನಾದ ಮಹಿಬೂಬಸಾಬ ಇವರೆಲ್ಲರು ಪ್ರತಿದಿನ ಗಂಡನ ಮನೆಯಲ್ಲಿಯೆ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆ ಕೊಡುತ್ತಾ ಬರುತ್ತಿರುವಾಗ, ನನ್ನ ಗಂಡನಿಗೆ ಈ ವಿಷಯವನ್ನು ಹೇಳಿದಾಗ, ಗಂಡನು ಕೂಡಾ ಏ ರಂಡಿ, ನಾವು ಮನೆಯವರೆಲ್ಲರು ಹೇಳಿದಂತೆ ಕೇಳಬೇಕು ಮತ್ತು ನಿನ್ನ ತಂದೆ, ತಾಯಿ, ತವರು ಮನೆಯಿಂದ ನಮಗೆ ಇನ್ನು ಎರಡು ಲಕ್ಷ ರೂಪಾಯಿ ಮತ್ತು ಇನ್ನು ಹೆಚ್ಚಿನ ಐದು ತೊಲೆ ಬಂಗಾರವನ್ನು ತಂದರೆ ಮಾತ್ರ ನಿನ್ನನ್ನು ಒಳ್ಳೇಯ ರೀತಿಯಿಂದ ನೋಡಿಕೊಳ್ಳುತ್ತೇವೆ ಅಂತ ತಕರಾರು ಮಾಡುತ್ತಾ, ಕೈಯಿಂದ ಹೊಡೆ ಬಡೆ ಮಾಡುತ್ತಾ ಬರುತ್ತಿದ್ದು, ನಾನು ಗಂಡನ ಮನೆಯಲ್ಲಿಯೆ ಜೀವನ ಮಾಡಬೇಕೆಂಬುವ ಹಟದಿಂದ, ಹಾಗೆ ಇವರೆಲ್ಲರು ಕೊಡುವ ತೊಂದರೆಗಳನ್ನು ತಾಳಿಕೊಂಡು ಬರುತ್ತಿರುವಾಗ, ನನಗೆ ಈಗ ಎಂಟು ವರ್ಷದ ಮಹಿಬೂಬಸಾಬ ಎಂಬ ಮಗನಿರುತ್ತಾನೆ. ನನ್ನ ಗಂಡ ಮತ್ತು ಗಂಡನ ಮನೆಯವರೆಲ್ಲರು ಕೊಡುವ ಮಾನಸಿಕ ಹಿಂಸೆ ಮತ್ತು ಎರಡು ಲಕ್ಷ ರೂಪಾಯಿ ಮತ್ತು ಐದು ತೊಲೆ ಬಂಗಾರವನ್ನು ವರದಕ್ಷಿಣೆ ರೂಪದಲ್ಲಿ ತರುವಂತೆ ಪೀಡಿಸುತ್ತಾ ಇರುವಾಗ, ಈ ವಿಷಯವನ್ನು ನನ್ನ ತಂದೆ, ತಾಯಿಗೆ ತಿಳಿಸಿದಾಗ, ನನ್ನ ತಾಯಿ ಶರೀಫಾಬಿ, ತಂದೆ ಗೌಸಪಟೇಲ್, ಅಣ್ಣ ಖುರ್ಷಿದ ಪಟೇಲ್ ಹಾಗೂ ನನ್ನ ಅಕ್ಕಂದಿರಾದ ನಸೀಮಾಬಿ ಗಂಡ ಗಫೂರಸಾಬ, ರಿಜ್ವಾನಬಿ ಗಂಡ ರಿಯಾಜ ಇವರೆಲ್ಲರು ಹಾಗೂ ನಮ್ಮ ಗ್ರಾಮದ ಹಿರಿಯರಾದ ಆಬೇದ ಪಟೇಲ ಮತ್ತು ಶಾಬೋದ್ದಿನ ಇವರೆಲ್ಲರು ನನ್ನ ಗಂಡನ ಮನೆಗೆ 3-4 ಸಾರಿ ಬಂದು ಈ ಮೇಲಿನ ಗಂಡ ಮತ್ತು ಗಂಡನ ಮನೆಯವರೆಲ್ಲರನ್ನು ಕರೆಯಿಸಿ ಹಾಗೂ ನಮ್ಮ ಗ್ರಾಮದ 3-4 ಜನ ಹಿರಿಯರನ್ನು ಕರೆದು ನನಗೆ ಒಳ್ಳೇಯ ರೀತಿಯಿಂದ ಇಟ್ಟುಕೊಳ್ಳುವಂತೆ ತಿಳಿ ಹೇಳಿದರು. ಆಗ ನಾಲ್ಕು ದಿನ ಒಳ್ಳೇಯ ರೀತಿಯಿಂದ ನೋಡಿಕೊಂಡಂತೆ ಮಾಡಿ, ಮತ್ತೆ ಪುನಃ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಾಗೂ ವರದಕ್ಷಿಣೆ ವಿಷಯದಲ್ಲಿ ತೊಂದರೆ ಕೊಡುತ್ತಾ ಬರುತ್ತಿರುವಾಗ, ಈ ನೋವನ್ನು ಸಹಿಸದೆ ಸಾಯಬೇಕೆನ್ನುವಷ್ಟರ ಮಟ್ಟಿಗೆ ಹೋದಾಗ ಮಗನ ಮುಖ ನೋಡಿ ಈವಿಷಯವನ್ನು ಪುನಃ ತಂದೆ, ತಾಯಿಯವರಿಗೆ ತಿಳಿಸಿದಾಗ, ನನ್ನ ಅಣ್ಣ ಖುರ್ಷಿದ ಪಟೇಲ, ಜುಬೇರ, ಜಾಫರ ರವರೆಲ್ಲರು ದಿನಾಂಕ 15/07/2016 ರಂದು ನಮ್ಮೂರಿಗೆ ಬಂದು ನನ್ನ ಗಂಡ ಮತ್ತು ಮೇಲಿನವರಿಗೆ ನನ್ನನ್ನು ಒಳ್ಳೇಯ ರೀತಿಯಿಂದ ಇಟ್ಟುಕೊಳ್ಳುವಂತೆ ತಿಳಿಹೇಳಿದಾಗ, ನನಗೆ ಮತ್ತು ನನ್ನ ಅಣ್ಣನಿಗೆ ಚಪ್ಪಲಿಯಿಂದ ಹೊಡೆದು ಮನೆಯಿಂದ ಹೊರಗೆ ಹಾಕಿರುತ್ತಾನೆ. ನಾನು, ನನ್ನ ತಂದೆ ತಾಯಿಯವರು ಇರುವ ಡಬರಾಬಾದ ರೋಡಿನ ಕರೀಮ ನಗರದ ಮನೆಯಲ್ಲಿ ಇರುವಾಗ, ಮೊನ್ನೆ ದಿನಾಂಕ 17/07/2016 ರಂದು ಮಧ್ಯಾಹ್ನ 2:30 ಗಂಟೆ ಸುಮಾರಿಗೆ ನನ್ನ ಗಂಡ ಖಾಸೀಮಸಾಬ, ಅತ್ತೆ, ನಾದೀನಿಯರು ಹಾಗೂ ಗಂಡನ ತಮ್ಮ ಮೊಹ್ಮದ ಮತ್ತು ನಾದೀನಿಯ ಗಂಡ ಬಾಬುಮಿಯಾ ಹಾಗೂ ಆತನ ಮಗ ಮಹಿಬೂಬ ಇವರೆಲ್ಲರು ಬಂದು  ಏ ರಂಡಿ, ನಾವು ಖಾಸೀಮ ಸಾಬನಿಗೆ ಇನ್ನೊಂದು ಲಗ್ನ ಮಾಡುತ್ತೇವೆ, ನೀನು ಲತಾಖ್ ಕೊಡು, ನಿನಗೆ ನಾವು ಸಾಪ್ ಇಟ್ಟುಕೊಳ್ಳುವುದಿಲ್ಲ, ಒಂದು ವೇಳೆ ನಿನಗೆ ಇಟ್ಟುಕೊಳ್ಳಬೇಕಾದರೆ, ಎರಡು ಲಕ್ಷ ನಗದು ಹಣ ಮತ್ತು ಐದು ತೊಲೆ ಬಂಗಾರ ತಂದು ಕೊಟ್ಟರೆ ನಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇವೆ ಅಂತ ಎಲ್ಲರು ಕೈಯಿಂದ ಹೊಡೆ ಬಡೆ ಮಾಡಿ ಗಂಡನ ಮನೆಗೆ ಪುನಃ ಮರಳಿ ಬರದಂತೆ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.