POLICE BHAVAN KALABURAGI

POLICE BHAVAN KALABURAGI

19 December 2013

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :          
ರಾಘವೇಂದ್ರ ನಗರ : ದಿನಾಂಕ : 18-12-2013 ರಂದು ಸಾಯಂಕಾಲ 06-30 ಗಂಟೆಗೆ ಶ್ರೀ ಹೇಮಂತ ಕುಮಾರ ಪಿ.ಎಸ್.ಐ. ಸಾಹೇಬರು ರವರು ಒಂದು ವರದಿಯೊಂದಿಗೆ 10 ಜನ ಆರೋಪಿ ಹಾಗೂ ಜಪ್ತಿ ಪಂಚನಾಮೆ,  ಜಪ್ತಿ ಮಾಡಿದ ಮುದ್ದೆ ಮಾಲು, ಹಾಜರಪಡಿಸಿದ್ದು ಜಪ್ತಿ ಪಂಚನಾಮೆಯೊಂದಿಗೆ ಒಂದು ವರದಿ ಸಲ್ಲಿಸಿದ್ದು  ಸಾರಾಂಶ ಏನೆಂದರೆ ಇಂದು ದಿನಾಂಕ 18-12-2013 ರಂದು ಸಾಯಂಕಾಲ 05-30 ಗಂಟೆಯ ಸುಮಾರಿಗೆ ಠಾಣಾ ವ್ಯಾಪ್ತಿಯಲ್ಲಿ ಬರುವ ಬಾಳೆ ಲೇಔಟ ಸರಸ್ವತಿ ವಿದ್ಯಾ ಮಂದಿರ ಶಾಲೆಯ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ 10 ಜನರು ದೊಂಡಾಗಿ ಕುಳಿತುಕೊಂಡು ಇಸ್ಟೇಟ ಎಲೇಗಳ ಸಹಾದಿಂದ ಪಟಕ್ಕೆ ಹಣ ಹಚ್ಚಿ ಅಂದರ ಬಾಹರ ಅಂತಾ ಇಸ್ಟೇಟ ಜೂಜಾಟ ಅಡುತ್ತಿದ್ದ ಜನರ ಮೇಲೆ ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಅವರಿಂದ ನಗದು ಹಣ 12270/- ರೂ. ಹಾಗೂ 52 ಇಸ್ಟೇಟ ಎಲೇಗಳು ಜಪ್ತಿ ಮಾಡಿಕೊಂಡು ಸದರಿಯವರ ವಿರುದ್ಧ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ವಾಡಿ ಠಾಣೆ : ದಿನಾಂಕ 18-12-2013 ರಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ಮೌನೇಶ ತಂದೆ ಹಣಮಂತ ಸಾ: ಹಲಕಟ್ಟಾ ಇತನು ಮೊಟರ ಸೈಕಲ ನಂ ಕೆಎ-33 ಜೆ-1742 ನೆದ್ದರ ಹಿಂದುಗಡೆ ಅದೆ ಗ್ರಾಮದ ಮಲ್ಲಪ್ಪಾ ತಂದೆ ಲಚಮಯ್ಯಾ ವಡ್ಡರ ಇತನಿಗೆ ಕೂಡಿಸಿಕೊಂಡು ವಾಡಿಗೆ ಬರುವ ಸಲೂವಾಗಿ ಹಲಕಟ್ಟಾದ ಊರಲ್ಲಿಯ ಸಿಸಿ ರೊಡ ಮೂಲಕ ಹೊರಟು ಮುಂದೆ ಚಂದ್ರಕಾಂತ ಗಡಕರ ಇವರ ಪರ್ಶಿ ಪಾಲೀಶ ಮಶೀನ ಹತ್ತಿರ ಅತಿವೇಗ ಹಾಗು ಅಲಕ್ಷತದಿಂದ ನಡೆಯಿಸಿಕೊಂಡು ಹೊರಟು ಮೊಟರ ಸೈಕಲ ಮುಖ್ಯ ರಸ್ತೆಯ ಎಡಗಡೆಯಿಂದ ಹೊಗುವದರ ಬದಲಾಗಿ ರೊಡ ದಾಟಿ ಬಲಗಡೆಯಿಂದ ಹೊಗುತ್ತಿದ್ದಂತೆ ವಾಡಿ ಕಡೆಯಿಂದ ಶರಣಪ್ಪಾ ಇತನು ಮೊಟರ ಸೈಕಲ ನಂ ಕೆಎ-25 ಇ,ಎಚ್-5440 ನೆದ್ದರ ಮೇಲೆ ಕುಳಿತುಕೊಂಡು ಹೊರಟಾಗ ಆತನ ಮೊಟರ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೊಟರ ಸೈಕಲ ಸಮೇತ ಕೆಳಗಡೆ ಬಿದ್ದು ನಂತರ ಎದ್ದು ತಮಗೆ ಆದ ಗಾಯಗಳನ್ನು ನೊಡಿಕೊಳ್ಳುತ್ತಾ ನಿಂತಾಗ ಹಲಕಟ್ಟಾ ಕಡೆಯಿಂದ ಟ್ಯಾಂಕರ ಲಾರಿ ನಂ ಕೆಎ-32 ಬಿ-2368 ನೆದ್ದರ ಚಾಲಕನು ಅತಿವೇಗ ಹಾಗು ಅಲಕ್ಷತನದಿಂದ ನಡೆಯಿಸಿಕೊಂಡು ಹೊರಟು ರೊಡ ಪಕ್ಕದಲ್ಲಿ ನಿಂತ ಮೂವರಿಗೆ ಮತ್ತು ಮೊಟರ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ ಮೌನೇಶ ಶರಣಪ್ಪಾ ಇಬ್ಬರಿಗು ಭಾರಿ ಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟಿದ್ದು ಮಲ್ಲಪ್ಪನಿಗೆ ಮೈಕೈಗೆ ಗಾಯಗಳಾಗಿದ್ದು ಟ್ಯಾಂಕರ ಲಾರಿ ಸ್ವಲ್ಪ ಮುಂದೆ ಹೊಗಿ ನಿಲ್ಲಿಸಿ ಚಾಲಕ ಓಡಿ ಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 18-12-2013  ರಂದು  1-30 ಪಿ.ಎಮ್ ಕ್ಕೆ ಶ್ರೀಮತಿ ಸುರೇಖಾ ಗಂಡ ಬಸವರಾಜ ಡೊಣುರ, ನಂ. 168, ತಿಲಕ ನಗರ ಕುಸನೂರ ರೋಡ ಗುಲಬರ್ಗಾ ಓಲ್ಡ ಮಾರ್ಕೆಟ ದಲ್ಲಿರುವ ಸ್ಟೋ ಗ್ಯಾಸ್ ಅಂಗಡಿಯ ಮುಂದೆ ನಿಂತಾಗ ಆರೋಪಿತನು ತನ್ನ ಕಾರ ನಂ. ಕೆ.ಎ 01 ಎಮ್.ಡಿ 0227 ನೇದ್ದನ್ನು ಸರಾಫ ಬಜಾರ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಪಕ್ಕದಲ್ಲಿ ನಿಂತ ಫಿರ್ಯಾದಿದಾರಳ ಬಲಗಾಲಿನ ಪಾದದ ಮೇಲೆ ಹಾಯಿಸಿ ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಳಸಂತೆಯಲ್ಲಿ ಪಡಿತರ ಅಕ್ಕಿ ಸಾಗಿಸುತ್ತಿದ್ದವರ ಬಂಧನ :
ಗ್ರಾಮೀಣ ಠಾಣೆ : ದಿನಾಂಕ : 18-12-2013 ರಂದು ರಾತ್ರಿ  ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ ಮಾಡುತ್ತಾ  ರಾತ್ರಿ 09:00 ಗಂಟೆ ಸುಮಾರಿಗೆ ಮಿಲತ್ತ ನಗರದಲ್ಲಿಯ ಎಸ್.ಆರ್ ಪೆಟ್ರೋಲ ಪಂಪ ಹತ್ತಿರ ಬಂದಾಗ ಒಂದು ಮೆಹೇಂದ್ರಾ ಪಿ.ಕಪ್ ನಂಬರ ಕೆ.ಎ-32 ಬಿ-1419 ನೇದ್ದರಲ್ಲಿ ಅನದೀಕೃತವಾಗಿ ನ್ಯಾಯ ಬೆಲೆ ಅಂಗಡಿ ಮುಖಾಂತರ ಪಡಿತರ ಚೀಟಿಯ ಮೇಲೆ ವಿತರಣೆ ಆಗುವ ಅಕ್ಕಿಯನ್ನು ಹಾಕಿಕೊಂಡು ಕಾಳಸಂತೆಯಲ್ಲಿ ಮಾರಾಟ ಮಾಡಲು ಹಾಗರಗಾ ಕ್ರಾಸನಿಂದ ಹುಮನಾಬಾದ ರಿಂಗ ರೋಡ ಕಡೆಗೆ ಬರುತ್ತಿದೆ ಎಂದು ಖಚಿತ ಮಾಹಿತಿ ಬಂದಿದ್ದರಿಂದ ಈ ವಿಷಯವನ್ನು ಮೇಲಾದಿಕಾರಿಗಳ ಗಮನಕ್ಕೆ ತಂದು ಮಾನ್ಯ ಎಸ್.ಪಿ ಗುಲಬರ್ಗಾ ಮಾನ್ಯ ಅಪರ ಎಸ್.ಪಿ ಗುಲಬರ್ಗಾ, ಮಾನ್ಯ ಎ.ಎಸ್.ಪಿ ಗ್ರಾಮಾಂತರ ಉಪವಿಬಾಗ ಗುಲಬರ್ಗಾ, ಮಾನ್ಯ ಸಿ.ಪಿ.ಐ ಗ್ರಾಮೀಣ ವೃತ್ತ ಇವರ ಮಾರ್ಗದರ್ಶನದಲ್ಲಿ ಮಾಹಿತಿಯಂತೆ ಸ್ಥಳದಲ್ಲಿ ಇದ್ದಾಗ ರಾತ್ರಿ 09:15 ಗಂಟೆ ಸುಮಾರಿಗೆ ಈ ಮೇಲೆ ನಮೂದಿಸಿ ವಾಹನ ಬಂದದ್ದು ಸಗಡ ಇದ್ದ ಸಿಬ್ಬಂದಿ ಜರನಾದ ಪಿ.ಸಿ-1061,218 ಇವರ ಸಹಾಯದಿಂದ ವಾಹನವನ್ನು ನಿಲ್ಲಿಸಿ ವಿಚಾರಿಸಿದಾಗ ಸದರಿ ವಾಹನ ಚಾಲಕನು ಅವನು ತನ್ನ ಹೆಸರು ಹಣಮಂತ ತಂದೆ ಕಲ್ಯಾಣಿ ಮೋದಿ ಸಾ:ಚೆನ್ನವೀರ ನಗರ ಗುಲಬರ್ಗಾ ಅಂತಾ ಹೇಳಿ ಮುಂದುವರೆದು ಹೇಳಿದೆನೆಂದರೆ ಈಗ ಸುಮಾರು 15 ದಿವಗಳಿಂದ ನ್ಯಾಯಾ ಬೆಲೆ ಅಂಗಡಿ ಮುಖಾಂತರ ಪಡಿತರ ಚೀಟಿ ಮೇಲೆ ವಿತರಣೆ ಆಗುವ ಅಕ್ಕಿಯ ಚೀಲಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಾ ಬಂದಿದ್ದು ಸದರಿ ವ್ಯವಹಾರವನ್ನು ಸಂಗಡ ಇದ್ದ ಅಲ್ಲಾಭಕ್ಷ ತಂದೆ ಗುಲಾಮ ರಸೂಲ ಶೇಖ ಸಾ:ಮಹಾಗಾಂವ ಕ್ರಾಸ ತಾ:ಜಿ: ಗುಲಬರ್ಗಾ ಇವರು ಮಾಡುತ್ತಾ ಬಂದಿರುತ್ತಾರೆ ಅಂತಾ ವಗೈರೇ ತಿಳಿಸಿದನು. ಸದರಿಯವರಿಗೆ ಅಕ್ಕಿಯ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ದಾಖಲಾತಿಗಳ ಬಗ್ಗೆ ವಿಚಾರಿಸಿದಾಗ ಅವರು ತಮಲ್ಲಿ ಯಾವುದೇ ಅದೀಕೃತ ದಾಖಲಾತಿಗಳು ಇರುವುದಿಲ್ಲಾ ಅಕ್ರಮವಾಗಿ ಈ ವ್ಯವಹಾರವನ್ನು ಮಾಡಿಕೊಂಡು ಹೋಗುತ್ತಿದ್ದ ಬಗ್ಗೆ ತಿಳಿಸಿದರು. ಅಕ್ಕಿಯ ವ್ಯವಹಾರವನ್ನು ಮಾಡುತ್ತಿರುವ ಅಲ್ಲಾಭಕ್ಷ ಇವರಿಗೆ ವಿಚಾರಿಸಿದಾಗ ಅವರು ಸಹಾ ಹಣಮಂತನು ಹೇಳಿದಂತೆ ನುಡಿದು ಮುಂದುವರೆದು ತಾನು ಗುಲಬರ್ಗಾ ಸುತ್ತ ಮುತ್ತ ಹಳ್ಳಿಗಳಿಗೆ ಹೋಗಿ ನ್ಯಾಯ ಬೆಲೆ ಅಂಗಡಿ ಮುಖಾಂತರ ಪಡಿತರ ಚೀಟಿಯ ಮೇಲೆ ಸಾರ್ವಜನಿಕರಿಗೆ ವಿತರಣೆ ಆಗುವ ಅಕ್ಕಿಯನ್ನು ಗುಲಬರ್ಗಾ ನೆಹರು ಗಂಜದಲ್ಲಿರುವ ನಾಗೇಶ ಟ್ರೆಡಿಂಗ ಕಂಪನಿ ಎಂಬ ಹೆಸರಿನ ಅಡತ ದುಕಾನು ಹೇಳಿದಂತೆ ಖರೀದಿಸಿ ಅವರಿಗೆ ಒಯ್ದು ಕೊಡುತ್ತಿದ್ದು ಅವರು ಇಂತಹ ಅಕ್ಕಿ ಚೀಲಗಳನ್ನು ದಾಸ್ತಾನು ಮಾಡಿ ಅವುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಬೇರೆ ಕಡೆಗೆ ಸಾಗಿಸುತ್ತಾರೆ ಅಂತಾ ವಗೈರೇ ತಿಳಿಸಿದನು.ಸದರಿ ವಾಹನ ಚಾಲಕ ಮತ್ತು ಅಕ್ಕಿ ವ್ಯವಹಾರ ಮಾಡುತ್ತಿದ್ದ ಅಲ್ಲಭಕ್ಷ ಶೇಖ ಇವರಿಗೆ ದಸ್ತಗಿರಿ ಮಾಡಿ. ಪಿ.ಕಪ್. ವಾಹನಗಳಲ್ಲಿದ್ದ 600 ಖಾಲಿ ಚೀಲಗಳು (ಭಾರದಾನ) ಮತ್ತು ಅವುಗಳ ಕೆಳಗಡೆ ಇಟ್ಟಿದ್ದ 6 ½ ಕ್ವೀಟಲ್ (50 ಕೆ.ಜಿಯ 13 ಚೀಲಗಳು) ವಾಹನ ಸಮೇತ ಮುಂದಿನ ಪುರಾವೆ ಗೊಸ್ಕರ ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಸದರಿಯವರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.