POLICE BHAVAN KALABURAGI

POLICE BHAVAN KALABURAGI

16 July 2016

Kalaburagi Dsitrict Reported Crimes

ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಭಾಗ್ಯಶ್ರಿ ಗಂಡ ದಿ: ಮಲ್ಲಿಕಾರ್ಜುನ ದೊಡ್ಡಮನಿ ಸಾ:ಮಿಣಜಗಿ ಇವರ ಗಂಡ ಮಲ್ಲಿಕಾರ್ಜುನ ದೊಡ್ಡಮನಿ  ಇವರು ಈಗ ಸುಮಾರು 4 ವರ್ಷಗಳ ಹಿಂದೆ ಅಕಾಲಿಕವಾಗಿ ಮರಣ ಹೊಂದಿರುತ್ತಾರೆ, ಅಂದಿನಿಂದ ನಾನೂ ಕೂಲಿಕೆಲಸ ಮಾಡಿಕೊಂಡು ನನ್ನ 4 ಜನ ಮಕ್ಕಳನ್ನು ಸಾಕು ತ್ತಿದ್ದೇನೆ, ಆದರೆ ನಾನು ನನ್ನ ಗಂಡ ಸತ್ತ ನಂತರ ನಮ್ಮ ಪಾಲಿಗೆ ಬರುವ 7 ಎಕರೆ ಜಮೀನು ಕೋಡಿರಿ ಅಂತಾ ನನ್ನ ಭಾವ ಸೂರ್ಯಕಾಂತ  ತಂದೆ ದೆವೇಂದ್ರಪ್ಪಾ ದೊಡ್ಡಮನಿ ,ಹಾಗೂ ನನ್ನ ಅತ್ತೆ ತಾರಾಬಾಯಿ ಗಂಡ ದೇವೆಂದ್ರಪ್ಪಾ ದೋಡ್ಡಮನಿ, ಮಾವ ದೇವೇಂದ್ರಪ್ಪಾ ತಂದೆ ಸಾಬಣ್ಣಾ ದೋಡ್ಡ ಮನಿ ಇವರಿಗೆ ಕೇಳುತ್ತಾ ಬಂದಿದ್ದು ಆದರೆ ಅವರು ನನಗೆ ಜಮೀನು ಕೊಡದೆ ತಕರಾರು ಮಾಡುತ್ತಾ ಬಂದಿರುತ್ತಾರೆ. ನಿನ್ನೆ ದಿನಾಂಕ 14/07/2016 ರಾತ್ರಿ 8 ಗಂಟೆಯಸುಮಾರಿಗೆ ನಾನು ಎಂದಿನಂತೆ  ನನ್ನ ಭಾವ, ಅತ್ತೆ,ಮಾವ ಇವರಿಗೆ ನನಗೂ 4 ಜನ ಮಕ್ಕಳಿದ್ದಾರೆ  ಅವರಿಗೆ ನಾನು ಸಾಕಬೇಕು ನೀವು ನಮ್ಮ ಪಾಲಿನ ಹೋಲ, ಕೋಡಿರಿ ಅಂತಾ ಅವರಿಗೆ ಕೇಳಿದಾಗ ನನ್ನ ಭಾವ ಸೂರ್ಯಕಾಂತ, ಅತ್ತೆ ತಾರಾಬಾಯಿ, ಮಾವ ದೇವೇಂದ್ರಪ್ಪಾ , ನೆಗೆಣಿ ( ಗಂಡನ ತಂಗಿ) ಮಳವ್ವ ಗಂಡ ಶ್ರೀಮಂತ ನಡುವಿನಕೇರಿ ಹಾಗೂ ಇವಳ ಮಕ್ಕಳಾದ ಅಶೊಕ ನಡುವಿನಕೇರಿ, ಶಿವಪ್ಪಾ ನಡುವಿನಕೇರಿ, ವಿಜಯಕುಮಾರ ನಡುವಿನಕೇರಿ ,ಸುಧೀರ ನಡಿವಿನಕೇರಿ ಇವರೆಲ್ಲರೂ ಕೂಡಿಕೊಂಡು ನನಗೆ ರಂಡಿ ನೀನು ದಿನಾಲು ಹೋಲ ಬೆಕಂತಾ ಕಿರಿಕಿರಿ ಮಾಡುಕತ್ತಿದ್ದಿ ಇಂದು ನಿನಗ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿ  ನನ್ನ ಅತ್ತೆ ತಾರಾಬಾರಿ ಮತ್ತು ನೆಗೆಣಿ  ಮಾಳವ್ವ ಇವರು ನನಗೆ ಗಟ್ಟಿಯಾಗಿ ಹಿಡಿದುಕೊಂಡಿದ್ದು ಇವಳ ಮಗ ಅಶೊಕ ಇತನು ನನಗೆ ಬಡಿಗೆಯಿಂದ ಎಡ ಮತ್ತು ಬಲ ಭುಜಕ್ಕೆ ಹೋಡೆದು ತರಚಿದ ಗಾಯ ಮಾಡಿದ್ದು ,ಶಿವಪ್ಪ ಇತನು ಕೈಯಿಂದ ಮುಸ್ಷಿಮಾಡಿ  ಬಲಗಣ್ಣಿಗೆ ಗುದ್ದಿ ಗುಪ್ತಗಾಯ ಮಾಡಿರುತ್ತಾನೆ. ವಿಜಯಕುಮಾರ ಇತನು ಕಲ್ಲಿನಿಂದ ಬೆನ್ನಿಗೆ ಮತ್ತು ಬಲಗಾಲಿನ ಮೊಳಕಲಿನ ಕೆಳಗೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ . ನನ್ನ ಮಾವ,ಭಾವ,ಹಾಗೂ ಸುಧೀರ ನಡುವಿನಕೇರಿ ಇವರೆಲ್ಲರೂ ಅಲ್ಲಿಯೇ ನಿಂತುಕೊಂಡು ಈ ರಂಡೀಗಿ ಬಿಡಬ್ಯಾಡರಿ ಹೋಡಿರಿ ಅಂತಾ ಪ್ರಚೋದನೆ ನೀಡಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 13/07/16 ರಂದು ರಾತ್ರಿ ಉದನೂರ ರಿಂಗ ರೋಡ ಕ್ರಾಸನಲ್ಲಿ ಸಿಕ್ಕ ಸಾಗರ ತಂದೆ ಲಕ್ಷ್ಮಣ ಚವ್ಹಾಣ ಇತನ  ಬಜಾಜ ಪಲ್ಸರ ಕೆಎ 25 EL 5193 ನೇದ್ದರ ಹಿಂದೆ ಕುಳಿತುಕೊಂಡು ಅದೇ ರೋಡಿಗೆ ಮುಸ್ತಾಕ ಲೇಔಟದಲ್ಲಿ ಇರುವ ತನ್ನ ಮನೆಯವರೆಗೆ ಬಿಡು ಅಂತಾ ಹೇಳಿದ್ದು. ಸಾಗರ ಚವ್ಹಾಣ ಇತನು ತನ್ನ ವಶದಲ್ಲಿದ್ದ ಬಜಾಜ ಪಲ್ಸರ ಕೆಎ 25 EL 5193 ನೇದ್ದು ಅತಿವೇಗದಿಂದ ಮತ್ತು ನಿರ್ಲಕ್ಷತನದಿಂದ ನಡೆಯಿಸುತ್ತಾ ರಾತ್ರಿ 08-30 ಗಂಟೆ ಸುಮಾರಿಗೆ ಉದನೂರ ರೋಡಿನ ಹಾದಿ ಬಸವಣ್ಣ ಗುಡಿ ಇನ್ನೂ ಸ್ವಲ್ಪ ಮುಂದೆ ಇರುವಂತೆ  ಮುಸ್ತಾಕ ಲೇಔಟಗೆ ಹೋಗುವ ದಾರಿ ಎದುರಿನ ರೋಡಿನ ಮೇಲೆ ವೇಗದಲ್ಲಿ ಬ್ರೇಕ ಹಾಕಿದಾಗ ವೇಗದ ನಿಯಂತ್ರಣ ತಪ್ಪಿ ರೋಡಿನ ಎಡ ಬದಿಯಲ್ಲಿ ಇರುವ ಮುಳ್ಳಿನ ಕಂಟಿಯಲ್ಲಿ ಮೋಟಾರ ಸೈಕಲದೊಂದಿಗೆ ಬಿದ್ದಿದ್ದು. ಇದರಿಂದಾಗಿ ಸಾಗರ ಮತ್ತು ಬಸವರಾಜ ಇಬ್ಬರಿಗೂ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು, ಅವರಿಬ್ಬರಿಗೆ ಉಪಚಾರ ಕುರಿತು 108 ಅಂಬುಲೈನ್ಸ ಗಾಡಿಯಲ್ಲಿ ಹಾಕಿಕೊಂಡು ಸರಕಾರಿ  ಅಸ್ಪತ್ರೆ ಕಲಬುರಗಿಗೆ ಒಯ್ದು ಸೇರಿಕೆ ಮಾಡಿದ್ದು ಬಸವರಾಜ ಇತನು ತನಗೆ ಆದ ರಸ್ತೆ ಅಪಘಾತ ಗಾಯಗಳಿಂದ ಉಪಚಾರ ಹೊಂದುತ್ತಾ ಗುಣ ಮುಖ ಹೊಂದದೇ ದಿನಾಂಕ 13/07/2016 ರಂದು ರಾತ್ರಿ 11-25 ಗಂಟೆಗೆ ಮೃತ ಪಟ್ಟಿರುತ್ತಾನೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲೋಗಿ ಠಾಣೆ : ದಿನಾಂಕ: 15/07/2016 ರಂದು ಕ್ಲಲೂರ[ಬಿ] ಸೀಮಾಂತರ ಮಲ್ಲೇಶಿ ಯರಗಲ್ ಇವರ ಹೊಲದ ಹತ್ತೀರ ಹೋದಾಗ ಅಲ್ಲಿ ಬಲಗಡೆ ತಗ್ಗಿನಲ್ಲಿ ಒಂದು ಭಾರತ ಬೆಂಜ ಟಿಪ್ಪರ್ ನಂ ಕೆಎ-28 ಸಿ-2581 ನೇದ್ದು ಬಿದ್ದಿದ್ದು, ಮತ್ತು ಮಗ್ಗಲಲ್ಲಿ ಇದ್ದ ಒಂದು ಲೈಟಿನ ಕಂಬ ಕೂಡಾ ಮುರಿದು ಬಿದ್ದಿದ್ದು, ನಿನ್ನೆ ದಿನಾಂಕ: 14/07/2016 ರಂದು ರಾತ್ರಿ ವೇಳೆಯಲ್ಲಿ ಕೆನಾಲ ಕೆಲಸ ಮುಗಿಸಿಕೊಂಡು ಬರುವಾಗ ತನ್ನ ಟಿಪ್ಪರನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಯಿಸಿ ಮಗ್ಗಲಲ್ಲಿ ಕೆಡವಿ ವಾಹನ ಬಿಟ್ಟು ಹೋಗಿದ್ದು ಅದರ ಚಾಲಕ ಗೌಡಪ್ಪ ನಂದಗೇರಿ ಅಂತಾ ತಿಳಿದು ಬಂದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ನೆಲೋಗಿ ಠಾಣೆ : ದಿನಾಂಕ: 15/07/2016 ರಂದು  , ಮಂದೇವಾಲ ಬಸ್ಸ ನಿಲ್ದಾಣದ ಹತ್ತಿರ ಒಬ್ಬನು ಕುಳಿತು ಸಾರ್ವಜನಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ನೆಲೋಗಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಹಿತಿ ಇದ್ದ ಮಂದೇವಾಲ ಬಸ್ಸ ನಿಲ್ದಾಣದ ಹತ್ತೀರ ಹೋಗಿ ನೋಡಲಾಗಿ ಬಸ್ ನಿಲ್ದಾಣದ ಮುಂದುಗಡೆ ಒಬ್ಬನು ಕುಳಿತು  ಒಂದು ರೂಪಾಯಿಗೆ ಎಂಬತ್ತು  ರೂಪಾಯಿ ಬರುತ್ತವೆ  ಮಟಕಾ ನಂಬರ ಬರೆಯಿಸಿರಿ ಅಂತ ಜನರಿಗೆ  ಒದರಿ ಹೇಳಿ ಅವರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿದ್ದುದನ್ನು ಖಚಿತಪಡಿಕೊಂಡು ದಾಳಿ ಂಆಡಿ ಅವನನ್ನು ಹಿಡಿದು ಅವನ ಹೆಸರು ವಿಚಾರಿಸಲು ಫಕೀರಸಾಬ ತಂದೆ ಇಮಾಮಸಾಬ ಭಾಗವಾನ ಸಾ|| ಮಂದೇವಾಲ ಅಂತ ಹೇಳಿದನು. ಅವನ ಹತ್ತಿರ 1480-00 ರೂಪಾಯಿ,  ಮಟಕಾ ಬರೆದ ಚೀಟಿ, ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ನೆಲೋಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

ನೆಲೋಗಿ ಠಾಣೆ : ದಿನಾಂಕ: 14/07/2016 ರಂದು  ಜೇರಟಗಿ ಬಸ್ಸ ನಿಲ್ದಾಣದ ಹತ್ತಿರ ಒಬ್ಬನು ಕುಳಿತು ಸಾರ್ವಜನಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ.ನೆಲೋಗಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಹಿತಿ ಇದ್ದ ಜೇರಟಗಿ ಬಸ್ಸ ನಿಲ್ದಾಣದ ಹತ್ತಿರ ಹೊಗಿ ನೊಡಲಾಗಿ ಅಲ್ಲಿ ಕಟ್ಟೆಯ ಮೇಲೆ ಒಬ್ಬನು ಕುಳಿತು  ಒಂದು ರೂಪಾಯಿಗೆ ಎಂಬತ್ತು  ರೂಪಾಯಿ ಬರುತ್ತವೆ  ಮಟಕಾ ನಂಬರ ಬರೆಯಿಸಿರಿ ಅಂತ ಜನರಿಗೆ  ಒದರಿ ಹೇಳಿ ಅವರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿದ್ದಾಗ  ಅವನನ್ನು ಹಿಡಿದು  ಅವನ ಹೆಸರು ವಿಚಾರಿಸಲು ಶಿವಾನಂದ ತಂದೆ ಮುತ್ತಪ್ಪ ಹಡಪಾದ ಸಾ|| ಜೇರಟಗಿ ಅಂತ ಹೇಳಿದನು ಅವನ ಹತ್ತಿರ 1200-00 ರೂಪಾಯಿ  ಮಟಕಾ ಬರೆದ ಚೀಟಿ , ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದಿಯವನೊಂದಿಗೆ ನೆಲೋಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.