POLICE BHAVAN KALABURAGI

POLICE BHAVAN KALABURAGI

08 January 2019

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 07-01-2019 ರಂದು ಮಾಶಾಳ ಗ್ರಾಮದ ಚವಡೇಶ್ವರಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾಶಾಳ ಗ್ರಾಮದ ಚವಡೇಶ್ವರಿ ದೇವಸ್ಥಾನದ ಹತ್ತಿರ ಹೋಗಿ ಅಲ್ಲೆ ಸ್ವಲ್ಪ ದೂರ ಖಾಸಗಿ ವಾಹನ ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು ಚವಡೇಶ್ವರಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ 08 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ ಜಾಜಾಡುತಿದ್ದ 05 ಜನರನ್ನು ಹಿಡಿದಿದ್ದು 3 ಜನ ಓಡಿ ಹೋಗಿದ್ದು  ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಗೋಪಾಲ ತಂದೆ ಹೂವಣ್ಣ ಪೂಜಾರಿ ಸಾ||ಹೈದ್ರಾ 2) ಮಚೆಂದ್ರ@ಪಿಂಟು ತಂದೆ ಮಲ್ಲಪ್ಪ ಕಟ್ಟಿಮನಿ ಸಾ||ತಡಲಗಾ ತಾ||ಇಂಡಿ 3) ರಮೇಶ ತಂದೆ ತುಕಾರಾಮ ರಾಠೋಡ ಸಾ||ಮಾಶಾಳ ತಾಂಡ 4) ಶ್ರೀಶೈಲ ತಂದೆ ಶಿವಲಿಂಗಪ್ಪ ರೂಡಗೆ ಸಾ||ಹೈದ್ರಾ  5) ಪ್ರಶಾಂತ ತಂದೆ ಅಮೃತರಾವ ಅಳ್ಳಗಿ ಸಾ||ಹೈದ್ರಾ ಅಂತ ತಿಳಿಸಿದ್ದು ಸದರಿಯವರಿಗೆ ಓಡಿ ಹೋಗಿದ್ದ 3 ಜನರ ಹೆಸರು ವಿಳಾಸ ವಿಚಾರಿಸಲಾಗಿ 6) ಸಂತೋಷ ತಂದೆ ಗುಂಡಪ್ಪ ಕಟ್ಟಿಮನಿ ಸಾ||ರಾಮನಗರ  ಮಾಶಾಳ 7) ಬಾಷಾಸಾಬ ತಂದೆ ಹೈದರಸಾಬ ಸಾ||ರಾಮನಗರ ಮಾಶಾಳ 8) ಮಹಾದೇವ ತಂದೆ ಭೀಮಶ್ಯಾ ಮುಲಗೆ ಸಾ||ರಾಮನಗರ ಮಾಶಾಳ ಅಂತ  ತಿಳಿಸಿರುತ್ತಾರೆ ಜೂಜಾಟಕ್ಕೆ ಬಳಸಿದ 4260/- ನಗದು ಹಣ ಮತ್ತು 52 ಇಸ್ಪೇಟ ಎಲೆಗಳು ದೊರೆತಿದ್ದು  ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸ್ರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಡ್ರಾಮಿ ಠಾಣೆ : ದಿನಾಂಕ: 06-01-2019 ರಂದು ಸಾಯಂಕಾಲ ನನ್ನ ಮಗ ಯಡ್ರಾಮಿಜೇವರಗಿ ಮೇನ ರೋಡ ದಾಟಿ ಸಂಡಾಸಕ್ಕೆ ಹೋಗಿದ್ದನು ನಾನು ಅಲ್ಲಿಯೇ ರೋಡಿನ ಸೈಡಿಗೆ ನಮ್ಮ ತಾಂಡಾದ ಕಮಲಾಬಾಯಿ ಗಂಡ ದಾರಾಸಿಂಗ ಇವಳ ಜೊತೆ ಮಾತನಾಡುತ್ತಾ ನಿಂತಿದ್ದೆ ನನ್ನ ಮಗ ಸಂಡಾಸದಿಂದ ವಾಪಸ ಮನೆಗೆ ಬರಬೇಕೆಂದು  ತಾಜ್ ಕಟ್ಟಿಂಗ್ ಅಂಗಡಿಯ ಮುಂದೆ ರೋಡಿನ ಜಂಪಿನ ಹತ್ತಿರ ನಿಂತಿದ್ದನ್ನು ಆಗ ಸೈದಾಪುರ ರೋಡಿನ ಕಡೆಯಿಂದ ಒಬ್ಬ ಟ್ರಾಕ್ಟರ ಚಾಲಕ ತನ್ನ ಟ್ರಾಕ್ಟರನ್ನು ಅತೀ ವೇಗವಾಗಿ ಟ್ರಾಕ್ಟರನ್ನು ಚಲಾಯಿಸಿಕೊಂಡು ಬಂದು ರೋಡಿನ ಸೈಡಿಗೆ ನಿಂತಿದ್ದ ನನ್ನ ಮಗ ದೀಪಕನಿಗೆ ಡಿಕ್ಕಿ ಹೊಡೆಸಿದನು ಅದರ ಪರಿಣಾಮವಾಗಿ ಅವನಿಗೆ ಬಲಗಾಲಿನ ಮೊಳಕಾಲ ಮೇಲೆ ಮೊಳಕಾಲ ಕೆಳಗೆ, ಹಿಮ್ಮಡಿಯ ಮೇಲೆ ಪಾದದ ಮೇಲೆ, ರಕ್ತ ಗಾಯಗಳು ಆಗಿತ್ತವೆ ಮತ್ತು  ಎಡಗಾಲ ಮೊಲಕಾಳದ ಹತ್ತಿರ, ಪಾದದ ಹತ್ತಿರ, ಎಡಕಣ್ಣಿನ ಮೇಲೆ, ತರಚಿದ ಗಾಯದ ಮತ್ತು ಕಪಾಳ ಮೇಲಕಿನ ಹತ್ತಿರ ಗುಪ್ತ ಗಾಯವಾಗಿರುತ್ತದೆ, ಮತ್ತು ಬಲ ಗದ್ದದ ಕೆಳಗೆ ತರಚಿದ ಗಾಯಗಳು ಆಗಿದ್ದವು, ಮತ್ತು ತಲೆಯ ಮೇಲೆ ಭಾರಿ  ಗುಪ್ತ ಗಾಯವಾಗಿರುತ್ತದೆ ಆಗ ಟ್ರಾಕ್ಟರ ಚಾಲಕನು ಮುಂದೆ ಹೋಗಿ ತನ್ನ ಟ್ರಾಕ್ಟರನ್ನು ನಿಲ್ಲಿಸಿ ನಮ್ಮ ಹತ್ತಿರ ಬಂದನು ಅವರ ಹೆಸರು ಕೇಳಲಾಗಿ ದವಲತರಾಯ ತಂದೆ ಮಲ್ಲಿಕಾರ್ಜುನ ಸಾ: ವಸ್ತಾರಿ ಅಂತ ಹೇಳಿದನು ನನ್ನ ಮಗನಿಗೆ ಆದ ಗಾಯಗಳನ್ನು ನೋಡಿ ತನ್ನ ಟ್ರಾಕ್ಟರ ಸಮೇತ ಓಡಿ ಹೋದನು ಆಗ ನಾನು ಟ್ರಾಕ್ಟರ ನಂಬರ ನೋಡಲಾಗಿ ಕೆಎ. 32-ಟಿಬಿ/2403 ಅಂತ ಇರುತ್ತದೆ , ಅಲ್ಲಿಯೇ ತಾಜ ಕಟ್ಟಿಗ್ ಅಂಗಡಿಯ ಮುಂದೆ ನಿಂತಿದ್ದ ನಮ್ಮ ತಾಂಡಾದ ಪ್ರಭಾಕರ ತಂದೆ ಶಂಕ್ರು ಪವಾರ, ರವರು ಕೂಡಿ ನನ್ನ ಮಗನಿಗೆ ನೋಡಿ ನಮ್ಮ ತಾಂಡಾದಲ್ಲಿ ಖಾಸಗಿ ಇಲಾಜಿ ಮಾಡಿದೇವು ನಂತರ ರಾತ್ರಿ 10-45 ಗಂಟೆಯ ಸುಮಾರಿಗೆ ನನ್ನ ಮಗ ತ್ರಾಸ ಬಹಳ ಆಗುತ್ತಿದ್ದೆ ಅಂತ ಒದ್ದಾಡತೊಡಗಿದನು ಆಗ ನಾನು ಮತ್ತು ವಿನೋದ ತಂದೆ ವಿಠಲ್ ರಾಠೋಡ, ಶ್ರೀಶೈಲ ತಂದೆ ಖೀರು ರಾಠೋಡ  ಎಲ್ಲರೂ ಕೂಡಿ ಒಂದು ಖಾಸಗಿ ವಾಹದಲ್ಲಿ ಉಪಚಾರ ಕುರಿತು ಜೇವರಗಿಗೆ ತಗೆದುಕೊಂಡು ಹೋಗುತ್ತಿದ್ದಾಗ ಹರನಾಳ ಕ್ರಾಸ ಹತ್ತಿರ ರಾತ್ರಿ 11-00 ಗಂಟೆಗೆ ನನ್ನ ಮಗ ದೀಪಕ ಮೃತ ಪಟ್ಟಿರುತ್ತಾನೆ. ಅಂತಾ ಶ್ರೀಮತಿ ಸವಿತಾ ಗಂಡ ದೇವಿದಾಸ ರಾಠೋಡ ಸಾ: ಯಡ್ರಾಮಿ ತಾಂಡಾ ತಾ: ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.