ಅಪಘಾತ ಪ್ರಕರಣ :-
ಫರಹತಾಬಾದ ಠಾಣೆ :ಶ್ರೀ ಸಿದ್ದಣ್ಣಾ ತಂದೆ ಗುರಲಿಂಗಪ್ಪಾ ದೇವರನಡಗಿ ಸಾ:ಫರಹತಾಬಾದ ರವರು, ನಮ್ಮ ಹೊಲದಲ್ಲಿ ಕೆಲಸ ಮಾಡುವ ಸಲುವಾಗಿ ನಮ್ಮೂರಿನ ಬಸ್ ನಿಲ್ದಾಣದ ರಾಷ್ಟ್ರೀಯ ಹೆದ್ದಾರಿ ಮೂಲಕ ರಸ್ತೆಯ ಎಡಗಡೆಯಿಂದ ಎಸ್.ಎಲ್.ವಿ ಧಾಬಾದ ಮುಂದಿನ ರಸ್ತೆಯ ಬದಿಯಲ್ಲಿ ಹೋಗುತ್ತಿದ್ದಾಗ ಜೇವರ್ಗಿ ಕಡೆಯಿಂದ ಟಾವೆರಾ ಕಾರ ಕೆಎ-32 ಎಮ್-5677 ನೇದ್ದರ ಚಾಲಕ ಮಲ್ಲಿಕಾರ್ಜುನ ತಂದೆ ಶರಣಪ್ಪಾ ಲಗಶೇಟಿ ಸಾ: ಶೇಳ್ಗಿ ಈತನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷನತದಿಂದ ಚಲಾಯಿಸಿಕೊಂಡು ಬಲಗಡೆಯ ರಸ್ತೆ ಬದಿಯಲ್ಲಿ ಬಂದು ನನಗೆ ಅಪಘಾಪಡಿಸಿದ್ದರಿಂದ ಗಾಯವಾಗಿರುತ್ತದೆ. ಚಾಲಕನು ಅಪಘಾತಪಡಿಸಿ ಕಾರ ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ಸದರಿ ಕಾರ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
POLICE BHAVAN KALABURAGI

05 October 2011
GULBARGA DIST REPORTED CRIMES
Gulbarga District Reported Crimes
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ :ಶ್ರೀ, ಶಿವಕಾಂತ ತಂದೆ ಚಂದ್ರಕಾಂತ ಮಹಾಜನ ವ|| 37 ಉ|| ಕಾಂಟ್ರ್ಯಾಕ್ಟರ್ ಸಾ|| ಆನಂದ ನಗರ ಎಸ್.ಬಿ. ಕಾಲೇಜ ರಸ್ತೆ ಗುಲಬರ್ಗಾ ಇವರು ದಿನಾಂಕ 26.09.2011 ರಂದು ಸೂರ್ಯಕಾಂತ ತಂದೆ ರೇವಣಸಿದ್ದಪ್ಪ ಹುಗಾರ ಸಾ|| ಭೋಪಾಲ ತೆಗನೂರ ತಾ| ಜಿ|| ಗುಲಬರ್ಗಾ ಇತನು ಫಿರ್ಯಾದಿಯು ಮನೆಯಲ್ಲಿ ಇಲ್ಲಾದಾಗ ಡೆಬಿಟ್ ಕಾರ್ಡ ಕಳವು ಮಾಡಿಕೊಂಡು ಬೆಂಗಳೂರಿಗೆ ಹೋಗಿ ಡೆಬಿಟ್ ಕಾರ್ಡ ಉಪಯೋಗಿಸಿ ಪೆಟ್ರೋಲ, ಖರೀದಿ ಮತ್ತು ಎರಡು ಮೊಬೈಲ್ ಖರೀದಿ ಮಾಡಿದ್ದಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ :ದಿನಾಂಕ 3/10/2011 ರಂದು ಸಾಯಂಕಾಲ ಶ್ರೀ ಶ್ರೀಶೈಲ ತಂದೆ ಮಲ್ಲಿಕಾರ್ಜುನ ಸ್ಥಾವರಮಠ ಸಾ:ಗುಬ್ಬಿ ಕಾಲೋನಿ ಗುಲ್ಬರ್ಗಾ ರವರು ತನ್ನ ಸೋದರ ಮಾವನೊಂದಿಗೆ ಹುಮನಾಬಾದ ರಿಂಗ ರೋಡದಲ್ಲಿ ಶ್ರೀರಾಮ ಪೈನಾನ್ಸ್ ಮುಂದಿನ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದಾಗ ಹುಮನಾಬಾದ ರಿಂಗ ರೋಡ ಕಡೆಯಿಂದ ಆಟೋ ನಂ ಕೆಎ 32 8135 ನೇದ್ದರ ಚಾಲಕನು ತನ್ನ ಆಟೋವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ನಡೆಯಿಸಿಕೊಂಡು ಬಂದು ಪಿರ್ಯಾದಿಗೆ ಹಾಯಿಸಿದ್ದು ಅದರಿಂದ ಬಾರಿ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ತವ್ಯ ಮಾಡಲು ಅಡೆ ತಡೆ ಮಾಡಿದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 04-10-2011 ರಂದು ಶ್ರೀ ವಿ.ಎಂ. ಹಾಗರಗಿ ಚೇರಮನ್ ಕೃಷ್ಣಾ ಗ್ರಾಮೀಣ ಬ್ಯಾಂಕ್ ಆನಂದ ನಗರ ಗುಲಬರ್ಗಾ ಇವರು ಪಿರ್ಯಾದಿ ಸಲ್ಲಿಸಿದ್ದು ಅದರ ಸಂಕ್ಷಿಪ್ತ ಸಾರಾಂಶವೆಂದರೆ ದಿನಾಂಕ 03-10-2011 ರಂದು 01:30 ಪಿ.ಎಂ. ಕ್ಕೆ ಮತ್ತು 04-10-2011 ರಂದು 09:15 ಎ.ಎಂ. ಕ್ಕೆ ಪಿರ್ಯಾದಿದಾರರಿಗೆ ಆರೋಪಿತನಾದ ಬಿ.ಆರ್ ರಾಮಪುರೆ ಇತನು ಮೊಬೈಲ ಮೂಲಕ ಅವಾಚ್ಯ ಶಬ್ದಗಳಿಂದ ಬೈದಿದಲ್ಲದೇ ಇಂದು ದಿನಾಂಕಃ 04/10/2011 ರಂದು 03:02 ಪಿ.ಎಂ. ಕ್ಕೆ ಕೃಷ್ಣಾ ಗ್ರಾಮೀಣ ಬ್ಯಾಂಕ್ ಮುಖ್ಯ ಕಛೇರಿಗೆ ಬಂದು ಕರ್ತವ್ಯಕ್ಕೆ ಅಡೆ ತಡೆ ಮಾಡಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.