POLICE BHAVAN KALABURAGI

POLICE BHAVAN KALABURAGI

30 August 2013

ಮಾರಣಾಂತಿಕ ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಮೋಯಿನುಲ್ಲಾ  ಹುಸೇನಿ @ ಬಾಬಾ ತಂದೆ ಸೈಯದ್ ಯೂಸೂಫ್ ಸಾ: ರೋಡಕಿಣ್ಣಿ   ಗ್ರಾಮ ಇವರ ಹೊಲ  ಸರ್ವೆ  ನಂ: 1 ನೇದ್ದರ  ಜಮೀನು ಪಕ್ಕದಲ್ಲಿ  ನಮ್ಮ ಸಮಾಜದ ಸ್ಮಶಾನ ಇರುವುದ ರಿಂದ ನಾವು ನಮ್ಮ ಜಮೀನಿಗೆ  ಕಟ್ಟಿಗೆ  ಕಂಬೆಯಿಂದ ಬೇಲಿ ಹಾಕಿ ಕೊಂಡಿದ್ದು  ಇರುತ್ತದೆ. ಹೀಗಿದ್ದು, ದಿನಾಂಕ: 28-08-2013 ರಂದು ನಮ್ಮ ಗ್ರಾಮದ  ಸರದಾರ ಸಾಬ  ತಂದೆ  ಖಾಸಿಮಸಾಬ ಜಮಾದಾರ ಇವರು ತೀರಿಕೊಂಡಿದ್ದು ಅಂತ್ಯಕ್ರೀಯೇ ಮಾಡಲು  ನಮ್ಮ ಹಿರಿಯರ ಆಸ್ತಿ  ಜಮೀನಿನಲ್ಲಿ ಕುಣಿ ಹೊಡೆಯುತ್ತಿದ್ದಾರೆ ಅಂತಾ ಗೊತ್ತಾಗಿ ಮಧ್ಯಾಹ್ನ  02-30 ಗಂಟೆ ಸುಮಾರಿಗೆ  ನಾನು ಮತ್ತು  ನನ್ನ ತಮ್ಮನಾದ ವಲಿವುಲ್ಲಾ ಹುಸೇನಿ ಮತ್ತು ಮಗ ಸೈಯದ್ ಅಲೀಮ್ ಪಾಶಾ ಹಾಗೂ  ನಮ್ಮ ಗ್ರಾಮದ  ಕೆಲವರು ಕೂಡಿಕೊಂಡು  ಅಲ್ಲಿಗೆ ಹೋಗಿ  ನೋಡಲಾಗಿ ನಮ್ಮ  ಜಮೀನಿನಲ್ಲಿ ನಮ್ಮ  ಗ್ರಾಮದ 1.ಮಸ್ತಾನ ಪಾಶಾ  ತಂದೆ ಸರದಾರಸಾಬ ಜಮಾದಾರ ಹಾಗು ಈತರರು ಕೂಡಿ ನಮ್ಮ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಢಿ  ತಮ್ಮ ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ತಮ್ಮ  ಸಂಭಂದಿಕನಿಗೆ ದಫನ್ ಮಾಡಲು ಕುಣಿ ಹೊಡೆಯುತ್ತಿ ರುವದನ್ನು  ಕಂಡು  ನನ್ನ ತಮ್ಮ ವಲಿವುಲ್ಲಾ ಈತನು ನಮ್ಮ ಹಿರಿಯರ  ಆಸ್ತಿ  ಇದ್ದುಸ್ಮಶಾನ  ಸ್ವಲ್ಪ ಮುಂದೆ  ಇದೆನೀವು ಈ ಜಾಗ ಬಿಟ್ಟು ಮುಂದೆ ಕುಣೀ ಹೊಡೆಯಿರಿ ಅಂತಾ ಅನ್ನುತ್ತಿದ್ದಾಗ ಅವರೆಲ್ಲರೂ ಕೂಡಿಕೊಂಡು ಗುಂಪು ಕಟ್ಟಿಕೊಂಡು  ನಮಗೆ ಈ ಜಾಗ ನಮ್ಮದಿದೆಭೋಸಡಿ ಮಕ್ಕಳೆ ಅಂತಾ ಅವಾಚ್ಯವಾಗಿ ಬೈಯುತ್ತಾ ನಮ್ಮ ಹೊಲದಲ್ಲಿ ಕುಣೀ ಹೊಡೆಯಬೇಡಿ ಅಂತಾ  ಹೇಳಲು ಹೋದ  ನಮಗೆ ಬಡಿಗೆಕಲ್ಲುಗಳಿಂದ ಹೊಡೆಯುತ್ತಾ ದುಃಖಾಫತಗೊಳಿಸಿದ್ದು  ಮತ್ತು  ನನ್ನ ಮಗನಾದ  ಅಲೀಮ್  ಪಾಶಾ ಈತನಿಗೆ ಮತ್ತು ನನಗೆ ನೆಲದ ಮೇಲೆ ಹಾಕಿ ಅವರೆಲ್ಲರೂ  ಕಾಲಿನಿಂದ ಒದ್ದು ಹಾಗೂ ಇವತ್ತು  ನಿಮಗೆ  ಮರ್ಡರ ಮಾಡುತ್ತೇವೆ ಅಂತಾ  ನಮ್ಮ  ಮೈ ಮೇಲೆ ನಿಂತು ತುಳಿದು ನನ್ನ ಮಗ  ಅಲೀಮ್ ಪಾಶಾ ಈತನ ತೊಡ್ಡು  ಹಿಡಿದು ಒಡ್ಡು ಮುರಿದು ಕೊಲೆ ಮಾಡಲು ಪ್ರಯತ್ನ ಮಾಡಿದ್ದು ಅಲ್ಲಿಯೇ ಇದ್ದ ನಮ್ಮೂರ ಜಮೀಲೋದ್ದೀನ್ ತಂದೆ ಸಿರಾಜೋದ್ದೀನ್ ಜಮಾದಾರ ಹಾಗು ಈತರರು ಬಂದು ಜಗಳ ನೋಡಿ ಬಿಡಿಸಿ ನಮ್ಮನ್ನು ಖಾಸಗಿ ವಾಹನದಲ್ಲಿ ಉಪಚಾರ  ಕುರಿತು ಕಳುಹಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.