POLICE BHAVAN KALABURAGI

POLICE BHAVAN KALABURAGI

04 February 2015

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 03-02-2015 ರಂದು ಘತ್ತರಗಿ ಗ್ರಾಮದ ಭಾಗ್ಯವಂತಿ ಕಲ್ಯಾಣ ಮಂಟಪದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಎ.ಎಸ್.ಐ. ನಜೀರ ಅಹ್ಮದ ಎ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ರಾಮು ತಂದೆ ದೇವೆಂದ್ರಪ್ಪ ವಡ್ಡರ ಸಾ||| ಮರಗೋಳ ತಾ|| ಚಿತಾಪೂರ ಹಾ|| || ಘತ್ತರಗಾ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 435/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.   
ಅಪಘಾತ ಪ್ರಕರಣ:
ನಿಂಬರ್ಗಾ ಠಾಣೆ : ಶ್ರೀಮತಿ ಅನುಸುಬಾಯಿ ಗಂಡ ಬಾಪುರಾವ ಭಂಡಾರೆ  ಸಾ: ಭೂಸನೂರ ಇವರ ಗಂಡನಾದ  ಬಾಪುರಾವ ತಂದೆ ಶ್ರೀಮಂತ ಭಂಡಾರೆ ಇವರು  ದಿನಾಂಕ 02/02/2015 ಬೆಳಿಗ್ಗೆ 0900 ಗಂಟೆಗೆ ಖಾಸಗಿ ಕೆಲಸದ ನಿಮಿತ್ಯ ಮ್ಮ  ಟಿ.ವಿ.ಎಸ್ ಎಕ್ಸ.ಎಲ್ ಸೂಪರ ಮೋಟಾರ ಸೈಕಲ್ ನಂ ಕೆಎ-32-ಇಸಿ-3538  ನೇದ್ದರ ಮೇಲೆ ಕಲಬುರಗಿಗೆ ಹೋಗಿ ಮರಳಿ ಊರಿಗೆ ಬರುವಾಗ ಸಾಯಂಕಾಲ ಭೂಸನೂರ ಗ್ರಾಮ ಸಮೀಪ ಬಸವರಾಜ ಪಾಟೀಲ ಇವರ ಹೊಲದ ಹತ್ತಿರ ಇರುವ ಬ್ರೀಜ್ ಮೇಲೆ ಮೋಟಾರ ಸೈಕಲ್ ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿದ್ದರಿಂದ ಮೋಟಾರ ಸೈಕಲ್ ಸ್ಕಿಡ್ಆಗಿ ಕೆಳಗೆ ಬಿದ್ದು ತಲೆಗೆ, ಹಣೆಗೆ ಭಾರಿ ಗಂಬೀರ ರಕ್ತಗಾಯ ಮತ್ತು ಗುಪ್ತ ಗಾಯವಾಗಿದ್ದರಿಂದ ಬೇಹೋಷ ಆಗಿ ಬಿದ್ದು  ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಹಲ್ಲೆ ಪ್ರಕರಣ :

ಅಫಜಲಪೂರ ಠಾಣೆ : ಜೇವರ್ಗಿ (ಬಿ) ಸಿಮಾಂತರದ ಹೊಲ ಸರ್ವೇ ನಂ- 136/2 ವಿಸ್ತೀರ್ಣ 8 ಎಕರೆ 29 ಗುಂಟೆ ಜಮೀನಿನ ವಿಷಯಕ್ಕೆ ಸಂಬಂಧ ನಿರ್ಮಲಾ ಗಂಡ ಸಾತಲಿಂಗಪ್ಪಾ ಪಾಸೋಡಿ ಸಂಗಡ 10 ಜನರು ಕುಮಾರಿ ವಿಜಯಲಕ್ಷ್ಮಿ ತಂದೆ ಚಂದ್ರಶೇಖರ ಪಾಸೋಡಿ ಸಾ : ಜೇವರ್ಗಿ (ಬಿ) ರವರೊಂದಿಗೆ  ತಕರಾರು ಮಾಡಿಕೊಳ್ಳುತ್ತಾ ಬಂದು ಇಂದು ದಿನಾಂಕ:- 03/03/2015 ರಂದು ಬೆಳಿಗ್ಗೆ 09:00 ಗಂಟೆಗೆ ಫಿರ್ಯಾದಿ ಸದರಿ ಹೊಲದಲ್ಲಿ ತೊಗರಿ ಬೆಳೆ ರಾಶಿ ಮಾಡಿಕೊಳ್ಳುತ್ತಿದ್ದಾಗ ಆರೋಪಿತರೆಲ್ಲರು ಅಕ್ರಮ ಕೂಟ ರಚಿಸಿಕೊಂಡು ಹೊಲದಲ್ಲಿ ಅತೀ ಕ್ರಮ ಪ್ರವೇಶ ಮಾಡಿ ರಾಶಿಯನ್ನು ತಡೆದು ನಿಲ್ಲಿಸಿ ಜೀವ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.