POLICE BHAVAN KALABURAGI

POLICE BHAVAN KALABURAGI

22 March 2012

GULBARGA DIST REPORTED CRIMES

ಮಂಗಳ ಸೂತ್ರ ದೋಚಿಕೊಂಡ ಹೋದ ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ:
ಶ್ರೀಮತಿ ನಾಗಮ್ಮಾ ಗಂಡ ಶರಣಬಸಪ್ಪಾ ಸ್ವಾದಿ ಉ ಟೀಚರ ಸಾಮನೆ ನಂ 9-544/6/22 ಬಿ ದತ್ತ ನಗರ ಶಹಬಜಾರ ಗುಲಬರ್ಗಾರವರು ನಾನು ದಿನಾಂಕ 22.03.2012 ರಂದು 11.00 ಗಂಟೆಯ ಸುಮಾರಿಗೆ ಶಾಲೆಯ ಮುಖ್ಯೋಪ್ಯಾಯರು ಮತ್ತು ಶಾಲೆಯ ಸಿಬ್ಬಂದಿಯವರೊಂದಿಗೆ ಶಾಲಾ ಮಕ್ಕಳ ಸಮವಸ್ತ್ರ ತೆಗೆದುಕೊಂಡು ಬರಲು ಹಿರಿಯ ಪ್ರಾಥಮಿಕ ಶಾಲೆ ಆದರ್ಶ ನಗರ ಗುಲಬರ್ಗಾ ಹತ್ತಿರ ಬಂದಿದ್ದು ನಾನು & ವಿಜಯಲಕ್ಷ್ಮಿ ಟೀಚರ ಇಬ್ಬರೂ ಕೂಡಿ ಶಾಲೆಯ ಕಟ್ಟೆಯ ಮೇಲೆ ಕುಳಿತಿರುವಾಗ ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ಮೋಟಾರ ಸೈಕಲ್ ಮೇಲೆ ಇಬ್ಬರೂ ಬಂದು ಮೋಟಾರ ಸೈಕಲ್ದ ಮೇಲೆ ಹಿಂದೆ ಕುಳಿತವನು ನನ್ನ ಕೊರಳಿಗೆ ಕೈ ಹಾಕಿ 50 ಗ್ರಾಂ ಬಂಗಾರದ ಮಂಗಳ ಸೂತ್ರ ಅಕಿಃ 1,25,000/-ರೂ ನೇದ್ದನ್ನು ಕಿತ್ತಿಕೊಂಡು ಮೋಟಾರ ಸೈಕಲ್ ಮೇಲೆ ಬಸವೇಶ್ವರ ಕಾಲೊನಿ ಕಡೆಗೆ ಹೋಗಿರುತ್ತಾರೆ. ಗಾಬರಿಯಲ್ಲಿ ಮೋಟಾರ ಸೈಕಲ್ ನಂಬರ ನೋಡಲಿಲ್ಲ. ಇಬ್ಬರೂ ಸುಮಾರು 22-25 ವರ್ಷದವರಿದ್ದು ತೆಳ್ಳಗೆ, ಎತ್ತರ .ಕೆಂಪು ಮೈಬಣ್ಣ. ಜಿನ್ಸ ಪ್ಯಾಂಟ , ಕೆಂಪು & ಆನಂಧಿ ಕಲರ ಟಿ-ಶರ್ಟ ಧರಿಸಿದ್ದು ಅವರನ್ನು ನೋಡಿದ್ದಲ್ಲಿ ಗುರುತಿಸಿತ್ತೇನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 34/2012 ಕಲಂ. 392 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಮಹಾಗಾಂವ ಪೊಲೀಸ ಠಾಣೆ:
ಶ್ರೀ ಬಸವರಾಜ ತಂದೆ ತಿಪ್ಪಣ್ಣ ಜಾಕನಳ್ಳಿ ಸಾಭೂತಪೂರ ತಾಸೇಡಂ ರವರು ನನ್ನ ಮಗ ಶಶಿಕುಮಾರ ಇತನು ಮುದ್ದಡಗ ಪ್ರೌಢಶಾಲೆಯಲ್ಲಿ ಶಿಕ್ಷಕ ಅಂತಾ ಕೆಲಸ ಮಾಡುತ್ತಿದ್ದು ಆತನಿಗೆ ದಿ: 20/03/2012 ರ ರಾತ್ರಿ 9:30 ಪಿ.ಎಮ್ ದಿಂದ ದಿನಾಂಕ; 21/03/2012 ರ ರಾತ್ರಿ 8:00 ಗಂಟೆಯ ಮಧ್ಯದ ಅವಧಿಯಲ್ಲಿ ಕುತ್ತಿಗೆಗೆ ಹಗ್ಗವಾಗಲೀ ಅಥವಾ ಪ್ಲಾಸ್ಟಿಕ ವೈರದಿಂದಾಗಲೀ ಸುತ್ತಿ ಯಾರೋ ಕೊಲೆ ಮಾಡಿ, ಕೊಲೆ ಮುಚ್ಚಿ ಹಾಕುವ ಉದ್ದೇಶದಿಂದ ಆತನ ಶವ ನಾಗೂರು ಹಳ್ಳದಲ್ಲಿ ಬಿಸಾಡಿರುತ್ತಾರೆ. ಸದರಿ ಕೊಲೆಗಾರರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲೆ ಠಾಣೆ ಗುನ್ನೆ ನಂ: 29/2012 ಕಲಂ 302, 201 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.