POLICE BHAVAN KALABURAGI

POLICE BHAVAN KALABURAGI

13 February 2012

GULBARGA DIST REPORTED CRIMES

ಹಲ್ಲೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಸೈಯದ ಅಹ್ಮದ ತಂದೆ ಸೈಯದ ಇಬ್ರಾಹಿಂ ತಾಬರ ಸಾ 6 ನೇ ಕ್ರಾಸ ತಾರಫೈಲ್ ಗುಲಬರ್ಗಾರವರು ನಾನು ದಿನಾಂಕ 12/02/12 ರಂದು 11-45 ಎ.ಎಂ ಸುಮಾರಿಗೆ ಸ್ಟೇಷನ ಬಜಾರ ಏರಿಯಾದಿಂದ ಮನೆಗೆ ಹೋಗುವಾಗ 6 ನೇ ಕ್ರಾಸ ತಾಫೈಲ್ ದಲ್ಲಿನ ರಸ್ತೆಯ ಮೇಲೆ ಯುಸಫ,ಆಸಿಫ, ಮುಸ್ತಫಾ ಸಾ ಎಲ್ಲರೂ ತಾರಫೈಲ್ ರವರು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಮತ್ತು ಕಲ್ಲಿನಿಂದ ಹೊಡೆದು ಬಾಯಿಂದ ಕಿವಿ ಕಚ್ಚಿ ಕಾಲಿನಿಂದ ಒದ್ದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 17/12 ಕಲಂ 341, 323, 324, 504, 506 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ :
ಶ್ರೀ ರಾಜು ತಂದೆ ತಿಪ್ಪಣ್ಣ ಜಾಧವ ಸಾ: ಕುರುಕುಂಟಾ ತಾ: ಸೇಡಂ ಜಿ:ಗುಲ್ಬರ್ಗಾ ರವರು ನಾನು ಮತ್ತು ಭರತ ಇಬ್ಬರೂ ಮೋಟಾರ ಸೈಕಲ ನಂ: ಕೆಎ 32 ವಿ-5622 ನೇದ್ದರ ಮೇಲೆ ದಿನಾಂಕ: 12/2/2012 ರಂದು ಮದ್ಯಾಹ್ನ ಅವರಾದ (ಬಿ) ಗ್ರಾಮ ದಾಟಿ ಹೋಗುತ್ತಿದ್ದಾಗ ಹುಮನಾಬಾದ ಕಡೆಯಿಂದ ಮಾರುತಿ ಕಾರ ನಂ ಎಪಿ 09 ಎಜಿ 4998 ನೇದ್ದರ ಚಾಲಕ ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಿಗೆ ಡಿಕ್ಕಿ ಪಡೆಸಿ ಭಾರಿಗಾಯ ಮತ್ತು ಸಾದಾಗಾಯವಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 46/2012 ಕಲಂ 279, 337, 338 ಐಪಿಸಿ ಸಂಗಡ 187 ಐ.ಎಮ.ವಿಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗ್ರಾಮೀಣ ಠಾಣೆ:
ದಿನಾಂಕ 12/2/2012 ರಂದು ಮದ್ಯಾಹ್ನ 4.45 ಗಂಟೆಯ ಸುಮಾರಿಗೆ ಭೀಮ್ಮಳ್ಳಿ ಗ್ರಾಮದ ಸೀಮಾಂತರದಲ್ಲಿ ಬರುವ ಭಾರತ ಟೈರ ಇವರ ಬಾಳೆ ಹೊಲದಲ್ಲಿ ಇಸ್ಪೇಟ ಜೂಜಾಟವನ್ನು ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ನಾನು ಪಿ.ಎಸ.ಐ ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಜೂಜಾಟ ಆಡುತ್ತಿರುವ ಲಾಲ ಪಟೇಲ ತಂದೆ ಮಹಿಬೂಬಪಟೇಲ ವ: 25 ಸಾ: ದೇವಿ ನಗರ ಗುಲಬರ್ಗಾ,ಸಂತೋಷ ತಂದೆ ಬಸವರಾಜ ಮಠ ಸಾ: ದೇವಿನಗರ ಗುಲಬರ್ಗಾ, ಶಿವಕುಮಾರ ತಂದೆ ಶಂಕರ ಮಹಾಗಾಂವ ಸಾ: ಶಿವನಗರ ಗುಲಬರ್ಗಾ, ಮಹಿಬೂಬ ತಂದೆ ಅಬ್ಬಾಸಲಿ ಸಾ: ಆಳಂದ ಕಾಲೋನಿ ಗುಲಬರ್ಗಾ, ಸುಲ್ತಾನ ಅಹ್ಮದ ತಂದೆ ಮಕಬೂಲ ಅಹ್ಮದ ಶಿವ ನಗರ ಗುಲಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಬಳಸಿದ ನಗದು ಹಣ 3380/- ರೂ ಹಾಗೂ ಇಸ್ಪೇಟ ಎಲೆಗಳನ್ನು ಜಪ್ತ ಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 47/2012 ಕಲಂ 87 ಕೆ.ಪಿ ಆಖ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ
:ಶ್ರೀ ಮುಸ್ತಾಫ ತಂದೆ ಕೌಸರ ಖುರೇಶಿ ಸಾ ಮೋಮಿನಪುರ ಗುಲ್ಬರ್ಗಾ ರವರು ನಾನು ದಿನಾಂಕ 12/2/2012 ರಂದು ಸಾಯಂಕಾಲ ಸುಮಾರಿಗೆ ಗುಲಬರ್ಗಾ ಹುಮನಾಬಾದ ಮುಖ್ಯ ರಸ್ತೆಯ ಸಫಾರಿ ಧಾಬಾದ ಮುಂದಿನ ರಸ್ತೆಯ ಮೇಲೆ ಮೋಟಾರ ಸೈಕಲ ನಂ ಕೆಎ 04 ಹೆಚ್‌‌ 9730 ನೇದ್ದರ ಮೇಲೆ ಹೋಗುತ್ತಿದ್ದಾಗ ಟ್ಯಾಂಕರ ಲಾರಿ ನಂ MWU- 3409 ನೇದ್ದರ ಚಾಲಕ ತನ್ನ ಟ್ಯಾಂಕರನ್ನು ಅತಿ ವೇಗವಾಗಿ ನಡೆಯಿಸಿಕೊಂಡು ಹೊರಟವೇನ ಒಮ್ಮೇಲೆ ಯಾವುದೇ ಮುನ್ಸೂಚನೆ ಇಲ್ಲದೆ ಟ್ಯಾಂಕರನ್ನು ಬ್ರೇಕ ಮಾಡಿದ್ದು ಇದರಿಂದ ನನಗೆ ಮತ್ತು ನನ್ನ ಮೋಟಾರ ಸೈಕಲ್ ಹಿಂದೆ ಕುಳಿತು ಇಬ್ಬರ ಮುಖಕ್ಕೆ ಸಾದಾ ಗಾಯವಾಗಿದ್ದು, ಟ್ಯಾಂಕರ ಚಾಲಕ ಟ್ಯಾಂಕರನ್ನು ಬಿಟ್ಟು ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 48/2012 ಕಲಂ 279 337 ಐಪಿಸಿ ಸಂ/ 187 ಐಎಂವಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ:
ಶ್ರೀ ಅಮೃತ ತಂದೆ ರಾಣಪ್ಪ ಸಂಗಾಯಿ ವ: 40 ಸಾ: ಹಾಗರಗಾ ತಾ: ಜಿ: ಗುಲಬರ್ಗಾ ರವರು ದಿನಾಂಕ: 12/2/2012 ರಂದು ಸಾಯಂಕಾಲ ಸುಮಾರಿಗೆ ನಾನು ಟಂ ಟಂ ಕೆಎ 39/6327 ನೇದ್ದರಲ್ಲಿ ಅವರಾದ (ಬಿ) ಗ್ರಾಮ ದಾಟಿ ಸ್ವಾಮಿ ಸಮರ್ಥ ಗುಡ್ಡದ ಬಸ್ಸ ಸ್ಟಾಪ ಹತ್ತಿರ ಬರುತ್ತಿದ್ದಾಗ ಹಿಂದಿನಿಂದ ಕೆಎಸ್‌ಆರ್‌ ಟಿಸಿ ಬಸ್ಸ ನಂ ಕೆಎ 38 ಎಪ್‌ 342 ನೇದ್ದರ ಚಾಲಕ ತನ್ನ ಬಸ್ಸನ್ನು ಅತಿವೇಗದಿಂದ ನಡೆಯಿಸಿಕೊಂಡು ಬಂದು ನಾವು ಕುಳಿತು ಹೊರಟ ಟಂ ಟಂ ಕ್ಕೆ ಡಿಕ್ಕಿ ಹೊಡೆದಿದ್ದರಿಂದ ಟಂಟಂ ಪಲ್ಟಿಯಾಗಿ ಅದರಲ್ಲಿ ಕುಳಿತ ಮೂರು ಜನರಿಗೆ ಗಾಯವಾಗಿರುತ್ತವೆ. ಬಸ್ಸ ಚಾಲಕ ಬಸ್ಸನ್ನು ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 49/12 ಕಲಂ, 279 333 ಐಪಿಸಿ ಸಂಗಡ 187 ಐಎಂವಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.