POLICE BHAVAN KALABURAGI

POLICE BHAVAN KALABURAGI

01 March 2015

Kalaburagi District Reported Crimes

ಅಪಘಾತ ಪ್ರಕರಣಗಳು  :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ:28/02/2015 ರಂದು ಸಾಯಂಕಾಲ ಶ್ರೀ ಶಂಬಾಜಿ ಇವರಿಗೆ  ರವರು ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದ ಒಳಗೆ ಇರುವ ನೃಪತುಂಗಾ ಬಸ್ ನಿಲ್ಲುವ ಸ್ಥಳದ ಪಕ್ಕದಲ್ಲಿರುವ ಶೌಚಾಲಯಕ್ಕೆ ಏಕಿ (ಒಂದಕ್ಕೆ) ಮಾಡುವ ಸಲುವಾಗಿ ನಡೆದುಕೊಂಡು ಹೋಗುತ್ತಿದ್ದಾಗ ನೃಪ ತುಂಗಾ ಬಸ್ ನಿಲ್ಲುವ ಸ್ಥಳದ ಕಡೆಯಿಂದ ಎನ್.ಇ. ಕೆ.ಆರ್.ಟಿ.ಸಿ. ಬಸ್ ನಂ:  ಕೆಎ 32 ಎಫ್ 1910 ರ ಚಾಲಕನು ತನ್ನ ಬಸ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿ ರಕ್ತ ಗಾಯಗೊಳಿಸಿ ಬಸ್ ಸಮೇತ ಹೊರಟು ಹೋಗಿದ್ದು ಇರುತ್ತದೆ ಅಂತಾ ಶ್ರೀ ಲೋಕಪ್ಪ ತಂದೆ ರಾವತಪ್ಪ  ಸಾ: ಶಾವಳ ತಾ: ಅಕ್ಕಲಕೋಟ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಸಂಚಾರಿ ಠಾಣೆ : ದಿನಾಂಕ:16/12/2014 ರಂದು ರಾತ್ರಿ 11=00 ಗಂಟೆಗೆ ಫಿರ್ಯಾದಿಯು ತನ್ನ ಗಳೆಯನಾದ ಅಬಿಲಾಷ ಇತನು ಚಲಾಯಿಸುತ್ತಿರುವ ಮೋ/ಸೈಕಲ್ ಮೇಲೆ ಹಿಂದುಗಡೆ ಕುಳಿತು ಆರ್.ಪಿ.ಸರ್ಕಲ್ ಕಡೆಗೆ ಹೋಗುತ್ತಿದ್ದಾಗ ಮದರ ತೆರಿಸಾ ಕಾಲೇಜ ಹಿಂದುಗಡೆ ಇರುವಾಗ ಮಹಾವೀರ ನಗರ ಕ್ರಾಸ್ ಹತ್ತಿರ ಚಂದ್ರಶೇಖರ ಇತನು ತನ್ನ  ಮೋ/ಸೈಕಲ್ ನಂ: ಕೆಎ 32 ಡಬ್ಲೂ 7690 ನೆದ್ದನ್ನು ಆರ್.ಪಿ.ಸರ್ಕಲ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ರೋಡ ಎಡ ಬಲ ಕಟ್ ಹೊಡೆಯುತ್ತಾ ಬಂದು ಮಹಾವೀರ ನಗರಕ್ಕೆ ಹೋಗುವ ಕ್ರಾಸ್ ಹತ್ತಿರ ಒಮ್ಮೇಲೆ ಬ್ರೇಕ ಹಾಕಿ ಮೋ/ಸೈಕಲ್ ಸಮೇತ ಕೆಳಗಡೆ ಬಿದ್ದು ತನ್ನಿಂದ ತಾನೆ ಬಿದ್ದು ಭಾರಿಗಾಯಹೊಂದಿ ಉಪಚಾರ ಹೊಂದುತ್ತಾ ದಿನಾಂಕ 28-02-2015 ರಂದು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. [
ಹಲ್ಲೆ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 27.02.2015 ರಂದು ಶ್ರೀಮತಿ ಬಸಮ್ಮ ಗಂಡ ರಾಜಶೇಖರ ನಾಯಕೋಡಿ ಸಾ ಗಂವ್ಹಾರ್ ರವರ ಮನೆಯ ಮುಂದಿನ ರಸ್ತೆಯಲ್ಲಿ ಆರೋಪಿತರೆಲ್ಲರು ಕೂಡಿಕೊಂಡು ಬಂದು ಹಳೆಯ ಜಗಳದ ವೈಶಮ್ಯದಿಂದ ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ನಾನು ಮತ್ತು ನನ್ನ ತಂದೆ, ತಾಯಿ, ನಮಗೆ ಏಕೆ ಬೈಯುತ್ತಿದ್ದಿರಿ ಅಂತ ಕೇಳಿದಾಗ ನನ್ನ ಮಾವನಾದ ಚಿದಾನಂದ ಈತನು ಏ. ರಂಡಿ ನನ್ನ ಮಗನಿಗೆ ಡೈವೋರ್ಸ ಯಾಕೆ ಕೊಡುತ್ತಿಲ್ಲ ಅಂತ ಅವಾಚ್ಯವಾಗಿ ಬೈದಿರುತ್ತಾನೆ, ಮತ್ತು ಬಸವರಾಜ ಚಾಮನೂರ ಈತನು ಕೈಯಿಂದ ನನ್ನ ಮೈ ಮೇಲಿನ ಸೀರೆ ಹಿಡಿದು ಜಗ್ಗಿ ಅವಮಾನ ಮಾಡಿದ್ದು, ಬಿಡಿಸಲು ಬಂದ ನನ್ನ ತಂದೆ ದೇವಿಂದ್ರಪ್ಪನಿಗೆ ರಾಜಶೇಖರ ಈತನು ಕಾಲಿನಿಂದ ಹೊಟ್ಟೆಯ ಮೇಲೆ ಒದ್ದಿರುತ್ತಾನೆ. ನಿಂಗಮ್ಮ ಇವಳು ನನ್ನ ತಾಯಿ ಈಶಮ್ಮಳಿಗೆ ತಲೆಯ ಮೇಲಿನ ಕೂದಲು ಹಿಡಿದು ಜಗ್ಗಿರುತ್ತಾಳೆ, ರಾಜಶೇಖರ ಈತನು ನನಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಿಂದ ನನ್ನ ಕುತ್ತಿಗೆಯನ್ನು ಜೋರಾಗಿ ಒತ್ತಿರುತ್ತಾನೆ, ಅಷ್ಟರಲ್ಲಿ ನನ್ನ ತಮ್ಮ ಶರಣಪ್ಪ ಈತನು ನನಗೆ ಕುತ್ತಿಗೆ ಒತ್ತುವದನ್ನು ಬಿಡಿಸಿದನು. ಶರಣ ಬಸಪ್ಪ ನಾಯಕೋಡಿ, ದತ್ತಪ್ಪ ನಾಯಕೋಡಿ ಇವರು ಕೈಯಿಂದ ನನ್ನ ತಮ್ಮನ ಕಪಾಳದ ಮೇಲೆ ಹೊಡೆದಿರುತ್ತಾಳೆ. ನಾಗಪ್ಪ ನಾಯಕೋಡಿ ಬಸಣ್ಣ ಚಾಮನೂರ ಇವರು ಕಾಲಿನಿಂದ ಅವನ ಹೊಟ್ಟೆಯ ಮೇಲೆ ಬೆನ್ನ ಮೇಲೆ ಒದ್ದಿರುತ್ತಾರೆ. ನಂತರ ಅವರೆಲ್ಲರು ಈ ರಂಡಿ ರಾಜಶೇಖರನಿಗೆ ಡೈವೋರ್ಸ ಕೊಡುತ್ತಿಲ್ಲ ಜೀವ ಸಮೇತ ಬಿಡಬ್ಯಾಡರಿ ಹೊಡೆಯಿರಿ ಅಂತ ನನಗೆ ಮುಂದೆಹೋಗದಂತೆ ತಡೆದು ಜೀವದ ಭಯ ಹಾಕಿರುತ್ತಾರೆ. ಅವರು ನಮಗೆ ಇನ್ನು ಹೊಡೆದು ನಮ್ಮ ಜೀವ ಹೊಡೆಯಿರಿ ಅಂತಾ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.