POLICE BHAVAN KALABURAGI

POLICE BHAVAN KALABURAGI

10 October 2011

Gulbarga District Reported Crime

ಕಳವು ಪ್ರಕರಣ :

ಚಿಂಚೋಳಿ ಠಾಣೆ :ಶ್ರೀ.ರೇವಣಸಿದ್ದಪ್ಪಾ ತಂದೆ ಸಿದ್ರಾಮಪ್ಪಾ ಇನಾಮದಾರ ಸಾಃ ದೇಗಲಮಡಿ ತಾಃ
ಚಿಂಚೋಳಿ ಇವರು ದಿನಾಂಕ 09-10-2011 ರಂದು ಮದ್ಯಾಹ್ನ 2.00 ಪಿ.ಎಮ ಸುಮಾರಿಗೆ ಚಿಂಚೋಳಿ ವೀರಭದ್ರೇಶ್ವರ ಬ್ಯಾಂಡ ಎದುರುಗಡೆ ನನ್ನ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ನಂ ಕೆ.ಎ 32 ಕ್ಯೂ 3678 ಇಟ್ಟು ಗುಲಬರ್ಗಾಕ್ಕೆ ಹೋಗಿದ್ದು ಸಂಜೆ ಗುಲಬರ್ಗಾದಿಂದ ರಾತ್ರಿ 9.30 ಪಿ.ಎಮ ಕ್ಕೆ ಚಿಂಚೋಳಿಗೆ ಬಂದು ನೋಡಲಾಗಿ ಬ್ಯಾಂಕ ಹತ್ತಿರ ಸದರಿ ನನ್ನ ವಾಹನ ಇರಲಿಲ್ಲಾ ಯಾರೋ
ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದಾರೆ. ಸದರಿ ವಾಹನದ ಅಂದಾಜು ಕಿ.ಮ್ಮತ್ತು ರೂ 25000/- ಗಳಷ್ಟು
ಇರುತ್ತದೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆ ಗುನ್ನೆ ನಂ 125/11 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

Gulbarga District Reported Crimes

ಹಲ್ಲೆ ಪ್ರಕರಣ :
ಮಾದನಹಿಪ್ಪರಗಾ ಠಾಣೆ :
ಶ್ರೀಮತಿ. ಇಮಲಾಬಾಯಿ ಗಂಡ ಶಿವಲಿಂಗಪ್ಪ ಸಿಂಗೆ ಸಾ: ದರ್ಗಾಶಿರೂರ್ ದಿನಾಂಕ
09-10-2011 ರಂದು ಬೆಳಗ್ಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಮೈದುನ ಶಿವಶರಣ ಇತನ ಮಗನಾದ ನವಿನ ಬಂದು ನನ್ನ ಮಗಳ ಮಗನಾದ ವಿಕಾಶನಿಗೆ ಡೆಪೂ ಅಂತಾ ಚುಡಾಯಿಸಿ ಅಳಸಬೇಡ ಅಂತಾ ಹೇಳುತ್ತಿದ್ದಾಗ ಅನೀತಾ ಗಂಡ ಶಿವಶರಣ ಸಿಂಗೆ ಮತ್ತು ಸಂಗಮ್ಮ ಗಂಡ ಹೊನ್ನಪ್ಪ ಸಿಂಗೆ ಇಬ್ಬರೂ ನನ್ನ ಮನೆ ಅಂಗಳದಲ್ಲಿ ಬಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಕಿವಿಹಿಡಿದು ಜಗಗ್ಗಿದ್ದರಿಂದ ಕಿವಿ ಹರಿದು ರಕ್ತಗಾಯವಾಗಿರುತ್ತದೆ. ನದಕ್ಕೆ ಕಾರಣ ಶಿವಶರಣ ಸಿಂಗೆ ,ಹೊನ್ನಪ್ಪ ಸಿಂಗೆ ಅನೀತಾ ಸಿಂಗೆ ಮತ್ತು ಸಂಗಮ್ಮ ಸಿಂಗೆ ಇವರ ಮದ್ಯೆ ಹೊಲದ ಪಾಲಿನ ವಿಷಯದಲ್ಲಿ ಸುಮಾರು ಒಂದು ವರ್ಷದಿಂದ ತಕರಾರು ಇದ್ದುದರಿಂದ ಅದೇ ವೈಮನಸ್ಸಿನಿಂದ ಜಗಳವಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ :
ದಿನಾಂಕ 27-09-2011 ರಂದು ಮಹಾದೇವಪ್ಪ ತಂದೆ ಶಿವಲಿಂಗಪ್ಪ ನಾಶಿ ಸಾ: ಪರಹತಾಬಾದ ಇವರು ತಮ್ಮ ಕುಟುಂಬ ಸದಸ್ಯರೊಂದಿಗೆ ಮಗನಾದ ಮಲ್ಲಿಕಾರ್ಜುನ ಇವನ ಸ್ಯಾಂಟ್ರೊ ಕಾರ್ ನಂ ಕೆಎ 04 ಎಮ್.ಎಲ್ 2027 ನೇದ್ದರಲ್ಲಿ ಕುಳಿತುಕೊಂಡು ನಮ್ಮ ಮನೆಯ ದೇವರಾದ ಪಾಳ ಗ್ರಾಮದ ಶ್ರೀ ಮಳೇಂದ್ರ ಶಿವಾಚಾರ್ಯರ ದರ್ಶಕ್ಕಾಗಿ ಹೊರಟಿದ್ದು , ಸೇಡಂ ರೋಡದಿಂದ ಪಾಳ ಗ್ರಾಮಕ್ಕೆ ಹೋಗುತ್ತಿದ್ದಾಗ ಪಾಳಾ ಗ್ರಾಮ ಇನ್ನೂ 2 ಕಿ.ಮಿ ದೂರವಿದ್ದಾಗ ಎದುರುಗಡೆಯಿಂದ ಲಾರಿ ನಂಬರ ಕೆಎ 33 4045 ನೇದ್ದರ ಚಾಲಕ ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸುತ್ತಾ ಬಂದವನೆ ನಮ್ಮ ಕಾರಗೆ ಕಟ್ ಮಾಡಿದಾಗ ನಾನು ಅದರಿಂದ ತಪ್ಪಿಸಿಕೊಳ್ಳಲು ಕಚ್ಚಾ ರೋಡಿನ ಎಡ ಬದಿಗೆ ಕಾರನ್ನು ತೆಗೆದುಕೊಂಡಿದ್ದರು ಕೂಡಾ ನನ್ನ ಗಾಡಿಗೆ ಲಾರಿ ಡಿಕ್ಕಿ ಹೊಡೆದು ಲಾರಿ ಚಾಲಕ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದಂತೆ ಮಾಡಿ ಹಾಗೇಯೆ ಹೋಗಿರುತ್ತಾನೆ.ಕಾರಿನಲ್ಲಿ ಇದ್ದ ಎಲ್ಲರಿಗು ಗಾಯಗಳಾಗಿದ್ದು ಮಾಹಾದೇವಪ್ಪ ಇವರಿಗೆ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೆ ದಿನಾಂಕ 09-10-2011 ರಂದು ಮೃತಪಟ್ಟಿರುತ್ತಾನೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.