POLICE BHAVAN KALABURAGI

POLICE BHAVAN KALABURAGI

07 May 2012

GULBARGA DIST REPORTED CRIMES


ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಅಸ್ಲಾಂ ಪಟೇಲ ತಂದೆ ನವಾಜ ಪಟೇಲ ಸಾ:ಸುಭಾಸ ಚೌಕ ಶಹಾಬಾದ ರವರು ನನ್ನ ಗೆಳೆಯನಾದ ಅನಿಲಕುಮಾರ ಇತನ ಮೋಟಾರ ಸೈಕಲ ನಂಬರ ಕೆಎ.32 ಎಕ್ಸ್‌.9453 ಮೇಲೆ ಕುಳಿತುಕೊಂಡು ಹೊರಟಾಗ ಅನೀಲ ಇತನು ಮೋಟಾರ ಸೈಕಲ ನ್ನು ಸ್ಟಾರ ಪಂಕಶನ ಹಾಲ ಹತ್ತಿರ  ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಒಮ್ಮೆಲೆ ಬ್ರೇಕ ಹಾಕಿದ್ದರಿಂದ ಗಾಡಿ ಸ್ಕೀಡ ಆಗಿ ಕೆಳಗಡೆ ಬಿದ್ದೆವು,  ಆಗ ನನಗೆ ತಲೆಗೆ ಬಡಿದು ರಕ್ತಗಾಯವಾಗಿದ್ದು ಅನೀಲಇತನಿಗೂ ತರಚಿದ ರಕ್ತಗಾಯವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ: 54/2012 ಕಲಂ:279,338 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ ಅಬ್ದುಲ್ ಸತ್ತಾರ ತಂದೆ ಅಬ್ದುಲ್ ರಜಾಕ  ಸಾ: ಮೋಮಿನಪೂರ ಸೇಡಂ ತಾ:ಸೇಡಂ ಜಿ:ಗುಲಬರ್ಗಾರವರು ನಾನು ನನ್ನ ಯಮಹ ಮೋಟರ  ಸೈಕಲ ನಂ:ಕೆಎ-32 ಇಎ- 4282 ನೇದ್ದರ ಮೇಲೆ ದಿನಾಂಕ:01/05/2012 ರಂದು ನಾನು ಗುಲಬರ್ಗಾಕ್ಕೆ ಬಂದು ಕಣ್ಣಿ ಮಾರ್ಕೆಟ ಹತ್ತಿರ ನನ್ನ ಮೋಟಾರ ಸೈಕಲ ನಿಲ್ಲಿಸಿ ಚಹಾ ಕುಡಿಯುತ್ತಿದ್ದಾಗ ನನ್ನ ಮೋಟಾರ  ನಂ:ಕೆಎ-32 ಇಎ- 4282 ಇಂಜನ್ ನಂ:1CK1002263  ಚೆಸ್ಸಿ ನಂ: ME11CK019B2002412 ಅ.ಕಿ 45,000 ರೂ.ಗಳ ಕಿಮ್ಮತ್ತಿನದು  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:37/2012 ಕಲಂ:379 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIMES


ಕೊಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀಮತಿ ಇಂದುಬಾಯಿ ಗಂಡ ಕಿಶನ ಜಾಧವ ವ|| 45, ಜಾ|| ಲಂಬಾಣಿ, ಉ|| ಮನೆ ಕೆಲಸ,ಸಾ|| ಶಹಾಬಜಾರ ತಾಂಡ ಗುಲಬರ್ಗಾ ರವರು ನನ್ನ ಮಗನಾದ ದಶರಥ ಮತ್ತು ಸತೀಷ ತಂದೆ ತಿಪ್ಪಣ್ಣ @ ತಿಪ್ಪು ರಾಠೋಡ ಮಧ್ಯ ಸುಮಾರು 3-4 ದಿವಸಗಳ ಹಿಂದೆ ಬಾಯಿ ಮಾತಿನ ಜಗಳವಾಗಿತ್ತು, ನಾನು ಸತೀಷನ ಮನೆಗೆ ಜಗಳದ ಬಗ್ಗೆ ವಿಚಾರಿಸಲು ಹೋದಾಗ ಸತೀಶನು ನನಗೆ ಬೈದು ಹೆದರಿಸಿರುತ್ತಾನೆ. ದಿನಾಂಕ 06-05-2012 ರಂದು ಮದ್ಯಾಹ್ನ 3 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಇದ್ದಾಗ ನಮ್ಮ ಪಕ್ಕದ ಮನೆಯ ಲವಕುಮಾರ @ ಲವ್ಯಾ ತಂದೆ ರೂಪ್ಲು ರಾಠೋಡ ಈತನು ನಮ್ಮ ಮನೆಗೆ ಬಂದು ಮನೆಯಲ್ಲಿದ್ದ ನನ್ನ ಮಗ ದಶರಥ ಈತನಿಗೆ ಕೆಲಸ ಇದೆ ಬಾ ಅಂತ ಮೋಟಾರ್ ಸೈಕಲ್ ನಂ ಕೆಎ-32/ಎಕ್ಸ್-906 ನೇದ್ದರ ಮೇಲೆ ಬೋರಾಭಾಯಿ ನಗರದ ದರ್ಮಶಾಲೆ ಹತ್ತಿರ ಕರೆದುಕೊಂಡು ಹೋಗಿ ಸತೀಷ ತಂದೆ ತಿಪ್ಪಣ್ಣ @ ತಿಪ್ಪು ರಾಠೋಡ, ಲವಕುಮಾರ @ ಲವ್ಯಾ ತಂದೆ ರೂಪ್ಲಾ ರಾಠೋಡ, ಚಂದ್ರಕಾಂತ ತಂದೆ ಮೋಹನ ಕಾರಬಾರಿ, ಹೀರಾ, ಶಿವಶರಣಪ್ಪ ತಂದೆ ಕೆಂಚೆಪ್ಪ ಇವರ ಸಂಗಡ ಇನ್ನೂ 4 ಜನರು ಹೀಗೆ ಎಲ್ಲರೂ ಒಟ್ಟಿಗೆ ಕೂಡಿಕೊಂಡು ಧರ್ಮಶಾಲೆಯ ಆವರಣದಲ್ಲಿ  ಚಾಕು, ತಲವಾರ ಮತ್ತು ಗಾಜಿನಿಂದ ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿರುತ್ತಾರೆ ಆತನ ತಾಯಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 31/12 ಕಲಂ 143, 147, 148, 302 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ದಿನಾಂಕ 05/05/2012 ರಂದು ರಾತ್ರಿ 11-00  ಗಂಟೆಯಿಂದ ದಿ: 6/5/12 ರಂದು 4 ಎಎಮ  ಮದ್ಯದ ಅವಧಿಯಲ್ಲಿ ಯಾರೊ ಕಳ್ಳರು ಆಳಂದ ರೋಡಿನ ಪಕ್ಕದಲ್ಲಿರುವ ಸಂತೋಷ ಧಾಬಾದ  ಹಿಂದುಗಡೆ ಇರುವ  R.G. Build Con ಗೆ ಸಂಬಂಧಿಸಿದ  ನಮ್ಮ ಕಂಪನಿಯ ಪ್ಲಾಂಟ್  ಇದ್ದು ಇಲ್ಲಿ ಸಂಗ್ರಹಿಸಿ ಇಡಲಾಗಿದ ಸುಮಾರು  1 ಟನ್‌‌ ಕಬ್ಬಿಣದ ರಾಡು ಅಂದಾಜು ಮೊತ್ತ 40,000/- ರೂ. ಗಳಷ್ಟು ಬೆಲೆ ಬಾಳುವ  ರಾಡುಗಳು ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ರಾಜಕುಮಾರ ತಂದೆ ಪ್ರಭುಲಿಂಗ ಪಾಟೀಲ ಗುಲಬರ್ಗಾ ಸಲಗರೆ ಆರ್.ಜೆ. ಬೀಲ್ಡ್ರರ್ಸ & ಕನ್‌‌ಷ್ಟ್ರಕ್ಷನ್‌‌  ಲಾಲಗೇರಿ ಕ್ರಾಸ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:141/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.