POLICE BHAVAN KALABURAGI

POLICE BHAVAN KALABURAGI

28 February 2014

Gulbarga District Reported Crimes

ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 23.02.2014 ರಂದು ಸಂಜೆ 7-30 ಗಂಟೆ ಸುಮಾರಿಗೆ ಶಿವಾಜಿ ನಗರದಲ್ಲಿರುವ ಪುಜಾರಿ ಕಿರಾಣಿ ಅಂಗಡಿ ಎದುರುಗಡೆ ರೋಡಿನ ಮೇಲೆ ಶ್ರೀಮತಿ ಚಂದ್ರಕಲಾ ಗಂಡ ಸೈದಪ್ಪಾ ಬಿದನೂರ, ಸಾಃ ಶಿವಾಜಿ ನಗರ ಗುಲಬರ್ಗಾ ಮಗನಾದ ವಿಷ್ನೂವರ್ಧನ ವರ್ಷ ಇತನು ನಡೆದುಕೊಂಡು ಹೋಗುತ್ತಿದ್ದಾಗ ಕಾರ ನಂ ಕೆ,32 ಸಿ  0687 ನೆದ್ದರ ಚಾಲಕ ಅಂಭಾ ಭವಾನಿ ಗುಡಿ ರೋಡಿನಿಂದ ಅತೀ ವೇಗ ಮತ್ತು ಆಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಫಿರ್ಯಾದಿ ಮಗನಿಗೆ ಅಪಘಾತ ಪಡಿಸಿ ಭಾರಿ ಗಾಯ ಪಡಿಸಿ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ವರೆಗೆ ತೆಗೆದುಕೊಂಡು ಹೋಗಿ ಅಲ್ಲಿಂದ ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಆಳಂದ ಠಾಣೆ : ಶ್ರೀ ಬಾಬುರಾವ ತಂದೆ ರೇವಪ್ಪಾ ಕಟ್ಟಿಕೇರಿ ಸಾ|| ರುದ್ರವಾಡಿ  ರವರು 6 ವರ್ಷದ ಹಿಂದೆ ನನ್ನ ತಮ್ಮ ಶಿವಾನಂದನಿಗೆ 50000/- ರೂ ಹೊಲದ ಸಂಭಂಧ ಮುರುಮ್ ಗ್ರಾಮದ ಬಾಪುಗೌಡಾ ಪಾಟೀಲರು ಹಣ ಕೊಟ್ಟು ಸದರಿ ಹಣ ನನಗೆ ಕೊಡು ಎಂದು ಅವನ ಕೈಯಲ್ಲಿ ಕೊಟ್ಟು ಕಳುಹಿಸಿದ್ದು ಆದರೆ ಸದರಿ 50000/- ರೂ ನನ್ನ ತಮ್ಮ ನನಗೆ ಇಲ್ಲಿಯವರೆಗೆ ಕೊಟ್ಟಿರುವುದಿಲ್ಲ, ಶಿವಾನಂದನಿಗೆ ನಾನು ಮೇಲಿಂದ ಮೇಲೆ ಕೇಳುತ್ತಾ ಹಣ ಕೊಡು ಎಂದರೂ ಹಣ ಕೊಟ್ಟಿರುವುದಿಲ್ಲ, ನಿನಗೆ ಯಾವ ಹಣ ಕೊಡುವುದು ಇಲ್ಲ ಅಂದಿದ್ದಕ್ಕೆ ಸದರಿ ಶಿವಾನಂದನು ತನ್ನ ಹೊಲ ಮಾರಾಟ ಮಾಡುತ್ತಿದ್ದಾಗ ನಾನು ಹೊಲ ಮಾರಾಟ ಮಡದಂತೆ ನ್ಯಾಯಾಲಯದಲ್ಲಿ ದಾವೆ ಹಾಕಿರುತ್ತೇನೆ, ನನ್ನ ತಮ್ಮ ಬಸವರಾಜ ಕಟ್ಟಕೇರಿ, ಈತನು ಅವನ ಪಾಲಿಗೆ ಬಂದ 3 ಎಕರೆ 16 ಗುಂಟೆ ಹೊಲ ಶಿವಾನಂದನೆ ಮಾಡುತ್ತಾ ಬಂದಿದ್ದು ಈ ವರ್ಷ ಅವನಿಗೆ ಬಿಡು ಬೇರೆಯವರಿಗೆ ಹೊಲ ಹಚ್ಚುತ್ತೇನೆಂದಾಗ ಬಸವರಾಜನಿಗೆ ಬೇರೆಯವರಿಗೆ ಹಚ್ಚಲು ಬಿಡುವುದಿಲ್ಲ ಅಂತಾ ಅಂದು ಅವನೊಂದಿಗೂ ಕೂಡಾ ವೈಮನಸ್ಸು ಹೊಂದಿರುತ್ತಾನೆ, ದಿನಾಂಕ 22/02/2014 ರಂದು ಮಧ್ಯಾಹ್ನ 4.30 ಗಂಟೆಯ ಸುಮಾರಿಗೆ ನನ್ನ ತಮ್ಮ ಬಸವರಾಜನ ಹೊಲ ಸರ್ವೆ ಮಾಡಲು ನಾನು ನನ್ನ ತಮ್ಮ ಬಸವರಾಜ ಇನ್ನೊಬ್ಬ ತಮ್ಮ ಶಿವಶರಣ ಹಾಗೂ ಸಂಭಂಧಿ ಸಿದ್ದಪ್ಪಾ ತಂದೆ ಧರ್ಮರಾಯ ಬಿರಾದಾರ ಸಾ|| ಮಂಟಗಿ ಕೂಡಿ ಸರ್ವೆ ಮಾಡಿ ಮರಳಿ ಬರುವಾಗ ಬಸವರಾಜನ ಹೊಲದ ಹತ್ತಿರ ರೋಡಿನ ಮೇಲೆ ಬಂದಾಗ ಸದರಿ ಶಿವಾನಂದ ಹಾಗೂ ಅವನ ಮಗ ಕಿಶೋರ ಇನ್ನೊಬ್ಬ ಮಗ ಸುನೀಲ & ಶಿವಾನಂದನ ಹೆಂಡತಿ ನೀಲಮ್ಮಾ ಕೂಡಿ ಬಂದು ನನಗೆ ತಡೆದು ಶಿವಾನಂದನು ಭೋಸಡಿ ಮಗನೆ ನನ್ನ ಹೊಲದ ಮೇಲೆ ಕೇಸ್ ಹಾಕಿದ್ದರಿಂದ ಹೊಲ ಮಾರಾಟ ಮಾಡಲೂ ಬಿಡುತ್ತಿಲ್ಲ, ಎಂದು ಬೈದು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಕಲ್ಲಿನಿಂದ ಕೈಯಿಂದ ಹೊಡೆ ಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.