POLICE BHAVAN KALABURAGI

POLICE BHAVAN KALABURAGI

06 June 2012

GULBARGA DIST REPORTED CRIMES


ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ. ಅಭೀಷೇಕ ತಂದೆ ಅಪ್ಪಾರಾವ ಫರತಾಬಾದ ಸಾ: ಮನೆ ನಂ. 11-1776 ವಿದ್ಯಾನಗರ ಗುಲಬರ್ಗಾ ರವರು ನಾನು  2-3 ದಿವಸಗಳ ಹಿಂದೆ ಮಿಲಿಂದ ಶಾಲೆಯ ಆಟದ ಮೈದಾನದಲ್ಲಿ ಆಟ ಆಡುತ್ತಿರುವಾಗ ಮಹೇಶ ತಂದೆ ಕಾಶಿನಾಥ ಎನ್ನುವವನು ಬಂದು ನನ್ನೊಂದಿಗೆ ಜಗಳ ಮಾಡಿ ಹೋಗಿದ್ದ. ನಿನ್ನೆ ದಿನಾಂಕ:05/06/2012 ರಂದು ರಾತ್ರಿ 8-00 ಗಂಟೆ ಸುಮಾರಿಗೆ ನಮ್ಮ ಮನೆ ಹತ್ತಿರ ಮಹೇಶ ತಂದೆ ಕಾಶಿನಾಥ ಎನ್ನುವವನು ಬಂದು, ನನಗೆ ಹೊರೆಗೆ ಕರೆದು ಅವಾಚ್ಯವಾಗಿ ಜಾತಿ ಎತ್ತಿ ಬೈದು ತೆಕ್ಕೆ ಕುಸ್ತಿಗೆ ಬಿದ್ದು ಹೊಡೆ ಬಡೆ ಮಾಡಿರುತ್ತಾನೆ . ಮತ್ತೆ ರಾತ್ರಿ 10-00 ಗಂಟೆಗೆ ಪುನಃ ನಮ್ಮ ಮನೆಯ ಹತ್ತಿರ ಬಂದು ಅವಾಚ್ಯವಾಗಿ ಬೈದು ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 50/2012 ಕಲಂ 323, 504, 506 ಐ.ಪಿ.ಸಿ ಮತ್ತು 3 (1) (10) ಎಸ್.ಸಿ/ಎಸ್.ಟಿ  ಆಕ್ಟ 1989 ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ರಾಣಾಪ್ರತಾಪ ತಂದೆ ಟೀಕಾರಾಮ ತಿವಾರಿ, ಸಾ|| ಮನೆ ನಂ 9-137, ಕಟಗರಪೂರ, ಶಹಬಜಾರ ಗುಲಬರ್ಗಾರವರು ನನ್ನ ಖುಲ್ಲಾ  ಪ್ಲಾಟ ದೇವಿ ನಗರ ಬಡಾವಣೆಯಲ್ಲಿದ್ದು, ದಿನಾಂಕ:06-06-2012 ರಂದು ಮಧ್ಯಾಹ್ನ ನನ್ನ ಪ್ಲಾಟದಲ್ಲಿ ಕಂಪೌಂಡ ಕಟ್ಟುತ್ತಿರುವಾಗ, ಮಹಿಬೂಬ, ನಜೀರ, ರಹಿಮ ಸಂಗಡ ಇನ್ನೂ 8-10 ಜನರು ಸಾ|| ಎಲ್ಲರೂ ಖಾದ್ರಿ ಚೌಕ ಗುಲಬರ್ಗಾ ರವರು ಗುಂಪು ಕಟ್ಟಿಕೊಂಡು ನಮ್ಮ ಪ್ಲಾಟಿನ ಹತ್ತಿರ ಬಂದು  ಈ ಪ್ಲಾಟ ನಮಗೆ ಸಂಬಂಧಿಸಿದ್ದು, ನೀವು ಯ್ಯಾಕೆ  ಕಟ್ಟುತ್ತಿದ್ದಿರಿ? ಅಂತ ಅಂದವರೇ, ಅವರಲ್ಲಿದ್ದ ಹರಿತವಾದ ಆಯುಧಗಳಿಂದ (ಜಂಬೆ), (ತಲವಾರ) ಗಳಿಂದ ನನಗೂ ಹಾಗು ನನ್ನ ಮಗನಾದ ಪ್ರಮೋದ ಕುಮಾರ ತಿವಾರಿ ಇತನಿಗೆ ಕೊಲೆ ಮಾಡುವ ಉದ್ದೇಶದಿಂದ ಹೊಡೆದು ಭಾರಿ ರಕ್ತಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:40/12 ಕಲಂ 143, 147, 148, 504, 307 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.