POLICE BHAVAN KALABURAGI

POLICE BHAVAN KALABURAGI

24 October 2017

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ  ಜಪ್ತಿ  :
ಅಫಜಲಪೂರ ಠಾಣೆ : ದಿನಾಂಕ 23-10-2017 ರಂದು ರಾತ್ರಿ ಗುಡ್ಡೆವಾಡಿ ಗ್ರಾಮದಿಂದ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಕಡೆ ಬರುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಪಟ್ಟಣದ ಬಸವೇಶ್ವರ ಸರ್ಕಲ ಹತ್ತಿರ ಹೋಗುತ್ತಿದ್ದಾಗ ಒಂದು ಮರಳು ತುಂಬಿದ ಟಿಪ್ಪರ ದುಧನಿ ರೋಡಿನ ಕಡೆಗೆ ಹೋಯಿತು, ಆಗ ನಾವು ನಮ್ಮ ಜೀಪಿನಲ್ಲಿ ಸದರಿ ಮರಳು ತುಂಬಿದ ಟಿಪ್ಪರ ಹಿಂದೆ ಚೆಜ್ ಮಾಡುತ್ತಾ ಹೊಗುತ್ತಿದ್ದಾಗ, ಸದರಿ ಮರಳು ತುಂಬಿದ ಟಿಪ್ಪರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಮಾದಾಬಾಳ ತಾಂಡಾ ಹತ್ತಿರ ಟಿಪ್ಪರ ನಿಲ್ಲಿಸಿ ಕತ್ತಲಲ್ಲಿ ಓಡಿ ಹೋದನು. ಆಗ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರನ್ನು ಚೆಕ್ಕ ಮಾಡಲು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನಂ ಕೆಎ-32 ಸಿ-5067 ಅಂತಾ ಇದ್ದು ಸದರಿ ಟಿಪ್ಪರ ಅ.ಕಿ 10,00,000/-ರೂ  ಇರಬಹುದು. ಸದರಿ ಟಿಪ್ಪರದಲಿದ್ದ ಮರಳಿನ ಅ.ಕಿ 5000/- ರೂ ಇರಬಹುದು. ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟಿಪ್ಪರನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಶಾಹಾಬಾದ ನಗರ ಠಾಣೆ : ದಿನಾಂಕ  23/10/201  ರಂದು ಬೆಳಿಗ್ಗೆ ಮುತ್ತಗಾ ಸಿಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟಿಪ್ಪರನಲ್ಲಿ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಶ್ರೀ ಮಲ್ಲಿಕಾರ್ಜುನ ಶಿವಪೂರ ಉಪ ತಹಸಿಲ್ದಾರರು ಶಹಾಬಾದ ಗ್ರಾಮ ಲೇಖಾಪಾಲಕರಾದ ಕು. ಪಾರ್ವತಿ  ಮತ್ತು ಬಂಕೂರ ಗ್ರಾಮ ಸಹಾಯಕಿ ಶ್ರೀಮತಿ ಕಾಂತಮ್ಮ ರವರೊಂದಿಗೆ ಶಹಾಬಾದ ನಗರ ಪೊಲೀಸ ಠಾಣೆಗೆ ಬಂದು ಸಿಬ್ಬಂದಿಯವರೊಂದಿಗೆ ಭಂಕೂರ ಗ್ರಾಮದ ಗಣೇಶ ಗುಡಿ ಹತ್ತಿರ ಹೋಗಿ ನಿಂತಾಗ ಭಂಕೂರ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ ಬರುತ್ತಿರುವುದನ್ನು ನೋಡಿ ತಡೆದು ನಿಲ್ಲಿಸಿದಾಗ ಅದರಲ್ಲಿದ್ದ ಚಾಲಕ ಮತ್ತು  ಇನ್ನೊಬ್ಬ ಓಡಿ ಹೋದರು  ಪರಿಶೀಲಿಸಲಾಗಿ ಅದರಲ್ಲಿ ಮರಳು ತುಂಬಿದ್ದು ಸದರಿ ಟಿಪ್ಪರ ನಂ ಕೆ ಎ 20 ಬಿ 0020 ಇದ್ದು ಅ.ಕಿ 3 ಲಕ್ಷ ರೂ ಅದರಲ್ಲಿಯ ಮರಳು ಅ.ಕಿ 5000/- ರೂ ನ್ನೆದ್ದು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು  ಟಿಪ್ಪರ ಸಮೇತ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸೈಯದ ಜೀಲಾನ ಪಾಶ್ಯಾ ತಂದೆ ಸೈಯದ ರುಕ್ಮೊದಿನ್ ಸಾ: ಮನೆ ನಂ 10-1041/71 ನ್ಯೂ ಗಾಲಿಬ ಕಾಲೋನಿ ಎಮ್.ಎಸ್.ಕೆ.ಮೀಲ್ ಕಲಬುರಗಿ ಇವರು ದಿನಾಂಕ 21.10.2017 ರಂದು ಸಾಯಂಕಾಲ ನಾನು ನನ್ನ ಗೆಳೆಯ ವಿರಜಾ ಮೊಸಿನ ಬೇಗ ಕೂಡಿಕೊಂಡು ಮಹ್ಮದಿ ಚೌಕ ಹತ್ತಿರ ಇರುವ ಬಿಸ್ಮಿಲ್ಲಾ ಹೊಟೇಲಕ್ಕೆ ಚಹಾ ಕುಡಿಯಲು ಹೋಗಿದ್ದು. ಸದರಿ ಹೊಟೇಲದಲ್ಲಿ ಅಬ್ದುಲ ರಸೂಲ ತಂದೆ ಅಬ್ದುಲ ರಸೀದ ಮತ್ತು ಅಬ್ದುಲ ರುಸ್ತಮ ತಂದೆ ಅಬ್ದುಲ ರಸೀದ ಇವರು ಚಹಾ ಕುಡಿಯುತ್ತಿದ್ದು. ಸದರಿಯವರು ನನ್ನನ್ನು ನೋಡಿ ಏ ರಂಡಿ ಮಗನೆ ನಿನ್ನ ಸೊಕ್ಕು ಬಹಳ ಆಗಿದೆ ನೀನು ನಮಗೆ ಎದರು ಹಾಕಿಕೊಂಡು ಕೆಲಸ ಮಾಡುತ್ತಿ ಸೂಳಿ ಮಗನೆ ಅಂತ ಬೈಯುತ್ತಿದ್ದು ಆಗ ನಾನು ಸದರಿಯವರಿಗೆ ನಿಮ್ಮ ಹೆಸರಿಗೆ ನಾನು ಬರುವದಿಲ್ಲ ನೀವು ನನಗೆ ವಿನಾಕಾರ ಬೈಯುವದು ಸರಿ ಇರುವದಿಲ್ಲ ಅಂತ ಅಂದಿದ್ದು ಆಗ ಅಬ್ದುಲ ರಸೂಲ ಇತನು ರಂಡಿ ಮಗನೆ ನಮಗೆ ಎದರು ಮಾತನಾಡುತ್ತಿ ಅಂತ ಅನ್ನುತ್ತಾ ಅವನು ಕುಡಿಯುತ್ತಿದ್ದ ಚಾಹಾವನ್ನು ನನ್ನ ಮುಖದ ಮೇಲೆ ಹಾಕಿದ್ದು ಚಹಾ ನನ್ನ ಮುಖದ ಮೇಲೆ ಮತ್ತು ಬಟ್ಟೆಯ ಮೇಲೆ ಬಿದಿದ್ದು ಆಗ ನಾನು ಸದರಿಯವನಿಗೆ ಹೀಗೆಕೆ ಮಾಡುತ್ತಿದ್ದಿ ಅಂತ ಕೇಳುತ್ತಿದ್ದಾಗ ಅಬ್ದುಲ ರಸೂಲ ಮತ್ತು ಅಬ್ದುಲ ರುಸ್ತಮ ಇಬ್ಬರು ಕೂಡಿಕೊಂಡು ನನಗೆ ಹಿಡಿದುಕೊಂಡು ತಮ್ಮ ಕೈಗಳಿಂದ ನನ್ನ ಬೆನ್ನಿನ ಮೇಲೆ ಮತ್ತು ದೇಹದ ಇತರ ಭಾಗದಲ್ಲಿ ಹೊಡೆದು ಗುಪ್ತಗಾಯ ಪಡಿಸಿದ್ದು ಆಗ ನನ್ನ ಗೆಳೆಯ ಮಿರಜಾ ಮೊಸಿನ್ ಬೇಗ ಇತನು ನನಗೆ ಬಿಡಿಸಿಕೊಳ್ಳಲು ಬರುವಷ್ಠರಲ್ಲಿ ಅಬ್ದುಲ ರುಸ್ತಮ ಇತನು ತನ್ನ ಹತ್ತಿರ ಇದ್ದ ತಲವಾರ ತೆಗೆದುಕೊಂಡು ಅದರ ತುಂಬಿನಿಂದ ನನ್ನ ತಲೆಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.