POLICE BHAVAN KALABURAGI

POLICE BHAVAN KALABURAGI

22 November 2014

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಮಾಹಾಗಾಂವ ಠಾಣೆ : ದಿನಾಂಕ: 21/11/2014 ರಂದು ದಸ್ತಾಪೂರ  ಗ್ರಾಮದಲ್ಲಿಯ ಮಲ್ಕಣ್ಣಾ ದೇವರ ಗುಡಿಯ ಮುಂದುಗಡೆ ಇರುವ ಆಲದ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿರುವ ಬಗ್ಗೆ. ಭಾತ್ಮಿ ಬಂದ ಮೇರೆಗೆ, ಪಿಎಸ್ಐ ಮಾಹಾಗಾಂವ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ದಾಳಿ ಮಾಡಿ 1. ಗುರುನಾಥ ತಂದೆ ನಾಗಪ್ಪಾ ಕಗ್ಗನಮಡ್ಡಿ. 2. ಬಾಬುರಾವ ತಂದೆ ಹಣಮಂತಪ್ಪಾ ಹೊಳಿ 3. ಸಂಗಣ್ಣಾ ತಂದೆ ಭೀಮರಾಯ ಕಲಖೋರ 4. ಮಚೇಂದ್ರ ತಂದೆ ಶ್ರೀಮಂತ ನಾಟೀಕಾರ 5. ಭರತ ತಂದೆ ಅಂಬಾರಾಯ ಹಿರೇನಾಗಾಂವ 6. ಹಣಮಂತರಾವ ತಂದೆ ಮಾಣಿಕಪ್ಪಾ ಹಡಪದ 7. ನಾಗೇಂದ್ರಪ್ಪಾ ತಂದೆ ಚಿತ್ರಶೇಖರ ಬಿರಾದಾರ 8. ಧರ್ಮರಾಯ ತಂದೆ ನಾಗಪ್ಪಾ ಹೂಗಾರ ಮತ್ತು 9. ಅನೀಲಕುಮಾರ ತಂದೆ ಬಾಬುರಾವ ತಿಮ್ಮನಕರ ಸಾ:ಎಲ್ಲರೂ ದಸ್ತಾಪೂರ ತಾ:ಜಿ:ಕಲಬುರಗಿ ಇವರುಗಳನ್ನು ದಸ್ತಗಿರಿ ಮಾಡಿ, ಅವರ ವಶದಿಂದ ಇಸ್ಪೇಟ ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪೇಟ ಎಲೆಗಳು ನಗದು ಹಣ 3350-00 ರೂ. ಗಳನ್ನು ಜಪ್ತಿ ಪಡಿಸಿಕೊಂಡು ಸದರಿಯವರೊಂದಿಗೆ ಮಾಹಾಗಂವ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಧರ್ಮಣ್ಣ ತಂದೆ ಪ್ರಭು ಮಡಿವಾಳ ಸಾ: ಹಿತ್ತಲಶೀರೂರ ಇವರ ಮಗಳು ಬಟ್ಟೆ ತೊಳೆದು ಚಲ್ಲಿದ ನೀರು 1.ಕಲ್ಲಪ್ಪ ತಂದೆ ಗುರುಲಿಂಗಪ್ಪ ಮಡಿವಾಳ 2. ನಾಗರಾಜ ತಂದೆ ಕಲ್ಲಪ್ಪ ಮಡಿವಾಳ ಸಾ|| ಇಬ್ಬರೂ ಹಿತ್ತಲಶೀರೂರ ಇವರ ಎತ್ತುಗಳ ಕಾಲಲ್ಲಿ ನಿಂತಿವೆ ಅಂತಾ ಜಗಳ ತಗೆದು ದಿನಾಂಕ 20-11-2014 ರಂದು ರಾತ್ರಿ 09:30 ಗಂಟೆಗೆ ನನಗು ಮತ್ತು ನನ್ನ  ಮಗಳಾದ ಪ್ರಭಾವತಿ ಇಬ್ಬರಿಗೂ ತಡೆದು ಅವಾಚ್ಯ ಶಬ್ದಳಿಂದ ಬೈದು ಕೈಯಿಂದ ಕಲ್ಲಿನಿಂದ ಹೊಡೆ ಬಡೆ ಮಾಡಿ ಜೀವ ಭಯ ಪಡೆಸಿರುತ್ತಾರೆ ಅತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ರೇವಣಸಿದ್ದ ತಂದೆ ನಾಗಪ್ಪಾ ಮಡ್ಡಿತೋಟ ಸಾ : ಮಾಡಿಯಾಳ ಇವರು ದಿನಾಂಕ 20/11/2014 ರಂದು ಸಾಯಂಕಾಲ 0645 ಪಿ.ಎಮಕ್ಕೆ ಮಾಡಿಯಾಳ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಫಿರ್ಯಾದಿಯು ಕುಳಿತಾಗ ಹೊಲದ ಸಂಭಂಧ ಆರೋಪಿತರಾದ ಅಸ್ಲಂ ತಂದೆ ನಸರೋದ್ದೀನ ಢಾಂಗೆ ಮತ್ತು ಅನ್ವರ ತಂದೆ ನಸರೋದ್ದೀನ ಢಾಂಗೆ ಸಾ|| ಮಾಡಿಯಾಳ ಸೇರಿ ಜಗಳ ತೆಗೆದು ತೆಕ್ಕೆಯಲ್ಲಿ ಹಿಡಿದು ಅವಾಚ್ಯ ಶಬ್ದಗಳಿಂದ ಬೈದು ನಿನಗೆ ಬಿಡಂಗಿಲ್ಲ ಅಂತ ಜೀವ ಭಯ ಪಡಿಸಿ ಬತಾಯಿಯಿಂದ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ಹೈದರ ತಂದೆ ಮಹ್ಮದ ಹನೀಫಸಾಬ ಢಾಂಗೆ ಸಾ|| ಮಾಡಿಯಾಳ ಇವರು ದಿನಾಂಕ 20/11/2014 ರಂದು ಸಾಯಂಕಾಲ 0645 ಪಿ.ಎಮಕ್ಕೆ ಮಾಡಿಯಾಳ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಆಪಾದಿತನಾದ ರೇವಣಸಿದ್ದ ತಂದೆ ನಾಗಪ್ಪಾ ಮಡ್ಡಿತೋಟ ಸಾ|| ಮಾಡಿಯಾಳ ಇತನು ಫಿರ್ಯಾದಿಯ ಕಾಕಾನಾದ ನಸೀರೋದ್ದೀನ ತಂದೆ ಇಬ್ರಾಹಿಂಸಾಬ ಡಾಂಗೆ ಈತನೊಂದಿಗೆ ಬಾಯಿ ಬಡೆಯುತ್ತಿದ್ದಾಗ ಬಿಡಿಸಲು ಹೋಗಿದ್ದಕ್ಕೆ ಏ ರಂಡಿ ಮಗನೆ ನಿಮ್ಮ ಕಾಕಾ ನಮ್ಮ ಅಣ್ಣತಮ್ಮಕೀಯ ಹೊಲ ಮಾಡ್ಯಾನ ಅದಕ್ಕೆ ನಮ್ಮ ತಕರಾರು ಅದಾ ನೀನು ನಿನ್ನ ಕಾಕಾನ ಮೇಲುಕಟ್ಟಿ ಬಂದಿದಿ ಮಗನೆ ಅಂತಾ ಬೈದು ನಿನಗೆ ಬಿಡಂಗಿಲ್ಲ ಅಂತ ಅಂದು ಹಿಡಿಗಾತ್ರದಕಲ್ಲಿನಿಂದ ಬಲಗಾಲಿಗೆ ಹೊಡೆದು ಗಂಭೀರವಾದ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾನೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಸುಮನ ಗಂಡ ಶಿವಾಜಿ ಕಾಟಕರ ಸಾ: ಠಾಕೂರ ಆಸ್ಪತ್ರೆ ಎದುರು ಗಂಗಾ ನಗರ ಕಲಬುರಗಿ ರವರು ದಿನಾಂಕ 21-11-2014 ರಂದು ಮದ್ಯಾಹ್ನ 1-30 ಗಂಟೆ ಸುಮಾರಿಗೆ ಆನಂದ ಹೋಟಲ ಕಡೆಯಿಂದ ಎನ್.ವಿ. ಕಾಲೇಜ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಮೋ/ಸೈಕಲ ನಂ ಕೆಎ-33 ಜೆ-4273 ರ ಸವಾರನು ತನ್ನ ಮೋ/ಸೈಕಲ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಬಲ ತೊಡೆಗೆ ಭಾರಿಗುಪ್ತಪೆಟ್ಟು, ಬಲ ಟೊಂಕಿಗೆ ಗುಪ್ತಪೆಟ್ಟು ಗೊಳಿಸಿ ತನ್ನ ಮೋ/ಸೈಕಲ ನಿಲ್ಲಿಸದೆ ಚಲಾಯಿಸಿಕೊಂಡು ಓಡಿ ಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳಖೇಡ ಠಾಣೆ : ಶ್ರೀ  ಮಹ್ಮದ ಅಲಿ ತಂದೆ ನಬಿ ಚಾಂದ ನಾಗುರೆ ಸಾ: ಬೆಳಮಗಿ ತಾ: ಆಳಂದ ಹಾವ: ಎಂ.ಎಸ್.ಕೆ ಮೀಲ್ ಶಾ ಜಿಲಾಸನಿ ದರ್ಗಾ ಹತ್ತಿರ ಗುಲಬರ್ಗಾ ಇವರ ಮಗನಾದ ಅಸ್ಲಮ್ ತಂದೆ ಮಹ್ಮದ ಅಲಿ ಈತನು ದಿನಾಂಕ 20-11-2014 ರಂದು ನಸೀರ ಅಹ್ಮದ ಗುಲಬರ್ಗಾ ಇವರ ಲಾರಿ ಮೆಲೆ ಕ್ಲೀನರ್ ಕೆಲಸಕ್ಕೆ ಹೋಗಿದ್ದು, ಕುಕ್ಕುಂದಾ ರೋಡಿಗೆ ನಡೆದಿರುವ ರಸ್ತೆ ಕಾಮಗಾರಿ ಕುರಿತು ಸದರಿ ನಸಿರ ಅಹ್ಮದ ಇವರು ತಮ್ಮ ಲಾರಿ ನಂಬರ ಕೆಎ 32-2003 ನೇದ್ದರ ಟಿಪ್ಪರ ಮೆಲೆ ದಶರಥ ತಂದೆ ಭೀಮಸಿಂಗ ಇವರ ಜೋತೆಗೆ ನನ್ನ ಮಗ ಅಸ್ಲಮ್ ಇವನಿಗೆ ಕ್ಲೀನರ್ ಕೆಲಸ ಮಾಡುತ್ತಿದ್ದು ದಿನಾಂಕ: 21-11-2014 ರಂದು ಬೆಳಗಿನ ಜಾವ 05:30 ಎ.ಎಮಕ್ಕೆ ಕುಕ್ಕುಂದಾ ಗ್ರಾಮದ ಶಂಬುಲಿಂಗ ಎಂಬುವರು ನಮಗೆ ಫೋನ ಮಾಡಿ ತಿಳಿಸಿದೇನೆಂದರೆ, ಕುಕ್ಕುಂದಾ ಗ್ರಾಮದ ಸಮೀಪ ವಿಜಯಕುಮಾರ ಗುತ್ತೇದಾರ ಇವರ ಹೊಲದಲ್ಲಿಂದ ತಾನು ತನ್ನ ಹೊಲಕ್ಕೆ ಹೋಗುತ್ತಿರುವಾಗ ಒಂದು ಲಾರಿ ನಂಬರ ಕೆಎ-32-2003 ನೇದ್ದರ ಚಾಲಕನು ಅತೀ ವೇಗ ಮತ್ತು ನಿಷ್ಕಾಳಜೀತನದಿಂದ ನಡೆಸಿಕೊಂಡು ರೋಡಿನ ಬಲಗಡೆ ತಗ್ಗಿನಲ್ಲಿ ಪಲ್ಟಿ ಮಾಡಿದಾಗ ಲಾರಿಯ ಮುಂದಿನ ಪಾಟಾಗಳು ಮುರಿದು ಟಯರಗಳು ಉಚ್ಚಿದ್ದು ಇರುತ್ತದೆ. ಆ ಕಾಲಕ್ಕೆ ಸದರಿ ಲಾರಿಯ ಚಾಲಕನಾದ ದಶರಥ ತಂದೆ ಭೀಮಸಿಂಗ ಇವನು ಲಾರಯಿಂದ ಜಿಗಿದಿದ್ದು ಅವನಿಗೆ ತಾನು ಹಿಡಿದು ವಿಚಾರಿಸಿದಾಗ ಅವನ ಹೆಸರು ಗೋತ್ತಾಗಿರುತ್ತದೆ. ಅಂತಾ ತಿಳಿಸಿದ್ದು. ನಾನು ನನ್ನ ಮಕ್ಕಳ ಜೋತೆಗೆ ಸೇಡಂ ಸರಕಾರಿ ಆಸ್ಪತ್ರೆಗೆ ಇಂದು ದಿನಾಂಕ: 21-11-2014 ರಂದು ಮುಂಜಾನೆ 09:00 ಗಂಟೆಗೆ ಸೇಡಂ ಸರಕಾರಿ ದವಾಖಾನೆಗೆ ಬಂದು ನನ್ನ ಮಗನಿಗೆ ನೊಡಿ ಗುರುತಿಸಿರುತ್ತೇನೆ. ನನ್ನ ಮಗ ಅಸ್ಲಮ್ ಈತನು ಅಪಘಾತದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಂಸದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.