POLICE BHAVAN KALABURAGI

POLICE BHAVAN KALABURAGI

31 July 2012

GULBARGA DIST REPORTED CRIME

ಅಪಹರಣ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ :ಶ್ರೀ, ಸೋಮಯ್ಯ ತಂದೆ ಭೀಮಯ್ಯ ಒಡ್ಡರ ಸಾ|| ಅರಳಗುಂಡಗಿ ರವರು ನನಗೆ ರೇಶ್ಮಾ ಅಂತಾ 13 ವರ್ಷದ ಮಗಳಿದ್ದು,  ನಮ್ಮ ಜಾತಿಯವನೆಯಾದ ಹಣಮಂತ ತಂದೆ ಯಂಕಯ್ಯ ಕಲ್ಲೂರ ಇತನು ನಮ್ಮ ಮನೆಗೆ ಆಗಾಗ ಮನಗೆ ಬಂದು ಹೋಗಿ ನಮ್ಮೊಂದಿಗೆ ಸಲುಗೆಯಿಂದ ಮಾತನಾಡಿ ಹೋಗುತ್ತಿದ್ದನು.ದಿನಾಂಕ: 23-07-2012 ರಂದು ಬೆಳಿಗ್ಗೆ 9-00 ಗಂಟೆಗೆ ನಾನು ಗೌಂಡಿ ಕೆಲಸಕ್ಕೆಂದು ಕುರನಳ್ಳಿ ಗ್ರಾಮಕ್ಕೆ ಹೋಗಿದ್ದೆನು, ನಮ್ಮ ಮನೆಯಲ್ಲಿ ನನ್ನ ಹೆಂಡತಿಯಾದ ನಾಗಮ್ಮ ಮತ್ತು ನಮ್ಮ ಮಗಳಾದ ರೇಶ್ಮಾ ಇವರು ಮನೆಯಲ್ಲಿದ್ದರು ರಾತ್ರಿ 9 ಗಂಟೆಗೆ ನಾನು ಕೆಲಸದಿಂದ ಮನೆಗೆ ಬಂದಾಗ ನಮ್ಮೂರಿನ ಭೀಮಯ್ಯ ತಂದೆ ಯಂಕಯ್ಯ ಕಡಕೋಳ, ರಾಜು ತಂದೆ ರಾಮಯ್ಯ ರವರು  ನಿಮ್ಮ ಮಗಳಾದ ರೇಶ್ಮಾ ಇವಳಿಗೆ ಹಣಮಂತ ತಂದೆ ಯಂಕಯ್ಯ ಕಲ್ಲೂರ,. ಶಿವಾನಂದ ತಂದೆ ನಾಗಪ್ಪ ಒಡ್ಡರ, ಮಾಹಾಂತೇಶ ತಂದೆ ನಾಗಪ್ಪ ಒಡ್ಡರ, ಮಾರ್ಖಂಡಯ್ಯ ತಂದೆ ಗುಂಡಪ್ಪ ಒಡ್ಡರ ಮತ್ತು ನಾಗಪ್ಪ ತಂದೆ ರಾಮಸ್ವಾಮಿ ಒಡ್ಡರ ಹೀಗೆಲ್ಲರೂ ಎರಡು ಮೋಟಾರ ಸೈಕಲ್ ಗಳ ಮೇಲೆ ಬಂದವರೆ ರೇಶ್ಮಾ ಸಂಡಾಸಕ್ಕೆ ಹೋಗಿ ವಾಪಸ ಮನೆಯ ಕಡೆಗೆ ಬರುವಾಗ ಸರಕಾರಿ ಪ್ರಾಥಮಿಕ ಶಾಲೆ ಹಿಂದುಗಡೆ ರೋಡಿನ ಮೇಲೆ ಎತ್ತಿಕೊಂಡು ಮೋಟಾರ ಸೈಕಲ್ ಮೇಲೆ ಕುಡಿಸಿಕೊಂಡು ನಡೆ ಅಂತಾ ಪ್ರಚೋದನೆ ಮಾಡಿದರು ಆಗ ರೇಶ್ಮಾ ಇವಳು ಬೇಡ ಬೇಡ ಅಂತಾ ಚೀರಾಡಿದರೂ ನಿನಗೆ ನಾನು ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಜಬರದಸ್ತಿಯಿಂದ ಹಣಮಂತನು ತನ್ನ ಗಾಡಿಯ ಮೇಲೆ ಕುಡಿಸಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 73/2012 ಕಲಂ 143, 366 (ಎ) 109 , 506 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.