POLICE BHAVAN KALABURAGI

POLICE BHAVAN KALABURAGI

13 September 2011

Gulbarga District Reported Crimes

ಕೊಲೆ ಪ್ರಕರಣ :

ರೇವೂರ ಠಾಣೆ :ಶ್ರೀಮತಿ ಅನ್ನಪೂರ್ಣ ಗಂಡ ದತ್ತು ಭಾವಿಮನಿ ಸಾ||ಕಾರಭೋಸಗಾ ಹಾ||ವಾಸ||ಆಹೇರಿ ತಾ||ಸಿಂದಗಿ ರವರು, ದಿನಾಂಕ 12-9-2011 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗಂಡ ದತ್ತು ಭಾವಿಮನಿ ಇಬ್ಬರು ಕೂಡಿಕೊಂಡು ನನ್ನ ಗಂಡನ ಯಮ ಕಂಪನಿ ಮೋಟರ ಸೈಕಲ ಮೇಲೆ ಅಂಕಲಗಾ ಗ್ರಾಮದ ಮದರಸಾಬ ದರ್ಗಾಕ್ಕೆ ಕಾಯಿ ಒಡೆದುಕೊಂಡು ಹೋಗಲು ಬಂದಿರುತ್ತೇವೆ. ಮೋಟರ ಸೈಕಲ ನಂ;ಕೆಎ.36 ಕೆ 5882 ಇರುತ್ತದೆ. ಮದ್ಯಾಹ್ನ 12-30 ಗಂಟೆ ಸುಮಾರಿಗೆ ಮದರಸಾಬ ದರ್ಗಾದಲ್ಲಿ ದರ್ಶನ ಮಾಡಿಕೊಂಡು ಕುಳಿತಿದ್ದೆವು. ಆಗ ನನ್ನ ಅಣ್ಣ ಸಂತೋಷ ಎಂಬಾತನು ಮೋಟರ ಸೈಕಲ ಮೇಲೆ ದರ್ಗಾದ ಹತ್ತಿರ ಬಂದವನೆ ನನ್ನ ಗಂಡನ ಮೋಟರ ಸೈಕಲಗೆ ಹಾಯಿಸಿ ಕೆಳಗೆ ಕೆಡವಿ ಕಣ್ಣಲ್ಲಿ ಖಾರದ ಪುಡಿ ಎಸೆದು ತನ್ನಲ್ಲಿದ್ದ ಮಚ್ಚು ತೆಗೆದುಕೊಂಡು ನನ್ನ ಗಂಡನ ಬಲಗಡೆ ಕಿವಿಯ ಮೇಲೆ ಹೊಡೆದನು. ಆಗ ನನ್ನ ಗಂಡ ನೆಲದ ಮೇಲೆ ಒದ್ದಾಡುತ್ತಿದ್ದಾಗ ನಾನು ಹೋಗಿ ಅವನ ಮೇಲೆ ಬಿದ್ದಾಗ ನನಗೆ ಜೋರಾಗಿ ಎಳೆದು ಒಗೆದನು. ಆಗ ನನಗು ಮಚ್ಚಿನ ಹೊಡೆದ ಬಲಗೈ ಬೆರಳಿಗೆ ಬಿದ್ದು ರಕ್ತಗಾಯವಾಯಿತು. ಆಗ ನನ್ನ ಗಂಡನಿಗೆ ಮನಸ್ಸಿಗೆ ಬಂದ ಹಾಗೆ ತಲೆಗೆ, ಎದೆಗೆ, ಹೊಟ್ಟೆಗೆ, ಹಾಗು ಶರೀರದ ಇನ್ನಿತರ ಭಾಗಗಳಿಗೆ ಹೊಡೆದು ಭಾರಿ ರಕ್ತಗಾಯಗಳು ಪಡಿಸಿ ತಾನು ತಂದಿರುವ ಮೋಟರ ಸೈಕಲ ಮೇಲೆ ಕುಳಿತು ತನ್ನ ಬೈಕ ಓಡಿಸಿಕೊಂಡು ಹೋಗಿರುತ್ತಾನೆ.ನನ್ನ ಗಂಡ ಭಾರಿ ಗಾಯಹೊಂದಿ ಮೃತಪಟ್ಟಿರುತ್ತಾನೆ ಈ ಕೊಲೆಗೆ ಕಾರಣ ನನಗೆ ಮದಲು ಮದುವೆಯಾಗಿದ್ದು ಗಂಡ ತೀರಿಕೊಂಡಿದ್ದು ಒಂದು ವರ್ಷದ ಹಿಂದೆ ದತ್ತು ಭಾವಿಮನಿ ಇವನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದು ಇದನ್ನೆ ನೆಪ ಒಡ್ಡಿ ನಮ್ಮ ಮನೆಯ ಮರ್ಯಾದೆ ಹಾಳು ಮಾಡಿದ್ದಿ ಅಂತಾ ದ್ವೇಷದಿಂದ ಕೊಲೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಫರಹತಾಬಾದ ಠಾಣೆ :ಶ್ರೀ   ಶಿವಯೋಗೇಪ್ಪಾ ತಂದೆ ನಿಂಗಪ್ಪಾ  ಪೂಜಾರಿ ಸಾ: ಕವಲಗಾ(ಬಿ) ತಾ:ಜಿ: ಗುಲಬರ್ಗಾ ರವರು, ನನ್ನ ತಮ್ಮನಾದ ಸಿದ್ದಣ್ಣಾ ತಂದೆ ನಿಂಗಪ್ಪಾ ಪೂಜಾರಿ ಈತನು ತನ್ನ ಮೊಟಾರ ಸೈಕಲ ಹೀರೋ ಹೋಂಡಾ ನಂ: ಕೆಎ-32 ಎಕ್ಸ್- 2052 ನೇದ್ದರ ಗುಲಬರ್ಗಾಕ್ಕೆ ಹೋಗುತ್ತಿದ್ದಾಗ ಪಾಣೆಗಾಂವ ಕ್ರಾಸ ಹತ್ತಿರ ಎದುರುಗಡೆಯಿಂದ ಒಬ್ಬ ಎಮ್.ಆರ್ ಬಸ್ ಚಾಲಕನು ತನ್ನ ವಾಹನವನ್ನು ಅತೀವೇಗ ನಡೆಯಿಸಿಕೊಂಡು ಬಂದು ನನ್ನ ತಮ್ಮನ ಮೊಟಾರ ಸೈಕಲಿಗೆ ಅಪಘಾತಪಡಿಸಿದರಿಂದ ನನ್ನ ತಮ್ಮನು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಅಲ್ಲದೆ ಮೊಟಾರ ಸೈಕಲ ಹಿಂದೆ ಕುಳಿತ್ತಿದ್ದ ನಿಂಗಣ್ಣಾ ತಂದೆ ಅಯ್ಯಪ್ಪಾ ಜಗತಿ ಈತನಿಗೆ ಬಲಗಾಲ ಮುರಿದು, ಭಾರಿ ರಕ್ತಗಾಯವಾಗಿ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಅಪಘಾತಪಡಿಸಿದ ಎಮ್.ಆರ್. ಬಸ್ ಕೆಎ-32 ಬಿ-74 ನಢದ್ದರ ಚಾಲಕ ಮದರ ಪಟೇಲ ತಂದೆ ಇಬ್ರಾಹಿಂ ಪಟೇಲ ತನ್ನ ಬಸ್ಸನ್ನು ಅಪಘಾತಪಡಿಸಿ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣಗಳು :
ವಿಶ್ವವಿದ್ಯಾಲಯ ಠಾಣೆ :
ಶ್ರೀ ಶೇಖ್ ಸಲೀಮ ತಂದೆ ಹುಸೇನಸಾಬ ಮೋಜನ್ ಗುಲಷನ್ ಅರಾಫತ್ ಕಾಲೋನಿ ಎಮ್ ಕೆ ಲೇ ಔಟ್ ಗುಲಬರ್ಗಾ ರವರ ಮಾವ ಚಂದನಕೇರಾ ದಲ್ಲಿ ಮೃತಪಟ್ಟ ಸುದ್ದಿ ತಿಳಿದು ತಾನು ಮತ್ತು ತನ್ನ ಹೆಂಡತಿ ಇಬ್ಬರೂ ನಿನ್ನೆ ಬೇಳಿಗ್ಗೆ 10 ಗಂಟೆ ಗೆ ತನ್ನ ಮನೆ ಕೀಲಿ ಹಾಕಿಕೊಂಡು ಚಂದನಕೇರಾಕ್ಕೆ ಹೋಗಿದ್ದು ದಿನಾಂಕ 12-09-2011 ರಂದು ಮದ್ಯಾಹ್ನ ಗುಲಬರ್ಗಾಕ್ಕೆ ತನ್ನ ಮನೆಗೆ ಬಂದು ನೋಡಲಾಗಿ ನಿನ್ನೆ ದಿನಾಂಕ 11-09-2011 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರೂ ತನ್ನ ಮನೆಯ ಬಾಗಿಲು ಕೀಲಿ ಮುರಿದು ಮನೆಯಲ್ಲಿಟ್ಟ 30 ಗ್ರಾಂ ಬಂಗಾರದ ಆಭರಣಗಳನ್ನು ಮತ್ತು ನಗದು ಹಣ 75000/- ಹೀಗೆ ಒಟ್ಟು 1,45,000/- ರೂ ಕಿಮ್ಮತ್ತಿನವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಘವೇಂದ್ರ ನಗರ ಠಾಣೆ :ಎಕ್ಬಾಲ್ ಕಾಲೋನಿಯಲ್ಲಿರುವ ಶ್ರೀ ಮಹ್ಮದ ಫಜಲ್ ಅಹ್ಮದ ತಂದೆ ಮಹ್ಮದ ಅಬ್ದುಲ ಅಜೀಜ ಇವರ ಮನೆಯ ಮುಂದೆ ನಿಲ್ಲಿಸಿದ ಅಟೋ ರಿಕ್ಷಾ ಹಿಂದಿನ ಭಾಗದ ಒಂದು ಟೈಯರನ್ನು ದಿನಾಂಕ 12/13-09-2011 ರ ಮಧ್ಯರಾತ್ರಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

Gulbarga Dist Reported Crimes

ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ :
ಶ್ರೀಮತಿ ಹೇಮಾ ಗಂಡ ಯುವರಾಜ ಗಾಯಕವಾಡ ಸಾ:ಪಿಲ್ಲಮಾಯಿ ಗುಡಿ ಹತ್ತಿರ ತಾರಫೈಲ ಗುಲಬರ್ಗಾ ರವರು ತಂದೆಯ ಮಣ್ಣಿನ ಖರ್ಚಿಗಾಗಿ ಹಣ ಕೊಟಿದ್ದು ಅದನ್ನು ಕೇಳಲು ದಿನಾಂಕ 12-09-2011 ರಂದು ರಾತ್ರಿ 9 ಗಂಟೆ ಸುಮಾರಿಗೆ ಬಸಮ್ಮಾ ಡೋಗೆನವರ ಹಾಗೂ ಅವಳ ಮಗ ಶರಣಪ್ಪ ಇಬ್ಬರು ಕೂಡಿ ನನಗು ಮತ್ತು ನನ್ನ ತಾಯಿಗೆ ಅವ್ಯಾಚವಾಗಿ ಬೈದು ಕೈಯಿಂದ ಬಡಿಗೆಯಿಂದ ಹೊಡೆ ಬಡೆ ಮಾಡಿ ಗುಪ್ತಗಾಯ ಮತ್ತು ರಕ್ತಗಾಯ ಗೊಳಿಸಿ ಅವಮಾನ ಮಾಡಿ ಹಣ ಕೊಡದಿದ್ದರೆ ಬಿಡಿಗೆಯಿಂದ ಹೊಡೆದು ಖಲಾಸ ಮಾಡುತ್ತೇನೆ ಅಂತಾ ಜೀವ ಭಯ ಹಾಕಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
.

ಫರತಾಬಾದ ಠಾಣೆ :ಶ್ರೀ ಶಿವಲಿಂಗಪ್ಪಾ ತಂದೆ ಮಾಳಪ್ಪಾ ಪೂಜಾರಿ ಸಾ: ಪಾಣೆಗಾಂವ ಇವರು ದಿನಾಂಕ: 12-09-2011 ರಂದು ಸಾಯಂಕಾಲ  ತಾನು ಮತ್ತು ನನ್ನ ಹೆಂಡತಿ ಅನ್ನಪೂರ್ಣ, ಅಣ್ಣಾ ಗುಂಡಪ್ಪಾ ಹೀಗೆ ಕೂಡಿಕೊಂಡು ನಮ್ಮ ಹೊಟೇಲದಲ್ಲಿ ಕೆಲಸ ಮಾಡುತ್ತಾ ಇದ್ದಾಗ ನಮ್ಮೂರಿನ 1. ಸೋಮಣ್ಣಾ ತಂದೆ ಶರಣಪ್ಪಾ ತಳಕೇರಿ 2.ಬ್ರಹ್ಮಾನಂದ ತಂದೆ ಲಕ್ಷ್ಮಣ ಗಾಯವಾಡ ಅವರ ಸಂಗಡ 4 ಜನರು ಕೂಡಿ ಬಂದವರೇ ಅವರಲ್ಲಿ ಬ್ರಹ್ಮಾನಂದ ಅವಾಚ್ಯ ಶಬ್ದಗಳಿಂದ ಬೈದು ನಮಗೆ ಚಹಾ ಕೊಡು ಅಂತಾ ಏರಿದ ದ್ವನಿಯಲ್ಲಿ ಅನ್ನುತ್ತಿದ್ದನು. ಆಗ ನಾನು ಸ್ವಲ್ಪ ಸಮಾದಾನದಿಂದ ಇರಿ ಚಹಾ ಕೊಡುತ್ತೇನೆ ಅಂತಾ ಹೇಳಿದಕ್ಕೆ ಅವರ ಸಂಗಡ ಬಂದಿದ್ದ 4 ಜನರಲ್ಲಿ ಒಬ್ಬನು ಜಂಬ್ಯಾದಿಂದ ಏ ಸೂಳೆ ಮಗನೇ ನಮಗೆ ಚಹಾ ಜಲ್ದಿ ಕೊಡುವುದಿಲ್ಲ ಅಂತಾ ಬೈದು ಜಂಬ್ಯಾಧಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡೇನು. ಇದರಿಂದ ನನ್ನ ಅಂಗಿ ಮತ್ತು ಬನಿಯನಿಗೆ ಜಂಬ್ಯಾ ಹತ್ತಿ ಕಟ್ಟಾಗಿರುತ್ತದೆ. ಉಳಿದವರು ಚಾಕು ಮತ್ತು ತಲವಾರ ತೋರಿಸಿ ನನ್ನ ಹೆಂಡತಿಗೆ ಚುಡಾಯಿಸುತ್ತಾ ಅವಾಚ್ಯ ಶಭ್ದಗಳಿಂದ ಬೈದು ಜೀವದ ಭಯ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಳಂದ ಠಾಣೆ :ದಿನಾಂಕ 12-09-11 ರಂದು ದತ್ತಾತ್ರೆಯ ತಂದೆ ಸಂಗಪ್ಪ ಜಮಾದಾರ ಇವರು ತಮ್ಮ ಮಾನೇಜರಿಗೆ ಅವರ ಮನೆಗೆ ಬಿಟ್ಟು ಬರುವಾಗ ಆಳಂದ ಪಟ್ಟಣ್ ದಾರುರ ಅಲಮ ಮಜಿದ ಹತ್ತಿರ ಶ್ರೀಶೈಲ ಹೆಬಳಿ ಅವರು ನನ್ನನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು 8-10 ದಿನಗಳ ಹಿಂದೆ ನನ್ನ ಜೋತೆ ಜಗಳ ತಗದಿರುವೆ ಮಗನೆ ನಿನಗೆ ಇವತ್ತು ಬಿಡುವದಿಲ್ಲ ಅಂತ ಹೋಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹೊಡೆದು ಜೀವದ ಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಶಾಹಾಬಾದ ನಗರ ಠಾಣೆ :ದಿನಾಂಕ:12-09-2011 ರಂದು ಮದ್ಯಾಹ್ನ ಶ್ರೀಮತಿ ಕಮಲಾಬಾಯಿ ಗಂಡ ಚಂದ್ರಕಾಂತ ಹೊನಗುಂಟಿ ಸಾ:ಲಕ್ಷ್ಮೀಗಂಜ ಶಹಾಬಾದ ಮತ್ತು ಮಗ ಕೂಡಿ ಹೊಲದಲ್ಲಿ ಟ್ರಾಕ್ಟರನಿಂದ ಏಡೆ ಹೊಡೆಸುತ್ತಿರುವಾಗ ಇರ್ಷಾದ ತಂದೆ ಮಜೀದ ಇತನು ಬಂದು ಹೊಲದಲ್ಲಿ ಟ್ರಾಕ್ಟರನಿಂದ ಏಡೆ ಹೊಡಿಸಬೇಡ ಅಂದರೆ ಮತ್ತೆ ಏಕೆ ಹೊಲದಲ್ಲಿ ಏಡಿ ಹೊಡೆಸುತ್ತಿದ್ದಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ಮಗ ನಮ್ಮ ಹೊಲದಲ್ಲಿ ನಾವು ಏಡಿ ಹೊಡೆಸುತ್ತಿದ್ದೇವೆ ನೀನು ಯಾರೂ ಕೇಳಲಿಕ್ಕೆ ಎಂದಿದ್ದಕ್ಕೆ ಸದರಿ ಇರ್ಷಾದ ಇವನು ಮಲ್ಲಿಕಾರ್ಜುನನಿಗೆ ಕೈಯಿಂದ ಕಪಾಳಕ್ಕೆ ಹೊಡೆದು ನೀವು ಇನ್ನೋಮ್ಮೆ ಹೊಲದಲ್ಲಿ ಕೆಲಸ ಮಾಡಿಸಲು ಬಂದರೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :

ಗ್ರಾಮೀಣ ಠಾಣೆ : ಶ್ರೀಮತಿ ಪ್ರಿಯ ಗಂಡ ರಮೇಶ ಶಿಂಧೆ ಸಾ: ಪ್ಲಾಟ ನಂ. 53 ರಘೋಜಿ ಲೇಔಟ್ ಓಂ ನಗರ ಗುಲಬರ್ಗಾ ಇವರು ದಿನಾಂಕ 11-09-2011 ರಂದು ಬೀದರಕ್ಕೆ ಹೋಗಿ ಅತ್ತೆ ಮಾವರನ್ನು ನೋಡಿ ಮರಳಿ ದಿನಾಂಕ 12-09-2011 ರಂದು ಗುಲಬರ್ಗಾಕ್ಕೆ ಬಸ್ಸಿನಲ್ಲಿ ಬರುವಾಗ ನನ್ನ ಪರಸಿನಲ್ಲಿ ಸುಮಾರು 30.75 ಗ್ರಾಂ ಬಂಗಾರದ ಮಂಗಳಸೂತ್ರವನ್ನು ಇಟ್ಟುಕೊಂಡಿದ್ದು ಬೆಳಿಗ್ಗೆ 9-45 ಗಂಟೆ ಸುಮಾರಿಗೆ ಗುಲಬರ್ಗಾ ನಗರದ ಹುಮನಾಬಾದ ರಿಂಗ ರಸ್ತೆ ಹತ್ತಿರ ಇಳಿಯುವಾಗ ಒಬ್ಬ ಅಪರಿಚಿತ ಹೆಣ್ಣು ಮಗಳು ನನ್ನ ಪರಸನ್ನು ಎಳೆದಿದ್ದು ಬೇಗನೆ ಇಳಿಯುವಾಗ ಅದರ ಕಡೆ ಗಮನ ಹರಸಿಲಿಲ್ಲ ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಮನೆಗೆ ಹೋಗಿ ಪರಸ ತೆರೆದು ನೋಡಲಾಗಿ ಪರಸಿನಲ್ಲಿದ್ದ 30.75 ಗ್ರಾಂ ಬಂಗಾರದ ಮಂಗಳಸೂತ್ರ ಅ:ಕಿ: 90,000/- ರೂ. ಬೆಲೆವುಳ್ಳದ್ದು ಅಪರಿಚಿತ ಹೆಣ್ಣು ಮಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.