POLICE BHAVAN KALABURAGI

POLICE BHAVAN KALABURAGI

13 September 2011

Gulbarga District Reported Crimes

ಕೊಲೆ ಪ್ರಕರಣ :

ರೇವೂರ ಠಾಣೆ :ಶ್ರೀಮತಿ ಅನ್ನಪೂರ್ಣ ಗಂಡ ದತ್ತು ಭಾವಿಮನಿ ಸಾ||ಕಾರಭೋಸಗಾ ಹಾ||ವಾಸ||ಆಹೇರಿ ತಾ||ಸಿಂದಗಿ ರವರು, ದಿನಾಂಕ 12-9-2011 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗಂಡ ದತ್ತು ಭಾವಿಮನಿ ಇಬ್ಬರು ಕೂಡಿಕೊಂಡು ನನ್ನ ಗಂಡನ ಯಮ ಕಂಪನಿ ಮೋಟರ ಸೈಕಲ ಮೇಲೆ ಅಂಕಲಗಾ ಗ್ರಾಮದ ಮದರಸಾಬ ದರ್ಗಾಕ್ಕೆ ಕಾಯಿ ಒಡೆದುಕೊಂಡು ಹೋಗಲು ಬಂದಿರುತ್ತೇವೆ. ಮೋಟರ ಸೈಕಲ ನಂ;ಕೆಎ.36 ಕೆ 5882 ಇರುತ್ತದೆ. ಮದ್ಯಾಹ್ನ 12-30 ಗಂಟೆ ಸುಮಾರಿಗೆ ಮದರಸಾಬ ದರ್ಗಾದಲ್ಲಿ ದರ್ಶನ ಮಾಡಿಕೊಂಡು ಕುಳಿತಿದ್ದೆವು. ಆಗ ನನ್ನ ಅಣ್ಣ ಸಂತೋಷ ಎಂಬಾತನು ಮೋಟರ ಸೈಕಲ ಮೇಲೆ ದರ್ಗಾದ ಹತ್ತಿರ ಬಂದವನೆ ನನ್ನ ಗಂಡನ ಮೋಟರ ಸೈಕಲಗೆ ಹಾಯಿಸಿ ಕೆಳಗೆ ಕೆಡವಿ ಕಣ್ಣಲ್ಲಿ ಖಾರದ ಪುಡಿ ಎಸೆದು ತನ್ನಲ್ಲಿದ್ದ ಮಚ್ಚು ತೆಗೆದುಕೊಂಡು ನನ್ನ ಗಂಡನ ಬಲಗಡೆ ಕಿವಿಯ ಮೇಲೆ ಹೊಡೆದನು. ಆಗ ನನ್ನ ಗಂಡ ನೆಲದ ಮೇಲೆ ಒದ್ದಾಡುತ್ತಿದ್ದಾಗ ನಾನು ಹೋಗಿ ಅವನ ಮೇಲೆ ಬಿದ್ದಾಗ ನನಗೆ ಜೋರಾಗಿ ಎಳೆದು ಒಗೆದನು. ಆಗ ನನಗು ಮಚ್ಚಿನ ಹೊಡೆದ ಬಲಗೈ ಬೆರಳಿಗೆ ಬಿದ್ದು ರಕ್ತಗಾಯವಾಯಿತು. ಆಗ ನನ್ನ ಗಂಡನಿಗೆ ಮನಸ್ಸಿಗೆ ಬಂದ ಹಾಗೆ ತಲೆಗೆ, ಎದೆಗೆ, ಹೊಟ್ಟೆಗೆ, ಹಾಗು ಶರೀರದ ಇನ್ನಿತರ ಭಾಗಗಳಿಗೆ ಹೊಡೆದು ಭಾರಿ ರಕ್ತಗಾಯಗಳು ಪಡಿಸಿ ತಾನು ತಂದಿರುವ ಮೋಟರ ಸೈಕಲ ಮೇಲೆ ಕುಳಿತು ತನ್ನ ಬೈಕ ಓಡಿಸಿಕೊಂಡು ಹೋಗಿರುತ್ತಾನೆ.ನನ್ನ ಗಂಡ ಭಾರಿ ಗಾಯಹೊಂದಿ ಮೃತಪಟ್ಟಿರುತ್ತಾನೆ ಈ ಕೊಲೆಗೆ ಕಾರಣ ನನಗೆ ಮದಲು ಮದುವೆಯಾಗಿದ್ದು ಗಂಡ ತೀರಿಕೊಂಡಿದ್ದು ಒಂದು ವರ್ಷದ ಹಿಂದೆ ದತ್ತು ಭಾವಿಮನಿ ಇವನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದು ಇದನ್ನೆ ನೆಪ ಒಡ್ಡಿ ನಮ್ಮ ಮನೆಯ ಮರ್ಯಾದೆ ಹಾಳು ಮಾಡಿದ್ದಿ ಅಂತಾ ದ್ವೇಷದಿಂದ ಕೊಲೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಫರಹತಾಬಾದ ಠಾಣೆ :ಶ್ರೀ   ಶಿವಯೋಗೇಪ್ಪಾ ತಂದೆ ನಿಂಗಪ್ಪಾ  ಪೂಜಾರಿ ಸಾ: ಕವಲಗಾ(ಬಿ) ತಾ:ಜಿ: ಗುಲಬರ್ಗಾ ರವರು, ನನ್ನ ತಮ್ಮನಾದ ಸಿದ್ದಣ್ಣಾ ತಂದೆ ನಿಂಗಪ್ಪಾ ಪೂಜಾರಿ ಈತನು ತನ್ನ ಮೊಟಾರ ಸೈಕಲ ಹೀರೋ ಹೋಂಡಾ ನಂ: ಕೆಎ-32 ಎಕ್ಸ್- 2052 ನೇದ್ದರ ಗುಲಬರ್ಗಾಕ್ಕೆ ಹೋಗುತ್ತಿದ್ದಾಗ ಪಾಣೆಗಾಂವ ಕ್ರಾಸ ಹತ್ತಿರ ಎದುರುಗಡೆಯಿಂದ ಒಬ್ಬ ಎಮ್.ಆರ್ ಬಸ್ ಚಾಲಕನು ತನ್ನ ವಾಹನವನ್ನು ಅತೀವೇಗ ನಡೆಯಿಸಿಕೊಂಡು ಬಂದು ನನ್ನ ತಮ್ಮನ ಮೊಟಾರ ಸೈಕಲಿಗೆ ಅಪಘಾತಪಡಿಸಿದರಿಂದ ನನ್ನ ತಮ್ಮನು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಅಲ್ಲದೆ ಮೊಟಾರ ಸೈಕಲ ಹಿಂದೆ ಕುಳಿತ್ತಿದ್ದ ನಿಂಗಣ್ಣಾ ತಂದೆ ಅಯ್ಯಪ್ಪಾ ಜಗತಿ ಈತನಿಗೆ ಬಲಗಾಲ ಮುರಿದು, ಭಾರಿ ರಕ್ತಗಾಯವಾಗಿ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಅಪಘಾತಪಡಿಸಿದ ಎಮ್.ಆರ್. ಬಸ್ ಕೆಎ-32 ಬಿ-74 ನಢದ್ದರ ಚಾಲಕ ಮದರ ಪಟೇಲ ತಂದೆ ಇಬ್ರಾಹಿಂ ಪಟೇಲ ತನ್ನ ಬಸ್ಸನ್ನು ಅಪಘಾತಪಡಿಸಿ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣಗಳು :
ವಿಶ್ವವಿದ್ಯಾಲಯ ಠಾಣೆ :
ಶ್ರೀ ಶೇಖ್ ಸಲೀಮ ತಂದೆ ಹುಸೇನಸಾಬ ಮೋಜನ್ ಗುಲಷನ್ ಅರಾಫತ್ ಕಾಲೋನಿ ಎಮ್ ಕೆ ಲೇ ಔಟ್ ಗುಲಬರ್ಗಾ ರವರ ಮಾವ ಚಂದನಕೇರಾ ದಲ್ಲಿ ಮೃತಪಟ್ಟ ಸುದ್ದಿ ತಿಳಿದು ತಾನು ಮತ್ತು ತನ್ನ ಹೆಂಡತಿ ಇಬ್ಬರೂ ನಿನ್ನೆ ಬೇಳಿಗ್ಗೆ 10 ಗಂಟೆ ಗೆ ತನ್ನ ಮನೆ ಕೀಲಿ ಹಾಕಿಕೊಂಡು ಚಂದನಕೇರಾಕ್ಕೆ ಹೋಗಿದ್ದು ದಿನಾಂಕ 12-09-2011 ರಂದು ಮದ್ಯಾಹ್ನ ಗುಲಬರ್ಗಾಕ್ಕೆ ತನ್ನ ಮನೆಗೆ ಬಂದು ನೋಡಲಾಗಿ ನಿನ್ನೆ ದಿನಾಂಕ 11-09-2011 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರೂ ತನ್ನ ಮನೆಯ ಬಾಗಿಲು ಕೀಲಿ ಮುರಿದು ಮನೆಯಲ್ಲಿಟ್ಟ 30 ಗ್ರಾಂ ಬಂಗಾರದ ಆಭರಣಗಳನ್ನು ಮತ್ತು ನಗದು ಹಣ 75000/- ಹೀಗೆ ಒಟ್ಟು 1,45,000/- ರೂ ಕಿಮ್ಮತ್ತಿನವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಘವೇಂದ್ರ ನಗರ ಠಾಣೆ :ಎಕ್ಬಾಲ್ ಕಾಲೋನಿಯಲ್ಲಿರುವ ಶ್ರೀ ಮಹ್ಮದ ಫಜಲ್ ಅಹ್ಮದ ತಂದೆ ಮಹ್ಮದ ಅಬ್ದುಲ ಅಜೀಜ ಇವರ ಮನೆಯ ಮುಂದೆ ನಿಲ್ಲಿಸಿದ ಅಟೋ ರಿಕ್ಷಾ ಹಿಂದಿನ ಭಾಗದ ಒಂದು ಟೈಯರನ್ನು ದಿನಾಂಕ 12/13-09-2011 ರ ಮಧ್ಯರಾತ್ರಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

No comments: