POLICE BHAVAN KALABURAGI

POLICE BHAVAN KALABURAGI

25 December 2013

Gulbarga District Reported Crimes

ಕೊಲೆ ಪ್ರಕರಣ :
ಚೌಕ ಠಾಣೆ : ದಿನಾಂಕ 24.12.2013 ರಂದು ರಾತ್ರಿ 8 ಗಂಟೆಗೆ ಮಾನ್ಯ ನ್ಯಾಯಾಲಯದ ಉಲ್ಲೇಖಿತ ಗುನ್ನೆ ನಂ 990/2013 ನೇದ್ದು ಪಿಸಿ 266 ರವರು ತಂದು ಹಾಜರ ಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ 19.02.13 ರಂದು  ರಾತ್ರಿ 8 ಗಂಟೆಗೆ ಕಂಟೆಪ್ಪ ಬಂದಗಿ ಉಃ ಸಹಾಯಕ ಕಾರ್ಯನಿರ್ವಾಕ  ಅಭಿಯಂತರರು ಜಿಲ್ಲಾಪಂಚಾಯತ ರಾಜಾಪುರ ಗುಲ್ಬರ್ಗಾ ಸಾಃ 7ನೇ ಕ್ರಾಸ ಗೋದುತಾಯಿ ನಗರ ಜೇವರ್ಗಿ ರೋಡ ಗುಲಬರ್ಗಾ ಇತನು ಶ್ರೀ ಮತಿ ಕಲಾವತಿ ಗಂಡ ದಿಃ ಸುಭಾಷ ಪಂಚಾಳ ಸಾಃ ಗಾಂಧಿ ನಗರ ನೆಹರು ಗಂಜ ಗುಲಬರ್ಗಾ ಇವರ  ಮನೆಗೆ ಬಂದು ಗಂಡನಾದ ಸುಭಾಷ ಪಂಚಾಳ ಇತನನ್ನು ಕರೆದುಕೊಂಡು ಹೋಗಿ ಮರಣಾಂತಿಕ ಹಲ್ಯ ಮಾಡಿ ಕಳುಹಿಸಿದ್ದು, ದಿನಾಂಕ 26.02.13 ರಂದು ಮೃತನು ತಿಂತಣಿ ಮೌನೇಶ್ವರ ಜಾತ್ರೆಗೆ ಹೋದಾಗ ಆರೋಪಿತನು ಹೊಡೆದ ಬಾಧೆಯಿಂದ ಮೃತ ಪಟ್ಟಿದ್ದು ದಿನಾಂಕ 08.12.13 ರಂದು ಮೃತನು ತನಗೆ ಆರೋಪಿತನು ಹೊಡೆದ ಬಗ್ಗೆ ಮನೆಯಲ್ಲಿ ಬರೆದಿಟ್ಟ ಪತ್ರವನ್ನು ದಿನಾಂಕ 08.12.13 ರಂದು ಫಿರ್ಯಾದಿಗೆ ತನ್ನ ಮನೆಯಲ್ಲಿ ಸಿಕ್ಕಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯೆಗೆ ಯತ್ನ ಪ್ರಕರಣ :
ಚಿಂಚೋಳಿ ಠಾಣೆ : ದಿನಾಂಕ : 14-12-2013 ರಂದು ಬೆಳಿಗ್ಗೆ 8.00 ಗಂಟೆಗೆ ಮಾನ್ಯ ಪ್ರಥಮ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುಲಬರ್ಗಾ ದಿಂದ ಗುನ್ಹೆ ನಂ-35/2012 ಕಲಂ 504 306 ಸಂಗಡ 34 ಪಿ ಸಿ ಎಸ್ ಸಿ ನಂ-206/2013 ನೇದ್ದರಲ್ಲಿಯ -1 ಆರೋಪಿತಳಾದ ವಿದ್ಯಾವತಿ ಗಂಡ ರಾಮಚಂದ್ರ ಹೊಸಮನಿ ಸಾ|| ಭಕ್ತಂಪಳ್ಳಿ ಇವಳ ದಸ್ತಗಿರಿ ಕುರಿತು ಆಪಾದಿತಳು ಚಂದಾಪೂರದ ಗಣೇಶ ಮಂದಿರ ಕಾಲೋನಿಯಲ್ಲಿರುವ ತನ್ನ ಮನೆಯಲ್ಲಿರುವುದಾಗಿ ಬಾತ್ಮೀ ತಿಳಿದು ಬಂದಿದ್ದು ಸದರಿ ಅವಳನ್ನು ದಸ್ತಗಿರಿ ಮಾಡುವ ಕುರಿತು ಸದರಿ ಅವಳ ಮನೆಯ ಹತ್ತಿರ ಹೊಗುತ್ತಿದ್ದಂತೆ ಅವಳು ಸಹ ತನ್ನ ಕೈಯಲ್ಲಿ ಒಂದು ಬಾಟಲಿ ಹಿಡಿದುಕೊಂಡು ಬಂದು ನೀವು ನನಗೆ ದಸ್ತಗಿರಿ ಮಾಡಲು ಬಂದಿದ್ದಿರಿ ಅಂತಾ ನನಗೆ ಗೊತ್ತಿದೆ ನನ್ನ ಅಣ್ಣ, ತಮ್ಮ ಮೋದಲು ಮೃತ ಪಟ್ಟಿದ್ದರಿಂದ ನಾನು ಜೀವನದಲ್ಲಿ ಜಿಗುಪ್ಸೆಗೊಂಡು ಸಾಯಬೇಕು ಅಂತಾ ಅಂದುಕೊಂಡು ಈಗಾಗಲೆ ಕ್ರಿಮಿನಾಶಕ ಔಷದಿ ಸೇವನೆ ಮಾಡಿದ್ದೆನೆ ಅಂತಾ ಅಂದು ಮತ್ತೆ ಸೇವನೆ ಮಾಡಲು ಯತ್ನಿಸಿದಾಗ ನಾವು ಅವಳನ್ನು ಚಂದಾಪೂರ ಆಸ್ಪತ್ರೇಗೆ ತಂದು ಸೇರಿಕೆ ಮಾಡಿರುತ್ತೆವೆ. ಸದರಿ ಘಟನೇಯು 04.30 ಪಿ ಎಮ್ ಕ್ಕೆ ಜರಿಗಿದ್ದು ಇರುತ್ತದೆ. ಸದರಿಯವಳು  ಆಸ್ಪತ್ರೇಯಲ್ಲಿ ನಮಗೆ ನನ್ನ ಅಣ್ಣ, ತಮ್ಮ ಇಬ್ಬರು ಸತ್ತಿದ್ದಾರೆ ನನ್ನ ಹಿಂದೆ ಯಾರು ಇಲ್ಲಾ. ಅಂತಾ ತಿಳಿದು ಜೀವನದಲ್ಲಿ ಜಿಗುಪ್ಸೆ ಹೊಂದಿ ಸಾತ್ತು ಹೊಗಬೇಕು ಅಂತಾ ವಿಷ ಸೇವನೆ ಮಾಡಿದ್ದೆನೆ ನನಗೆ ನೀವು ಹೇಗೆ ದಸ್ತಗಿರಿ ಮಾಡಿಕೊಂಡು ಹೊದರೆ ನಿಮ್ಮ ವಿರುದ್ದ ನಿಮ್ಮ ಎಸ್ ಪಿ, ಜಿ ಅವರಿಗೆ ಹೇಳಿ ಸಸ್ಪೇಂಡ ಮಾಡಿಸುತ್ತೆನೆ ಅಂತಾ ಅಂದಿರುತ್ತಾಳೆ. ಮಾನ್ಯ ನ್ಯಾಯಾಲಯವು ವಿದುಕ್ತವಾಗಿ ಪ್ರಖ್ಯಾಪಿಸಿದ ಆದೇಶದ ಪಾಲನೆ ಕುರಿತು ಕರ್ತವ್ಯದ ಮೇಲೆ ಹೊದಾಗ ನಮ್ಮನ್ನು ಹೆದರಿಸಿ ವಿಷ ಸೇವನೆ ಮಾಡಿ ಆತ್ಮ ಹತ್ಯಗೆ ಪ್ರಯತ್ನಿಸಿದ ಸದರಿ ದಸ್ತಗಿರಿ ವಾರಂಟದಾರಳಾದ ವಿದ್ಯಾವತಿ ಗಂಡ ರಾಮಚಂದ್ರ ಹೊಸಮನಿ ಸಾ|| ಭಕ್ತಂಪಳ್ಳಿ ಹಾ|| || ಗಣೇಶ ನಗರ ಚಂದಾಪೂರ ಎಂಬುವಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ²æàಷಣ್ಮೂಖಪ್ಪಗೌಡ ತಂದೆ ನಾಗಣ್ಣಗೌಡ ಮಾಲಿಪಾಟೀಲ್   ಸಾ: ತಿಳಗೂಳ   ತಾ:ಜಿ:ಗುಲಬರ್ಗಾ ರವರು ದಿನಾಂಕ 23-12-2013 ರಂದು ರಾತ್ರಿ 10:00 ಗಂಟೆಯ ಸುಮಾರಿಗೆ ಫರಹತಾಬಾದ ಬಸ್ ನಿಲ್ದಾಣದ ಹತ್ತಿರ ಇರುವ ಶಕ್ತಿ ವೈನ್ಶಾಪ ಹತ್ತಿರ ಇರುವ ಅಶೋಕ ವಸ್ತ್ರದ ಇವರ ಅಂಗಡಿಯ ಮುಂದೆ ನಿಂತಾಗ ಯಾರೋ ಒಬ್ಬ ವ್ಯಕ್ತಿ ಅವರ ಅಂಗಡಿಯ ಮುಂದೆ ನಿಂತು ಉಚ್ಚೆಯನ್ನು ಮಾಡುತ್ತಿರುವಾಗ ಅಶೋಕ ಇತನು ಯಾಕ್ರಿ ಇಲ್ಲಿ ಏಕಿ ಮಾಡುತ್ತಿರಿ ಇಲ್ಲಿ ಮಾಡಬ್ಯಾಡ್ರಿ ಮುಂದೆ ಹೊಗಿ ಮಾಡ್ರಿ ಅಂತಾ ಅನ್ನುತ್ತಿದ್ದಾಗ ಸದರಿಯವನು ನಿ ಯಾಂವ ಕೇಳಾಂವ ಅಂತಾ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಇನ್ನು 5-6 ಜನರು ಕುಡಿಕೊಂಡು ಅಶೋಕ ಇತನು ಯಾಕೆ ಸುಮ್ಮನೆ ಬೈಯುತ್ತಿದ್ದಿ ಇಲ್ಲಿಂದ ಹೋಗು ಅಂತಾ ಹೇಳಿದಾಗ ಸದರಿ ವ್ಯಕ್ತಿಗಳು ಜಗಳ ತೆಗೆದು ಹೊಡೆ ಬಡೆ ಮಾಡುವಾಗ  ನಾನು ಹೊಡೆಯುದನ್ನು ನೋಡಿ ಕೂಡಲೆ ಬಿಡಿಸಲು ಹೊದಾಗ 5-6 ಜನರಲ್ಲಿ ಯಾರೋ ಒಬ್ಬನು ಓಡಿ ಹೋಗಿ ಒಂದು ಕಟ್ಟಿಗೆಯನ್ನು ತೆಗೆದುಕೊಂಡು ಬಂದು ನನ್ನ ತಲೆಯ ಮೇಲೆ ಜೋರಾಗಿ ಹೊಡೆದು ಭಾರಿ ರಕ್ತ ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮುಧೋಳ ಠಾಣೆ : ದಿನಾಂಕ 23-12-2013 ರಂದು ರಾತ್ರಿ 22:00 ಗಂಟೆ ಸುಮಾರಿಗೆ ಆಡಕಿ ಗ್ರಾಮದ ಸುಜಾತಾ ಇವಳು ಮುಧೋಳದಿಂದ ಆಡಕಿ ಗ್ರಾಮಕ್ಕೆ ನಡೆದುಕೊಂಡು ಹೊಗುತ್ತಿರುವಾಗ ಮುಧೋಳ ಮೇನ ಗೇಟ ದಾಟಿದನಂತರ ಸುಮಾರು 01 ಕಿಮಿ ಅಂತರದಲ್ಲಿ ಆಡಕಿ ಕಡೆಗೆ ಹೊಗುವ ಕಾಲಕ್ಕೆ ಯಾವುದೋ ಒಂದು ವಾಹನ ಚಾಲಕ ತನ್ನ ವಾಹನವನ್ನು ಅತಿ ವೇಗ ಮತ್ತು ನಿಷ್ಕಾಳಜಿತನದಿಂದ ನಡಸಿಕೊಂಡು ಬಂದು ಸುಜಾತಳಿಗೆ ಹಿಂದಿನಿಂದ ಗುದ್ದಿ ಅಪಘಾತ ಪಡಿಸಿ, ಭಾರಿ ಗಾಯಗಳಾಗಿದ್ದು, ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾಳೆ, ವಾಹನ ಚಾಲಕನು ತನ್ನ ವಾಹನವನ್ನು ತೆಗೆದುಕೊಂಡು ಓಡಿ ಹೊಗಿದ್ದು, ವಾಹನ ನಂಬರ ಮತ್ತು ಚಾಲಕನ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ. ಸದರಿ ವಾಹನವನ್ನು ಪತ್ತೆ ಮಾಡಿ ವಾಹನ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ  ವೆಂಕಟ ರೆಡ್ಡಿ ತಂದೆ ಶರಣಪ್ಪ ಯಲಗುಪಲ್ಲಿ ಸಾ; ಆಡಕಿ ತಾ: ಸೇಡಂ ಇವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.