POLICE BHAVAN KALABURAGI

POLICE BHAVAN KALABURAGI

05 March 2015

Kalaburagi District Reported Crimes

ಕೊಲೆ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ ಸುಜಾತಾ ಗಂಡ ಮೊಗಲಪ್ಪ ಹಣಮನಳ್ಳಿ ಸಾ : ಸಣ್ಣ ಅಗಸಿ ಸೇಡಂ ಇವರ ಮದುವೆಯಾಗಿ 10 ವರ್ಷಗಳಾಗಿದ್ದು ಕಳೆದ 2 ವರ್ಷಗಳಿಂದ ನನ್ನ ಗಂಡನಾದ ಮೊಗಲಪ್ಪ ತಂದೆ ಕಾಶಣ್ಣ ಹಣಮನಳ್ಳಿ, ನಾಗಮ್ಮ ಗಂಡ ರಾಘಪ್ಪ ಬಟಗೀರಿ, ಮಲ್ಲಮ್ಮ ಗಂಡ ಸಾಬಣ್ಣ ಸೇಡಂ, ಶಾಣಮ್ಮ ಗಂಡ ಅಶೋಕ ಸೇಡಂ, ಮಲ್ಲಪ್ಪ ತಂದೆ ಶಿವರಾಯ ಹಣಮನಳ್ಳಿ,  ಅಂಬ್ರಿಷ ತಂದೆ ಶಿವರಾಯ ಹಣಮನಳ್ಳಿ, ಭೀಮು ತಂದೆ ಶಿವರಾಯ ಹಣಮನಳ್ಳಿ, ವೆಂಕಟಮ್ಮ ಗಂಡ ಶಿವರಾಯ ಹಣಮನಳ್ಳಿ, ಶಿವರಾಯ ತಂದೆ ಮೊಗಲಪ್ಪ ಹಣಮನಳ್ಳಿ, ತಿಮ್ಮಮ್ಮ ಗಂಡ ಕಾಶಣ್ಣ ಹಣಮನಳ್ಳಿ, ಸಾ : ಎಲ್ಲರು ಸೇಡಂ ಹಾಗೂ ಮುಧೋಳ ದವರು ಕೂಡಿಕೊಂಡು ನನಗೆ ನನ್ನ ಶಿಲದ ಬಗ್ಗೆ ಸಂಶಯ ವ್ಯಕ್ತಪಡಿಸಿ ಪ್ರತಿದಿವಸ ಜಗಳ ಮಾಡುವದು ಹೊಡೆಯುವದು ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ  ಕಿರುಕೂಳ ನೀಡಿದ್ದರಿಂದ ನಾನು ಆ ಕಿರುಕೂಳ ತಾಳಲಾರದೆ ನನ್ನ ತವರೂರಾದ ಕ್ಯಾತಗೀರ ಗ್ರಾಮಕ್ಕೆ ಹೊಗಿದ್ದೆನು. ದಿನಾಂಕ : 26-02-2015 ರಂದು ನನ್ನ ಗಂಡನಾದ ಮೊಗಲಪ್ಪ ತಂದೆ ಕಾಶಣ್ಣ ಹಣಮನಳ್ಳಿ ಇತನು ನನ್ನ ತವರು ಊರಿಗೆ ಬಂದು ನನ್ನ ಹೆಂಡತಿಗೆ ಸರಿಯಾಗಿ ಇಟ್ಟುಕೊಳ್ಳುತ್ತೆನೆ, ಬೇರೆ ಮನೆ ಮಾಡುತ್ತೆನೆ ಅಂತಾ ಹೇಳಿ ನನಗೆ ಸೇಡಂಕ್ಕೆ ಕರೆದುಕೊಂಡು ಬಂದು ನಾಗಪ್ಪ ಬಟ್ಟರ್ಗಿ ಇವರ ಮುಖಾಂತರ ಒಂದು ಬಾಡಿಗೆ ಮನೆ ಮಾಡಿ ಗಂಡ ಹೆಂಡತಿ ಊಳಿದಿದ್ದೆವು. ನಿನ್ನೆ ದಿನಾಂಕ : 27-02-2015 ರಂದು ಮಧ್ಯಾಹ್ನ 2-30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಹೊರಗಡೆಯಿಂದ ಮೇಲೆ ತೋರಿಸಿದ ಎಲ್ಲರು ಕುಡಿಕೊಂಡು ಬಂದವರೆ ಏ ರಂಡಿ ಯಾಕ ಬಂದಿದಿ ಅಂತಾ ಜಗಳ ತೆಗೆದು ನಮ್ಮ ನಾದನಿಯವರು ಜಗಳ ತೆಗೆದು ಹೊಡೆಹತ್ತಿದರು ನನ್ನ ಗಂಡ ಮೊಗಲಪ್ಪ ಇತನು ಈ ರಂಡಿ ಅಲ್ಲದ ಕೆಲಸ ಮಾಡ್ಯಾಳ ಇವಳಿಗೆ ಕೊಲೆ ಮಾಡಿ ಮುಗಿಸಬೆಕೆಂದು ಪ್ಲಾನ ಮಾಡಿ ಕರೆದುಕೊಂಡು ಬಂದಿನಿ ಇವಳಿಗೆ ಬಿಡಬ್ಯಾಡ್ರಿ ಖಲಾಸ್ ಮಾಡ್ರಿ ಅಂತಾ ಅಂದಿದ್ದೆ ತಡ ಅವರಲ್ಲಿಯ ಕೆಲವರು ಕೈಯಿಂದ ಹೊಡೆಯುತ್ತಿದ್ದರು. ಆಗ ನನ್ನ ಗಂಡನು ನನ್ನ ಮೈಮೆಲೆ ಸೀಮೆ ಎಣ್ಣೆ ಹಾಕಿ ನಿನಗೆ ಕೊಲೆಮಾಡಿ ಮುಗಿಸುತ್ತನೆ ಅಂತಾ ಅಂದು ಕಡ್ಡಿ ಕೊರೆದು ಮೈಗೆ ಊರಿಹಚ್ಚಿದ್ದರಿಂದ ನನ್ನ ಮೈ ಪೂರ್ತಿ ಸುಟ್ಟಿರುತ್ತದೆ. ನಂತರ ನನಗೆ ಅವರೇ ಉಪಚಾರದ ಕುರಿತು ಸೇಡಂ ಸರಕಾರಿ ಆಸ್ಪತ್ರೆಗೆ ಒಯ್ದಿದ್ದು ನಂತರ ಹೆಚ್ಚಿನ ಉಪಚಾರದ ಸಲುವಾಗಿ  ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಪಡೆಯುತ್ತಿದ್ದಾಗ ದಿನಾಂಕ : 04-03-2015 ರಂದು ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಂಸದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಂತೋಷ ತಂದೆ ದೊಡ್ಡಪ್ಪಗೌಡ ಬಿರಾದಾರ  ಸಾ: ಹನುಮಾನ ಟೆಂಪಲ ಹತ್ತಿರ ಓಂನಗರ ಕಲಬುರಗಿ  ರವರು ದಿನಾಂಕ 04-03-2015 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ನಾನು ಕೊರ ಮಂಡಲ ಸಿಮೆಂಟ ಅಂಗಡಿಯ ಮಾಲಿಕರಾದ ಮಲ್ಲಿಕಾರ್ಜುನ ಐನಾಪುರ ಇವರ ಹತ್ತೀರ ಭೆಟಿ ಆಗುವ ಸಲುವಾಗಿ ಶಹಾಬಜಾರ ನಾಕಾ ಮುಖಾಂತರವಾಗಿ ಆಳಂದ ಚೆಕ್ಕ ಪೋಸ್ಟ ಕಡೆಗೆ ನನ್ನ ಮೋಟಾರ ಸೈಕಲ ನಂಬರ ಕೆಎ-03-ಇಜಿ-9533 ನೆದ್ದನ್ನು ಚಲಾಯಿಸಿಕೊಂಡು ಹೋಗುವಾಗ ದಾರಿ  ಮದ್ಯ ಆಳಂದ ರೋಡ ನಲ್ಲಿ ಬರುವ  ಆರ್ಶಿವಾದ ಕಲ್ಯಾಣ ಮಂಟಪ ಹತ್ತಿರ ಬರುವ ಪೆಟ್ರೊಲ ಪಂಪ ಎದುರು ರೋಡ ಮೇಲೆ ಎದುರಿನಿಂದ ರಾಂಗ ಸೈಡ ಮೂಲಕವಾಗಿ ಯಾವುದೋ ಒಂದು  ಟಂಟಂ ಚಾಲಕನು ತನ್ನ ಟಂಟಂ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಫಘಾತ ಮಾಡಿ ನನ್ನ ಬಲ ಮೊಳಕಾಲಿಗೆ ಗುಪ್ತಪೆಟ್ಟು ಬಲಗಾಲು ಮೊಳಕಾಲ ಕೆಳೆಗೆ ಭಾರಿ ಪೆಟ್ಟು  ಬಿದ್ದು ರಕ್ತಗಾಯ . ಎರಡು ಕಣ್ಣುಗಳ ಮದ್ಯದಲ್ಲಿ ರಕ್ತಗಾಯ ಹಾಗೂ ಎಡ ಹುಬ್ಬಿನ ಮೇಲೆ ರಕ್ತಗಾಯ ಪಡಿಸಿ  ತನ್ನ ಟಂಟಂ ವಾಹನ ಚಲಾಯಿಸಿಕೊಂಡು ಓಡಿ ಹೋಗಿರುತ್ತಾರೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,