POLICE BHAVAN KALABURAGI

POLICE BHAVAN KALABURAGI

26 August 2018

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 23-08-2013 ರಂದು  ವಾತ್ಸಲ್ಯ ಆಸ್ಪತ್ರೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ, ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಖಚಿತವಾದ ಬಾತ್ಮಿ ಬಂದ ಮೇರೆಗೆ, ಪಿ.ಎಸ್,ಐ. ಎಮ್.ಬಿ. ನಗರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ  ಹೋಗಿ ವಾತ್ಸಲ್ಯ ಆಸ್ಪತ್ರೆಯ ಕಂಪೌಂಡ  ಇನ್ನು ಸ್ವಲ್ಪ ದೂರ ಇರುವಾಗಲೇ ಜೀಪನ್ನು ನಿಲ್ಲಿಸಿ ಎಲ್ಲರು ಇಳಿದು ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಇಸ್ಪಿಟ್ ಜೂಜಾಟ ಆಡುತ್ತಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ದಾಳಿ ಮಾಡಿ  14 ಜನರನ್ನು ಹಿಡಿದು  ಅವರ ಹೆಸರು ವಗೈರಾ ವಿಚಾರಿಸಲಾಗಿ 1) ಕುಮಾರ ತಂದೆ ಸಿದ್ದಣ್ಣ ಬೆಳಮಗಿ ಸಾ. ಎಸ್.ಬಿ.ಟೆಂಪಲ್ ರೋಡ ಕಲಬುರಗಿ, 2) ಭರತ ತಂದೆ ಉಮೇಶ ಪಾಟೀಲ ಸಾ. ಲಾಲಗಿರಿ ಕ್ರಾಸ್ ಕಲಬುರಗಿ, 3) ನಾಗರಾಜ ತಂದೆ ಸಿದ್ದಣ್ಣ ಮೆಳಕುಂದಿ, ಸಾ. ಖಾದ್ರಿ ಚೌಕ ಕಲಬುರಗಿ 4) ಮನೋಜಕುಮಾರ ತಂದೆ ಸ್ವರಾಜ ಬ್ಯಾಟಿ ಸಾ: ಮಾಣಿಕೇಶ್ವರ ನಗರ  ಕಲಬುರಗಿ 5) ನಾಗೇಶ ತಂದೆ ಶ್ರೀಮಂತ ಪರೀಟ ಸಾ.ಪೂಜಾ ಕಾಲೊನಿ ಕಲಬುರಗಿ 6) ಸಿದ್ದು  ತಂದೆ ಮಲಕಯ್ಯ ಮಠಪತಿ  ಸಾ: ಮಾಣಿಕೇಶ್ವರ ನಗರ  ಕಲಬುರಗಿ 7) ರಾಜು ತಂದೆ ಶಿವಶರಣ ಸಲಗರ ಸಾ: ಗಂಜ್ ಕಾಲೊನಿ  ಕಲಬುರಗಿ 8) ಅನಿಲ ತಂದೆ ವಿನಾಯಕರಾವ ಪಾಟೀಲ ಸಾ: ಬಸವೇಶ್ವರ ಕಾಲೊನಿ ಕಲಬುರಗಿ 9) ಆನಂದ  ತಂದೆ ಪಾಪಯ್ಯ  ಸಾ: ಸಿದ್ದೇಶ್ವರ ಕಾಲೊನಿ  ಕಲಬುರಗಿ 10) ಶಿವರಾಜ ತಂದೆ ಹಣಮಂತ್ರಾವ ಪಾಟೀಲ ಸಾ: ರಾಘವೇಂದ್ರ ಕಾಲೊನಿ  ಕಲಬುರಗಿ 11) ನಾಗರಾಜ ತಂದೆ ಶರಣಪ್ಪ ಪಾಟೀಲ ಸಾ: ರಾಜಾಪೂರ  ಕಲಬುರಗಿ 12) ಸಾಗರ ತಂದೆ ಸುಭಾಷ ಜಾಜಿ ಸಾ: ಐವಾನ ಏ ಷಾಹಿ ನಗರ  ಕಲಬುರಗಿ 13) ಅಮಿತ ತಂದೆ ಶಂಕರ ಪಾಟೀಲ ಸಾ: ಬ್ರಹ್ಮಪೂರ  ಕಲಬುರಗಿ 14) ಅಜಯ ತಂದೆ ಹನುಮಂತಯ್ಯ ಬದ್ರಿ ಸಾ: ಬಿದ್ದಾಪೂ ಕಾಲೊನಿ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 1.90.960/- ರೂ  ಹಾಗೂ 52 ಇಸ್ಪೀಟ್ ಎಲೆಗಳನ್ನು  ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಮಾಹಾತ್ಮಾ ಬಸವೇಶ್ವರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಲಕ್ಷ್ಮಣ ತಂದೆ ಮೈಲಾರಿ ಜಮದಾರ ಸಾ : ಕಲ್ಲಹಂಗರಗಾ ರವರು ದಿನಾಂಕ.25-8-2018 ರಂದು ರಾತ್ರಿ. 9-30 ಪಿ.ಎಂ.ಕ್ಕೆ. ಭೀಮಳ್ಳಿ ಗ್ರಾಮದ ನನ್ನ ಸಮ್ಮಂದಿಕರಾದ ಶಿವಾನಂದ ತಂದೆ ಕಾಶಪ್ಪಾ ನಾಟೀಕಾರ ಇತನು ಬಂದು ನನಗೆ ತಿಳಿಸಿದ್ದು ಏನೆಂದರೆ ತಾನು ಮತ್ತು ಪೀರಪ್ಪಾ ನಾಟೀಕಾರ ಇಬ್ಬರು ಕಲಬುರಗಿಯಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಭೀಮಳ್ಳಿಗೆ ಹೋಗುತಿರುವಾಗ ವಿಶ್ವರಾಧ್ಯ ಗುಡಿಯ ನಂತರ ಏಷಿಯನ ಪೇಂಟ ಗೋಡಾನ ಕ್ರಾಸ ಹತ್ತಿರ ಆಳಂದರೋಡಿಗೆ  ರಾತ್ರಿ ರೋಡಿಗೆ ಜನರು ವಾಹನ ಅಪಘಾತವಾಗಿದೆ ಅಂತಾ ಜನರು ನೆರೆದಿದ್ದು ಆಗ ನಾವಿಬ್ಬರು ಹೋಗಿ ನೋಡಲು ನನ್ನ ಮಗ  ಅಂಬರಾಯ ಜಮದಾರ ನಿದ್ದು   ವಿಚಾರಿಸಲು ಗೊತ್ತಾಗಿದ್ದು ಏನೆಂದರೆ 7-30 ಪಿ.ಎಂ.ದ ಸುಮಾರಿಗೆ ಆತನಿಗೆ ಯಾವುದೋ ಒಂದು ವಾಹನ ಅಪಘಾತ ಪಡಿಸಿದ್ದು ಎಡಗಾಲು ಮೋಳಕಾಲು ಕೆಳಗೆ ಭಾರಿ ರಕ್ತಗಾಯ ಮತ್ತು ತಲೆಗೆ ಭಾರಿ ರಕ್ತಗಾಯವಾಗಿ ಮೃತ ಪಟ್ಟಿರುತ್ತಾನೆ ಸರಕಾರಿ ದವಾಖಾನೆಗೆ ತೆಗೆದುಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದನು ನಂತರ ನಾನು ಮತ್ತು ಶಿವಾನಂದ ನಾಟೀಕಾರ ಇಬ್ಬರು ಕೂಡಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ಮಗ ಅಂಬರಾಯನಿದ್ದು  ಅವನ  ಎಡಗಾಲು ಮೋಳಕಾಲು ಕೆಳಗೆ  ಯಾವುದೋ  ಭಾರಿವಾಹನವು ಅಪಘಾತ ಮಾಡಿ ಆತನ ಕಾಲು ಮೇಲೆ ಹಾಯಿದು ಹೋಗಿದ್ದರಿಂದ ಭಾರಿಗಾಯವಾಗಿ ಮಾಂಸಖಂಡ ಕಾಣುತಿದ್ದು ಭಾರಿ ರಕ್ತಸ್ರಾವವಾಗಿರುತ್ತದೆ.  ಮತ್ತು ತಲೆಯ ಬಲಬಾಗದಲ್ಲಿ ಭಾರಿ ರಕ್ತಗಾಯಗಳಾಗಿರುತ್ತೆವೆ.  ಆದುದರಿಂದ ನನ್ನ ಮಗ ಅಂಬರಾಯ ಜಮಾದಾರ ಇತನು ಮಾನಸಿಕವಾಗಿ ಆಶ್ವಸ್ಥನಾಗಿದ್ದು   ರೋಡಿಗೆ ಅಲ್ಲಲ್ಲಿ ಬೇಡಿಕೊಂಡು ತಿನ್ನುತಿದ್ದು  ರೋಡಿಗೆ ಹೋಗುತ್ತಿದ್ದಾಗ ಯಾವುದೋ ಭಾರಿ ವಾಹನ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಓಡಿಸಿಕೊಂಡು ಬಂದು  ನನ್ನ ಮಗ ಅಂಬರಾಯನಿಗೆ ಡಿಕ್ಕಿ ಹೊಡೆದು ಆತನ ಎಡಗಾಲು ಮೋಳಕಾಲು ಮೇಲೆ ಹಾಯಿಸಿಕೊಂಡು ಹೋಗಿದ್ದರಿಂದ ಆತನಿಗೆ ಎಡಗಾಲು ಮೋಳಕಾಲಿಗೆ ಭಾರಿ ರಕ್ತಗಾಯವಾಗಿ ಮಾಂಸಖಂಡ ಕಾಣುತಿದ್ದವು  ತಲೆಗೆ ಭಾರಿ ರಕ್ತಗಾಯವಾಗಿ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.