POLICE BHAVAN KALABURAGI

POLICE BHAVAN KALABURAGI

21 August 2013

Gulbarga district reported crimes

ಅಪಘಾತ ಪ್ರಕರಣ :

ಶಾಹಾಬಾದ ನಗರ ಠಾಣೆ : ಶ್ರೀ ಬಸವರಾಜ ತಂದೆ ಕಾಮಣ್ಣಾ ದಂಡಗೊಂಡ ಸಾ: ಹರಳಯ್ಯಾ ನಗರ ಶಹಾಬಾದ ರವರು ದಿನಾಂಕ 18-08-2013 ಮುಂಜಾನೆ ದೇವನ ತೇಗನೂರ ಗ್ರಾಮದಲ್ಲಿರುವ ತನ್ನ ಹೊಲಕ್ಕೆ ಹೋಗುವ ಸಲುವಾಗಿ ನಾನು ಕೃಷರ ಜೀಪ ನಂ: ಕೆ.ಎ-32/ಎ-2725 ನೇದ್ದರಲ್ಲಿ ಕುಳಿತುಕೊಂಡು ಹೊರಟಾಗ ಸದರಿ ಜೀಪ ಚಾಲಕನು ತನ್ನ ಜೀಪನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಒಮ್ಮೇಲೆ ಕಟ್ ಹೊಡೆದರಿಂದ ಸದರಿ ಜೀಪ ಶಹಾಬಾದದ ರೈಲ್ವೆ ಬ್ರಿಡ್ಜದ ಹತ್ತಿರ ಕೆಳಗೆ ಬಿದ್ದು ಅದರಲ್ಲಿದ್ದ ಪಿರ್ಯಾದಿಗೆ ಟೊಂಕಕ್ಕೆ , ಎಡಗಾಲು ಚಪ್ಪೆಗೆ ಬಾರಿ ಒಳಪೆಟ್ಟು ಮತ್ತು ಎಡಗಡೆ ತಲೆಗೆ ಒಳಪೆಟ್ಟಾಗಿರುತ್ತದೆ. ಸದರಿ ಜೀಪ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಜೀಪನಲ್ಲಿದ್ದ ಗಾಯಾಳು ಆನಂದ ತಂದೆ ಶಂಕರ ಚವ್ಹಾಣ  ಸಾ:ಶಾಂತನಗರ ಭಂಕೂರ ಇತನಿಗೆ ತಲೆಯ ಹಿಂದೆ ಬಾರಿ ರಕ್ತಗಾಯವಾಗಿ ಒಳಪೆಟ್ಟಾಗಿರುತ್ತದೆ. ಮತ್ತು ಮುಖಕ್ಕೆ, ಬಾಯಿಗೆ, ಕಿವಿಯಿಂದ  ರಕ್ತ ಬಂದಿರುತ್ತದೆ. ಸದರಿ ಆನಂದನಿಗೆ ಉಪಚಾರ ಕುರಿತು ಗುಲ್ಬರ್ಗಾ ಕ್ಕೆ  ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದ ಕ್ಕೆ ಕರೆದುಕೊಂಡು ಹೋಗುವಾಗ . ಮಾರ್ಗ ಮದ್ಯದಲ್ಲಿ ದಿನಾಂಕ 19-08-2013 ರಂದು ಪಟ್ಟಿರುತ್ಥಾನೆ.ಅಂತಾ ಗೊತ್ತಾಗಿ ಇಂದು ದಿನಾಂಕ 20-08-2013 ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.