ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಬಸವರಾಜ ತಂದೆ
ಕಾಮಣ್ಣಾ ದಂಡಗೊಂಡ ಸಾ: ಹರಳಯ್ಯಾ ನಗರ ಶಹಾಬಾದ ರವರು ದಿನಾಂಕ 18-08-2013 ಮುಂಜಾನೆ ದೇವನ
ತೇಗನೂರ ಗ್ರಾಮದಲ್ಲಿರುವ ತನ್ನ ಹೊಲಕ್ಕೆ ಹೋಗುವ ಸಲುವಾಗಿ ನಾನು ಕೃಷರ ಜೀಪ ನಂ:
ಕೆ.ಎ-32/ಎ-2725 ನೇದ್ದರಲ್ಲಿ ಕುಳಿತುಕೊಂಡು ಹೊರಟಾಗ ಸದರಿ ಜೀಪ ಚಾಲಕನು ತನ್ನ ಜೀಪನ್ನು
ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಒಮ್ಮೇಲೆ ಕಟ್ ಹೊಡೆದರಿಂದ ಸದರಿ ಜೀಪ
ಶಹಾಬಾದದ ರೈಲ್ವೆ ಬ್ರಿಡ್ಜದ ಹತ್ತಿರ ಕೆಳಗೆ ಬಿದ್ದು ಅದರಲ್ಲಿದ್ದ ಪಿರ್ಯಾದಿಗೆ ಟೊಂಕಕ್ಕೆ ,
ಎಡಗಾಲು ಚಪ್ಪೆಗೆ ಬಾರಿ ಒಳಪೆಟ್ಟು ಮತ್ತು ಎಡಗಡೆ ತಲೆಗೆ ಒಳಪೆಟ್ಟಾಗಿರುತ್ತದೆ. ಸದರಿ ಜೀಪ
ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಜೀಪನಲ್ಲಿದ್ದ ಗಾಯಾಳು
ಆನಂದ ತಂದೆ ಶಂಕರ ಚವ್ಹಾಣ ಸಾ:ಶಾಂತನಗರ ಭಂಕೂರ
ಇತನಿಗೆ ತಲೆಯ ಹಿಂದೆ ಬಾರಿ ರಕ್ತಗಾಯವಾಗಿ ಒಳಪೆಟ್ಟಾಗಿರುತ್ತದೆ. ಮತ್ತು ಮುಖಕ್ಕೆ, ಬಾಯಿಗೆ,
ಕಿವಿಯಿಂದ ರಕ್ತ ಬಂದಿರುತ್ತದೆ. ಸದರಿ ಆನಂದನಿಗೆ
ಉಪಚಾರ ಕುರಿತು ಗುಲ್ಬರ್ಗಾ ಕ್ಕೆ ಕರೆದುಕೊಂಡು
ಹೋಗಿ ನಂತರ ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದ ಕ್ಕೆ ಕರೆದುಕೊಂಡು ಹೋಗುವಾಗ . ಮಾರ್ಗ ಮದ್ಯದಲ್ಲಿ ದಿನಾಂಕ 19-08-2013 ರಂದು ಪಟ್ಟಿರುತ್ಥಾನೆ.ಅಂತಾ
ಗೊತ್ತಾಗಿ ಇಂದು ದಿನಾಂಕ 20-08-2013 ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment