POLICE BHAVAN KALABURAGI

POLICE BHAVAN KALABURAGI

17 July 2012

GULBARGA DIST REPORTED CRIME


ಹೆಣ್ಣು ಮಗಳು ಕಾಣೆಯಾದ ಪ್ರಕರಣ:
ಮಹಿಳಾ ಪೊಲೀಸ ಠಾಣೆ:ಶ್ರೀ ರಾಜೇಂದ್ರ @ ರಾಜು ತಂದೆ ಚೆನ್ನಬಸಪ್ಪ  ನರಸಗೊಂಡ ಸಾ:ಶಿವಾಜಿ ನಗರ  ಗುಲಬರ್ಗಾರವರು ನಾನು 2 ವರ್ಷಗಳ ಹಿಂದೆ ನನ್ನ ಅಕ್ಕನ ಮಗಳಾದ ಶೃತಿ ಇವಳೊಂದಿಗೆ ಮದುವೆ ಮಾಡಿಕೊಂಡಿದ್ದು,ಮದುವೆಯಾದಗಿನಿಂದ ನಾವಿಬ್ಬರು ಗಂಡ ಹೆಂಡತಿ ಚನ್ನಾಗಿದ್ದೆವು, ದಿನಾಂಕ:4-5-2012 ರಂದು ಮಧ್ಯಾಹ್ನ 3-30 ಗಂಟೆ ಸುಮಾರಿಗೆ  ನಾನು ಮನೆಯಲ್ಲಿದ್ದಾಗ  ನನ್ನ ಹೆಂಡತಿ ನೀರು ತರುವ ಕುರಿತು ಹೊರಗಡೆ ಬಂದಿದ್ದು, ಅರ್ಧ ಗಂಟೆಯಾದರೂ  ಮರಳಿ ಮನೆಗೆ ಬರಲಿಲ್ಲ , ನಾನು ಹೊರಗಡೆ ಬಂದು ಎಲ್ಲಾ ಕಡೆ ಹುಡುಕಾಡಲಾಗಿ ಎಲ್ಲೂ ಸಿಗಲಿಲ್ಲಾ.  ಅಕ್ಕಪಕ್ಕದವರ ವಿಚಾರಿಸಲಾಗಿ ನನ್ನ ಹೆಂಡತಿಯ ಬಗ್ಗೆ ಸುಳಿವು ಸಿಗಲಿಲ್ಲಾ ಅಲ್ಲಿಂದ ಇಲ್ಲಿಂದ ನಮ್ಮ ಸಂಭಂದಿಕರಲ್ಲಿ ಹುಡುಕಾಡಲಾಗಿ ಶೃತಿ ಇವಳು ಪತ್ತೆಯಾಗಿರುವುದಿಲ್ಲಾ  ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 55/2012  ಕಲಂ ಹೆಣ್ಣು ಮಗಳು  ಕಾಣೆಯಾದ ಬಗ್ಗೆ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIME


ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ ಠಾಣೆ: ಶ್ರೀ.ವಿನೋದ ತಂದೆ ಈಶ್ವರ ರಾಗಿ ಸಾ||ಡೊಂಗರಗಾಂವ ತಾ||ಗುಲಬರ್ಗಾರವರು ನಾನು ದಿನಾಂಕ: 16/07/2012 ರಂದು ಸಾಯಂಕಾಲ 6-00 ಗಂಟೆಗೆ ಕೂಲಿ ಕೆಲಸ ಮುಗಿಸಿಕೊಂಡು ಡೊಂಗರಗಾಂವ ಕ್ರಾಸ್ ಹತ್ತಿರ ಬಂದಾಗ ನಮ್ಮೂರ ನಮ್ಮ ಸಂಭಂದಿಕನಾದ  ಕುಶಾ ತಂದೆ ಕರಬಸಪ್ಪ ತಳವಾರ ವ: 18 ವರ್ಷ ಈತನು ಮರಗುತ್ತಿ ಕ್ರಾಸ್ ಹತ್ತಿರ ಹೋಗಿ ಚಹಾ ಕುಡಿದು ಬರೋಣ ನಡೆ ಅಂತಾ ಹೇಳಿದ್ದರಿಂದ ನಾನು ಮತ್ತು ಕುಶಾ ಕೂಡಿಕೊಂಡು  ಚಹಾ ಕುಡಿಯುವ ಸಲುವಾಗಿ ಮರಗುತ್ತಿ ಕ್ರಾಸ್ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಮರಗುತ್ತಿ ಕ್ರಾಸ್ ಸಮೀಪ ಕುಶಾ ಈತನು ಮೂತ್ರ ವಿಸರ್ಜನೆ ಮಾಡಿ ರಸ್ತೆ ದಾಟುತ್ತಿದ್ದಾಗ ಹುಮನಾಬಾದ ಕಡೆಯಿಂದ ಒಬ್ಬ ಡಿ.ಸಿ.ಎಂ. ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಕುಶಾ ಈತನಿಗೆ ಡಿಕ್ಕಿ ಪಡಿಸಿದನು. ನಾನು ಮತ್ತು ಪುಂಡಲೀಕ ತಂದೆ ದೇವಪ್ಪ ಹಿರೋಬಿ ಸಾ:ಮರಗುತ್ತಿ, ಕಾಮಣ್ಣ ತಂದೆ ಶರಣಪ್ಪ ಧನಗರ ಸಾ:ಡೊಂಗರಗಾಂವ ಎಲ್ಲರೂ ಕೂಡಿಕೊಂಡು ಕುಶಾ ಈತನಿಗೆ ಎಬ್ಬಿಸಿ ನೋಡಲಾಗಿ ಕುಶಾನ ತೆಲೆಗೆ, ಎದೆಗೆ, ಹೊಟ್ಟೆಗೆ ಭಾರಿ ಗುಪ್ತಗಾಯವಾಗಿ ನಾವು ಎಷ್ಟು ಎಬ್ಬಿಸಿದರೂ ಕಣ್ಣು ತೆರೆಯದೇ ಬೇಹೋಷ್ ಆಗಿ ಬಿದ್ದಿದ್ದನು. ಅಪಘಾತ ಪಡಿಸಿದ ಡಿ.ಸಿ.ಎಂ. ವಾಹನ ನೋಡಲಾಗಿ ಅದರ ನಂಬರ್ ಕೆಎ-38- 637 ನೇದ್ದು ಇದ್ದು ಅದರ ಚಾಲಕನ ಹೆಸರು ವಿಚಾರಿಸಲಾಗಿ ರವಿಚಂದ್ರನ್ ತಂದೆ ಮೇಘನಾಥ ರಾಠೋಡ ವ: 28 ವರ್ಷ  ಸಾ: ದಿನಸಿ [ಕೆ]ತಾಂಡಾ  ತಾ;ಜಿ; ಗುಲಬರ್ಗಾ ಅಂತಾ ತಿಳಿಸಿದನು. ಉಪಚಾರ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಉಪಚಾರ ಫಲಿಸದೇ ಆಸ್ಪತ್ರೆಯಲ್ಲಿಯೇ ಮೃತಪಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ; 84/2012 ಕಲಂ  279.337.304[ಎ] ಐಪಿಸಿ ಸಂಗಡ 187 ಐಎಂವ್ಹಿ ಆಕ್ಟ್  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.