POLICE BHAVAN KALABURAGI

POLICE BHAVAN KALABURAGI

15 September 2012

GULBARGA DISTRICT REPORTED CRIME


ಕಳ್ಳತನ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ:ಶ್ರೀ ಅಬ್ದುಲ ಹಮೀದ ತಂದೆ ಮೈನೋದ್ದೀನ್ ವ:38 ವರ್ಷ ಉ:ಬೇಕರಿ ವ್ಯಾಪಾರ ಸಾ|| ಪಿಲ್ಟರ ಬೇಡ್ ಕಾಲೋನಿ ಚುನ್ನಾ ಭಟ್ಟಿ ಹತ್ತಿರ ಗುಲಬರ್ಗಾರವರು ದಿನಾಂಕ:14-09-2012 ರಂದು ಬಸವೇಶ್ವರ ಕಾಲೋನಿಯಲ್ಲಿರುವ ನನ್ನ ತಮ್ಮನ ಮನೆಯಲ್ಲಿ ಲಗ್ನವಿದ್ದುದ್ದರಿಂದ ಮುಂಜಾನೆ 9-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಮಕ್ಕಳು ಕೂಡಿ ಲಗ್ನಕ್ಕೆ ಹೋಗುವ ಕುರಿತು ನಮ್ಮ ಮನೆಯ ಬಾಗಿಲು ಕೀಲಿ ಹಾಕಿಕೊಂಡು ಹೋಗಿದ್ದು, ನಂತರ ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ ಅಂದರೆ ದಿನಾಂಕ:15-09-2012 ರಂದು 1-00 ಗಂಟೆ ಸುಮಾರಿಗೆ ನಮ್ಮ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲಿಗೆ ಹಾಕಿದ ಕೀಲಿ ಮುರಿದಿದ್ದು ಆಲಮಾರಿಯಲ್ಲಿಟ್ಟಿದ್ದ 5 ಗ್ರಾಂ ದ ಎರಡು ಬಂಗಾರದ ಉಂಗುರಗಳು, 8 ತೊಲೆಯ ಎರಡು ಬೆಳ್ಳಿ ಚೈನಗಳು, ಒಟ್ಟು  23,400/- ರೂ ಬೇಲೆ ಬಾಳುವ ಬಂಗಾರ ಮತ್ತು ಬೆಳ್ಳಿಯ ಸಾಮಾನುಗಳನ್ನು ರಾತ್ರಿ ಅಂದಾಜು 11-30  ಗಂಟೆ ಸುಮಾರಿಗೆ ಯಾರೋ ಕಳ್ಳರು ಬಾಗಿಲು ಕೀಲಿ ಮುರಿದು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 203/2012 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.