POLICE BHAVAN KALABURAGI

POLICE BHAVAN KALABURAGI

30 December 2012

GULBARGA DISTRICT


:: ಪತ್ರಿಕಾ ಪ್ರಕಟಣೆ ::

          ಮುಂಬರುವ ಹೊಸ ವರ್ಷ 2013 ಶುಭಾಷಯಗಳನ್ನು ಕೋರುತ್ತಾ, ಈ ಕೆಳಕಂಡ ವ್ಯವಸ್ಥೆಯನ್ನು ಗುಲಬರ್ಗಾ ಜಿಲ್ಲಾ ಪೊಲೀಸ್ ವತಿಯಿಂದ ಮಾಡಿದ್ದು, ಅವುಗಳನ್ನು ಪಾಲಿಸಲು/ಸಹಕರಿಸಲು ಪ್ರಕಟಿಸಲಾಗಿದೆ.
Ø ಜಿಲ್ಲೆಯಲ್ಲಿ ಹೊಸ ವರ್ಷವನ್ನು ಶಾಂತಿ ಮತ್ತು ಸುವ್ಯವಸ್ಥೆಯಿಂದ ಆಚರಿಸುವ ಕುರಿತು ಸೂಕ್ತ  ಪೊಲೀಸ್ ಬಂದೋಬಸ್ತ ವ್ಯವಸ್ಥೆ ಮಾಡಿದ್ದು ಇರುತ್ತದೆ.
Ø ನಗರದ ಮೇನ್ ರೋಡ ಹಾಗೂ ರಿಂಗ ರೋಡಗಳಲ್ಲಿ ಮತ್ತು ಹೈವೆಗಳಲ್ಲಿ ವಿಶೇಷ ಚೆಕಪೊಸ್ಟಗಳನ್ನು ನಿರ್ಮಿಸಲಾಗಿದ್ದು, ಅಲ್ಲಿ ಕರ್ತವ್ಯ ನಿರತ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಯುವಕರು ಕುಡಿದು, ಅಮಾಯಕರಿಗೆ ಅಡೆತಡೆ ಮಾಡುವುದು ಮತ್ತು ಅಪಘಾತಗಳು ಮಾಡದಂತೆ ನೋಡಿಕೊಳ್ಳುವ ಕುರಿತು ಸಲಹೆ ಸೂಚನೆಗಳು ಕೂಡಾ ನೀಡಿದ್ದು ಇರುತ್ತದೆ.
Ø ನಗರದಲ್ಲಿ ಹಾಗೂ ಪಟ್ಟಣಗಳಲ್ಲಿ ಇರುವ ಮಧ್ಯದ ಅಂಗಡಿಗಳನ್ನು ದಿನಾಂಕ:31-12-2012 ರಂದು ರಾತ್ರಿ 10-30 ಗಂಟೆಗೆ ಬಂದ ಮಾಡುವುದು.
Ø ಬಾರ್/ರೆಸ್ಟೊರೆಂಟ್ ಮಾಲಿಕರು ತಮ್ಮ ಬಾರ್/ರೆಸ್ಟೊರೆಂಟಗಳನ್ನು ದಿನಾಂಕ:31-12-2012 ರಂದು  ರಾತ್ರಿ  11-30 ಗಂಟೆಗೆ ಬಂದ್ ಮಾಡುವುದು.
Øಬಂದೋಬಸ್ತ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯವರಿಗೆ ವೈನ್ಸಶಾಪ್,  ಬಾರ್/ರೆಸ್ಟೊರೆಂಟಗಳನ್ನು ನಿಗದಿತ ಸಮಯದಲ್ಲಿ ಬಂದ್ ಮಾಡಿಸಲು ಸೂಚಿಸಲಾಗಿದೆ.
Ø   ವೈನ್ಸಶಾಪ್ ಮತ್ತು ಬಾರ್/ರೆಸ್ಟೊರೆಂಟ್ ಮಾಲಿಕರು ತಮ್ಮ ತಮ್ಮ ವೈನ್ಸಶಾಪ್ ಮತ್ತು  ಬಾರ್/ರೆಸ್ಟೊರೆಂಟಗಳನ್ನು ನಿಗದಿತ ಸಮಯದಲ್ಲಿ ಸಾರ್ವಜನಿಕರ ಹಿತದೃಷ್ಠಿಯಿಂದ ಬಂದ್ ಮಾಡಿ ಸಹಕರಿಸಲು ಕೋರಲಾಗಿದೆ.
Ø  ಸಾರ್ವಜನಿಕರು ಸುರಕ್ಷಿತವಾಗಿ ಹೊಸ ವರ್ಷವನ್ನು ಆಚರಣೆ ಮಾಡಲು ಪೊಲೀಸ್  ಇಲಾಖೆಯಿಂದ ಜಿಲ್ಲೆಯ ಎಲ್ಲಾ ನಾಗರಿಕರಿಗೆ ಶುಭಾಷಗಳನ್ನು ಕೋರಲಾಗಿದೆ.

                    ಎಸ್.ಪಿ. ಗುಲಬರ್ಗಾರವರಿಂದ 


GULBARGA DISTRICT REPORTED CRIME


ಹುಡಗ ಕಾಣೆಯಾದ ಬಗ್ಗೆ:
ಮಳಖೇಡ ಪೊಲೀಸ್ ಠಾಣೆ:ಶ್ರೀ ಗೊಲ್ಲಾಳಪ್ಪ ತಂದೆ ಶರಣಪ್ಪ ಪುಜಾರಿ ಸಾ|| ಕೊಂಕನಳ್ಳಿ ಗ್ರಾಮ ತಾ||ಸೇಡಂ ರವರು ಮಗನಾದ ಚೆನ್ನವೀರ ವಯ||16 ವರ್ಷ,10 ನೇ ತರಗತಿ ವಿಧ್ಯಾರ್ಥಿ,ಇತನು ದಿನಾಂಕ:26/12/2012 ರಂದು ಮುಂಜಾನೆ 8:30 ಗಂಟೆಗೆ ಶಾಲೆಗೆ ಹೋಗುವದಾಗಿ ತಿಳಿಸಿ ಮನೆಯಿಂದ ಹೋಗಿದ್ದು ಪುನಃ ಮನೆಗೆ ಬರದೆ ಕಾಣೆಯಾಗಿದ್ದು,ಕಾಣೆಯಾದ ನನ್ನ ಮಗನನ್ನು ಹುಡುಕಲಾಗಿ ಎಲ್ಲಿಯೂ ಪತ್ತೆಯಾಗಿರುವದಿಲ್ಲ. ನನ್ನ ಚೆನ್ನವೀರ ಇತನನ್ನು ಪತ್ತೆ ಮಾಡಿಕೊಡಬೇಕು ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:77/2012 ಕಲಂ,ಹುಡಗ ಕಾಣೆಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕಾಣೆಯಾದ ಹುಡಗನ ಚಹರೆ ಪಟ್ಟಿ ಈ ರೀತಿಯಾಗಿದೆ. ಹೆಸರು: ಚೆನ್ನವೀರ, ವಯಸ್ಸು||16 ವರ್ಷ,ಎತ್ತರ,-41 ಗೋಧಿ ಮೈಬಣ್ಣ, ಕಪ್ಪು ಕೂದಲು,ಬಿಳಿ ಗೆರೆಯುಳ್ಳ ಉದ್ದನ ತೊಳಿನ ಅಂಗಿ ಮತ್ತು ಕಂದು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.ಇತನು ಕನ್ನಡ ಮತ್ತು ಹಿಂದಿ ಭಾಷೆ ಬಲ್ಲವನಾಗಿರುತ್ತಾನೆ. ಈತನ ಬಗ್ಗೆ ಸುಳಿವು ಸಿಕ್ಕಲ್ಲಿ  ಮಳಖೇಡ ಪೊಲೀಸ್ ಠಾಣೆ-08441-280366/280306, ಗುಲಬರ್ಗಾ ಕಂಟ್ರೋಲ್ ರೂಮ್ 08472-263604, ಪೊಲೀಸ್ ಉಪಾಧೀಕ್ಷಕರು, ಚಿಂಚೋಳಿ-08475-273100,ಸಿಪಿಐ ಸೇಡಂ-08441-277026 ಈ ನಂಬರಿಗೆ ಮಾಹಿತಿ ನೀಡಲು ಕೋರಲಾಗಿದೆ.