POLICE BHAVAN KALABURAGI

POLICE BHAVAN KALABURAGI

14 June 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ಪ್ರಕಾಶ ತಂದೆ ಮೈಲಾರಪ್ಪ ಸಂಗೊಳಗಿ ಸಾಃ ಹತಗುಂದಾ ತಾಃಜಿಃ ಕಲಬುರಗಿ ಇವರ ಮಗನಾದ ಗಣೇಶವ ಇತನು ಮತ್ತು ನಮ್ಮ ಸಂಭಂಧಿಕರಾದ ಬೀರಪ್ಪ ತಂದೆ ಮಲ್ಲೇಶಪ್ಪ ರಾಜವಳ್ಳಿ ಇಬ್ಬರು ಕೂಡಿ ಮೊಟಾರಸೈಕಲ ನಂಬರ ಕೆಎ-32-ವಾಯ್-3940 ನೇದ್ದರ ಮೇಲೆ ಕುಳಿತುಕೊಂಡು ದಿನಾಂಕ  12.06.2018 ರಂದು ಮದ್ಯಾಹ್ನ ಕಲಬುರಗಿ ನಮ್ಮ ಮನೆಯಿಂದ ಜೇವರಗಿ ತಾಲೂಕಿನ ಗಂವ್ಹಾರ ಗ್ರಾಮಕ್ಕೆ ಮದುವೆ ಕಾರ್ಯಕ್ರಮಕ್ಕೆಹೊಗಿಬರುತ್ತೆವೆ. ಎಂದು ಹೇಳಿ ಮನೆಯಿಂದ ಹೋದರು, ರಾತ್ರಿ 8.30 ಗಂಟೆಯ ಸುಮಾರಿಗೆ ಬೀರಪ್ಪ ಇತನು ನನಗೆ ಪೋನ ಮಾಡಿ ಜೇವರಗಿ ಶಹಾಪೂರ ರೋಡ ಕೆಲ್ಲೂರ ಗ್ರಾಮದ ಹತ್ತಿರ ರೋಡಿನಲ್ಲಿ ಮೊಟಾರಸೈಕಲ್ ಎಕ್ಸಿಡೆಂಟ್ ಆಗಿರುತ್ತದೆ ಗಣೇಶ ಈತನಿಗೆ ಬಾರಿಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ನನಗೆ ಗಾಯವಾಗಿದ್ದು ನಾನು ಉಪಚಾರ ಕುರಿತು ಅಂಬುಲೇನ್ಸ್ನಲ್ಲಿ ಕಲಬುರಗಿ ಯುನೈಟೇಡ್ ಆಸ್ಪತ್ರೆಗೆ ಬರುತ್ತಿದ್ದೆವೆ ಎಂದು ಹೇಳಿದಕೂಡಲೆ ನಾನು ಮತ್ತು ನಮ್ಮ ಸಂಭಂಧಿಕರಾದ ನಿಂಗಣ್ಣಾ ತಂದೆ ಶಿವಶರಣಪ್ಪ ಪೂಜಾರಿ ಇಬ್ಬರೂ ಕೂಡಿಕೊಂಡು ಕಲಬುರಗಿ ಯುನೈಟೇಡ್ ಆಸ್ಪತ್ರೆಗೆ ಹೋಗಿ ನೋಡಲಾಗಿ ಬೀರಪ್ಪ ಇತನಿಗೆ ತಲೆಗೆ ಮತ್ತು ತುಟಿಯ ಹತ್ತಿರ ಬಾರಿ ರಕ್ತಗಾಯವಾಗಿತ್ತು ಅವನಿಗೆ ಘಟನೆಯ ಬಗ್ಗೆ ಕೇಳಲಾಗಿ ಅವನು ಹೇಳಿದ್ದೆನೆಂದರೆ ನಾನು ಮತ್ತು ಗಣೇಶ ಇಬ್ಬರೂ ಕೂಡಿ ಜೇವರಗಿ ತಾಲೂಕಿನ ಗಂವ್ಹಾರಗ್ರಾಮದಲ್ಲಿ ಮದುವೆ ಕಾರ್ಯಕ್ರಮಮುಗಿಸಿಕೊಂಡು ಮರಳಿ ನಾವು ಅದೇಮೊಟಾರ್ಸೈಕಲ ಮೇಲೆ ಕುಳಿತುಕೊಂಡು ಗಂವ್ಹಾರದಿಂದ ಕಲಬುರಗಿಗೆ ಬರುತ್ತಿದ್ದೆವು. ಮೊಟಾರ್ಸೈಕಲನ್ನು ಗಣೇಶ ಇತನು ನಡೆಯಿಸುತ್ತಿದ್ದನು. ಗಂವ್ಹಾರದಿಂದ ಕಲಬುರಗಿ ಕಡೆಗೆ ಸಾಯಂಕಾಲ 7.30 ಗಂಟೆಯ ಸುಮಾರಿಗೆ ಜೇವರಗಿ- ಶಹಾಪೂರ ರೋಡ ಕೆಲ್ಲೂರ ಗ್ರಾಮದ ಸಮೀಪ ರೋಡಿನಲ್ಲಿ ಬರುತ್ತಿದಂತೆ ಗಣೇಶನು ತನ್ನ ಮೊಟಾರಸೈಕಲ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರೋಡಿನಲ್ಲಿ ನಿಂತಲಾರಿಯ ಹಿಂದಿನ ಬದಿಗೆ ಡಿಕ್ಕಿಪಡಿಸಿದನು. ಆಗ ನಾನು ಮೊಟಾರ ಸೈಕಲ್ ಮೇಲಿಂದ ಕೆಳಗೆಬಿದ್ದೆನು. ಗಣೇಶನು ಮೊಟಾರಸೈಕಲ್ ದೊಂದಿಗೆ ಲಾರಿ ಹಿಂದಿನ ಬಾಗದೊಳಗೆ ಹೋಗಿ ಸಿಕ್ಕಿಬಿದ್ದನು ಗಣೇಶನಿಗೆ ಹಣೆಯ ಮೇಲೆ ಮತ್ತು ಮುಖಕ್ಕೆ ಬಾರಿ ಗಾಯವಾಗಿ ಅವನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ನಂತರ ಲಾರಿ ನಂಬರ ನೊಡಲಾಗಿ ಅದರ ನಂಬರ ಕೆಎ-16--7444 ನೇದ್ದು ಇದ್ದು ಅದರ ಟಯರ ಪಂಚರ ಆಗಿ  ರೋಡಿನಲ್ಲಿ ನಿಂತಿತ್ತು ಅದರ ಚಾಲಕನು ಸ್ಥಳದಲ್ಲಿ ಯಾವುದೇ ಸಂಚಾರ ನಿಯಮಪಾಲಿಸದೆ, ಅಲ್ಲಿ ಯಾವುದೆ ಮುಂಜಾಗ್ರತೆ ಕ್ರಮಕೈಕೊಳದೆ ಲಾರಿಯನ್ನು ರೋಡಿನಲ್ಲಿ ಅಲಕ್ಷತನದಿಂದ ನಿಲ್ಲಿಸಿದ್ದರಿಂದ ಗಣೇಶನು ಮೊಟಾರ ಸೈಕಲ್ ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಲಾರಿಗೆ ಡಿಕ್ಕಿಪಡಿಸಿದರಿಂದ ಈ ಅಫಘಾತ ಸಂಭವಿಸಿರುತ್ತದೆ. ಲಾರಿ ಚಾಲಕನು ಸ್ಥಳದಲ್ಲಿ ಇದ್ದಿರಲಿಲ್ಲಾ. ಗಣೇಶನ ಹೆಣ ಸ್ಥಳದಲ್ಲಿಯೇ ಇರುತ್ತದೆ. ಅಫಘಾತವಾದ ವಿಷಯ ಗೊತ್ತಾಗಿ ಸ್ಥಳಕ್ಕೆ ಬಂದ 108 ಅಂಬುಲೇನಸ್ಸನಲ್ಲಿ ಕುಳಿತು ನಾನು ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತೆನೆ ಎಂದು ತಿಳಿಸಿದನು. ನಂತರ ನಾವು ಸ್ಥಳಕ್ಕೆ ಹೋಗಿ ನೋಡಲಾಗಿ ಸ್ಥಳದಲ್ಲಿ ಲಾರಿ ನಂಬರ ಕೆಎ-16--7444 ನೇದ್ದು ಇತ್ತು ಲಾರಿ ಹಿಂದಿನ ಭಾಗ ಜಖಂ ಆಗಿದ್ದು, ಅಲ್ಲಿಯೇ ರಕ್ತಸೋರಿದ್ದು ಇತ್ತು ಮತ್ತು ನಮ್ಮ ನೊಟಾರಸೈಕಲ್ ನಂ; ಕೆಎ-32-ವಾಯ್-3940 ನೇದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ ಶಿವಶರಣಪ್ಪ ತಂದೆ ಬಸಣ್ಣ ಬಂದಿಚೋಡೆ, ಸಾ:ಸಾವಳೇಶ್ವರ ಗ್ರಾಮ ಇವರು  ದಿನಾಂಕ:11/06/2018 ರಂದು ಸೋಮವಾರ ದಿವಸ ನೀಲೂರು ಗ್ರಾಮದಲ್ಲಿ ನಮ್ಮ ಸಂಬಂದಿಕರ ಒಬ್ಬರ ಜವಳ ಕಾರ್ಯಕ್ರಮ ಇರುವುದರಿಂದ ನಾನು ಮತ್ತು ನಮ್ಮ ತಾಯಿಯಾದ ನೀಲಮ್ಮ ಇಬ್ಬರು ಕೂಡಿಕೊಂಡು ನಮ್ಮ ಮೋಟಾರ್ ಸೈಕಲ್ ನಂ ಎಂಹೆಚ್43-ಕೆ1453 ನೇದ್ದರ ಮೇಲೆ ನೀಲೂರ ಗ್ರಾಮಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ಆ ದಿವಸ ರಾತ್ರಿ ಅಲ್ಲೇ ಮುಕ್ಕಮ್ ಮಾಡಿ ಮರುದಿವಸ ದಿನಾಂಕ:12/06/2018 ರಂದು ವಾಪಸ್ಸು ನಮ್ಮೂರಿಗೆ ನಮ್ಮ ಮೋಟಾರ್ ಸೈಕಲ್ ಮೇಲೆ ನಾನು ಮತ್ತು ನಮ್ಮ ತಾಯಿಯವರು ಬರುವಾಗ ಕಡಗಂಚಿ ದಾಟಿ ಲಾಡಚಿಂಚೋಳಿ ಕ್ರಾಸನಲ್ಲಿ  ನಾನು ಮೋಟಾರ್ ಸೈಕಲನ್ನು ರಸ್ತೆಯ ಎಡಬದಿಯಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ಎದುರುಗಡೆಯಿಂದ ಅಂದರೆ ಆಳಂದ ಕಡೆಯಿಂದ ಪಿಕಪ್ ವಾಹನ ಚಾಲಕನು ತನ್ನ ಅಧಿನದಲ್ಲಿಯ ಪೀಕಪ್ ವಾಹನ ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ್ ಸೈಕಲಗೆ ಡಿಕ್ಕಿಪಡಿಸಿದ್ದರಿಂದ ನಾನು ಮತ್ತು ನನ್ನ ತಾಯಿ ಮೋಟಾರ್ ಸೈಕಲ್ ಸಮೇತವಾಗಿ ಕೇಳಗೆ ಬಿದ್ದಿದ್ದರಿಂದ ನನ್ನ ಬಲಗಾಲು ಪಾದಕ್ಕೆ ರಕ್ತಗಾಯವಾಗಿದೆ. ಮತ್ತು ನನ್ನ ತಾಯಿಗೆ ಬಲಗಾಲು ಪಾದಕ್ಕೆ ಸೊಂಟಕ್ಕೆ ಮೊಳಕಾಲಿಗೆ ಭಾರಿರಕ್ತಗಾಯ ವಾಗಿರುತ್ತದೆ. ಸದರಿ ಪೀಕಪ್ ವಾಹನ ಚಾಲಕನು ಸ್ವಲ್ಪ ಮುಂದೆ ಹೋಗಿ ವಾಹನ ನಿಲ್ಲಿಸಿದ್ದು ನಾನು ಅದರ ನಂಬರ ನೋಡಲಾಗಿ ಎಂಹೆಚ್24-ಎಬಿ6685 ಅಂತಾ ಇತ್ತು ಸದರಿಯವನು ನಮಗೆ ಆದ ಗಾಯಗಳನ್ನು ನೋಡಿ ವಾಹನಸ ಸಮೇತವಾಗಿ ಕಲಬುರಗಿ ಕಡೆಗೆ ಹೋಗಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಇನಾಯತ್ ಖಾನ್ ತಂದೆ ಅಬ್ದುಲ್ ಜಬ್ಬಾರ ಖಾನ್ ಸಾ|| ಅಣ್ಣಾ ಕೀರಾಣಾ ಅಂಗಡಿ ಹಿಂದುಗಡೆ ಎಕ್ಬಾಲ್ ಕಾಲೋನಿ ಎಮ್ ಎಸ್ ಕೆ ಮಿಲ್ ಕಲಬುರಗಿ ಇವರು ದಿನಾಂಕ; 12/06/2018 ರಂದು ಬೆಳಗಿನ ಜಾವ ನನ್ನ ಹೆಂಡತಿ ಶ್ರೀಮತಿ ಆಸ್ಮಾ ಬೇಗಂ ಇವಳು ತನ್ನ ತವರು ಮನೆಗೆ  ರಂಜಾನ ನಿಮಿತ್ಯ ಹೊಗಿದ್ದು  ಬೆಳಗ್ಗೆ 8;30 ಎಎಮ್ ಸುಮಾರಿಗೆ ನಾನು ನಮ್ಮ ಮನೆಯ ಬಾಗಿಲಿಗೆ ಕೀಲಿ ಹಾಕಿಂಡು ನಾನು ಕೆಲಸಕ್ಕೆ ಹೊಗಿದ್ದು ಮರಳಿ ಸಾಯಂಕಾಲ 4 ಪಿಎಮ್ ಸುಮಾರಿಗೆ ನಾನು ನಮ್ಮ ಮನೆಗೆ ಮರಳಿ ಬಂದು ನೊಡಲಾಗಿ ನಮ್ಮ ಮನೆಯ ಬಾಗಿಲಿಗೆ ಹಾಕಿದ್ದ ಕಿಲಿ ಮುರಿದಿದ್ದು ನೋಡಿ ನಾನು ಗಾಬರಿಗೊಂಡು ಮನೆಯಲ್ಲಿ ಹೊಗಿ ನೋಡಲು ಮನೆಯಲ್ಲಿಯ ಆಲಮೇರಾ ಮುರಿದಿದ್ದು ಅದರಲ್ಲಿಯ ವಸ್ತುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು ನಾನು ಪರಿಸಿಲಿಸಿ ನೋಡಲು ಆಲಮೇರಾದಲ್ಲಿ ಇಟ್ಟಿದ್ದ 17 ಗ್ರಾಂ ಬಂಗಾರದ ನೆಕ್ಲೇಸ್ ಮತ್ತು ಪೆಂಡೆಂಟ್ ಇರಲಿಲ್ಲ ನಾನು ಮನೆಯಲ್ಲಿ ಎಲ್ಲಾ ಕಡೆಗೂ ಹುಡುಕಾಡಿದರೂ ಸಿಗಲಿಲ್ಲ ನಂತರ ನಾನು ನನ್ನ ಹೆಂಡತಿ ಶ್ರೀಮತಿ ಆಸ್ಮಾ ಬೇಗಂ ಇವಳಿಗೆ ತಿಳಿಸಿಲು ನನ್ನ ಹೆಂಡತಿ ಇಂದು ದಿನಾಂಕ; 13/06/2018 ರಂದು ನಮ್ಮ ಮನೆಗೆ ಬಂದ ನಂತರ ಮತ್ತೆ ಮನೆಯಲ್ಲಾ ಪರಿಸಿಲಿಸಿ ನೊಡಿದರೂ ಮನೆಯಲ್ಲಿ ನನ್ನ ಹೆಂಡತಿಯ 17 ಗ್ರಾಂ ಬಂಗಾರದ ನೆಕ್ಲೇಸ್ ಮತ್ತು ಪೆಂಡೆಂಟ್ ಸಿಕ್ಕಿರುವುದಿಲ್ಲಾ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲು ಕೀಲಿ ಮುರಿದು ಆಲಮೇರಾ ತೆರದು ಅದರಲ್ಲಿಯ ನನ್ನ ಹೆಂಡತಿಯ 17 ಗ್ರಾಂ ಬಂಗಾರದ ನೆಕ್ಲೇಸ್ ಮತ್ತು ಪೆಂಡೆಂಟ್ ಅ|| ಕಿ|| 24500/- ನೇದ್ದನ್ನು ಕಳ್ಳತನ ಮಢಿಕೊಂಡು  ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.