POLICE BHAVAN KALABURAGI

POLICE BHAVAN KALABURAGI

15 May 2012

GULBARGA DIST REPORTED CRIME


ಮೂರು ಮೋಟಾರ ಸೈಕಲಗಳು ಜಪ್ತಿ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ದಿನಾಂಕ 14-05-2012 ರಂದು ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ಶ್ರೀ ಬಸವರಾಜ ಜಿ. ತೇಲಿ ಪಿ.ಎಸ್.ಐ  ಹಾಗು ಠಾಣೆಯ ಅಪರಾಧ ಸಿಬ್ಬಂದಿಯವರೊಂದಿಗೆ ಠಾಣೆ ಸ್ವತ್ತಿನ ಪ್ರಕರಣಗಳಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ, ಮದ್ಯಾಹ್ನ 3-30 ಗಂಟೆಗೆ ಚೋರ್ ಗುಮ್ಮಜ್ ಹತ್ತಿರ ಡಬರಾಬಾದ ಕ್ರಾಸ್ ಹತ್ತಿರ ಹೋದಾಗ ಒಬ್ಬ ಮನುಷ್ಯನು ಹೀರೊಹೊಂಡಾ ಮೊಟಾರ್ ಸೈಕಲ್ ನೊಂದಿಗೆ ಸಂಶಯಾಸ್ಪದ ರೀತಿಯಿಂದ ನಿಂತಿದ್ದು, ಪಿ.ಎಸ.ಐ ರವರು ಹಾಗು ಸಿಬ್ಬಂದಿಯವರು ಜೀಪನಿಂದ ಇಳಿದು ಆ ಮನುಷ್ಯ ಹತ್ತಿರವಿದ್ದ ಹೀರೊಹೊಂಡಾ ಮೊಟಾರ್ ಸೈಕಲ್ ನಂ ಕೆಎ-32/ಕೆ-9467 ನೇದ್ದರ ದಾಖಲಾತಿಗಳ ಬಗ್ಗೆ ವಿಚಾರಿಸಲು ಆತನು ಯಾವುದೇ ಸಮರ್ಪಕ ಉತ್ತರ ನೀಡದೇ ಇರುವದರಿಂದ, ಸದರಿಯವನನ್ನು ಕೂಲಂಕೂಶವಾಗಿ ವಿಚಾರಿಸಲು ಅವನು ತನ್ನ ಹೆಸರು ಮಹಿಬೂಬ ಅಲಿ ತಂದೆ ದಸ್ತಗಿರಸಾಬ ಮಾಸಿಲದಾರ ವ|| 43, ಸಾ|| ಕೃಷ್ಣಾ ಕಾಲೋನಿ ಡಬರಾಬಾದ ರೋಡ ಗುಲಬರ್ಗಾ ಅಂತ ತಿಳಿಸಿದನು. ಹೀರೊ ಹೊಂಡಾ ಮೊಟಾರ್ ಸೈಕಲ್ ಪರಿಶೀಲಿಸಿ ನೋಡಲು ಕೆಎ-32/ಕೆ-9467 ಅ|| ಕಿ|| 20,000/-ರೂ ಬೆಲೆಯುಳ್ಳದ್ದನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು, ಆತನು ಮನೆಯ ಮಂದೆ ಇನ್ನೂ ಎರಡು ಮೊಟಾರ್ ಸೈಕಲಗಳಿವೆ ಅಂತ ತಿಳಿಸಿದ್ದರಿಂದ, ಮತ್ತೊಂದು ಹೀರೊ ಹೊಂಡಾ ಸಿಡಿ-100 ಮೊಟಾರ್ ಸೈಕಲ್ ನಂ ಕೆಎ-32/ಹೆಚ್.5996 ಹಾಗು ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ ಕೆಎ-32/ಎಸ್-1273 ನೇದ್ದವುಗಳು ಪಿ.ಎ.ಸ.ಐ ರವರು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಆರೋಪಿ ಹಾಗು ಮುದ್ದೆಮಾಲು ವಶಕ್ಕೆ ತೆಗೆದುಕೊಂಡಿದ್ದರಿಂದ ಠಾಣೆ ಗುನ್ನೆ ನಂ 35/12 ಕಲಂ 41 (ಡಿ), 102 ಸಿ.ಆರ್.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.