POLICE BHAVAN KALABURAGI

POLICE BHAVAN KALABURAGI

21 January 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ಶ್ರೀ,ಶಿವಶರಣಪ್ಪ ತಂದೆ ಶಿವಲಿಂಗಪ್ಪ ಚಿಲೇರಿ ಉ:ಆರ್.ಸಿ.ಎಫ್.ದಲ್ಲಿ ಸಿವಿಲ್ ಕೆಲಸ್ ಸಾ:ಹಂಗನಳ್ಳಿ ತಾ|| ಸೇಡಂ, ಹಾ||ವ||ವಿದ್ಯಾನಗರ ಸೇಡಂರವರು ನಾನು ಮತ್ತು ನಮ್ಮ ಮಾವನಾದ ಗುರುಲಿಂಗಪ್ಪ ನಿಪ್ಪಾಣಿ ಸಾ:ಹಂಗನಳ್ಳಿ ಇಬ್ಬರೂ ಕೂಡಿಕೊಂಡು  ದಿನಾಂಕ: 19-01-2013 ರಂದು ಸಾಯಂಕಾಲ ಮೋಟಾರು ಸೈಕಲ್ ಮೇಲೆ ಕೊಡಂಗಲ್ ನಿಂದ ಸೇಡಂಕ್ಕೆ ಬರುತ್ತಿರುವಾಗ ನನ್ನ ಮುಂದುಗಡೆ ನನ್ನ ಅಕ್ಕನ ಮೊಮ್ಮಗಳ ಗಂಡನಾದ ಪ್ರವೀಣಕುಮಾರ ಹುಸೇನಪೂರ ವಯ-24 ವರ್ಷ ಇತನು ತನ್ನ ಸ್ನೇಹಿತನಾದ ಜೆ.ಚೆನ್ನಬಸಪ್ಪ ತಂದೆ ಚೆನ್ನಪ್ಪ ಜಾಕಾ ಸಾ:ದೌಲತಾಬಾದ (ಆಂದ್ರಪ್ರದೇಶ) ಇತನು ಚಲಾಯಿಸುತ್ತಿದ್ದ ಗ್ಲಾಮರ್ ಮೋಟಾರ ಸೈಕಲ್ ನಂ-ಎಪಿ-22ಎಜೆ-0512 ನೇದ್ದರ ಹಿಂದೆ ಕುಳಿತಿದ್ದನು. ತನ್ನ ಊರಿನಿಂದ ಸೇಡಂಕ್ಕೆ ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗುವ ಸಲುವಾಗಿ ಬರುತ್ತಿದ್ದಾಗ ಕೊಡಂಗಲ್-ಸೇಡಂ ಮುಖ್ಯ ರಸ್ತೆಯ ಬೋರಿಂಗ್ ಹೂಡಾ ಗ್ರಾಮದ ಹತ್ತಿರ ದಿನಾಂಕ:19-01-2013 ರಂದು ರಾತ್ರಿ 08-30 ಗಂಟೆ ಸುಮಾರಿಗೆ ರಂಜೋಳ ಕ್ರಾಸ್ ಹತ್ತಿರ ತಮ್ಮ  ಮೋಟಾರು ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಮೋಟಾರ ಸೈಕಲ್ ಸ್ಕಿಡ್ ಆಗಿ ಕೆಳಗೆ ಬಿದ್ದರು. ಮೋಟಾರು ಸೈಕಲ್ ಚಾಲಕನಾದ ಜೆ. ಚೆನ್ನಬಸಪ್ಪ ಇತನಿಗೆ ಯಾವುದೇ ಗಾಯ ಆಗಿರುವದಿಲ್ಲ. ಪ್ರವಿಣಕುಮಾರ ಇತನಿಗೆ ಭಾರಿಗಾಯಗಳಾದ್ದು, ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಲಾಗಿತ್ತು. ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದನ ಗಾಂಧಿ ಆಸ್ಪತ್ರೆಗೆ ದಿ:20-01-2013 ರಂದು ಸೇರಿಕೆ ಮಾಡಲಾಗಿತ್ತು, ಉಪಚಾರ ಫಲಕಾರಿಯಾಗದೇ ದಿ:21-01-2013 ರಂದು ಬೆಳಗ್ಗೆ 4-00 ಗಂಟೆಗೆ ಪ್ರವೀಣಕುಮಾರ ಇತನು ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಮೋಟಾರು ಸೈಕಲ್ ಚಾಲಕನಾದ ಜೆ. ಚೆನ್ನಬಸಪ್ಪ ಇತನ ವಿರುದ್ಧ ಕ್ರಮ ಜರುಗಿಸಬೇಕು ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ.ಗುನ್ನೆ ನಂ:16/2013 ಕಲಂ, 279, 304 [ಎ] ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ದಿನಾಂಕ: 21-01-2013 ರಂದು ಬೆಳಿಗ್ಗೆ 10-40 ಗಂಟೆ ಸುಮಾರಿಗೆ ತಿರಾಂದಾಜ ಟಾಕೀಜ ಕ್ರಾಸ್ ಹತ್ತಿರ ಇರುವ ಹೂವಿನ ಅಂಗಡಿ ಸಮೀಪ ರೋಡಿನ ಪಕ್ಕದಲ್ಲಿ ನಮ್ಮ ತಂದೆಯವರು ಕುಳಿತಿರುವಾಗ ಇನೋವಾ ಕಾರ ಚಾಲಕನು ಗಾಜಿಪೂರ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿರುತ್ತಾನೆ. ಡಿಕ್ಕಿ ಪಡಿಸಿದ ರಭಸಕ್ಕೆ ನಮ್ಮ ತಂದೆಗೆ ಭಾರಿಗಾಯಗಳಾಗಿದ್ದು, ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಲಾಗಿದೆ, ಉಪಚಾರ ಫಲಕಾರಿಯಾಗದೇ ಬೆಳಗ್ಗೆ 11=15 ಗಂಟೆಗೆ ಮೃತ ಪಟ್ಟಿರುತ್ತಾರೆ.  ನನ್ನ ತಂದೆ ತಿಪ್ಪಣ್ಣಾ ಇವರಿಗೆ ಡಿಕ್ಕಿ ಪಡಿಸಿದ ವಾಹನ ನಂ:ಕೆಎ 32 ಎಮ್ 4556 ನೇದ್ದರ ಇನೊವಾ ಕಾರ ಚಾಲಕ ಮೌನೇಶ್ವರ ಇತನ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ರವಿ ತಂದೆ ತಿಪ್ಪಣ್ಣಾ ಉಳಾಗಡ್ಡಿ ವಯಾ:21 ಸಾ||ಆರ್.ಟಿ.ಓ ಆಫೀಸ್ ಹಿಂದುಗಡೆ ಬಾಬು ಜಗಜೀವನರಾಮ ಕಾಲೋನಿ ಜೊಪಡ ಪಟ್ಟಿ ಸೇಡಂ ರೋಡ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:03/2013 ಕಲಂ: 279, 304 (ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಭೀಮಶಾ ತಂದೆ ಶಿವಲಿಂಗಪ್ಪ ಹಡಪಾದ ವ|| 65 ವರ್ಷಜಾ|| ಹಡಪಾದ||ಒಕ್ಕಲುತನಸಾ||ದುತ್ತರಗಾಂವ ರವರು ನಾವು ದಿನಾಂಕ:19-01-2013 ರಂದು ರಾತ್ರಿ  ನಮ್ಮ ಹಳೆಯ ಮನೆಯಲ್ಲಿದ್ದ ಅಲಮಾರಿಗೆ ಮತ್ತು ಮನೆಗೆ ಕೀಲಿ ಹಾಕಿ ಹೊಸ ಮನೆಯಲ್ಲಿ ಮಲಗಿಕೊಂಡಿದ್ದುದಿನಾಂಕ:20-01—2013 ರಂದು ಬೆಳಿಗ್ಗೆ 06-00 ಗಂಟೆಗೆ ಹಳೆಯ ಮನೆಯ ಬಾಗಿಲು ತೆರೆಯಲು ಬಂದಾಗ ಮನೆಗೆ ಹಾಕಿದ ಕೀಲಿ ಇರಲಿಲ್ಲ ಅಲ್ಲದೆ ಬಾಗಿಲು ತೆರೆದಿದ್ದು ಒಳಗೆ ಹೋಗಿ ನೋಡಲು ಅಲಮಾರಿಯ ಕೀಲಿ ಮುರಿದು ಬಂಗಾರದ ಆಭರಣಗಳು 3,00,000/- ರೂಪಾಯಿಗಳದ್ದು ಮತ್ತು ನಗದು ಹಣ 25,000/- ಹೀಗೆ ಒಟ್ಟು  3,25,000/- ರೂ. ಗಳದ್ದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:06/2013 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಭಂಕೂರ ಗ್ರಾಮದ ಗಣೇಶ ಗುಡಿಯ ಹತ್ತಿರವಿರುವ ಬಾಬಾ ಪಟೇಲರವರ ಪಾಲೀಶ ಮಶೀನ ಎದರುಗಡೆ ಸಾರ್ವಜನಿಕ ಸ್ಥಳದಲ್ಲಿ ದಿನಾಂಕ:20-01-2013 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ಕೆಲವು ಜನರು ಕುಳಿತು ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತಾ ಭಾತ್ಮಿ ಬಂದ ಮೇರೆಗೆ ಮಾನ್ಯ ಡಿವೈಎಸ್‌ಪಿ ಸಾಹೇಬ ಶಹಾಬಾದರವರ ಮಾರ್ಗದರ್ಶನದಲ್ಲಿ ಸುನೀಲಕುಮಾರ ಎಸ್‌.ನಾಯಕ ಪಿಎಸ್‌ಐ (ಅ&ವಿ) ಹಾಗೂಸಿಬ್ಬಂದಿಯವರಾದಯೇಜಕಲ್‌,ಗುಂಡಪ್ಪಾ,ಪರಶುರಾಮ,ಬಸವರಾಜ,ಸುಭಾಸ,ಬಸವಣಪ್ಪಾ,ರವರೊಂದಿಗೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ ಬಾಬಾ ಪಟೇಲ ತಂದೆ ಲಾಡ್ಲೇ,ವೆಂಕಟೇಶ ತಂದೆ ಅಂಬಾಜಿರಾವ ಪವಾರ, ರಾಮಣ್ಣಾ ತಂದೆ ಶಿವರಾಯ ಸರಡಗಿ, ಪ್ರಕಾಶ ತಂದೆ ಚನ್ನವೀರಪ್ಪಾ ಪಾಟೀಲ,ಗೋಪಿ ತಂದೆ ನಾಗಪ್ಪಾ ರಾವೂರ, ಜೀತೆಂದ್ರ ತಂದೆ ನಿಂಗಪ್ಪಾ ಕಂಟಿ ಸಾ|| ಎಲ್ಲರೂ ಹೌಸಿಂಗ ಸೊಸೈಟಿ ಶಾಂತನಗರ ಭಂಕೂರ ರವರನ್ನು ವಶಕ್ಕೆ ತೆಗೆದುಕೊಂಡು ನಗದು ಹಣ  12,110/- ರೂಪಾಯಿಗಳು ನಗದು ಹಣ  ಮತ್ತು ಇಸ್ಪೀಟ ಎಲೆಗಳು  ಜಪ್ತಿ ಪಡಿಸಿಕೊಂಡಿದ್ದರಿಂದ ಶ್ರೀ ರಘು.ಎನ್‌ ಪಿಎಸ್‌ಐ (ಕಾ&ಸು) ಶಹಾಬಾದ ನಗರ ಪೊಲೀಸ ರವರು ಠಾಣೆ ಗುನ್ನೆ ನಂ: 08/2013 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.