POLICE BHAVAN KALABURAGI

POLICE BHAVAN KALABURAGI

22 May 2014

Gulbarga District Reported Crimes

ಅಪಘಾತ ಪ್ರಕರಣಗಳು :
ಮಾದನ ಹಿಪ್ಪರಗಾ ಠಾಣೆ : ಶ್ರೀ.ಅಮಸಿದ್ದ ತಂದೆ ಶ್ರೀಮಂತ ನಿಂಬಾಳ  ಸಾ:ಮಿರಜಗಿ  ತಾ:ಅಕ್ಕಲಕೋಟ ಜಿ: ಸೋಲಾಪೂರ ಇವರು ದಿನಾಂಕ 21-05-2014 ರಂದು ಸಾಯಂಕಾಲ 06:00 ಗಂಟೆಯ ಸುಮಾರಿಗೆ ಹಡಲಗಿ-ನಿಂಬಾಳ ರಸ್ತೆಯ ಬಸವಣ್ಣ ಗುಡಿಯ ಹತ್ತಿರ ತಮ್ಮ ಮೋಟರ್ ಸೈಕಲ್ ನಂ : MH :13  BP: 2099 ನೇದ್ದು ಚಲಾಯಿಸಿಕೊಂಡು ಬರುತ್ತಿದ್ದಾಗ ಎದುರಿನಿಂದ ಜೀಪ್ ನಂ:MH:13 AZ:6825 ನೇದ್ದರ ಚಾಲಕನು ಅತೀ ವೇಗದಿಂದ ಮತ್ತು ಅಲಕ್ಷ್ಯತನದಿಂದ  ಚಲಾಯಿಸಿಕೊಂಡು ಬಂದು ನನ್ನ ತಮ್ಮನ ಮೋಟರ್ ಸೈಕಲಿಗೆ ಡಿಕ್ಕಿ ಪಡಿಸಿ ಅಫಘಾತ ಮಾಡಿರುತ್ತಾನೆ. ಆದ್ದರಿಂದ ನನ್ನ ತಮ್ಮ ಸುರೇಶನಿಗೆ ಬಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಮೋಟರ್ ಸೈಕಲ್ ಹಿಂದೆ ಕುಳಿತ ಕಾಶಿನಾಥ ಪೂಜಾರಿಗೆ ಹಾಗೂ ಭೂತಾಳಿ ನಿಂಬಾಳ ಇವರಿಗೆ ಬಾರಿ ರಕ್ತಗಾಯ ವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಅಫಜಲಪೂರ ಠಾಣೆ : ದಿನಾಂಕ: 21-05-2014 ರಂದು 10:45 ಪಿ.ಎಮ್ ಸುಮಾರಿಗೆ ಶ್ರೀ ಸಿದ್ದಣ್ಣ ತಂದೆ ಶಂಕರ ಮುಡಂಗಿ ಸಾ: ಅಫಜಲಪೂರ ರವರು ಊಟ ಮಾಡಿ ವಾಕಿಂಗ್ ಮಾಡುತ್ತಾ ಬಸವೇಶ್ವರ ವೃತ್ತದ ಹತ್ತಿರ ಇದ್ದಾಗ ಗುಲಬರ್ಗಾ ರಸ್ತೆ ಕಡೆಯಿಂದ ಒಂದು ಮೊಟಾರ ಸೈಕಲ್ ಬರುತ್ತಿದ್ದು ಅದರ ಸವಾರನು ಸದರಿ ಮೋಟಾರ ಸೈಕಲ್ ನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಿದ್ದು ಮಹಾಂತೇಶ್ವರ ಪೇಟ್ರೊಲ್ ಪಂಪ್ ಎದುರುಗಡೆಯ ರಸ್ತೆಯ ಎಡಗಡೆಗೆ ಒಮ್ಮೆಲೆ  ಮೊಟಾರ ಸೈಕಲ್ ನ್ನು ಕಟ್ ಮಾಡಿದ್ದರಿಂದ ಮೊಟಾರ ಸೈಕಲ್ ಚಾರಿ ಕೆಳಗಡೆ ಬಿದ್ದಿತ್ತು ಆಗ ನಾನು ಸದರಿ ಮೊಟಾರ ಸೈಕಲ್ ಹತ್ತಿರ ಹೋಗಿ ನೋಡಲಾಗಿ ಸದರಿ ಮೊಟಾರ ಸೈಕಲ್ ಚಾಲಕನು ನನ್ನ ಅಳಿಯ ನಿದ್ದು  ಅವನ ಹೆಸರು ಅಶೋಕ ತಂದೆ ಸಿದ್ದಣ್ಣ ರಾಚುಗೌಡ ಸಾ: ಅಫಜಲಪೂರ ಅಂತ ಇದ್ದು ಅವನ ಬಲಗಡೆಯ ಮೆಲಕಿನ ಹತ್ತಿರ ಬಾರಿ ರಕ್ತಗಾಯವಾಗಿದ್ದು ಮುಖದ ಮೇಲೆ ತರಚಿದ ಗಾಯಗಳು ಆಗಿರುತ್ತವೆ. ಸದರಿ ಮೊಟಾರ ಸೈಕಲ್ ಮೇಲೆ ಇನ್ನೊಬ್ಬ ಕುಳಿತಿದ್ದು ಅವನು ಮೊಟಾರ ಸೈಕಲ್ ಬಿದ್ದನಂತರ ಓಡಿ ಹೋಗಿರುತ್ತಾರೆ. ಅವನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ. ಸದರಿ ಮೊಟಾರ ಸೈಕಲ್ ನಂ. ನೋಡಲಾಗಿ ಎಮ್.ಹೆಚ್-12 ಜೆವೈ-3364 ಅಂತ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ :  ದಿನಾಂಕ 21-05-2014  ರಂದು ಸಂಜೆ ಸಮಯದಲ್ಲಿ  ಗ್ರಾಮೀಣ ವೃತ್ತದಲ್ಲಿ ಬರುವ ಮಾಹಾಗಾಂವ  ಪೊಲೀಸ ಠಾಣೆ ಸರಹದ್ದಿನಲ್ಲಿ  ಪೆಟ್ರೋಲಿಂಗ ಕರ್ತವ್ಯ ನಾನು ಮತ್ತು ಚಾಲಕ ಎಪಿಸಿ 94 ಬಂಡೆಪ್ಪ  ಸಂಜೆ 6-30 ಗಂಟೆ  ಸುಮಾರಿಗೆ  ಅಂಕಲಗಿ ಗ್ರಾಮದ   ಬಸಸ್ಟ್ಯಾಂಡ  ಹತ್ತಿರ ಬಂದು ನಿಂತಾಗಆಗ ಗುಲಬರ್ಗಾ  ಕಡೆಯಿಂದ ಒಬ್ಬ ಕ್ರೋಜರ ಚಾಲಕ  ಕ್ರೋಜರನಲ್ಲಿ ಮಾನವನ ಜೀವಕ್ಕೆ ಅಪಾಯವಾಗುವ  ರೀತಿಯಲ್ಲಿ ಪ್ರಯಾಣಿಕರನ್ನು  ಒಳಗಡೆ ಕೂಡಿಸಿಕೊಂಡು ಮತ್ತು ಪುಟ್ಟ್ ರೆಸ್ಟ್ ಮೇಲೆ ನಾಲ್ಕು ಜನ ಪ್ರಯಾಣಿಕರನ್ನು ನಿಲ್ಲಿಸಿಕೊಂಡು ಅತಿವೇಗ ಮತ್ತು  ಅಲಕ್ಷತ ನದಿಂದ  ನಡೆಸುತ್ತಾ ಬರುವುದನ್ನು ನೋಡಿ ನಾನು ಮತ್ತು  ಚಾಲಕ ಬಂಡೆಪ್ಪ ಸದರ ಕ್ರೋಜರ ಚಾಲಕನಿಗೆ ನಿಲ್ಲಿಸುವಂತೆ  ಕೈ ಸನ್ನೆ ಮಾಡಿದರೂ ಕೂಡಾ ಕ್ರೋಜರ ಚಾಲಕ ನಿಲ್ಲಿಸದೇ ಸ್ವಲ್ಪಮುಂದೆ ಹೋಗಿ ಕ್ರೋಜರ ನಿಲ್ಲಿಸಿ ಅಲ್ಲಿಂದ  ಓಡಿ  ಹೋದನು. ಅದರಂತೆ ಒಳಗಡೆ ಪ್ರಯಾಣಿಕರು ಮತ್ತು ಪುಟ್ಟ್ ರೆಸ್ಟ್  ಮೇಲೆ ನಿಂತ ಜನರ ಹೆಸರು ವಿಳಾಸ ವಿಚಾರಿಸಲೂ   ಅವರು ತಮ್ಮ  ತಮ್ಮ ಹೆಸರು ಹೇಳದೇ ಹಾಗೆಯೇ ಮತ್ತೊಂದುವಾಹನ ಏರಿ  ಅಲ್ಲಿಂದ  ಹೊರಟು ಹೋದರು.  ನಂತರ  ಕ್ರೋಜರ  ವಾಹನ  ನಂಬರ ನೋಡಲಾಗಿ ಕೆಎ 48 1642 ಅಂತಾ ಇರುತ್ತದೆ.  ಸದರ ಚಾಲಕನಿಗೆ ಎದುರು ಬಂದಲ್ಲಿ ನೋಡಿದರೆ ಗುರುತಿಸುತ್ತೇನೆ. ಸದರ ಕ್ರೋಜರ ಕೆಎ 48 1642 ಚಾಲಕ ಮಾನವನಜೀವಕ್ಕೆ ಅಪಾಯವಾಗುವ ರೀತಿಯಲ್ಲಿ  ಪ್ರಯಾಣಿಕರನ್ನು  ಒಳಗಡೆ  ಮತ್ತು ಪುಟ್ಟ್ ರೆಸ್ಟ ನಿಲ್ಲಿಸಿಕೊಂಡುಪರ್ಮಿಟ ನಿಯಮ  ಉಲ್ಲಂಘನೆ ಮಾಡಿದ್ದರಿಂದ ಕ್ರೋಜರ ಕೆಎ 48 1642  ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸತಕ್ಕದ್ದು ಅಂತಾ ಶ್ರೀ ಡಿ.ಜಿ.ರಾಜಣ್ಣಾ ಸಿ.ಪಿ.ಐ. ಗ್ರಾಮೀಣ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಂಗಾವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.