POLICE BHAVAN KALABURAGI

POLICE BHAVAN KALABURAGI

26 October 2012

GULABARGA DISTRICT REPORTD CRIMES


ಕೊಲೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:ದಿನಾಂಕ:26-10-2012 ರಂದು ಮುಂಜಾನೆ 9-30 ಗಂಟೆ ಸುಮಾರಿಗೆ ನಮ್ಮ ಊರಿನ ಪಂಚಾಯಿತಿ ಕಟ್ಟೆ ಹತ್ತಿರ ಇದ್ದಾಗ ಗ್ರಾಮದ ಜನರು ಹೀರಿಯಾಳ ರಸ್ತೆಯ ಹಿರೀಗೆಪ್ಪ ಪೂಜಾರಿ ಇವರ ಹೊಲದ ಹತ್ತಿರ ನೀರು ಹರಿಯುವ ಪೈಪಿನ ಜಾಗದಲ್ಲಿ ಅಪರಿಚಿತ ಹೆಣ್ಣು ಮಗಳ ಕೊಲೆಯಾಗಿ ಬಿದ್ದಿರುವ ಬಗ್ಗೆ ಮಾತುಡುವದನ್ನು ಕೇಳಿ ಸ್ಥಳಕ್ಕೆ ಹೋಗಿ ನೋಡಲು ಅಪರಿಚಿತ ಹೆಣ್ಣು ಮಗಳು ವಯಸ್ಸು ಅಂದಾಜು 35 ರಿಂದ 40 ವರ್ಷ, ಎತ್ತರ 5  ಪೀಟ 3 ಇಂಚ್,  ಕೆಂಪು ಬಣ್ಣ, ದಪ್ಪ ಮೈಕಟ್ಟು , ಹೂವಿನ ಸೀರೆ, ನೀಲಿ ಬಣ್ಣದ ಲಂಗ, ಕಾಲಿನಲ್ಲಿ ಕಾಲುಂಗರ ಹೊಂದಿರುವ ಅಪರಿಚಿತ ಹೇಣ್ಣು ಮಗಳು ಬಾಳೆ ಗೀಡದ ಸೀಪ್ಪೆ ಕೆಳಗೆ ಕೊಲೆಯಾಗಿ ಬಿದ್ದಿದ್ದು ಕಂಡು ಬಂದಿರುತ್ತದೆ. ಈ ಕೊಲೆಯು ದಿನಾಂಕ:25-10-2012 ರ ರಾತ್ರಿ 10-00 ಗಂಟೆಯಿಂದ ದಿನಾಂಕ:26-10-2012 ರ ಬೆಳಿಗಿನ ಜಾವದಲ್ಲಿ ನಡೆದಿರಬಹುದು ಅಂತಾ ಶ್ರೀ ರಾಜಶೇಖರ ತಂದೆ ಭೀರಣ್ಣ ಬಂಡಗಾರ ಉ|| ತಾ.ಪಂ. ಸದಸ್ಯ ಸಾ|| ಉಡಚಣಹಟ್ಟಿ ಗ್ರಾಮ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:186/2012 ಕಲಂ. 302, 201 ಐ ಪಿ ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಮೋಟಾರ ಸೈಕಲ ಕಳ್ಳತನ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀ ರಾಜಶೇಖರ ತಂದೆ ಗುರಲಿಂಗಪ್ಪ ಹೊಸಮನಿ ಸಾ|| ವಿವೇಕಾನಂದ ನಗರ ಅಳಂದ ರೋಡ ಗುಲಬರ್ಗಾವರು ನಾನು ದಿನಾಂಕ:14-10-2012 ರಂದು ರಾತ್ರಿ 7-30 ಗಂಟೆಯ ಸಮಯದಲ್ಲಿ ನ್ನ ಮನೆಯ ಮುಂದೆ ನನ್ನ ಹಿರೊ ಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂಬರ ಕೆಎ-32/ಎಲ್-709, ನೇದ್ದನ್ನು ನಿಲ್ಲಿಸಿದ್ದು  ಊಟ ಮಾಡಿಕೊಂಡು ರಾತ್ರಿ 8 ಗಂಟೆ ಸುಮಾರಿಗೆ ಹೊರಗಡೆ ಬಂದಾಗ ನನ್ನ ಮೊಟಾರ್ ಸೈಕಲ್ ನಿಲ್ಲಿಸಿದ ಸ್ಥಳದಲ್ಲಿ ಕಾಣಿಸಲಿಲ್ಲಾ. ಎಲ್ಲಾ ಕಡೆಗು ಹುಡುಕಾಡಿದರೂ ನ್ನ ಮೊಟಾರ್ ಸೈಕಲ್ ಪತ್ತೆಯಾಗಿರುದಿಲ್ಲ ಯಾರೋ ಕಳ್ಳರು ಮೋಟಾರ ಸೈಕಲ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:78/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ ಶ್ರೀ ಆಕಾಶ ತಂದೆ ಅನಿಲಕುಮಾರ ಕಲಶಟ್ಟಿ ವ||18,ಸಾ|| ಅಳಂದ ಕಾಲೋನಿ ಗುಲಬರ್ಗಾ ನಾನು ದಿನಾಂಕ 24-10-12 ರಂದು ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ದೇವಿ ನಗರ ಬಡಾವಣೆಯಲ್ಲಿ ದೇವಿ ಮೆರವಣಿಗೆ ಇದ್ದ ಪ್ರಯುಕ್ತ,ಡ್ಯಾನ್ಸ್ ಮಾಡುತ್ತಿದ್ದಾಗ, ನಮ್ಮ ಬಡಾವಣೆಯ ಕಿರಣ ತಂದೆ ಮಲ್ಲಿಕಾರ್ಜುನ,ರವಿ,ಅನಿಲ್  ಮೂವರು ಕೂಡಿಕೊಂಡು ಡ್ಯಾನ್ಸ್ ಮಾಡುತ್ತಿದ್ದ ನನ್ನ ಮೈಮೇಲೆ ಬೀಳುತ್ತಿದ್ದಾಗ ನಾನು ಯಾಕೆ ಮೈಮೇಲೆ ಬೀಳುತ್ತಿದ್ದರಿ ಅಂತ ಕೇಳಿದ್ದಕ್ಕೆ, ಕಿರಣ, ರವಿ ಮತ್ತು ಅನಿಲ್ ಮೂವರು ಕೂಡಿಕೊಂಡು ಕೈಮುಷ್ಠಿ ಮಾಡಿ ನನಗೆ ಎದೆಯ ಮೇಲೆ, ಕುತ್ತಿಗೆಯ ಮೇಲೆ ಹಾಗು ಬೆನ್ನಿನ ಮೇಲೆ ಹೊಡೆಯುತ್ತಿದ್ದಾಗ, ಅದೇ ಸಮಯಕ್ಕೆ ಅಲ್ಲಿಯೇ ಇದ್ದ ನಮ್ಮ ಕಾಲೋನಿಯ ಶಿವು ಯಲಗಾರ ಹಾಗು ರಾಜು ಇವರುಗಳು ಜಗಳ ಬಿಡಿಸಿ ಕಳುಹಿಸಿದ್ದು, ಸದರಿ ಮೂರು ಜನರು ನನಗೆ ಹೊಡೆದಿದ್ದರಿಂದ ನನಗೆ ಗುಪ್ತಗಾಯಗಳಾಗಿದ್ದು,ನನಗೆ ಕೈಯಿಂದ ಹೊಡೆಬಡೆ ಮಾಡಿದ ಕಿರಣ ತಂದೆ ಮಲ್ಲಿಕಾರ್ಜುನ,ರವಿ,ಅನಿಲ್  ಇವರುಗಳ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:77/2012 ಕಲಂ 323,324,ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಂಗಳ ಸೂತ್ರ ದರೋಡೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀಮತಿ ರೇಣುಕಾದೇವಿ ಗಂಡ ಗಣಪತಿ ಬಬಲಾದ ವ:  35 ವರ್ಷ ಜಾತಿ: ಹರಿಜನ ಉ: ಮನೆ ಕೆಲಸ ಸಾ: ಕರ್ನಾಟಕ ಹೈ ಸ್ಕೂಲ್ ಹತ್ತಿರ ಘಾಟಗೇ ಲೇಔಟ ಗುಲಬರ್ಗಾ ರವರು ನಾನು ಮತ್ತು ನನ್ನ ಗಂಡ ಇಬ್ಬರೂ ಕೂಡಿಕೊಂಡು ದಿನಾಂಕ:25-12-2012 ರಂದು ರಾತ್ರಿ  8-50  ಗಂಟೆ ಸುಮಾರಿಗೆ ನಮ್ಮ ಚಿಕ್ಕಮ್ಮಾ ಜಯಶ್ರೀ ರವರಿಗೆ ಬನ್ನಿ ಕೊಟ್ಟು ಮರಳಿ ಮನೆಗೆ ಹೋಗುತ್ತಿರುವಾಗ  ಘಾಟಗೇ ಲೇಔಟ ಬುದ್ದ ವಿಹಾರದ ಹತ್ತಿರ ಸಿ.ಸಿ ರಸ್ತೆ ಮೇಲೆ ಸೀರೆ ಸೆರಗು ಸರಿಪಡಿಸುತ್ತಿರುವಾಗ ಎದುರುಗಡೆಯಿಂದ ಒಬ್ಬ ಮೋಟಾರ ಸೈಕಲ್ ಸವಾರನು ಮುಖಕ್ಕೆ ಬಟ್ಟಿ ಕಟ್ಟಿಕೊಂಡು ಬಂದವನೇ ಒಮ್ಮೇಲೆ ಕೊರಳಲ್ಲಿ ಕೈ ಹಾಕಿ 4 ತೊಲೆ ಬಂಗಾರದ ಎರಡು ಎಳೆವುಳ್ಳ ಮಂಗಳಸೂತ್ರವನ್ನು ಕಿತ್ತುಕೊಂಡು ಹೋಗಿರುತ್ತಾನೆ.ಬಡಾವಣೆಯಲ್ಲಿ ಕರೆಂಟಹೋಗಿರುವುದ್ದರಿಂದ ಕತ್ತಲಲ್ಲಿ ಮೋಟಾರ ಸೈಕಲ್ ನಂಬರ,ಅವನ ಮುಖ ಸರಿಯಾಗಿ ಕಾಣಿಸಿರಲಿಲ್ಲಾ. ತೆಳ್ಳನೆ ಮೈಕಟ್ಟಿನವನಿದ್ದು ಬಿಳಿ ಶರ್ಟ ಧರಿಸಿದ್ದನು. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:91/2012 ಕಲಂ. 392 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.