POLICE BHAVAN KALABURAGI

POLICE BHAVAN KALABURAGI

17 July 2013

GULBARGA DIST REPORTED CRIMES

ಮಳಖೇಡ ಪೊಲೀಸ್ ಠಾಣೆ:
ಹಲ್ಲೆ ಪ್ರಕರಣ :
ದಿನಾಂಕ 17/07/2013 ರಂದು ಗೌಡಪ್ಪ ತಂದೆ ಬಸವಣಪ್ಪ ಕೊಲಕುಂದಿ ಸಾ.ತೊಟ್ಟನಳ್ಳಿ ತಾ. ಸೇಡಂ ರವರ ಮರಳಿನ ಲಾರಿಯನ್ನು ತಹಸಿಲ್ದಾರ ರವರು ಜಪ್ತಿ ಮಾಡಿದ ಕಾರಣ ಯಾರೋ ಉದ್ದೇಶ ಪೂರ್ವಕ ಪೋನ್ ಮಾಡಿ ತನ್ನ ಮರಳಿನ ಲಾರಿಯನ್ನು ಜಪ್ತಿ ಮಾಡಿಸಿದ್ದಾರೆ ಎಂದು ಬೈಯುತ್ತಿದ್ದಾಗ 1) ಸೂರ್ಯಕಾಂತ ತಂದೆ ಅಣ್ಣಾರಾವ ಮುದಕನಳ್ಳಿ2) ಚಂದ್ರಕಾಂತ ತಂದೆ ಅಣ್ಣಾರಾವ ಮುದಕನಳ್ಳಿ ರವರು ಬಂದು ನೀನು ನಮಗೆ ಬೈಯುತ್ತಿದ್ದಿಯಾ ಎಂದು ಹೇಳುತ್ತಾ  ಅಕ್ರಮವಾಗಿ ತಡೆದು ಅವಾಚ್ಯವಾಗಿ ಬೈದು ಹೊಡೆ ಮಾಡಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ :
ದಿನಾಂಕ 17/07/2013 ರಂದು ಗೌಡಪ್ಪ ತಂದೆ ಬಸವಣಪ್ಪ ಕೊಲಕುಂದಿ ಸಾ.ತೊಟ್ಟನಳ್ಳಿ ತಾ. ಸೇಡಂ ರವರ ಮರಳಿನ ಲಾರಿಯನ್ನು ತಹಸಿಲ್ದಾರ ರವರು ಜಪ್ತಿ ಮಾಡಿದ ಕಾರಣ ಗೌಡಪ್ಪನು ಸೂರ್ಯಕಾಂತ ತಂದೆ ಅಣ್ಣಾರಾವ ಮುದಕನಳ್ಳಿಯ ಅಣ್ಣನೇ ತಹಸಿಲ್ದಾರರಿಗೆ ಫೋನ್ ಮಾಡಿದ್ದು ಎಂದು ಅವಾಚ್ಯ ಶಬ್ದಗಳಿಂದ ಬಯ್ಯುತ್ತಿರುವಾಗ ಸೂರ್ಯಕಾಂತ ತಂದೆ ಅಣ್ಣಾರಾವ ಮುದಕನಳ್ಳಿಯು ಗೌಡಪ್ಪನಿಗೆ ನಮ್ಮ ಅಣ್ಣನಿಗೆ ವಿನಾಃಕಾರಣ ಏಕೆ ಬಯ್ಯುತ್ತಿರುವೆ  ಎಂದು ಕೇಳಲು 1) ಗೌಡಪ್ಪ ತಂದೆ ಬಸವಣಪ್ಪ ಕೊಲಕುಂದಿ ಮತ್ತು 2) ಗೌಡಪ್ಪ ತಂದೆ ಬಸವಣಪ್ಪ ಕೊಲಕುಂದಿ ರವರುಗಳು ವಿನಾ ಕಾರಣ ಅವಾಚ್ಯವಾಗಿ ಬೈದು ಹೊಡೆ ಮಾಡಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಪತ್ನಿಗೆ ಕಿರುಕುಳ ಪ್ರಕರಣ:

ದಿನಾಂಕ 15/07/2013  ರಂದು ಸುನಿತಾ ಗಂಡ ಮಹಾಂತೇಶ ತಳವಾರ  ರವರಿಗೆ ಅವಳ ಗಂಡನಾದ ಮಹಾಂತೇಶ ತಂದೆ ದೇವಪ್ಪ ತಳವಾರ ಸಹಶಿಕ್ಷಕ ಸಾ: ಸುಂಬಡ ತಾ: ಜೇವರ್ಗಿ ಹಾ.ವ. ಮಳಖೇಡ ಈತನು ಸುನಿತಾಳ  ಮಳಖೇಡದಲ್ಲಿರುವ  ಮನಗೆ ಬಂದು ಸುನಿತಾಳಿಗೆ ಅವಾಚ್ಯವಾಗಿ ಬೈದು ಕೂದುಲು ಹಿಡಿದು  ಎಳೆದಾಡಿ ಕೈಯಿಂದ ಹೊಡೆ ಬಡೆ ಮಾಡಿ ಹಾಗು ಮಾನಸಿಕ ಹಾಗು ದೈಹಿಕ ಕಿರುಕುಳ ನೀಡಿದ ಬಗ್ಗೆ ಸಲ್ಲಿಸಿದ ದೂರು ಸರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.