POLICE BHAVAN KALABURAGI

POLICE BHAVAN KALABURAGI

22 January 2014

GULBARGA DIST REPORTED CRIMES

ಮಟಕಾ ಜೂಜಾಟ ನಿರತ ವ್ಯಕ್ತಿಯ ಬಂಧನ :
ಫರತಾಬಾದ ಠಾಣೆ : ದಿನಾಂಕ 21-01-2014 ರಂದು ಬಸನಾಳ ಗ್ರಾಮದಲ್ಲಿ ಒಬ್ಬ ಮನುಷ್ಯ ದ್ಯಾವಮ್ಮಾ ಆಯಿ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ದೈವ ಲಿಲೆಯ ಮಟಕಾ ಜೂಜಾಟದ ಅಂಕಿಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಭಾತ್ಮಿ ಮೇರೆಗೆ  ಪಿ ಎಸ್ ಐ ಫರತಾಬಾದ ರವರು ಸಿಬ್ಬಂದಿ ಮತ್ತು ಪಂಚರ ಸಮಕ್ಷಮ ಸ್ಥಳಕ್ಕೆ ಹೋಗಿ ದೈವಲೀಲೆಯ ಮಟಕಾ ಜೂಜಾಟದ ನಂಬರಗಳನ್ನು ಬರೆದುಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಮಟಕಾ ಅಂಕಿಗಳನ್ನು ಬರೆದು ಕೊಳ್ಳುತ್ತಿದ್ದ ಮನುಷ್ಯನನ್ನು ಹಿಡಿದಿದ್ದು ಅಲ್ಲಿದ್ದ ಸಾರ್ವಜನಿಕರು ಓಡಿ ಹೋಗಿರುತ್ತರೆ ಸದರಿ ವ್ಯಕ್ತಿಯನ್ನು ಪಿ.ಎಸ್.ಐ ಸಾಹೇಬರು ವಿಚಾರಿಸಿ ಚೇಕ ಮಾಡಲಾಗಿ ತನ್ನ ಹೆಸರು ಮಾರುತಿ ತಂದೆ ಚಂದ್ರಶ್ಯಾ ಅಂಕಲಗಿ ಸಾ:ಬಸನಾಳ ಅಂತಾ ತಿಳಿಸಿದ್ದು, ಈತನ ಅಂಗ ಶೋಧನೆ ಮಾಡಲಾಗಿ  1. ಒಂದು ಮಟಕಾ ನಂಬರ ಬರೆದ ಚೀಟಿ ಅ:ಕಿ:00=00 ರೂ, 2. ಒಂದು ಬಾಲ್‌ ಪೆನ್‌ ಅ:ಕಿ:00=00 ರೂ. 3. ಮಟಕಾ ಅಂಕಿಯನ್ನು ಬರೆದುಕೊಂಡಿದ್ದರ ನಗದು ಹಣ 4110=00 ರೂ.  4. ಒಂದು ಮೊಬೈಯಲ್ ಫೊನ್ ಅ.ಕಿ. 500=00 ರೂ. ಸಿಕ್ಕಿದ್ದು ಸದರಿಯವುಗಳನ್ನು ಪಂಚರಸಮಕ್ಷಮ ಜಪ್ತಿಮಾಡಿಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಮಾಹತ್ಮಾ ಬಸವೇಶ್ವರ ನಗರ ಠಾಣೆ :ಶ್ರೀ ಖಾಜಿ ಮಹ್ಮದ ಮುಜೀಬುದ್ದಿನ ಸಾಃ ಬಸವೇಶ್ವರ ಕಾಲೋನಿ ಗುಲಬರ್ಗಾ ಇವರು ದಿನಾಂಕ 20-01-2014 ರಂದು 04:00 ಪಿ.ಎಂ. ಕ್ಕೆ ಒಂದು ಟಾಟಾ ಸುಮೋದಲ್ಲಿ ಖಾಜಿ ನಿಜಾಮೂದ್ದಿನ ಮತ್ತು ಎ.ಆರ್ ಪಾಶಾ ಸಂಗಡ ಇನ್ನೂ 06 ಜನರು ಬಂದಿದ್ದು ನನ್ನ ಮನೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಖಾಜಿ ನಿಜಾಮೂದ್ದಿನ ಇತನು ಅವಾಚ್ಯ ಶಬ್ದಗಳಿಂದ ಬೈದು  ನನ್ನನ್ನು ಅಸಿಸ್ಟಂಟ್ ಖಾಜಿಯಿಂದ ತೆಗೆದು ಹಾಕಿ ರಜಾಕ್ ಪಾಶಾ ಇತನನ್ನು ಅಸಿಸ್ಟಂಟ್ ಖಾಜಿ ಅಂತಾ ನೇಮಕ ಮಾಡಿಕೊಂಡಿದ್ದೀ ಅವನನ್ನು ಬಿಡಿಸಿ ನನ್ನನ್ನು ನೇಮಕ ಮಾಡಿಕೊ ಅಂದಾಗ ನೀನು ರೇಪ್ ಪ್ರಕರಣದಲ್ಲಿ ಭಾಗಿಯಾಗಿದ್ದಿ ನನ್ನ ಜೊತೆ ಇರುವರು ಒಳ್ಳೆಯವರಾಗಿರಬೇಕು ನೀನು ಬೇಡ ಅಂತಾ ಅಂದಿದಕ್ಕೆ ಆಗ ಎ.ಆರ್ ಪಾಶಾ ಇತನು ಏ ಲೌಡೆಕೆ ನೀನು ಇವನನ್ನು ಅಸಿಸ್ಟಂಟ್ ಖಾಜಿ ಅಂತಾ ನೇಮಕ ಮಾಡಿಕೊಳ್ಳದಿದ್ದರೇ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ನೀನು ಗುಲಬರ್ಗಾದಿಂದ ಸುರಪೂರಕ್ಕೆ ಹೇಗೆ ತಿರುಗಾಡುತ್ತಿ ನೋಡಿಕೊಳ್ಳುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀಮತಿ ಶರಣಮ್ಮಾ ಗಂಡ ಸಿದ್ರಾಮಪ್ಪ ತಳಕೇರಿ ಸಾ :ಬಸವನ ಸಂಗೋಳಗಿ ತಾ:ಆಳಂದ ಮತ್ತು ನನ್ನ ಗಂಡನಾದ ಸಿದ್ರಾಮಪ್ಪ ಇಬ್ಬರು ಕೂಡಿ ನಮ್ಮ ಹೊಲದಲ್ಲಿಯ ಹುಲ್ಲು ತರಬೇಕೆಂದು ನಮ್ಮ ಹೊಲಕ್ಕೆ ಹೋದಾಗ ನಮ್ಮ ಹೊಲದಲ್ಲಿಯ ಹುಲ್ಲಿನ ಭಣವಿಗೆ ಉರಿ ಹತ್ತಿ ಸುಡುತ್ತಿತು ನಾವು  ಹತ್ತಿರ ಹೋಗಿ ನೋಡಲಾಗಿ ನಮ್ಮ ಗ್ರಾಮದ 1. ಅಂಬಾರಾಯ ತಂದೆ ರಾಮಣ್ಣ ತಳಕೇರಿ 2. ಸೂರ್ಯಕಾಂತ ತಂದೆ ರಾಮಣ್ಣ ತಳಕೇರಿ 3. ರಾಮಣ್ಣ ತಂದೆ ಬಸಪ್ಪ ತಳಕೇರಿ ಮತ್ತು 4. ಸಿದ್ದಮ್ಮ  ಗಂಡ ರಾಮಣ್ಣ ತಳಕೇರಿ ಇವರುಗಳು ಸುಡುತ್ತಿದ್ದು ಹುಲ್ಲಿನ ಭಣಮಿಯ ಪಕ್ಕದಲ್ಲಿ ನಿಂತು ನಗುತ್ತಿದ್ದರು. ಆಗ ನಾಣು ಮತ್ತು ನನ್ನ ಗಂಡ ನೋಡಿ ಅವರ ಹತ್ತಿರ ಹೋದಾಗ ಅವರುಗಳ ನಮಗೆ ಅವಾಚ್ಯ ಶಬ್ದಗಳೀಂದ ಬೈದು ನಿಮ್ಮ ಹುಲ್ಲಿನ ಭಣಮಿಗೆ ನಾವೆ ಬೆಂಕಿ ಹಚ್ಚಿ ಸುಟ್ಟಿದ್ದೇವೆ ನಿವೇನು ಕಿತಕೊತಿರಿ ಕಿತಕೊಳ್ಳಿ ಅಂತಾ ಅವಾಚ್ಯ ಶಬ್ದಗಳಿಂದ  ನಮಗೆ ಬೈಯುತ್ತಾ ಓಡಿ ಹೋರುತ್ತರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಆಳಂದ ಠಾಣೆ : ಶ್ರೀಮತಿ ಸಂಗಮ್ಮಾ ಗಂಡ ಮಾಳಪ್ಪಾ ಘೋಡಕೆ ಸಾ|| ಸಾವಳೇಶ್ವರ ರವರ  ಗಂಡನಾದ ಮಾಳಪ್ಪಾ ತಂದೆ ಮಲ್ಕಾರಿ ಘೋಡಕೆ ಇವರು  ದಿನಾಂಕ 20-01-2014 ರಂದು ಸಾಯಂಕಾಲ ಮನೆಯಿಂದ ಹೊಲಕ್ಕೆ ಹೋಗುವ ಕುರಿತು ರೊಟ್ಟಿ ಗಂಟು ಕಟ್ಟಿಕೊಂಡು ಸಾವಳೇಶ್ವರ ಕ್ರಾಸದಲ್ಲಿರುವ ಮನೆಯಿಂದ ಹೋಗುವಾಗ ಕ್ರಾಸದಲ್ಲಿರುವ ಸಿದ್ದಣ್ಣಾ ಖಜೂರಿ ಇವರ ಪಾನಶಾಪ ಮುಂದುಗಡೆ ರಸ್ತೆ ದಾಟುವಾಗ ಆಳಂದ ಕಡೆಯಿಂದ ಒಬ್ಬ ಲಾರಿ ಟ್ಯಾಂಕರ ಚಾಲಕನು ತನ್ನ ವಾಹನವನ್ನು ಅತಿವೇಗದಿಂದ ಹಾಗೂ ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಓಡಿಸುತ್ತಾ ಬಂದು ರಸ್ತೆ ದಾಟುತ್ತಿದ್ದ ನನ್ನ ಗಂಡನಿಗೆ ಡಿಕ್ಕಿ ಪಡಿಸಿ ಅಪಘಾಥ ಪಡಿಸಿದ್ದರಿಂದ  ನನ್ನ ಗಂಡನ ತಲೆ ಒಡೆದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಸದರಿ ಟ್ಯಾಂಕರ ನಂ ಎಮ್‌ಹೆಚ್‌ 12 ಹೆಚ್‌‌ಡಿ 1812 ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಂಚೋಳಿ ಠಾಣೆ : ಶ್ರೀ ರಾಜೇಂದ್ರ ತಂದೆ ಹಾಶಪ್ಪ ವಗ್ಗೆ ಸಾ|| ದೇಗಲಮಡಿ ತಾ|| ಚಿಂಚೋಳಿ ರವರು ಮತ್ತು ನಮ್ಮೂರಿನ ಬಾಬುಮೀಯಾ ತಂದೆ ಮೌಲಾನಸಾಬ ಕೊಂಡಂಪಳ್ಳಿ ಇಬ್ಬರು ನಮ್ಮೂರಿನ ಶ್ರೀ ಶರಣಗೌಡ ಮುದ್ದಾ ಎಂಬುವವರ ಹೋಲಕ್ಕೆ ನಿನ್ನೆ ದಿನಾಂಕ 21.01.2014 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಾಯಂಕಾಲದವರೆಗೆ ಕೂಲಿ ಕೆಲಸ ಮಾಡಿದೆವು ನಾವು ಕೂಲಿಕೆಲಸಕ್ಕೆ ಹೊದ ಹೋಲದಲ್ಲಿ ಟ್ರ್ಯಾಕ್ಟ್ರನಿಂದ ನೇಗಿಲು ಹೊಡೆಯುವುದಿದ್ದರಿಂದ ಟ್ರ್ಯಾಕ್ಟರಗೆ ಡೀಸೆಲ್ ಇರಲಿಲ್ಲ ಆದ್ದರಿಂದ ನಮ್ಮೂರಿನ ಶ್ರೀ ವೀರುಪಾಕ್ಷಯ್ಯ ಸ್ವಾಮಿರವರ ಆಟೋವನ್ನು ಬಾಡಿಗೆಗೆ ಮಾಡಿಕೊಂಡು ಡಿಸೇಲ್ ಖರೀದೆಗೆಂದು ನಮ್ಮೂರಿನ ಚಿಂಚೋಳಿಯಲ್ಲಿರುವ ಶ್ರೀ ಜಬ್ಬಾರ ಪೆಟ್ರೋಲ ಪಂಪ್ ಕಡೆಗೆ ಚಿಂಚೋಳಿ ತಾಂಡೂರ ಮುಖ್ಯರಸ್ತೆಯ ಮೂಲಕ ಚಿಂಚೋಳಿಯ ಸಣ್ಣ ಬ್ರಿಡ್ಜು ಹತ್ತಿರ ಬರುತ್ತಿದ್ದೆವು ನವು ಬಾಡಿಗೆಗೆ ಮಾಡಿಕೊಂಡು ಬರುತ್ತಿದ್ದ ಆಟೋ ಅದರ ಚಾಲಕನಾದ ಶಿವಕುಮಾರ ತಂದೆ ಬಸ್ವಂತರಾಯ ರಾಚಟ್ಟಿ ಎಂಬುವವನು ಎಡಬದಿಯಿಂದ ತನ್ನ ಆಟೋ ನಂ  ಕೆಎ-39, 644 ನೇದ್ದನ್ನು ನಿಧಾನವಾಗಿ ಚಲಾಯಿಸಿಕೊಂಡು ಬರುತ್ತಿದ್ದನು ಆಗ ಎದುರಿನಿಂದ ಅಶೋಕ ಲೀಲ್ಯಾಂಡ ಲಾರಿ ನಂ ಕೆಎ 25 ಬಿ, 9318 ನೇದ್ದನ್ನು ಅದರ ಚಾಲಕನು ಅತೀ ವೇಗದಿಂದ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬರುತ್ತಿದ್ದನು ಆಗ ಆಟೋ ಒಳಗಡೆ ಕುಳಿತ ನಾನು ಮತ್ತು ಬಾಬುಮೀಯಾ ನಾವು ಕುಳಿತುಕೊಂಡು ಬರುತ್ತಿದ್ದ ಆಟೋ ಚಾಲಕನಿಗೆ ಎದುರಿನಿಂದ ಬರುತ್ತಿದ್ದ ಲಾರಿಯವನಿಗೆ ಹೆದರಿ ಸೈಡನ್ನು ಬಿಡಲು ಹೇಳಿದ್ದಕ್ಕೆ ನಾವು ಕುಳಿತುಕೊಂಡು ಬರುತ್ತಿದ್ದ ಆಟೋ ಚಾಲಕನು ಸಂಪೂರ್ಣ ಡಾಂಬರಿಕರಣ ರಸ್ತೆಯಿಂದ ಆಟೋವನ್ನು ಕೆಳಗಿಳಿಸಿ ಸೈಡ ಕೊಟ್ಟರು ಸದರಿ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗದಿಂದ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಸಂಪೂರ್ಣವಾಗಿ ತಪ್ಪು ಮಾರ್ಗಕ್ಕೆ ಬಂದು ನಾವು ಕುಳಿತುಕೊಂಡಿರುವ ಆಟೋಕ್ಕೆ ಡಿಕ್ಕಿ ಪಡಿಸಿದನು. ಆದ್ದರಿಂದ ಆಟೋ ಚಲಾಯಿಸುತ್ತಿದ್ದ ಶಿವಕುಮಾರನಿಗೆ ಬಲಗಾಲು ಎರಡು ಕಡೆಗಳಲ್ಲಿ ಮುರಿದಿದ್ದು ತಲೆಗೆ ಭಾರಿ ರಕ್ತಗಾಯವಾಗಿದ್ದು ದೇಹದ ಇತರೆ ಕಡೆಗಳಲ್ಲಿ ಭಾರಿ ಮತ್ತು ಸಾದಾ ಗುಪ್ತ ಮತ್ತು ತರಚಿದ ಗಾಯಗಳಾಗಿರುತ್ತವೆ. ಬಾಬು ಮೀಯಾನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಿಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದೇವಲ ಗಾಣಗಾಪೂರ ಠಾಣೆ : ದಿನಾಂಕ 21-01-2014  ರಂದು ಶ್ರೀ ಮಲಿಂಗ ತಂದೆ ಮಹಾದೇವಪ್ಪ ಮಾಲಿಂಗಪೂರ ಸಾ||ಸಾ||ಕೊಳ್ಳುರ ತಾ||ಅಫಜಲಫುರ  ಮತ್ತು ತನ್ನ ಗೆಳೆಯ ಮಹಾಂತೇಶ ತಂದೆ ಶಿವಣ್ಣ ಜಿಡ್ಡಿಮನಿ ಸಾ||ಬಂಕಲಗಾ ಇಬ್ಬರೂ ಕೂಡಿ ತನ್ನ ಮೊಟರ್ ಸೈಕಲ ನಂ. ಕೆಎ-32 ಯು-7465 ನೇದ್ದರ ಮೇಲೆ ಬ್ಯಾಂಕ ಕೆಲಸದ ನಿಮಿತ್ಯ ಗುಲಬರ್ಗಾಕ್ಕೆ ಹೊಗುತ್ತಿದ್ದಾಗ ಗೊಬ್ಬುರ (ಬಿ) ಸರಕಾರಿ ಶಾಲೆಯ ಹತ್ತಿರ ರಸ್ತೆಯ ಎಡ ಬದಿಯಿಂದ ಹೊರಟಾಗ ಬೆಳಿಗ್ಗೆ 10:30 ಗಂಟೆಯ ಸುಮಾರಿಗೆ ಗುಲಬರ್ಗಾ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ಸ ಚಾಲಕನು ತನ್ನ ಬಸ್ಸನ್ನು ರೋಡಿನ ಮೇಲೆ ಅಡ್ಡಾತಿಡ್ಡಿಯಾಗಿ ನಡೆಸಿಕೊಂಡು ಬಂದು ತನ್ನ ಮೊಟರ್ ಸೈಕಲನ್ನು ಲಕ್ಷಿಸದೇ ಅಲಕ್ಷತನದಿಂದ ಬೈರಾಮಡಗಿ ರೋಡಿನ ಕಡೆಗೆ ಬಸ್ಸ ಕ್ರಾಸ ಮಾಡಿ ತನ್ನ ಸೈಕಲ್ ಮೋಟರ್ ಕ್ಕೆ ಟಕ್ಕರ ಕೊಟ್ಟಿದ್ದರಿಂದ ಇಬ್ಬರೂ ರಸ್ತೆಯ ಮೇಲೆ ಬಿದ್ದಿದ್ದರಿಂದ ತನಗೆ ಬಲಗಡೆ ತಲೆಯ ಮೇಲೆ ಗುಪ್ತ ಪೆಟ್ಟಾಗಿದ್ದು ಎಡಗಾಲ ಮೋಳಕಾಲಿಗೆ ಹಾಗೂ ಬಲಗಾಲ ಮೊಳಕಾಲಿಗೆ ತರಚಿದ ರಕ್ತಗಾಯವಾಗಿರುತ್ತವೆ. ಮಹಾಂತೇಶನಿಗೆ ಬಲಗಡೆ ತಲೆಯ ಮೇಲೆ ಒಳ ಪೆಟ್ಟಾಗಿರುತ್ತದೆ. ಬಸ್ ನಂ. ನೋಡಲಾಗಿ ಕೆಎ-32 ಎಫ್.-1477 ಅಂತಾ ಇದ್ದು ಅದರ ಚಾಲಕನ ಹೆಸರು ರಂಗಣ್ಣಗೌಡ ಸಾ||ಹುಣಸಗಿ ಅಂತಾ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :

ಸ್ಟೇಷನ ಬಜಾರ ಠಾಣೆ : ಶ್ರೀ ಮಹ್ಮದ್ ಮೊಯಿಜ ತಂದೆ ಶಮಶೋದ್ದಿನ ಸಾ|| ಮನೆ ನಂ 5/1440 ರಿಂಗ ರೋಡ ಮಜ್ಜಿದ ಹತ್ತಿ ಈ-ಬುಲಂದ ಪರ್ವಾಜ ಕಾಲನಿ ಗುಲಬರ್ಗಾ ಇವರು ತನ್ನ ಸೈಕಲ್ ಮೋಟಾರ ಹಿರೋ ಹೊಂಡಾ ಸ್ಪ್ಲಂಡರ ಪ್ಲಸ್ ನಂ ಕೆಎ 50 ಜೆ 6603 ನೇದ್ದು ಸ್ಟೇಷನ್ ಹತ್ತಿರ ದಿನಾಂಕ 27-12-2013 ರಂದು ರಾತ್ರಿ 09-30 ಗಂಟೆ ಸುಮಾರಿಗೆ ನಿಲ್ಲಗಡೆ ಮಾಡಿ ರೆಲ್ವೆ ಸ್ಟೇಷನ್ ನಲ್ಲಿ ಹೊಗಿ ರಾತ್ರಿ 10 ಗಂಟೆಗೆ ಮರಳಿ ಬಂದು ನೋಡಲಾಗಿ ಸದರಿ ನನ್ನ ಸೈಕಲ್ ಮೋಟಾರ ಇರಲಿಲ್ಲಿ. ನಾನು ಇಲ್ಲಿಯವರೆಗೆ ಎಲ್ಲಾಕಡೆ ಹುಡಕಾಡಿದರೂ ಸಹ  ಸೈಕಲ್ ಮೋಟಾರ ಸಿಕ್ಕಿರುವದಿಲ್ಲ. ಕಾರಣ  ನನ್ನ ಸೈಕಲ್ ಮೋಟಾರ ಹಿರೋ ಹೊಂಡಾ ಸ್ಪ್ಲಂಡರ ಪ್ಲಸ್ ಪ್ಲಸ್ ನಂ ಕೆಎ 50 ಜೆ 6603 ಚಸ್ಸಿ ನಂ; MBLHA10EEAHA06295  ಇಂಜಿನ್ ನಂ;  HA10EAAHA96711  || ಕಿ|| 30,000/- ರೂ ನೇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.