POLICE BHAVAN KALABURAGI

POLICE BHAVAN KALABURAGI

13 March 2016

Kalaburagi District Reported Crimes.

ಸೇಡಂ ಠಾಣೆ : ದಿನಾಂಕ:12-03-2016 ರಂದು 2130 ಗಂಟೆಗೆ, ಶ್ರೀ. ಅನೀಲ್ ಕುಮಾರ ಹೆಚ್.ಸಿ-129 ರವರು ಗಾಂಧಿ ಆಸ್ಪತ್ರೆ ಸಿಕಿಂದ್ರಾಬಾದ ತೆಲಂಗಾಣಾ ರಾಜ್ಯದಿಂದ ಫಿರ್ಯಾದಿ, ಸಾಹೇಬಲಿ ತಂದೆ ಜಮಾಲಸಾಬ ಐನೋಳಿವಾಲೆ ಸಾ:ಮೊಮಿನಗಲ್ಲಿ, ಕರನಕೋಟ (ಟಿ.ಎಸ್.) ಇವರ ಹೇಳಿಕೆಯನ್ನು ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು ಸಾರಂಶವೇನೆಂದರೆ, ನನ್ನ ಮಗ ತಯಬಅಲಿ ಮತ್ತು ಬಸವರಾಜ ಇಬ್ಬರೂ ಕೂಡಿಕೊಂಡು ದಿನಾಂಕ:10-03-2016 ರಂದು ರಾತ್ರಿ 08-45 ಗಂಟೆಗೆ ಮೋಟಾರು ಸೈಕಲ್ ನಂ-AP-28DU-3749 ನೇದ್ದರ ಮೇಲೆ ದಂಡೋತ್ತಿ ಗ್ರಾಮದಿಂದ ಕರನಕೋಟಗೆ ಅಂತ ಕಲಬುರಗಿ-ಸೇಡಂ ರೋಡಿನ ಮೇಲೆ ಬರುತ್ತಿರುವಾಗ ಕೊಂಕನಳ್ಳಿ ಗ್ರಾಮ ದಾಟಿದ ನಂತರ ಸ್ವಲ್ಪ ದೂರದಲ್ಲಿ ಟ್ರಾಕ್ಟರ್ ನಿಲ್ಲಿಸಿದ್ದು ಇತ್ತು, ನನ್ನ ಮಗ ತಯಬಅಲಿ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ತನ್ನ ಮೋಟಾರು ಸೈಕಲ್ ನಡೆಯಿಸಿ ಟ್ರಾಕ್ಟರ ಹಿಂದೆ ಹೋಗಿ ಡಿಕ್ಕಿ ಪಡೆಯಿಸಿದ್ದರಿಂದ ತಲೆಗೆ ಭಾರಿ ರಕ್ತಗಾಯವಾಗಿ ಉಪಚಾರ ಕುರಿತು ಸೋಲಾಪೂರಕ್ಕೆ ನಂತರ ಗಾಂಧಿ ಆಸ್ಪತ್ರೆ ಸಿಕಿಂದರಾಬಾದಕ್ಕೆ ತಂದು ಸೇರಿಕೆ ಮಾಡಿದ್ದು ಇರುತ್ತದೆ.ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ-55/2016 ಕಲಂ-279, 338, ಐಪಿಸಿ ಪ್ರಕಾರ ಪ್ರಕರಣ ದಾಖಲಸಿಕೊಂಡಿದ್ದು ಇರುತ್ತದೆ.  ನಂತರ ಇಂದು ದಿನಾಂಕ:13-03-2016 ರಂದು ಮುಂಜಾನೆ 0730 ಗಂಟೆಗೆ ಫೋನ ಮೂಲಕ ಮಾಹಿತಿ ಬಂದಿದ್ದೇನೆಂದರೆ ಸದರಿ ಪ್ರಕರಣದಲ್ಲಿ ಗಾಯಹೊಂದಿ ಗಾಂಧಿ ಆಸ್ಪತ್ರೆ ಸಿಕಿಂದರಾಬಾದದಲ್ಲಿ ಉಪಚಾರ ಪಡೆಯುತ್ತಿದ್ದ ತಯಬಅಲಿ ತಂದೆ ಸಾಹೇಬಲಿ ಐನೋಳಿವಾಲೆ, ವಯ:40 ವರ್ಷ, ಜಾತಿ:ಮುಸ್ಲಿಂ, ಸಾ:ಮೊಮಿನಗಲ್ಲಿ, ಕರನಕೋಟ (ಟಿ.ಎಸ್.) ಈತ ಇಂದು ದಿ:13-03-2016 ರಂದು ಮುಂಜಾನೆ 0700 ಗಂಟೆಗೆ ಮೃತಪಟ್ಟಿರುತ್ತಾನೆ ಅಂತ ತಿಳಿಸಿದ ಮೇರೆಗೆ ಸದರಿ ಪ್ರಕರಣದಲ್ಲಿ ಕಲಂ-304(ಎ) ಐಪಿಸಿ ನೇದ್ದನ್ನು ಅಳವಡಿಸಿಕೊಂಡಿದ್ದು ಪ್ರಕರಣವು ಘೋರ ಪ್ರಕರಣ ವರದಿಯಾಗಿರುತ್ತದೆ.
ಆಳಂದ ಠಾಣೆ : ದಿನಾಂಕ:12/03/2016 ರಂದು 09:30 ಪಿ.ಎಂ.ಕ್ಕೆ ಖಜೂರಿ ಹತ್ತಿರ ಲಾರಿ ರೋಡಿನ ಬದಿಯಲ್ಲಿ ಬಿದ್ದ ಮಾಹಿತಿ ತಿಳಿದು ಅಲ್ಲಿಗೆ ಹೋಗಿ ಲಾರಿಯಲ್ಲಿದ್ದ ಕಬ್ಬಿಣದ ಎಂಗಲ್ ಪಟ್ಟಿಯಲ್ಲಿ ಸಿಕ್ಕಿಕೊಂಡ ಬಾಜೀರಾವನಿಗೆ ಹೊರ ತಗೆದು ಚಾಲಕ ಉದ್ದವ ಮೃತಪಟ್ಟಿದ್ದು ಕ್ಲೀನರ್ ಬಾಜಿರಾವನಿಗೆ ಉಪಚಾರಕ್ಕಾಗಿ ದಿ:13/03/2016 ರಂದು 01:00 ಗಂಟೆಗೆ ಜಿಜಿಹೆಚ್ ಆಳಂದಕ್ಕೆ ತಂದು ಸೇರಿಕೆ ಮಾಡಿ ಅವನ ಹೇಳಿಕೆ ಪಡೆದುಕೊಂಡಿದರ ಸಾರಾಂಶವೆನೆಂದರೆ ನಾನು ಬಾಜೀರಾವ ತಂದೆ ಧೊಂಡಿರಾಮ ಸಾವಂತ ವಯಾ:27 ವರ್ಷ ಜಾತಿ: ಮರಾಠ ಉ: ಲಾರಿ ಕ್ಲಿನರ್ ಸಾ:ಅಂಬೆ ಸಂಗಾವಿ ತಾ:ಲೋಹಾ ಜಿಲ್ಲಾ:ನಾಂದೇಡ ಮಹಾರಾಷ್ಟ್ರ ರಾಜ್ಯದವನಿದ್ದು ನಾನು  ಲಾರಿ ಕ್ಲೀನರ್  ಕೆಲಸ ಮಾಡಿಕೊಂಡು ಪರಿವಾರದೊಂದಿಗೆ ಉಪಜೀವಿಸುತ್ತೇನೆ. ನಾನು ಉದ್ಧವ ತಂದೆ ದತ್ತಾ ಜಾಧವ ಸಾ:ಖಿರಾಡ ತಾ:ಲೋಹಾ ಜಿಲ್ಲಾ:ನಾಂದೇಡ ಇತನು ಚಲಾಯಿಸುತ್ತಿದ್ದ ಟವರಸ್ ಲಾರಿ ನಂ:MH:34 AB:8675 ನೇದ್ದರ ಮೇಲೆ ಸುಮಾರು ತಿಂಗಳದಿಂದ ಕ್ಲೀನರ್ ಕೆಲಸ ಮಾಡುತ್ತಾ ಬಂದಿರುತ್ತೇನೆ. ಈ 04 ದಿವಸದ ಹಿಂದೆ ಛತ್ತಿಸಗಡ ರಾಜ್ಯದ ರಾಯಪೂರ ಜಿಲ್ಲೆಯಲ್ಲಿ ಕಬ್ಬಿಣದ ಎಂಗಲ್ ಪಟ್ಟಿ ಲೋಡ ಮಾಡಿ ಬಳ್ಳಾರಿಗೆ ಹೋಗುವಾಗ ದಿನಾಂಕ:12/03/2016 ರಂದು ಉಮರ್ಗಾ ಮುಖಾಂತರ ಆಳಂದ ಕಡೆಗೆ ಹೋಗುವಾಗ ಉದ್ದವ ಸದರಿ ಲಾರಿ ಚಲಾಯಿಸುತ್ತಿದ್ದು ಖಜೂರಿ ಬಾರ್ಡರ್ ದಾಟಿದಾಗ ಸದರಿ ಲಾರಿ ಚಾಲಕ ಲಾರಿಯನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ಓಡಿಸಿ 01 ಕಿ.ಮೀ.ಮೇಲೆ ಹೋದಾಗ ಚಿಕ್ಕ ಬ್ರೀಜಿನ ಬಲ ಮಗ್ಗಲಿನ ತೆಗ್ಗಿನಲ್ಲಿ ಲಾರಿ ಬಿದ್ದು ಅಪಘಾತವಾಗಿದ್ದರಿಂದ ಸದರಿ ಕಬ್ಬಿಣದ ಎಂಗಲ್ ಪಟ್ಟಿ ನಮ್ಮ ಮೇಲೆ ಬಿದ್ದವು. ಸದರ ಘಟನೆಯಾದಾಗ ರಾತ್ರಿ 09:00 ಗಂಟೆಯಾಗಿರಬಹುದು ನನ್ನ ಟೊಂಕದಿಂದ ಪಾದದವರೆಗೆ ಸದರಿ ಎಂಗಲ್ ಪಟ್ಟಿ ಬಿದ್ದು ನನಗೆ ಹೊರ ಬರಲು ಆಗಲಿಲ್ಲಾ ರೋಡಿಗೆ ಹೋಗಿ ಬರುವ ಜನರು ಸೇರಿಕೊಂಡು ಸದರಿ ಎಂಗಲ್ ಪಟ್ಟಿ ತಗೆದು ನನಗೆ ಹೊರ ತೆಗೆದರು. ಅಪಘಾತದಿಂದ ನನ್ನ ಬಲಗಾಲಿನ ತೊಡೆ, ಕಪ್ಪಗಂಡದ ಭಾಗದ ಎಲಬು ಮುರಿದು ಮಾಂಸ ಹೊರಬಂದು ಭಾರಿ ರಕ್ತಗಾಯವಾಗಿದೆ. ಕ್ಯಾಬಿ ಮುರಿದು ಎಂಗಲ್ ಪಟ್ಟಿ ಉದ್ದವನ ಮೇಲೆ ಬಿದ್ದು ಕ್ಯಾಬಿನದಲ್ಲಿಯೇ ಮೃತಪಟ್ಟಿರುತ್ತಾನೆ. ಅವನ ಎರಡು ಕಾಲುಗಳು ಛಿದ್ರ, ಛಿದ್ರ ವಾಗಿ ಮುರಿದಿರುತ್ತವೆ, ಎರಡು ಕೈ ಮುಂಗೈಗಳು ಮುರಿದು ತಲೆಯ ಮೇಲೆ ರಕ್ತಗಾಯವಾಗಿದ್ದು ಇದೆ. ನಂತರ 108 ಅಂಬುಲೆನ್ಸ್ ಬಂದು ನನಗೆ ಉಪಚಾರಕ್ಕಾಗಿ ಸರ್ಕಾರಿ ದವಾಖಾನೆ ಆಳಂದಕ್ಕೆ ತಂದು ಸೇರಿಕೆ ಮಾಡಿದ್ದು ಇದೆ. ಕಾರಣ ಟವರಸ್ ಲಾರಿ ನಂ: MH:34 AB:8675 ನೇದ್ದರ ಚಾಲಕ ಉದ್ದವ ಅತೀವೇಗದಿಂದ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿ ಬ್ರೀಜಿನ ರೋಡಿನ ಬಲಬದಿಯ ತೆಗ್ಗಿನಲ್ಲಿ ಲಾರಿ ಬಿದ್ದು ನನಗೆ ಭಾರಿ ಗಾಯಗೊಳಿಸಿ ತಾನೂ ಮರಣ ಹೊಂದಿದ್ದು ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಹೇಳಿ ಬರೆಯಿಸಿದ ಹೇಳಿಕೆ ನಿಜವಿದೆ ಅಂತಾ ಕೊಟ್ಟ ಹೇಳಿಕೆ ಪಡೆದುಕೊಂಡು 02:00 ಗಂಟೆಗೆ ಠಾಣೆಗೆ ಬಂದು ಸದರಿ ಹೇಳಿಕೆಯ ಸಾರಾಂಶದ ಮೇಲಿಂದ ಆಳಂದ ಠಾಣೆ ಪ್ರಕಾರ ಪ್ರಕರಣ ವರದಿಯಾಗಿರುತ್ತದೆ.