POLICE BHAVAN KALABURAGI

POLICE BHAVAN KALABURAGI

13 June 2015

Kalaburagi District Reported Crimes

ಕಂಟ್ರೀ ಪಿಸ್ತೂಲ ಇಟ್ಟುಕೊಂಡು ತಿರುಗಾಡುತ್ತಿದ್ದವರ ಬಂಧನ :
ಆಳಂದ ಠಾಣೆ : ದಿನಾಂಕ:12-06-2015 ರಂದು ಬೆಳಿಗ್ಗೆ ಖಚಿತ ಬಾತ್ಮಿ ಬಂದಿದ್ದೇನೆಂದರೆ, ಪಡಸಾವಳಗಿ ಸೀಮಾಂತರದಲ್ಲಿ ಇಬ್ಬರ ಹತ್ತಿರ ಕಂಟ್ರೀ ಪಿಸ್ತೂಲ್ ಎಲ್ಲಿಂದಲೋ ತಂದು ತಮ್ಮ ಹತ್ತಿರ ಇಟ್ಟುಕೊಂಡಿದ್ದಾರೆಂದು ಬಾತ್ಮಿ ಬಂದ ಮೇರೆಗೆ ಮಾಹಾದೇವ ಪಂಚಮುಖಿ ಪಿ.ಎಸ್.ಐ. ಆಳಂದ ಹಾಗು ಸಿಬ್ಬಂದಿಯವರಾದ ಶೇಷಪ್ಪಾ ಸಿ.ಹೆಚ್.ಸಿ-366, ಶಶಿಕಾಂತ ಪಿ.ಸಿ-1228, ಯಲ್ಲಾಲಿಂಗ ಪಿ.ಸಿ-822, ಗುರುನಾಥ ಪಿ.ಸಿ-843, ಮೈಹಿಬೂಬ ಶೇಖ ಪಿ.ಸಿ.681 ರವರನ್ನು ಪಂಚರೊಂದಿಗೆ ಪಡಸಾವಳಗಿ ಸೀಮಾಂತರದ ಬಾತ್ಮೀಬಂದ ಹೊಲಕ್ಕೆ ತಲುಪಿ ಅಲ್ಲಿ ಇಬ್ಬರೂ ಮನುಷ್ಯರು ಬೇವಿನ ಮರದ ಕೆಳಗೆ ಕುಳಿತಿದ್ದು ಅವರನ್ನು ಹಿಡಿದು ಹೆಸರು ವಿಚಾರಿಸಲಾಗಿ ಒಬ್ಬನು ತನ್ನ ಹೆಸರು 1) ವಿಶ್ವನಾಥ ತಂದೆ ಕಲ್ಯಾಣಿ ಜಮಾದಾರ ಸಾ:ಪಡಸಾವಳಗಿ 2) ಲಕ್ಷ್ಮಣ ತಂದೆ ಅಮೃತ ಘೋಡಕೆ ಸಾ:ಸಾವಳೇಶ್ವರ ಎಂದು ಹೇಳಿದ್ದು ಅವರಿಬ್ಬರೂ ಒಬ್ಬರಿಗೊಬ್ಬರು ಜೀವದ ಗೆಳೆಯರಿದ್ದ ಬಗ್ಗೆ ತಿಳಿಸಿದ್ದು ಸದರಿಯವರಿಗೆ ಅನಧಿಕೃತವಾಗಿ ಪಿಸ್ತೂಲ್ ಹೊಂದಿದ ಬಗ್ಗೆ ಕೂಲಕುಂಶವಾಗಿ ವಿಚಾರಿಸಿದಾಗ ಸದರಿಯವರಿಬ್ಬರೂ ಒಂದು ಪಿಸ್ತೂಲ್ ಇದೆ ಎಂದು ಹೇಳಿದ್ದು ಅದನ್ನು ಇಟ್ಟ ಬಗ್ಗೆ ವಿಚಾರಿಸಲಾಗಿ ಯಾರಿಗೂ ಗೊತ್ತಾಗಬಾರದೆಂದು ಇದೆ ಬೇವಿನ ಮರದ ಕೆಳಗೆ ಇದ್ದ ಒಂದು ಬಂಡೆಗಲ್ಲಿನ ಕೆಳಗೆ ಇಟ್ಟಿದ್ದೆವು ಎಂದು ಹೇಳಿ ಸದರಿ ಬಂಡೆಗಲ್ಲಿನ ಕೆಳಗಿನಿಂದ ತಗೆದು ಇದೆ ಪಿಸ್ತೂಲ್ ಎಂದು ಹಾಜರಪಡಿಸಿದ್ದು ಅದು ಪರಿಶೀಲಿಸಿ ನೋಡಲಾಗಿ ಅದು ಕಂಟ್ರೀ ಪಿಸ್ತೂಲ್ ಇದ್ದು ಸದರಿ ಪಿಸ್ತೂಲಿನ ಬ್ಯಾರಲ್ & ಬಾಡಿ ಮ್ಯಾಝಿನ್ ಸ್ಟಿಲ್ ನದ್ದು ಇದ್ದು ಮ್ಯಾಝಿನ್ ಗೆ ಕಪ್ಪು ಪೇಂಟ್ ಹೊಡೆದಿದ್ದು ಸದರಿ ಮ್ಯಾಝಿನ್ ಖಾಲಿ ಇದ್ದು ಯಾವುದೇ ಗುಂಡುಗಳು ಇರುವುದಿಲ್ಲಾ ಸದರಿ ಪಿಸ್ತೂಲ್ ಹೊಂದಿದ ಬಗ್ಗೆ ಸರ್ಕಾರದಿಂದ ಯಾವುದಾದರೂ ಪರವಾನಿಗೆ ದಾಖಲಾತಿಗಳು ಪಡೆದ ಬಗ್ಗೆ ವಿಚಾರಿಸಿದ್ದು ಯಾವುದೇ ಪರವಾನಿಗೆ ದಾಖಲಾತಿಗಳು ಇಲ್ಲಾ ಹಾಗೇಯೆ ಅನಧಿಕೃತವಾಗಿ ಇಟ್ಟು ಕೊಂಡಿರುವದಾಗಿ ತಿಳಿಸಿದರಿಂದ ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಆಳಂದ ಠಾಣೆಗೆ ಬಂದು ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ನಾಂಕ:12-06-2015 ರಂದು ಬೆಳಿಗ್ಗೆ ಖಚಿತ ಬಾತ್ಮಿ ಬಂದಿದ್ದೇನೆಂದರೆ ಹಿತ್ತಲ ಶಿರೂರ ಗ್ರಾಮದ ಹತ್ತಿರ ರೋಡಿನ ಮೇಲೆ ಆಕ್ರಮವಾಗಿ ಇಬ್ಬರೂ ವ್ಯಕ್ತಿಗಳು ಆಯುಧ ಇಟ್ಟುಕೊಂಡು ನಿಂತಿರುತ್ತಾರೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಶ್ರೀ ಸಂತೋಷ ರಾಥೋಡ್ ಪಿ.ಎಸ್.ಐ ನಿಂಬರ್ಗಾ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ನೋಡಲು ಅಲ್ಲಿ ರೋಡಿನ ಮೇಲೆ ನಿಂತಿದ್ದ ಎರಡು ಜನರು ನಮ್ಮನು ನೋಡಿ ಓಡಲು ಪ್ರಾರಂಭಿಸಿದಾಗ  ಸಿಬ್ಬಂದಿಯವರ ಸಹಾಯದಿಂದ  ಅವರನ್ನು ಬೆನ್ನಟ್ಟಿ ಹಿಡಿದು ಅವರಿಗೆ ಹೆಸರು & ವಿಳಾಸ ವಿಚಾರಿಸಲು ಒಬ್ಬನು ತನ್ನ ಹೆಸರು ಲಕ್ಷ್ಮಣ ತಂದೆ ಲಕ್ಕಪ್ಪಾ ಪೂಜಾರಿ ಸಾ:ಹಿತ್ತಲಶಿರೂರ ಇನ್ನೊಬ್ಬನು ತನ್ನ ಹೆಸರು ಬಸವರಾಜ ತಂದೆ ಶಿವಶರಣಪ್ಪಾ ದೇವಕಾರಿ ಸಾ:ಹಿತ್ತಲಶಿರೂರ ಅಂತಾ ಹೇಳಿದ್ದು ಇವರನ್ನು ವಿಚಾರಿಸಲಾಗಿ ಗಾಬರಿಯಾಗಿ ನಮ್ಮ ಹತ್ತಿರ ಯಾವುದೇ ಆಯುಧ ಇರುವುದಿಲ್ಲಾ ಅಂತಾ ಹೇಳಿದ್ದು ಅವರನ್ನು ನಾನು ಪ್ರತ್ಯೇಕವಾಗಿ ಕೂಲಕುಂಶವಾಗಿ ವಿಚಾರಿಸಲು ಲಕ್ಷ್ಮಣ ತಂದ ಲಕ್ಕಪ್ಪಾ ಪೂಜಾರಿ ಇತನು ನಾನು ಮತ್ತು ಬಸವರಾಜ ಕೂಡಿ ನನ್ನ ಹೊಲದ ಬೇವಿನ ಗಿಡದ ಕೆಳಗೆ ಒಂದು ಪ್ಲಾಸ್ಟೀಕ್ ಚೀಲದಲ್ಲಿ ಕಂಟ್ರೀಮೇಡ್ ಪಿಸ್ತೂಲ್ ನೆಲದಲ್ಲಿ ಹುಳಿ ಇಟ್ಟಿದ್ದು ಇರುತ್ತದೆ ನನ್ನ ಸಂಗಡ ಬಂದಲ್ಲಿ ತೋರಿಸುತ್ತೆನೆ ಅಂತಾ ಹೇಳಿದಾಗ  ಸದರಿ ಎರಡು ಜನರನ್ನು ಜೀಪ್ ನಲ್ಲಿ ಕುಡಿಸಿಕೊಂಡು ಲಕ್ಷ್ಮಣ ಪೂಜಾರಿ ಹೇಳಿದಂತೆ ಹಿತ್ತಲಶಿರೂರದಿಂದ ಮಾಡ್ಯಾಳ ಕಡೆಗೆ ಹೋಗುವ ರೋಡಿಗೆ 02 ಕೀ.ಮಿ. ಹೋಗಿ ಜೀಪ್ ದಕ್ಷಿಣಕ್ಕೆ ತಿರುಗಿಸಿ ಅಂದಾಜು 01 ಕೀ.ಮಿ.ಹೋದ ನಂತರ ಲಕ್ಷ್ಮಣ ಪೂಜಾರಿ ಇತನು ಇದೆ ನನ್ನ ಹೊಲ ಅಂತಾ ಹೇಳಿ ಹೊಲದ ಬಂದಾರಿಯ ಬದಿಗೆ ಇರುವ ಬೇವಿನ ಗಿಡದ ಕೆಳಗೆ ನೆಲದಲ್ಲಿ ಹೂಳಿಟ್ಟ ಪ್ಲಾಸ್ಟೀಕ್ ಚೀಲದಲ್ಲಿ ಇದ್ದ ಕಂಟ್ರಿಮೇಡ ಪಿಸ್ತೂಲ್ ತೋರಿಸಿದ್ದು ಅದನ್ನು ಪರಿಶೀಲಿಸಲಾಗಿ ಅದು ಕಪ್ಪು ಹಿಡಿಕೆ ಉಳ್ಳದ್ದು ಇದ್ದು ಅದರ ಬ್ಯಾರಲ್ ಮೇಲೆ Auto Matic Pistrl  Made inf USA ಅಂತಾ ಇಂಗ್ಲೀಷನಲ್ಲಿ ಬರೆದಿದ್ದು ಇರುತ್ತದೆ. ಲಕ್ಷ್ಮಣ ಪೂಜಾರಿ ಹಾಗೂ ಬಸವರಾಜ ದೇವಕಾರಿ ಇವರಿಗೆ ಗುಂಡುಗಳ ಬಗ್ಗೆ ವಿಚಾರಿಸಲು ಇರುವುದಿಲ್ಲಾ ಅಂತಾ ತಿಳಿಸಿದ್ದು ಸದರಿ ಕಂಟ್ರೀಮೇಡ್ ಪಿಸ್ತೂಲ್  ಲೈಸನ್ಸ ಬಗ್ಗೆ ವಿಚಾರಿಸಲಾಗಿ ತಮ್ಮ ಹತ್ತಿರ ಯಾವುದೆ ಲೈಸನ್ಸ ಇರುವದಿಲ್ಲಾ ಇದನ್ನು ಆಕ್ರಮವಾಗಿ ಇಟ್ಟಿಕೊಂಡಿರುತ್ತೇವೆ ತಿಳಸಿದ್ದು ಸದರಿಯವರನ್ನು ವಶಕ್ಕೆ ತೆಗೆದುಕೊಂಡು ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಚಂದ್ರಶೇಖರ ತಂದೆ ಧನಶೆಟ್ಟೆಪ್ಪಾ ಚಿಕ್ಕನಾಗಾಂವ ಸಾ; ಯಳವಂತಗಿ (ಬಿ) ತಾ:ಜಿ: ಕಲಬುರಗಿ ರವರು ದಿನಾಂಕ: 15/04/2015 ರಂದು ತನ್ನ ಬಾಬ್ತು ಒಡವೆಗಳನ್ನು ಯಳವಂತಗಿ (ಬಿ) ಗ್ರಾಮದ ತನ್ನ ಮನೆಯ ಅಲಮಾರಾದಲ್ಲಿ ಇಟ್ಟಿದ್ದು ಅಲಮಾರಾದ ಲಾಕರ್ ಕೀ ಹಾಕದೇ ಹಾಗೇಯೇ ಬಿಟ್ಟಿದ್ದು ಅದೇ ದಿನ ರಾತ್ರಿ 10 -00 ಗಂಟೆಗೆ ಫಿರ್ಯಾದಿ ಮಗ ಮೊಮ್ಮಗ ಮಹೇಶ ಇತನು ಮನೆಗೆ ಬಂದು ದಿ: 16/04/2015 ರಂದು ಬೆಳಿಗ್ಗೆ 06-00 ಗಂಟೆಯೊಳಗಾಗಿ ಮನೆಯಿಂದ ಹೊರಗೆ ಹೊಗಿದ್ದು ಫಿರ್ಯಾದಿದಾರ ದಿ: 16/04/2015ರಂದು ಬೆಳಿಗ್ಗೆ 10-00 ಗಂಟೆಗೆ ಮನೆಯ ಅಲಮಾರ ತೆರೆದಿದ್ದನ್ನು ನೋಡಿ ಗಾಬರಿಯಿಂದ ಅಲಮಾರಾದಲ್ಲಿಟ್ಟಿದ್ದ ಒಡವೆ ನೋಡಲಾಗಿ ಅಲಮಾರಾದಲ್ಲಿ ಟ್ಟಿದ್ದ 20 ಗ್ರಾಂ ಬಂಗಾರದ ಕೈಖಡ ಅ.ಕಿ=54000/- ರೂ ಹಾಗೂ 60 ಗ್ರಾಂ ಬಂಗಾರದ ಬಿಸ್ಕೇಟ ಅ/ಕಿ= 162000/-ರೂ ಹೀಗೆ ಒಟ್ಟು 216000/-ರೂ ಕಿಮ್ಮತ್ತಿನದ್ದನ್ನು ಮೊಮ್ಮಗ ಮಹೇಶ ತಂದೆ ಬಸವತೀರ್ಥಪ್ಪ ಪಟ್ನೆ ಈತನೆ ಕಳ್ಳತನ ಮಾಡಿರಬಹುದೆಂಬ ಸಂಶಯವಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.       
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ :  ಶ್ರೀ ಪುಂಡಲಿಕ ತಂದೆ ಗಿರೇಪ್ಪ ದೊಡ್ಡಮನಿ ಸಾ: ಗುಡುರ ತಾ: ಅಫಜಲಪೂರ ಹಾ:ವ: ಗುಬ್ಬಿ ಕಾಲೋನಿ   ಕಲಬುರಗಿ  ರವರು ದಿನಾಂಕ 12-06-2015 ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ಖಾದ್ರಿಚೌಕ ಹತ್ತಿರ ನಬಿ ಕೆಫೇ ಹೋಟಲನಲ್ಲಿ ನನಗೆ ಪರಿಚಯದವರ ನ್ನು ಬೇಟಿಯಾಗುವ ಕುರಿತು ಮೌಂಟ ಮಹರ್ಷಿ ಕಾಲೇಜ ಎದುರು ರೋಡದಿಂದ ನಬಿ ಕೆಫೇ ಹೊಲಟ ಕಡೆಗೆ ನಡೆದುಕೊಂಡು ಹೋಗಿಬರುವ ವಾಹನಗಳನ್ನು ನೋಡಿಕೊಂಡು ರಸ್ತೆ ದಾಟುತ್ತಿರುವಾಗ ಮೋಟಾರ ಸೈಕಲ ನಂಬರ ಕೆಎ-32 ಡಬ್ಲೂ-5763 ನೇದ್ದರ ಚಾಲಕನು ಶಹಾಬಜಾರ ನಾಕಾ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು  ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಬಲಗಾಲು ರಿಸ್ಟ ಹತ್ತಿರ ಭಾರಿಗಾಯ, ಬಲಗಾಲು ಮೊಳಕಾಲಿಗೆ ತರಚಿದಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.