POLICE BHAVAN KALABURAGI

POLICE BHAVAN KALABURAGI

14 July 2017

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 13-07-2017 ರಂದು 04:30 ಪಿ.ಎಮ್ ಕ್ಕೆ ಮಾನ್ಯ ತಹಸಿಲ್ತಾರರು ಆಫಜಲಪೂರ  ಹಾಗು ಮಾನ್ಯ ಸಹಾಯಕ ಆಯುಕ್ತರು ಕಲಬುರಗಿ ರವರ ಮೌಖಿಕ ಆದೇಶದ ಮೇರೆಗೆ ಭೀಮಾ ನದಿಯ ದಂಡೆಯಲ್ಲಿರುವ ಶಿವಪೂರ, ಬನ್ನಟ್ಟಿ ಗ್ರಾಮಗಳಾದ ಗಸ್ತು ಕರ್ತವ್ಯದಲ್ಲಿ ಆಕಸ್ಮಿಕ ಬೇಟಿ ನೀಡಲಾಗಿ ಅಕ್ರಮವಾಗಿ ಮರಳು ಸಾಗಾಣಿಕೆ ಕಂಡು ಬಂದಿರುತ್ತದೆ. ಬನ್ನಟ್ಟಿ ಸಿಮೇಯಲ್ಲಿ ಹೋಗುತಿದ್ದ ವಾಹನಗಳ ಸಂಖ್ಯೆ KA-33 A-5661, KA-33 E-5662, KA-33 A-5660, KA-33 A-4394  ವಾಹನಗಳನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ತಂದು ಸದರಿ ವಾಹನಗಳ ಸಂಖ್ಯೆ ಕೆಎ-33 ಎ-5661, ಕೆಎ-33 ಇ-5662, ಕೆಎ-33, ಎ-5660, ಕೆಎ-33 ಎ-4394 ವಾಹನಗಳ ಚಾಲಕ, ಮಾಲಿಕರ ವಿರುದ್ದ ಕ್ರಕರಣ ದಾಖಲಿಸಲು ಒಪ್ಪಿಸಿದ್ದರ ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಎತ್ತುತ್ತಿದ್ದ ಹಿಟಾಚಿ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 13-07-2017 ರಂದು ಮಾನ್ಯ ತಹಸಿಲ್ದಾರರು ಅಫಜಲಪೂರ ರವರು ಮತ್ತು ಮಾನ್ಯ ಸಹಾಯಕ ಆಯುಕ್ತರು ಕಲಬುರಗಿ ರವರ ಮೌಖಿಕ ಅದೇಶದ ಮೇರೆಗೆ ಘತ್ತರಗಾ ಗ್ರಾಮದ ಭೀಮಾ ನದಿಯ ದಂಡೆಯ ರಾತ್ರಿ ಗಸ್ತು ಕರ್ತವ್ಯದಲ್ಲಿ ಆಕಸ್ಮಿಕ ಬೇಟಿ ನೀಡಲಾಗಿ ಸದರಿ ಗ್ರಾಮದ ಭೀಮಾ ನದಿಯ ದಂಡೆಯಲ್ಲಿ ಅಕ್ರಮವಾಗಿ ಮರಳು ಎತ್ತುತ್ತಿರುವುದು ಕಂಡು ಬಂದ ಹಿಟಾಚಿ ಸಂಖ್ಯೆ ಪಿಸಿ-130 ವಾಹನವನ್ನು ದಿ: 13-07-2017 ರಂದು ಬೆಳಗಿನ  ಜಾವ 04:00 ಗಂಟೆಗೆ ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ತಂದು  ಸದರಿ ಹಿಟ್ಯಾಚನ ಚಾಲಕ ಮತ್ತು ಮಾಲಿಕರ ವಿರುದ್ದ ಪ್ರಕರಣ ದಾಖಲಿಸಲು ಒಪ್ಪಿಸಿದ್ದರ ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಂಗ್ರಹಿಸಿದ್ದ ಭೂಮಿ ಮಾಲಿಕರ ವಿರುದ್ಧ ಕ್ರಮ :
ಅಫಜಲಪೂರ ಠಾಣೆ : ದಿನಾಂಕ 13-07-2017 ರಂದು ಮಾನ್ಯ ತಹಸಿಲ್ದಾರರು ಅಫಜಲಪೂರ ರವರು ಹಾಗು ಮಾನ್ಯ ಸಹಾಯಕ ಾಯುಕ್ತರು ಕಲಬುರಗಿ ರವರ ಮೌಖಿಕ ಆದೇಶದ ಮೇರೆಗೆ ಘತ್ತರಗಾ ಗ್ರಾಮದ ಭೀಮಾ ನದಿಯ ದಂಡೆಯ ಘತ್ತರಗಾ ಗ್ರಾಮದ ಸರ್ವೇ ನಂ 61/3 ರ ಪಟ್ಟಾ ಜಮೀನಿನ ಪಟ್ಟೇದಾರರಾದ ಶ್ರೀ ಕೇಶವ ತಂದೆ ರಾಮಚಂದ್ರ ಕುಲಕರ್ಣಿ ಇವರ ಜಮೀನಿನಲ್ಲಿ ಸುಮಾರು 100 ಟಿಪ್ಪರ ಮರಳು ಅಕ್ರಮವಾಗಿ ಸಂಗ್ರಹಿಸಿರುತ್ತಾರೆ ಅಕ್ರಮವಾಗಿ ಸಂಗ್ರಹಿಸಿದ ಮರಳನ್ನು ಲೋಕೊಪಯೋಗಿ ಇಲಾಖೆ ಅಫಜಲಪೂರ ರವರ ಸುಪರ್ದಿಗೆ ನೀಡಲಾಗಿರುತ್ತದೆ. ಕಾರಣ ಘತ್ತರಗಾ ಗ್ರಾಮದ ಸರ್ವೇ ನಂ 61/3 ರ ಪಟ್ಟಾ ಜಮೀನಿನ ಪಟ್ಟೇದಾರರಾದ ಶ್ರೀ ಕೇಶವ ತಂದೆ ರಾಮಚಂದ್ರ ಕುಲಕರ್ಣಿ ಇವರ ವಿರುದ್ದ ಎಮ್.ಎಮ್.ಡಿ.ಆರ್ ಅಡಿಯಲ್ಲಿ ಪ್ರಕರಣ ದಾಖಲಿಸಲು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕ: 13/07/2017 ರಂದು ಸಾಯಂಕಾಲ ಹೊನಗುಂಟಾ ಗ್ರಾಮದಲ್ಲಿ ಆಗಸಿಯ ಹತ್ತಿರ ಒಬ್ಬ ಮನುಷ್ಯ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ  ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಕಲ್ಯಾಣಿ  ಎ.ಎಸ್.ಐ  ಶಾಹಾಬಾದ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊನಗುಂಟಾ ಗ್ರಾಮಕ್ಕೆ ಹೋಗಿ  ಮನೆಯ ಗೋಡೆಯ ಮರೆಯಾಗಿ ನಿಂತು ನೋಡಲಾಗಿ ಆಗಸಿಯ ಹತ್ತಿರ ಒಂದು ಕಟ್ಟೆಯ ಮೇಲೆ  ಒಬ್ಬ ವ್ಯಕ್ತಿಯ ಹೋಗಿ ಬರುವ ಸಾರ್ವಜನಿಕರಿಗೆ ಕರೆದು ಮಟಕಾ ಆಡಿರಿ ಒಂದು ರೂಪಾಯಿಗೆ 80 ರೂಪಾಯಿ ಕೋಡುತ್ತೇನೆ ಇದು ದೈವಲೀಲೆ ಆಟ ಅಂತಾ ಸಾರ್ವಜನಿಕರಿಂದ  ಮೋಸದಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಸಂಗಣ್ಣ ತಂದೆ ಶಂಕ್ರೇಪ್ಪ ಡಿಬ್ಬಣಿ ಸಾ: ಹೊನಗುಂಟಾ ಇತನಿಗೆ ಹಿಡಿದು ಅವನಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ ನಗದು ಹಣ 4220-00 ರೂಪಾಯಿಗಳು ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ ಹಾಗೂ ಒಂದು ಪೆನ್ನು ಜಪ್ತಿ ಪಡಿಸಿಕೊಂಡು ಮರಳಿ ಸದರಿಯವನೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಘಾತ ಪ್ರಕರಣ :        
ಸೇಡಂ ಠಾಣೆ : ಶ್ರೀಮತಿ ತುಳಜಮ್ಮ ಗಂಡ ಮಲ್ಲಪ್ಪ ಮೂಡಬೂಳ ಸಾ:ಬೆನಕನಳ್ಳಿ ಗ್ರಾಮ ಇವರ ಗಂಡ ಮಲ್ಲಪ್ಪ ಮತ್ತು ಜಗನ್ನಾಥ ಇವರು ಟ್ರಾಕ್ಟರ್ ರಿಪೇರಿ ಅಂತ ಟ್ರಾಕ್ಟರ್ ಸೇಡಂಕ್ಕೆ ಕಳೂಹಿಸಿ, ಅವರ ಮೊಟಾರು ಸೈಕಲಗಳ ಮೇಲೆ ಹೋಗಿದ್ದರು. ದಿನಾಂಕ: 04-07-2017 ರಂದು ರಾತ್ರಿ ಮನೆಯಲ್ಲಿದ್ದಾಗ ಜಗನ್ನಾಥ ಬೋಯಿನ ಇತ ಫೋನ ಮಾಡಿ ತಿಳಿಸಿದ್ದೇನೆಂದರೆ, ನಾವು ರಿಪೇರಿ ಕುರಿತು ತೆಗೆದುಕೊಂಡು ಬಂದ ಟ್ರಾಕ್ಟರ್ ರಿಪೇರಿ ಮಾಡಿಸಿ, ಕರಣಪ್ಪ ಇತನೊಂದಿಗೆ ಊರಿಗೆ ಕಳೂಹಿಸಿ, ನಾವು ಮೊಟಾರು ಸೈಕಲಗಳ ಮೇಲೆ ಬೆನಕನಹಳ್ಳಿ ಗ್ರಾಮದ ಕಡೆಗೆ ಬರುವಾಗ ಮಲ್ಲಪ್ಪ ಮಾವ ತನ್ನ ಮೊಟಾರು ಸೈಕಲ್ ನಂ-KA32 Y-5926 ನೇದ್ದನ್ನು ಅತೀವೇಗದಿಂದ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಸೇಡಂ-ಯಾದಗೀರ ರೋಡಿನ ಅಳ್ಳೊಳ್ಳಿ ಗೇಟ್ ಸಮೀಪ ಸ್ಕಿಡ್ ಆಗಿ ಬಿದ್ದನು. ಆಗ ನಾನು ನನ್ನ ಮೊಟಾರು ಸೈಕಲ್ ನಿಲ್ಲಿಸಿ ಆತನಿಗೆ ನೊಡಲಾಗಿ ಎಡಗೈ ಹಸ್ತದ ಮೇಲೆ ತರಚಿದ ಗಾಯ, ಮೂಗಿಗೆ, ಬಾಯಿಗೆ ರಕ್ತಗಾಯ, ತಲೆಗೆ, ತಲೆಯ ಹಿಂದೆ, ಗುಪ್ತಗಾಯ ವಾಗಿ ಮಾತನಾಡಲಿಲ್ಲ. ಈ ಘಟನೆ ಜರುಗಿದಾಗ ರಾತ್ರಿ 10-15 ಪಿ.ಎಮ್ ಆಗಿರಬಹುದು ಅಂತ ತಿಳಿಸಿದ್ದರಿಂದ ನಾನು ಸ್ಥಳಕ್ಕ ಹೋಗಿ ನೋಡಿದ್ದು ನಂತರ 108 ಅಂಬ್ಯೂಲೆನ್ಸದಲ್ಲಿ ಬಂದು ಸೇಡಂ ಸರಕಾರಿ ಆಸ್ಪತ್ರೆಗೆ ನಂತರ ಹೆಚ್ಚಿನ ಉಪಚಾರ ಕುರಿತು ಈ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಜಿಲ್ಲಾ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು, ಶ್ರೀ. ಮಲ್ಲಪ್ಪ ತಂದ ನಾಗಣ್ಣ ಮೂಡಬೂಳ, ಸಾ:ಬೆನಕನಳ್ಳಿ, ತಾ:ಸೇಡಂ. ಈತನು  ಉಪಚಾರ ಪಡೆಯುತ್ತ ಫಲಕಾರಿಯಾಗದೆ ದಿನಾಂಕ 13-07-2017 ರಂದು ಮೃತಪಟ್ಟಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.