POLICE BHAVAN KALABURAGI

POLICE BHAVAN KALABURAGI

28 October 2014

Gulbarga District Reported Crimes

ಅತ್ಯಾಚಾರ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಚವಡಪ್ಪಾ ಕುರವಲ ಸಾ : ದೇವಣಗಾಂವ ತಾ : ಸಿಂದಗಿ ಇವರ  ಮಗಳು ಅಫಜಲಪೂರ ಬಸ್ಟ್ಯಾಂಡದಲ್ಲಿ ಒಬ್ಬಳೆ ಕುತಿತಾಗ ಇವಳು ಅಪ್ರಾಪ್ತ ವಯಸ್ಸಿನವಳಿದ್ದು ಮತ್ತು ಹಿಂದುಳಿದ ಜಾತಿಗೆ ಸೇರಿದವಳಿರುತ್ತಾಳೆ  ಅಂತ ತಿಳಿದು ಮಲ್ಲಿಕಾರ್ಜುನ ತಂದೆ ಶಿವಪ್ಪಾ ಕೇರಿ ಸಾ : ದೇವಣಗಾಂವ ತಾ : ಸಿಂದಗಿ ಇವನು  ಸದರಿಯವಳಿಗೆ ಅಫಹರಿಸಿಕೊಂಡು ಹೋಗಿ ಲೈಂಗಿಕ ಸಂಭೋಗ ಮಾಡಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :

ನಿಂಬರ್ಗಾ ಠಾಣೆ : ಶ್ರೀ ಗುರಣ್ಣಾ ತಂದೆ ಭೋಗಣ್ಣಾ ಕಣ್ಣಿ ಸಾ|| ಭಟ್ಟರ್ಗಾ  ಇವರು ದಿನಾಂಕ 25/10/2014 ರಂದು 1030 ಪಿ.ಎಮ ಕ್ಕೆ ತಾನು ತನ್ನ ಮನೆಯವರೆಲ್ಲರೂ ಊಟ ಮಾಡಿಕೊಂಡು ಜಿಡಿಜಿಡಿ ಮಳೆ ಬರುತ್ತಿದ್ದರಿಂದ ತಮ್ಮ ಮನೆಯಲ್ಲಿ ಆಸರ ಇಲ್ಲದ ಕಾರಣ ತಮ್ಮ ಮನೆಯ ಬಾಗಿಲು ಕೀಲಿ ಹಾಕಿಕೊಂಡು ತಮ್ಮ ಮನೆಯ ಮುಂದೆ ಇರುವ ಜಲಾನಯನ ಆಫೀಸಿನಲ್ಲಿ ಮಲಗಿಕೊಂಡು ಬೆಳಿಗ್ಗೆ ದಿನಾಂಕ 26/10/2014 ರಂದು 0430 ಎ.ಎಮಕ್ಕೆ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲು ತೆರೆದ ಸ್ಥತಿಯಲ್ಲಿ ಇದ್ದು ಒಳಗೆ ಹೋಗಿ ನೋಡಲಾಗಿ ಪರ್ಸನಲ್ಲಿ ಇಟ್ಟ ಬಂಗಾರದ ಆಭರಣ ಮತ್ತು ನಗದು ಹಣ ಒಟ್ಟು 63000/- ಸಾವಿರ ರೂಪಾಯಿಯ ಮೌಲ್ಯದ ಬಂಗಾರ ಮತ್ತು ನಗದು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.