POLICE BHAVAN KALABURAGI

POLICE BHAVAN KALABURAGI

07 July 2012

Gulbarga District Reported Crimes

20 ವರ್ಷದಿಂದ ತಲೆಮರಿಸಿಕೊಂಡ ಕೊಲೆಗಾರನ ಬಂಧನ :

 ಅಶೋಕ ನಗರ ಠಾಣೆ : 1992 ನೇ ಸಾಲಿನಲ್ಲಿ  ಶ್ರೀಮತಿ ನಾಗಮ್ಮಾ ಗಂಡ ಕರೇಪ್ಪ ಚೌಡಾಪುರ ಸಾ: ದೇಸುಣಗಿ ಗ್ರಾಮ ಇವಳು ಗಂಡ ತೀರಿಕೊಂಡಿದ್ದರಿಂದ ಜೀವನೊಪಾಯಕ್ಕಾಗಿ ಗುಲಬರ್ಗಾದ ಶಕ್ತಿ ನಗರ ಬಡಾವಣೆಯಲ್ಲಿ ವಾಸವಾಗಿರುವಾಗ  ಗುರುಸಿದ್ದಪ್ಪ ತಂದೆ ಕಲ್ಲಪ್ಪ ಮೋರಟಗಿ ಸಾ: ದೇಸುಣಗಿ ಎನ್ನುವನು ಅನೈತಿಕ ಸಂಬಂಧ ಬೆಳಸಿ ನಾಗಮ್ಮಾಳ ಗಂಡನ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಾಯಿಸಿದ್ದು ಬರೆದು ಕೊಡಲಾರದಕ್ಕೆ ಗುರುಸಿದ್ದಪ್ಪ ತಂದೆ ಕಲ್ಲಪ್ಪ ಮೋರಟಗಿ ಇತನು ದಿನಾಂಕ 15/03/1992 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಶಕ್ತಿ ನಗರ ಬಡಾವಣೆಯ ಬಾಡಿಗೆ ಮನೆಯಲ್ಲಿರುವಾಗ  ನಾಗಮ್ಮಾಳಿಗೆ ಕುಡಿಗೊಲಿನಿಂದ ಹೊಡೆದು ಮರಣಾಂತಿಕ ಹಲ್ಲೆ ಮಾಡಿದ್ದು ಗಾಯಗೊಂಡ ನಾಗಮ್ಮಾಳಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದಾಗ ಮೃತ ಪಟ್ಟಿದ್ದರಿಂದ ಮೃತಳ ಮಗಳಾದ ಕುಮಾರಿ: ಸಿದ್ದಮ್ಮಾ ತಂದೆ ಕರೇಪ್ಪ ಚೌಡಾಪುರ ಸಾ: ದೇಸುಣಗಿ ಹಾ.ವ. ಶಕ್ತಿ ನಗರ ಗುಲಬರ್ಗಾ ಇವಳು ನೀಡಿದ ಪಿರ್ಯಾಧಿಯ ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 41/1992 ಕಲಂ. 302 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಆರೋಪಿ ಗುರುಸಿದ್ದಪ್ಪ ತಂದೆ ಕಲ್ಲಪ್ಪ ಮೋರಟಗಿ ಸಾ: ದೇಸುಣಗಿ ಇತನಿಗೆ ದಿನಾಂಕ 10/04/1992 ರಂದು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಆರೋಪಿತನು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಸುಮಾರು 20 ವರ್ಷಗಳಿಂದ ತಲೆಮರಿಸಿಕೊಂಡಿದ್ದರಿಂದ ಪ್ರಕರಣ ಎಲ್.ಪಿ.ಆರ್ ಆಗಿದ್ದು ಇರುತ್ತದೆ.   ತಲೆಮರಿಸಿಕೊಂಡಿದ್ದ ಕೊಲೆ ಆರೋಪಿಯ ಪತ್ತೆಗಾಗಿ ಶ್ರೀ ಟಿ.ಹೆಚ್. ಕರೀಕಲ್  ಪಿ.ಐ ಅಶೋಕ ನಗರ ರವರು ಶಿವಪುತ್ರಪ್ಪ ಎ.ಎಸ್.ಐ, ಪರಶುರಾಮ ಹೆಚ್.ಸಿ. 87, ಯೊಗೇಂದ್ರ ಪಿ.ಸಿ. 1258, ಉಮೇಶ ಪಿ.ಸಿ. 30, ರವರನ್ನು ಒಳಗೊಂಡ ತಂಡವನ್ನು ರಚನೆ ಮಾಡಿದ್ದು ಈ ತಂಡವು ಸುಮಾರು 10-15 ದಿವಸಗಳಿಂದ ಸುಮಾರು 20 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಕೊಲೆ ಆರೋಪಿ ಗುರುಸಿದ್ದಪ್ಪ ತಂದೆ ಕಲ್ಲಪ್ಪ ಮೋರಟಗಿ ಸಾ: ದೇಸುಣಗಿ ತಾ: ಸಿಂಧಗಿ ಜಿ: ಬಿಜಾಪುರ ಇತನ ಇರುವಿಕೆಯ ಬಗ್ಗೆ ಸಮರ್ಗ ಮಾಹಿತಿ ಕಲೆಹಾಕಿ ಮಾಹಾರಾಷ್ಟ್ರದ ಸಾತಾರ, ಪುಣೆ, ಮುಂಬೈಯಿಯಲ್ಲಿ ವಾಸ ಮಾಡಿ ಬಿಜಾಪುರ ಜಿಲ್ಲೆಯ ಅರಳಗುಂಡಗಿ ಗ್ರಾಮಕ್ಕೆ ಬಂದಿರುವ ಬಗ್ಗೆ ಮಾಹಿತಿ ಕಲೆಹಾಕಿ  ದಿನಾಂಕ 29/06/2012 ರಂದು ಈ ತಂಡವು ಸುಮಾರು 20 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಕುಖ್ಯಾತ ಕೊಲೆಗಾರನಿಗೆ ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರ ಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿರುತ್ತಾರೆ. ಕೊಲೆಗಾರನ ಪತ್ತೆ ಹಚ್ಚಿದ ಸಿಬ್ಬಂದಿಯವರ ಕಾರ್ಯವನ್ನು ಶ್ರೀ ಭೂಷಣ ಬೋರಸೆ ಎ.ಎಸ್.ಪಿ ಗುಲಬರ್ಗಾ ರವರು ಶ್ಲ್ಯಾಘನೆ ಮಾಡಿರುತ್ತಾರೆ.   ಮತ್ತು ಮಾನ್ಯ ಪ್ರವೀಣ ಪವಾರ ಎಸ್.ಪಿ ಗುಲಬರ್ಗಾ ರವರು ಎಲ್.ಪಿ.ಆರ್  ಪ್ರಕರಣ ಪತ್ತೆ ಹಚ್ಚಿದ ಸಿಬ್ಬಂದಿಯವರಿಗೆ  ಸೂಕ್ತ ಬಹುಮಾನ ಘೋಸಿಶಿರುತ್ತಾರೆ. 

Gulbarga District Reported Crimes


ಮೊಬಾಯಿಲ್ ಟವರ  ಕೇಬಲ್ ವೈಯರ ಕಳ್ಳರ ಬಂಧನ,  ಸುಮಾರು 4 ಲಕ್ಷ ರೂ ಮೌಲ್ಯದ  ವಸ್ತುಗಳ  ವಶ
        ಗುಲಬರ್ಗಾ ನಗರದಲ್ಲಿ ಹಾಗು ಸುತ್ತಮುತ್ತಲಿನ ಗ್ರಾಮಗಳಲ್ಲಿ  ಈಗ ಸುಮಾರು ಒಂದು ವರ್ಷದಿಂದ  ಘಟಿಸಿದ ಮೊಬಾಯಿಲ್ ಟವರಗಳ ಬ್ಯಾಟರಿ ಮತ್ತು ಕೇಬಲ್  ವಾಯರ ಕಳವು ಪ್ರಕರಣಗಳ ಆರೊಪಿತರ  ಪತ್ತೆ ಕುರಿತು ಮಾನ್ಯ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಎಸ್.ಪಿ ಗುಲಬರ್ಗಾ, ಮಾನ್ಯ ಅಪರ ಎಸ್.ಪಿ ಶ್ರೀ ಕಾಶಿನಾಥ ತಳಕೇರಿ ಮತ್ತು ಶ್ರೀ ಹೆಚ್. ತಿಮ್ಮಪ್ಪಾ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡದ ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ಎಮ್.ಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ 1) ಶ್ರೀ ಪಂಡಿತ ಸಗರ ಪಿ.ಎಸ್.ಐ (ಕಾಸು) ವಿವಿ ಠಾಣೆ 2) ಸಂಜೀವಕುಮಾರ ಪಿ.ಎಸ್.ಐ (ಕಾಸು) ಎಮ್.ಬಿ ನಗರ, 3) ಶ್ರೀ ಭೋಜರಾಜ ರಾಠೋಡ ಪಿ.ಎಸ್.ಐ ಫರಹತಾಬಾದ  4) ಶ್ರೀ ಪ್ರದೀಪ ಕೊಳ್ಳಾ ಪಿ.ಎಸ್.ಐ (ಅವಿ) ವಿವಿ ಠಾಣೆ, ಪ್ರಬೇಶನರ ಪಿ.ಎಸ್.ಐ ರವರುಗಳಾದ  ಬಾಳಪ್ಪ ಎಸ್ ತಳವಾರ ಮತ್ತು ಹಸೇನ ಭಾಷಾ  ಮತ್ತು ಸಿಬ್ಬಂದಿಯವರಾದ ಶಿವಪುತ್ರಸ್ವಾಮಿ ಹೆಚ್.ಸಿ, ದೇವಿಂದ್ರ ಪಿಸಿ,. ನಿಜಲಿಂಗಪ್ಪ ಪಿಸಿ, ಸುಬ್ಬುನಾಯಕ ಪಿಸಿ, ಅಶೋಕ ಪಿಸಿ, ಯಲ್ಲಪ್ಪ ಪಿಸಿ, ಪ್ರಭಾಕರ ಪಿಸಿ, ಅರ್ಜುನ ಪಿಸಿ, ಅಣ್ಣಪ್ಪ ಪಿಸಿ, ಶಂಕರ ಹೆಚ್.ಸಿ  ರವರು ಖಚಿತ ಭಾತ್ಮಿ ಮೇರೆಗೆ ನಿನ್ನೆ ದಿನಾಂಕ6/7/2012 ರಂದು ರಾತ್ರಿ 9-00 ಗಂಟೆಗೆ ನದಿಸಿನ್ನೂರ ಕ್ರಾಸ ಹತ್ತಿರ ಮಿಂಚಿನ ದಾಳಿ ಮಾಡಿ ಮೊಬಾಯಿಲ್ ಟಾವರನ ಬ್ಯಾಟರಿ ಮತ್ತು ಕೇಬಲ್  ವೈಯರದ ತಾಮ್ರದ ತಂತಿ  ಕಳ್ಳತನ  ಮಾಡುತ್ತಿದ್ದ 1) ಮಹೇಶ ತಂದೆ ಸಂಗು ಪಾರದಿ ಸಾ// ಆಶ್ರಯ ಕಾಲೋನಿ ಗುಲಬರ್ಗಾ 2) ವಿಜಯಸಿಂಗ ತಂದೆ ಅಮರಸಿಂಗ ಸಿಕಲಗಾರ  ಸಾ// ಆಶ್ರಯ ಕಾಲೋನಿ ಗುಲಬರ್ಗಾ 3) ಜೀತಸಿಂಗ ತಂದೆ ಚಂದುಸಿಂಗ ಸಿಕಲಗಾರ  ಸಾ// ಆಶ್ರಯ ಕಾಲೋನಿ ಗುಲಬರ್ಗಾ 4) ಕಿಶನ ತಂದೆ ಲಕ್ಷ್ಮಣ ರಾಠೋಡ  ಸಾ// ಆಶ್ರಯ ಕಾಲೋನಿ ಗುಲಬರ್ಗಾ ಈ 4 ಜನರನ್ನು ಬಂಧಿಸಿರುತ್ತಾರೆ. 
          ಸದರಿ ಆರೊಪಿತರು ಇತ್ತಿಚಿಗೆ ಗುಲಬರ್ಗಾ ನಗರದಲ್ಲಿ ಹಾಗು ಗುಲಬರ್ಗಾ ನಗರದ ಸುಮುತ್ತಲು ಗ್ರಾಮಗಳ ವ್ಯಾಪ್ತಿಯಲ್ಲಿ ಮೊಬಾಯಿಲ ಟಾವರನ ಬ್ಯಾಟರಿ ಹಾಗೂ ಕೇಬಲ್ ವಾಯರ ( ತಾಮ್ರದ ತಂತಿ ) ಕಳ್ಳತನ ಮಾಡಿ ಅವುಗಳನ್ನು ಸುಟ್ಟು ಅದರಲ್ಲಿನ ತಾಮ್ರದ ತಂತಿಗಳನ್ನು ಮಾರಾಟ ಮಾಡುತ್ತಿದ್ದ  ಬಗ್ಗೆ ತನಿಖೆ ಹಾಗೂ ವಿಚಾರಣೆ ಕಾಲಕ್ಕೆ ತಿಳಿದುಬಂದಿದ್ದು  ಆರೊಪಿತರಿಂದ ಕಳವು ಮಾಡಲಾದ ಸುಮಾರು 13 ಪ್ರಕರಣಗಳಲ್ಲಿ ಸುಮಾರು 4 ಲಕ್ಷ ರೂಪಾಯಿ ಬೆಲೆ ಬಾಳುವ 6 ಕ್ವಿಂಟಲ್ ತಾಮ್ರದ ತಂತಿ, ಮೊಬಾಯಿಲ್ ಟವರನ ಬ್ಯಾಟರಿಗಳು ಮೊಬಾಯಿಲ ಪೊನಗಳು, ಕಳವು ಮಾಡಲು ಬಳಸುತ್ತಿದ್ದ ಒಂದು ಅಟೋ ರೀಕ್ಷಾ ನಂ ಕೆ.ಎ 32 3998, ತಾಮ್ರದ ಕೇಬಲ್ ಕಟ್ ಮಾಡಲು ಬಳಸುತ್ತಿದ್ದ ಸಾಮಾನುಗಳು ಮತ್ತು ವಗೈರೆ ವಸ್ತುಗಳನ್ನು ಜಪ್ತು ಪಡಿಸಿಕೊಂಡು ತನಿಖೆ ಮುಂದುವರೆಯಿಸಿರುತ್ತಾರೆ. ಈ ಪ್ರಕರಣದಲ್ಲಿ ಇನ್ನೂ 4 ಜನ ಆರೊಪಿತರು ಫರಾರಿ ಇದ್ದು ಫರಾರಿ ಇರುವ ಆರೊಪಿತರಾದ 1) ಗಣೇಶ ತಂದೆ ಧನು ಪಾರದಿ, 2) ರಘು ತಂದೆ ಅರ್ಜುನ ಪಾರದಿ 3) ಪದ್ಮು ತಂದೆ ಅರ್ಜುನ ಪಾರದಿ ಎಲ್ಲರೂ ಸಾ// ದರ್ಗಾಶಿರೂರ 4) ಲಗಮು ತಂದೆ ಚಂದು ಪಾರದಿ ಸಾ// ಝಳಕಿ  ಇವರ ದಸ್ತಗಿರಿಗಾಗಿ ಜಾಲ ಬಿಸಲಾಗಿದೆ. ಮತ್ತು ಮೊಬಾಯಿಲ್ ಟವರಗಳ ಬ್ಯಾಟರಿ ಹಾಗೂ ಕಾಪರ ವೈಯರ ಕಳ್ಳತನ  ಪ್ರಕರಣಗಳನ್ನು ಭೇಧಿಸಿದ ವಿಶೇಷ ತನಿಖಾ ತಂಡದ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕರ್ತವ್ಯವನ್ನು ಶ್ಲಾಘಿಸಿ ಮಾನ್ಯ ಎಸ್.ಪಿ ಸಾಹೇಬರು ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ.

GULBAGA DIST REPORTED CRIME


ದರೋಡೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀಮತಿ.ಅಂಬುಬಾಯಿ ಗಂಡ ಗುರುನಾಥರಾವ ಸುತ್ರಾವೆ ಸಾ: ರಾದಾ ವಿಟಲ್ ಕುಂಜ್ ವಿವೇಕಾನಂದ ನಗರ  ಖೂಬಾ ಪ್ಲಾಟ್ ಗುಲಬರ್ಗಾ ರವರು ನಾನು ದಿನಾಂಕ: 06-07-2012 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ಸಿದ್ದಿ ವಿನಾಯಕ ಮಂದಿರದಲ್ಲಿ ಪೂಜೆ ಇದ್ದ ಪ್ರಯುಕ್ತ ಹೋಗಿ ಮರಳಿ  ಸಂಗೀತಾ ಇವರೊಂದಿಗೆ ಮನೆಗೆ ಬರುತ್ತಿರುವಾಗ ಒಬ್ಬ ಅಪರಿಚಿತ ವ್ಯೆಕ್ತಿ ಹಿಂದಿನಿಂದ ಬಂದು ಕೊರಳಿಗೆ ಕೈ ಹಾಕಿಕೊರಳಲ್ಲಿಯ ಎಂಟು ತೊಲಿ ಬಂಗಾರದ ಅ.ಕಿ.2,00,000/- ರೂ ಬೆಲೆ ಬಾಳುವ ಮಂಗಳ ಸೂತ್ರ ಕಿತ್ತಿಕೊಂಡು ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇರೆಗೆ  ಠಾಣೆ ಗುನ್ನೆ ನಂ:94/2012 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.