POLICE BHAVAN KALABURAGI

POLICE BHAVAN KALABURAGI

08 September 2011

GULBARGA DISTRICT REPORTED CRIMES

ಅಪಘಾತ ಪ್ರಕರಣ :

ಹೆಚ್ಚುವರಿ ಸಂಚಾರಿ ಠಾಣೆ :ದಿನಾಂಕ: 08.09.2011 ರಂದು ಮುಂಜಾನೆ  ಪಿ.ಡಿ.ಎ.ಕಾಲೇಜ ದಿಂದ ನಾಗನಳ್ಳಿ ರೋಡಿನಲ್ಲಿ ಬರುವ ಕೊರಂಟಿ ಹನುಮಾನ ಟೆಂಪಲ್ ಹತ್ತಿರ ಶ್ರೀ ಮತಿ  ಲಕ್ಷ್ಮೀಬಾಯಿ ತಂದೆ ದಿಲೀಪ  ಪವಾರ  ಸಾ:ಜೈ ಹನುಮಾನ ತಾಂಡಾ  ಗುಲಬರ್ಗಾ  ಇವರ ಮಗನಾದ ರಾಹೂಲ ವ: 8 ವರ್ಷ ಈತನು ಶಾಲೆ ಹೋಗಲು ರೋಡದಾಟುತ್ತಿದ್ದಾಗ  ಟಿ.ವಿ.ಎಸ್.ಎಕ್ಸಎಲ್ ಮೊ/ಸೈಕಲ್ ನಂ:ಕೆಎ 32 ಯು6506 ನೆದ್ದರ ಚಾಲಕ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವೆನೆ ರಾಹುಲ ಈತನಿಗೆ ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ

ಸುಲಿಗೆ ಮಾಡಲು ಪ್ರಯತ್ನ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ :
ದಿನಾಂಕ 08-09-2011 ರಂದು ರಾತ್ರಿ ಶ್ರೀಮತಿ ರೇಖಾ ಗಂಡ ಮನೋಹರ ಪಾಟೀಲ ಸಾಃ ಪ್ರಗತಿ ಕಾಲೋನಿ ಗುಲಬರ್ಗಾ ಮನೆಯಲ್ಲಿದ್ದಾಗ 02 ಜನ ಅಪರಿಚಿತರು ಮನೆಯಲ್ಲಿ ಬಂದು ಹೆದರಿಸಿ ನಮಗೆ 20 ರಿಂದ 25 ತೊಲೆ ಬಂಗಾರ ಮತ್ತು 50 ಲಕ್ಷ ರೂಪಾಯಿ ಕೊಡು ಅಂತಾ ಸುಲಿಗೆ ಮಾಡಲು ಪ್ರಯತ್ನಿಸಿರುತ್ತಾರೆ. ಸದರಿಯವರು 20 ರಿಂದ 25 ವರ್ಷ ವಯಸ್ಸಿನವರು ಇದ್ದು ಒಬ್ಬನು ದಪ್ಪಗೆ ಕೆಂಪು ಬಣ್ಣದದವನಿದ್ದು ಇನ್ನೊಬ್ಬನು ತೆಳ್ಳಗೆ ಇದ್ದು ಕಪ್ಪು ಬಣ್ಣದವನಿದ್ದನು ನೋಡಲು ಮುಸ್ಲಿಂರಂತೆ ಇದ್ದು ಅಚ್ಚು ಕನ್ನಡ ಬೆಂಗಳೂರು ಭಾಷೆ ಮಾತನಾಡುತ್ತಿದ್ದರು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಶ್ರೀ ಸಚೀನ ತಂದೆ ರಮೇಶ ಎಡಕೆ ಸಾ: ಐ ವಾನ ಈ ಶಾಹಿ ಗುಲಬರ್ಗಾ ರವರು ನಾವು ಮೂರು ಜನರು ಜಗತ ಸರ್ಕಲ್ ದಿಂದ ಮಿನಿ ವಿಧಾನ ಸೌಧ ಮೇನ ರೋಡ ಕಡೆ ನಡೆದುಕೊಂಡು ಬರುತ್ತಿದ್ದಾಗ ಟೌನಹಾಲ ಕ್ರಾಸ್ ಹತ್ತಿರ ಜತಗೆ ಸರ್ಕಲ್ ಕಡೆಯಿಂದ ಒಂದು ಮೋಟಾರ ಸೈಕಲ್ ನಂ:ಕೆಎ 32 ಯು 1016 ನೆದ್ದರ ಚಾಲಕ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಚಿಕ್ಕಪ್ಪನ ಮಗನಾದ ವಿವೇಕಾನಂದನಿಗೆ ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ ಮೋಟಾರ ಸೈಕಲ್ ಸಮೇತ ಹೊರಟು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಶ್ರೀ ನಾಗಪ್ಪ ತಂದೆ ಶರಣಪ್ಪ ಸಾ: ಬಿದನೂರ ತಾ:ಅಫಜಲಪೂರ ರವರು ನಾನು ಮತ್ತು ನನ್ನ ಗೆಳೆಯರು ಕೂಡಿ ಶರಣಬಸವೇಶ್ವರ ಗುಡಿಯಿಂದ ಗೋವಾ ಹೊಟೇಲ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಮಾರ್ಸಲ್ ಜೀಪ ನಂ:ಕೆಎ 32 ಎಮ್.2096 ನೆದ್ದರ ಚಾಲಕ ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಂದನೆ ಪ್ರಕರಣ:
ಗ್ರಾಮೀಣ ಠಾಣೆ:
ಶ್ರೀ ಮಾಣಿಕರೆಡ್ಡಿ ತಂದೆ ಶರಣಪ್ಪ ರೆಡ್ಡಿ ವ:34 ಸ: ಬೇಲೂರ(ಜೆ) ತಾ: ಗುಲಬರ್ಗಾ ರವರು ನಾನು ನನ್ನ ಗೆಳೆಯರೊಂದಿಗೆ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಹೊರಟಾಗ ಗುಂಡಪ್ಪಾ ತಂದೆ ಶರಣಪ್ಪಾ ಇತನು ಬಂದವನೇ ಅವ್ಯಾಚ್ಛ ಶಬ್ದಗಳಿಂದ ಬೈದು, ಬಡಿಗೆಯಿಂದ ತಲೆಗೆ ಮೈಕೈಗೆ ಹೊಡೆದು ಗಾಯ ಗುಪ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಭರಿ ಸಂಭೋಗ ಮತ್ತು ಜಾತಿ ನಿಂದೆ ಪ್ರಕರಣ :
ಫರಹತಾಬಾದ ಠಾಣೆ :
ಶ್ರೀಮತಿ ಪಮ್ಮುಬಾಯಿ ಗಂಡ ಶರಣಪ್ಪಾ ಬಡಿಗೇರ ರವರು ಸಾ: ಬಸನಾಳ ತಾ:ಜಿ: ಗುಲಬರ್ಗಾ ರವರು ನಾನು ದಿನಾಂಕ: 05-09-2011 ರಂದು 6-30 ಗಂಟೆಯ ಸುಮಾರಿಗೆ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಬೋರವೇಲ್‌ದಿಂದ ನೀರು ತರಲು ಹೋಗಿದ್ದಾಗ ನನ್ನ ಹಿಂದೆ ನಮ್ಮ ಗ್ರಾಮದವರಾದ ಸಿದ್ರಾಮ, ಮತ್ತು ರಾಮಚಂದ್ರ ತಂದೆ ಶಂಕ್ರೇಪ್ಪಾ ಇವರು ಬೈಕ್ ಮೇಲೆ ಬಂದು ನನ್ನನ್ನು ಗಾಡಿ ಮೇಲೆ ಕೂಡು ಇಲ್ಲವಾರದೆ ಸಾಯಿಸುತ್ತೇವೆ ಎಂದರು, ನಾನು ನಿರಾಕಸಿದಾಗ ಏ ಎತ್ತೋ ಮಾದಿಗ ಸೂಳಿಗೆ ಎಂದು ಗಾಡಿ ಮೇಲೆ ಕೂಡಿಸಿ ಚಿರಿದರೆ ತಲವಾರದಿಂದ ನಿನ್ನ ಕುತ್ತಿಗೆ ಕಡಿಯುತ್ತೇವೆ ಎಂದು ಭಯ ಹಾಕಿದರು. ನನ್ನನ್ನು ಬಸನಾಳ ಗ್ರಾಮದಿಂದ ಹೂವಿನಹಳ್ಳಿ ಗ್ರಾಮಕ್ಕೆ ರಾತ್ರಿ 8-00 ಗಂಟೆಗೆ ಕರೆ ತಂದರು. ಅಲ್ಲಿ ನಮ್ಮ ಗ್ರಾಮದವನೇ ಆದ ಜಟ್ಟೇಪ್ಪಾ ತಂದೆ ಮಾರುತಿ ಇದ್ದನು. ರಾತ್ರಿ 8-00 ಗಂಟೆಗೆ ಹೂವಿನ ಹಳ್ಳಿಯಿಂದ ಬಸವಂತಪ್ಪಾ ತಿಳಗುಳ ಇವರಿಗೆ ಸೇರಿದ ಕ್ರೂಜರ ಮುಖಾಂತರ ಜಟ್ಟೇಪ್ಪಾ ಮತ್ತು ಸಾಯಬಣ್ಣಾ, ಹಾಗೂ ರಾಮಚಂದ್ರ ಮತ್ತು ಜಟ್ಟೇಪ್ಪಾ ತಂದೆ ಈಶ್ವರಪ್ಪಾ ಇವರೆಲ್ಲರೂ ಸೇರಿ ನನಗೆ ಶರಣ ಸಿರಸಗಿಗೆ ರಾತ್ರಿ 1-00 ಗಂಟೆಗೆ ತಂದು ಗ್ರಾಮದ ದೂರದಲ್ಲಿದ್ದ ಒಂದು ಮನೆಯಲ್ಲಿ ರಾತ್ರಿ ಜಟ್ಟೇಪ್ಪಾ ತಂದೆ ಮಾರುತಿ ಈತನು ನನಗೆ ಜೀವದ ಭಯ ಹಾಕಿ ಇಡೀ ರಾತ್ರಿ ಬಲತ್ಕಾರ ಮಾಡಿರುತ್ತಾನೆ. ದಿನಾಂಕ: 6-9-2011 ರಂದು ಬೆಳಗ್ಗೆ ಜೆರಟಗಿ ಅಲ್ಲಿಂದ 12-30 ಕ್ಕೆ ಹುಲ್ಲೂರ ಗ್ರಾಮಕ್ಕೆ ಹೋಗಿ ಜಟ್ಟೇಪ್ಪನ ಚಿಕ್ಕಮ್ಮನ ಮನೆಗೆ ಕರೆದುಕೊಂಡು ಹೋಗಿ. ಹೋಲದಲ್ಲಿ ರಾತ್ರಿ 12-00 ಗಂಟೆಯ ತನಕ ಮತ್ತೆ ಬಲತ್ಕಾರ ಮಾಡಿದನು. ರಾತ್ರಿ 1-00 ಗಂಟೆಗೆ ಬಸನಾಳ ಗ್ರಾಮದ ಭೀಮಣ್ಣಾ ತಂದೆ ನಿಂಗಪ್ಪಾ ಮತ್ತು ಚಂದಯ್ಯ ತಂದೆ ಮಲ್ಕಯ್ಯ ಸ್ವಾಮಿ ಇವರಿಬ್ಬರೂ ಬಸವರಾಜ ಬ್ಯಾಡಗಿ ಈತನಿಗೆ ಸೇರಿದ ಬೈಕ್ ನಂ, ಕೆಎ - 32 ಎಕ್ಸ್ – 9437 ಮೇಲೆ ಬಂದರು. ಮತ್ತೆ ಜಟ್ಟೇಪ್ಪಾ ತಂದೆ ಸಿದ್ರಾಮಪ್ಪಾ, ಚಂದಯ್ಯ ಸ್ವಾಮಿ ನನಗೆ ಬೈಕಿನ ಮೇಲೆ ಕೂಡಿಸಿಕೊಂಡು ಜೆರಟಗಿ ಗ್ರಾಮಕ್ಕೆ ಬಂದರು. ನಂತರ ಜೆರಟಗಿ ಗ್ರಾಮದಲ್ಲಿ ನನ್ನನ್ನು ಕ್ರೂಜರದಲ್ಲಿ ಭೀಮಶಾ ತಂದೆ ನಿಂಗಪ್ಪಾ, ಚಂದಯ್ಯ ಸ್ವಾಮಿ, ಜಟ್ಟೇಪ್ಪಾ ತಂದೆ ಈಶ್ವರಪ್ಪ, ಜಟ್ಟೇಪ್ಪಾ ತಂದೆ ಮಾರುತಿ ಹಾಗೂ ಇಬ್ಬರು ಅಪರಿಚಿತರು ಕೂಡಿಕೊಂಡು ದಿನಾಂಕ: 7-9-2011 ರಂದು ಬೆಳಗ್ಗೆ 6-00 ಗಂಟೆಗೆ ಬಸನಾಳ ಗ್ರಾಮಕ್ಕೆ ತಂದು ಊರಿನ ದೂರದಲ್ಲಿ ಬಿಟ್ಟು ಯಾರಿಗಾದರೂ ಹೇಳಿದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವದ ಭಯ ಹಾಕಿ ಹೋದರು. ಆಗ ನಾನು ಮನೆಗೆ ಬಂದು ನಡೆದ ಘಟನೆಯನ್ನು ನನ್ನ ಗಂಡನಿಗೆ ತಿಳಿಸಿರುತ್ತೇನೆ. ನನಗೆ ಮಾರಕಾಸ್ತ್ರ ತೋರಿಸಿ ಭಯ ಹಾಕಿ ಅಪಹರಿಸಿ ನನ್ನ ಮೇಲೆ ಬಲತ್ಕಾರ ಮಾಡಿದವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.