POLICE BHAVAN KALABURAGI

POLICE BHAVAN KALABURAGI

02 August 2013

GULBARGA DIST REPORTED CRIMES


ಕೊಲೆ ಆರೋಪಿತರ ಬಂಧನ:


ಚಿಂಚೋಳಿ ಪೊಲೀಸ್ ಠಾಣೆ:

ದಿನಾಂಕ31/07/2013 ರಂದು ಸೈಯದ್ ಮೋಸಿನ ಚೌಕಿದಾರ ಸಾ:ಐನೋಳ್ಳಿ ರವರು ತನ್ನ  ಅಣ್ಣ ಸೈಯದ್ ಆಸ್ಪಕ್ @ ಗೋರೆಮಿಯ್ಯಾ ಕಳೆದ ಶಿವರಾತ್ರಿ ಹಬ್ಬ ಒಂದು ವಾರ ಮುಂದೆ ಇದ್ದಾಗ ತನ್ನ ಮನೆಯಿಂದ ಮೋಟಾರ ಸೈಕಲಮೇಲೆ ಹೋದವನು ಬಂದಿರುವದಿಲ್ಲಾ ಅವನ ಹತ್ತಿರ ಇರುವ ಮೋಬೈಲ ನಂ 9740487488 ಮತ್ತು 8971751284 ನೇದ್ದವುಗಳು ಬಂದಾಗಿರುತ್ತವೆ. ತಮ್ಮ ಬಂದು ಬಳಗದವರಿಗೆಲ್ಲಾ ವಿಚಾರಿಸಲು ಯಾವೂದೇ ಸುಳಿವು ಸಿಗದ ಕಾರಣ.  ದಿನಾಂಕ 10-04-2013 ರಂದು ಚಂದ್ರಂಪಳ್ಳಿ ತನ್ನ ಅಣ್ಣನು ಕಾಣೆಯಾದ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಪ್ರಕ್ರಣ ದಾಖಲಿಸಿದ್ದು. ಪ್ರಕರಣದ ತನಿಖೆ  ವೇಳೆಯಲ್ಲಿ ದಿನಾಂಕ: 24/07/2013  ರಂದು ಒಬ್ಬ ವ್ಯಕ್ತಿ ಸಿ.ಪಿ.ಐ. ಚಿಂಚೋಳಿರವರ ಮೊಬಾಯಿಲಿಗೆ ಫೋನ ಮಾಡಿ ಐನೊಳ್ಳಿ ಗ್ರಾಮದ ಕಾಣೆಯಾದ ಮನುಷ್ಯ ಸೈಯ್ಯದ್ ಅಸ್ಫಾಕ ಇವನಿಗೆ ಚಂದ್ರಂಪಳ್ಳಿ ಗ್ರಾಮದ ವೆಂಕಟಪ್ಪ ಮೊಗಡಂಪಳ್ಳಿ, ಸುಬ್ಬಣ್ಣ ತಂದೆ ಅಂಜಪ್ಪ ಎಂಬುವವರು ಕೊಲೆ ಮಾಡಿದ್ದು ಅವರನ್ನು ವಿಚಾರಣೆ ಮಾಡಿದರೆ ಕೇಸು ಪತ್ತೆಯಾಗುತ್ತದೆ ಅಂತ ತಿಳಿಸಿದ ಮೇರೆಗೆ, ದಿನಾಂಕ: 31-07-2013 ರಂದು ಸಿ.ಪಿ.ಐ. ಚಿಂಚೋಳಿ ಹಾಗೂ ಪಿ.ಎಸ್.ಐ.ಚಿಂಚೋಳಿರವರು ಮೇಲ್ಕಾಣಿಸಿದ ಇಬ್ಬರನ್ನು ತಂದು ವಿಚಾರಣೆಗೆ ಒಳಪಡಿಸಿದಾಗ ಅವರು ಇನ್ನಿತರ ಆರೋಪಿತರಾದ ನಾರಾಯಣ ನಾಯ್ಕೂರ್, ಈಶಪ್ಪಾ ನಿರಟರ್,ಝರಣಪ್ಪ ನಿರಟರ್, ಸೈಯ್ಯದ್ ಅಸ್ಫಾಕನು ಚುಡಾಯಿಸಿದ ಹಿನ್ನೆಲೆಯಲ್ಲಿ ಸಿಟ್ಟಾಗಿ ಆರೋಪಿತರೆಲ್ಲರೂ ಒಂದಾಗಿ ಅವನ ಕೊಲೆ ಮಾಡಲು ನಿರ್ಣಯಿಸಿ, ಶಿವರಾತ್ರಿಗಿಂತ 8 ದಿನ ಮುಂಚೆ ಒಂದು ಶನಿವಾರದ ರಾತ್ರಿ ಸೈಯ್ಯದ್ ಅಸ್ಫಾಕನನ್ನು ಪಾರ್ಟಿ ಮಾಡುವದಾಗಿ ಕರೆಯಿಸಿಕೊಂಡು ಅವನನ್ನು ಕೊಡಲಿಯಿಂದ ಕಲ್ಲಿನಿಂದ ಹಾಗೂ ಕೈಯಿಂದ, ಹೊಡೆದು ಕೊಲೆಮಾಡಿ, ಚಂದ್ರಂಪಳ್ಳಿ ಡ್ಯಾಮಿನ ಒಂದು ಕಡೆ ಹೂತಿದ್ದು  ಜೊತೆಯಲ್ಲಿ ಬಂದರೆ ಶವ ಹೂಳಿದ ಜಾಗ ಕೃತ್ಯಕ್ಕೆ ಉಪಯೋಗಿಸಿದ ವಸ್ತುಗಳನ್ನು ತೆಗೆದು ಹಾಜರು ಪಡಿಸುವದಾಗಿ ಒಪ್ಪಿಕೊಂಡು ದಿನಾಂಕ 01-08-2013ರಂದು ಉಪ ವಿಭಾಗ ದಂಡಾಧಿಕಾರಿ ಸೇಡಂ ಇವರನ್ನು ಕರೆಯಿಸಿ ಪಂಚರ ಸಮಕ್ಷಮ ಆರೋಪಿತರು ತೋರಿಸಿದ ಜಾಗ ಅಗೆದು ಹೂತಿದ್ದ ಶವವನ್ನುಹೊರತೆಗೆದು ಪಂಚನಾಮೆ ಮಾಡಿಸಿ, ವೈದ್ಯಾಧಿಕಾರಿಗಳಿಂದ ಮೃತನ ಮರಣೋತ್ತರ ಪರೀಕ್ಷೆ ಮಾಡಿಸಿದ್ದು, ಮೃತನ ಶವವನ್ನು  ಶವದ ಮೇಲಿದ್ದ ಪ್ಯಾಂಟ ಹಾಗೂ ಶರ್ಟಗಳಿಂದ ಮೃತನ ತಮ್ಮ  ಸೈಯ್ಯದ್ ಮೋಸಿನ ಗುರುತಿಸಿದ್ದು. ಸೈಯದ್ ಮೋಸಿನ ಚೌಕಿದಾರ ಸಾ:ಐನೋಳ್ಳಿ  ರವರು ತಮ್ಮ ಅಣ್ಣನ ಕೊಲೆ ಮಾಡಿದ  ಆರೋಪಿತರ ವಿರುದ್ದ ಸಲ್ಲಿಸಿದ ದೂರು ಸಾರಾಂಶದ  ಮೇಲಿಂದ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಆರೋಪಿತರ  ವಿರುದ್ದ ಕೊಲೆ ಪ್ರಕರಣ ದಾಖಲಿಸಿ.  ಆರೋಪಿತರಾದ ಸುಬ್ಬಣ್ಣ , ವೆಂಕಟಪ್ಪ, ನಾರಾಯಣ, ಈಶ್ವರ, ಇವರನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಬಂಧನಕ್ಕೆ ಒಳಪಡಿಸಿದ್ದು ಇನ್ನೊಬ್ಬ ಪರಾರಿಯಾಗಿದ್ದು ಪತ್ತೆ ಕಾರ್ಯ ಜಾರಿಯಲ್ಲಿರುತ್ತದೆ


ಕೊಲೆ ಪ್ರಕರಣ:
ಗ್ರಾಮೀಣ ಠಾಣೆ
ದಿನಾಂಕ: 01/08/2013 ರಂದು ಫಿರ್ಯಾದಿ ಶ್ರೀ ಲಕ್ಷ್ಮೀಕಾಂತ ತಂದೆ ನಾಗೀಂದ್ರಪ್ಪಾ ಪಾಟೀಲ್ ವಯ;24 ವರ್ಷ ಸಾ: ಚೌಡೇಶ್ವರ ಕಾಲೂನಿ ಇವರು ರಾತ್ರಿ ತಮ್ಮ ದಾಬಾದ ವೇಟರ ಕೆಲಸ ಮಾಡುವ ಬಸವರಾಜ ಮಾಲಿಬಿರಾದರ ಇಬ್ಬರು ಕೂಡಿ ಮೋಟಾರ ಸೈಕಲ ಮೇಲೆ ಕೇರಿ ಭೋಸಗಾ ಗ್ರಾಮಕ್ಕೆ ಕೋಳಿ ತರುವ ಕುರಿತು ಹೋಗಿ ಮರಳಿ ದಾಬಾಕ್ಕೆ ಬರುವಾಗ ವಿಜಯ ಬಾಲಾಜಿ ಕಂಕರ ಮಸೀನಕ್ಕೆ ಹೋಗುವ   ಕ್ರಾಸ ಹತ್ತಿರ   ಗುಲಬರ್ಗಾ - ಆಳಂದ ರೋಡ ಮೇಲೆ ಮೋಟಾರ ಸೈಕಲ್ ಮೇಲೆ ಬರುವಾಗ ರೋಡಿನ   ಸದರಿ ರೋಡಿನ ಬದಿಗೆ ಒಬ್ಬ ಯುವಕನು ಬಿದಿದ್ದನು ಆಗ ನಾನು ಮತ್ತು ಬಸವರಾಜ ಹೋಗಿ ಮೋಟಾರ ಸೈಕಲನ ಬೆಳಕಿನಲ್ಲಿ   ನೋಡಲಾಗಿ ಒಬ್ಬ ಅಪರಿಚಿತ ಯುವಕ ವಯ ಅಂದಾಜ 25-30 ವರ್ಷದವನಿದ್ದು ಬೂದು ಬಣ್ಣದ ಬರಮೂಡ ಧರಿಸಿದನು ಶರ್ಟ ಇರಲಿಲ್ಲಾ,ಸದೃಢ ಮೈಕಟ್ಟು ಹೊಂದಿದ್ದು, ಮೈ ಮೇಲೆ ಅಲಲ್ಲಿ ಹರಿತವಾದ ಆಯುಧದಿಂದ ಹೊಡೆದ ರಕ್ತಗಾಯಗಳಿದ್ದು ತಲೆಯ ಹಿಂದುಗಡೆ ಭಾರಿ ರಕ್ತಗಾಯ,ಎಡಕಿವಿಯ ಹಿಂದುಗಡೆಕೆಳಭಾಗದಲ್ಲಿ ಭಾರಿರಕ್ತಗಾಯ,ಮುಖ ರಕ್ತಮಯವಾಗಿದ್ದು ಮೃತ ಪಟ್ಟಿದ್ದನ್ನು,ಸದರಿ ಯುವಕನನ್ನು ಯಾವುದೋ ಉದ್ದೇಶಕ್ಕೆ ಯಾರೋ ದುಷ್ಕರ್ಮಿಗಳು ಎಲ್ಲಿಯೋ ಅಥವಾ ಯಾವುದೋ ಸ್ಥಳದಲ್ಲಿ   ಹರಿತವಾದ ಆಯುಧಗಳಿಂದ ಹೊಡೆದು ಕೊಲೆ ಮಾಡಿ,ಕೊಲೆ ಮಾಡಿರುವದನ್ನು ಗೊತ್ತಾಗ ಬಾರದು ಅಂತಾ   ಉದ್ದೇಶ ಪೂರ್ವಕವಾಗಿ ಮುಖ್ಯ ರಸ್ತೆಯ ಮೇಲೆ ತಂದು ಹಾಕಿ ಹೋದಂತೆ ಕಂಡು ಬರುತ್ತದೆ. ಸದರಿ ಕೊಲೆಯಾದ ಯುವಕ ಅಪರಿಚಿತನಾಗಿದ್ದು   ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ. ಸದರಿ ಕೊಲೆ ಮಾಡಿರುವ ಯುವಕನನ್ನು ತಂದು ರೋಡಿನ ಮೇಲೆ ಹಾಕಿ ಹೋಗಿರುವಂತೆ ಕಂಡುಬರುತ್ತದೆ. ಅಂತಾ ವಗೈರೇ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 367/2013 ಕಲಂ 302,201 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಜೂಜಾಟ ಪ್ರಕರಣ:
ಮುಧೋಳ ಪೋಲಿಸ   ಠಾಣೆ


ದಿನಾಂಕ: 01-08-13 ರಂದು ಜಾಕನಪಲ್ಲಿ ಗ್ರಾಮದ ಹನುಮಾನ ದೇವಗುಡಿಯ ಮುಂದೆ,06-07 ಜನರು ಗುಂಪಾಗಿ ಕುಳಿತು ಜೂಜಾಟವಾಡುತ್ತಿರುವ ಬಗ್ಗೆ ಖಚಿತ  ಮೇರೆಗೆ ಪಂಚರೊಂದಿಗೆ ನಾನು ಹಾಗು ಸಿಬ್ಬಂದಿಯವರು ಜಾಕನಪಲ್ಲಿ ಗ್ರಾಮದ ಹನುಮಾನ ದೇವರ ಗುಡಿಯ ಮುಂದೆ, ಜೂಜಾಟವಾಡುತ್ತಿದ್ದವರಿಗೆ ದಾಳಿ ಮಾಡಿ ಆರೋಪಿತರಾದ 1] ಸಿದ್ದಪ್ಪ ತಂದೆ ನರಸಪ್ಪ ಬ್ಯಾಡರ್,2] ಬಸ್ಸಪ್ಪ ತಂದೆ ಪೊಚಪ್ಪ ಬುಡ್ಡೋಳ 3] ದೇವಿಂದ್ರಪ್ಪ ತಂದೆ ಕಾಶಪ್ಪ ಬ್ಯಾಡರ್ 4] ಭೀಮಶಪ್ಪ ತಂದೆ ಆಶಪ್ಪ ಹೊಸೂರ,5] ಭೀಮಪ್ಪ ತಂದೆ ಕಿಷ್ಟಪ್ಪ ಬ್ಯಾಡರ್ 6] ಕಿಷ್ಟಪ್ಪ ತಂದೆ ಕಾಶಪ್ಪ ಸಾ: ಎಲ್ಲರೂ ಜಾಕನಪಲ್ಲಿ ಹಾಗು 7] ಶ್ಯಾಮಪ್ಪ ತಂದೆ ಬಸ್ಸಣ್ಣ ಬ್ಯಾಡರ್ ಜಾಕನಪಲ್ಲಿ ಇವರಿಂದ ಇಸ್ಪೀಟ ಜೂಜಾಟವಾಡಲು ಪಣಕ್ಕೆ ಹಚ್ಚಿದ ನಗದು ಹಣ ಹಾಗು 52 ಇಸ್ಪೀಟ ಏಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.