POLICE BHAVAN KALABURAGI

POLICE BHAVAN KALABURAGI

21 July 2014

Gulbarga District Reported Crimes

ಕಳವು ಪ್ರಕರಣ :
ಅಶೋಕ ನಗರ ಠಾಣೆ : ದಿನಾಂಕ 20-07-2014 ರಂದು 11-30 ರಿಂದ 5 ಗಂಟೆಯ ಅವದಿಯಲ್ಲಿ ಯಾರೊ ಕಳ್ಳರು ನನ್ನ ಅಂಗಡಿ ಸೆಟರ್ ಮುರಿದು ಒಳಗೆಡೆ ಇರುವ ಝರಾಕ್ಸ ಯಂತ್ರ ಸ್ಟೆಷನರಿ  ಸಾಮಾನುಗಳು ಮತ್ತು ನಗದು ಹಣ 10,000/- ರೂ ಹೀಗೆ ಒಟ್ಟು 24,000/- ರೂ ಬೆಲೆ ಬಾಳುವ ವಸ್ತುಗಳು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ನಾನು ಮುಂಜಾನೆ 5 ಗಂಟೆ ಸುಮಾರಿಗೆ ನಾನು ಮನೆಯ ಹೊರಗಡೆ ಬಂದಾಗ ನೋಡಿರುತ್ತೇನೆ ಅಂತಾ ಶ್ರೀ ಸಾತಪ್ಪ ತಂದೆ ವಿಠಲ ಭಜಂತ್ರಿ ಸಾ: ಪ್ಲಾಟ ನಂ 59/1 ನ್ಯೂ ಘಾಟಗೇ ಲೇಔಟ ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀ ಕಲ್ಯಾಣಿ ತಂದೆ ಮಾಪು ಮಾಂಗ ಸಾ|| ಹೊದಲೂರ ತಾ|| ಆಳಂದ ಇವರ ಮಗನಾದ ಸುನೀಲ ಇತನು ಆಳಂದದಲ್ಲಿ ಐಟಿಐ ವಿದ್ಯಾಭ್ಯಾಸ ಮಾಡಿಕೊಂಡು ಇರುತ್ತಾನೆ, ದಿನಾಂಕ 20/07/2014 ರಂದು ರಾತ್ರಿ 10:00 ಗಂಟೆಯ ಸುಮಾರಿಗೆ ಫೋನ್ ಮೂಲಕ ಮಾಹಿತಿ ತಿಳಿದಿದ್ದೆನೆಂದರೆ ನನ್ನ ಮಗ ಸುನೀಲ್ ಇತನು ನಮ್ಮೂರ ಪ್ರಶಾಂತ & ರಮೇಶ ಇವರು ಎಲ್ಲರೂ ಕೂಡಿ ಹೊದಲೂರದಿಂದ ಖಸಗಿ ಧಾಬಾಕ್ಕೆ ಹೋಗಿ ಊಟ ಮಾಡಿಕೊಂಡು ಬರಬೇಕು ಅಂತಾ ಮೋಟಾರ ಸೈಕಲ್ ನಂ ಕೆಎ 32 ಇಜಿ 594 ನೇದರ ಮೇಲೆ ನನ್ನ ಮಗ ವಾಹನ ಚಲಾಯಿಸಿಕೊಂಡು ಹೋಗುವಾಗ ತನ್ನಿಂದ ತಾನೆ ಬೈಕಿನ ಲೈಟ್ ಆಫ್ ಆಗಿದ್ದದರಿಂದ ದಾರಿ ಗೊತ್ತಾಗದೆ ರೋಡಿನ ಮೇಲೆ ಜವಳಗಾ & ಖಜೂರಿ ಬಾರ್ಡರ್ ನಡುವೆ ಬಿದ್ದು ತಲೆಗೆ ಪೆಟ್ಟಾಗಿ ಕಿವಿಯಿಂದ ರಕ್ತ ಸೋರುತ್ತಿದೆ ಬೆಹೋಷ ಆಗಿ ಬಿದ್ದಿದ್ದಾನೆ ನನಗೆ ಎಡಗೈ ಅಂಗೈಗೆ,ಎಡಗಡೆ ಭುಜಕ್ಕೆ ಪಾದಕ್ಕೆ ಚರ್ಚಿದ ಗಾಯವಾಗಿದೆ, ಪ್ರಶಾಂತನಿಗೆ ಎಡಗಡೆ ಸೊಂಟಕ್ಕೆ ಚಪ್ಪೆಗೆ ಚರ್ಚಿದ ಗಾಯವಾಗಿದೆ, ಅಂತಾ ರಮೇಶನು ನಾಗನಾಥನ ಫೋನಿಗೆ ಫೋನ್ ಮಾಡಿ ವಿಷಯ ತಿಳಿಸಿ ಉಮರ್ಗಾ ದವಾಖಾನೆಗೆ ಒಯ್ಯುತ್ತಿದ್ದೆವೆ ಅಂತಾ ತಿಳಿಸಿದ ಮೇರೆಗೆ ನನಗೆ ರಾತ್ರಿ ಹೋಗಲು ವಾಹನದ ಸೌಕರ್ಯ ಇರದಿದ್ದ ಕಾರಣ ನನ್ನ ಮಗನ ಹತ್ತಿರ ಹೋಗಲು ಆಗಿರುವುದಿಲ್ಲ, ನಂತರ ಸ್ವಲ್ಪ ಸಮಯದ ಮೇಲೆ ನನ್ನ ಮಗ ಸುನೀಲ ಇತನು ಅಪಘಾತದಲ್ಲಿ ಮೋಟಾರ ಸೈಕಲ್ ನೇದನ್ನು ಅತಿವೇಗ & ನಿಷ್ಕಾಳಜಿತನದಿಂದ ಚಲಾಯಿಸಿ ಆಯ ತಪ್ಪಿ ಬಿದ್ದು ಗಾಯಹೊಂದಿ ಮೃತಪಟ್ಟಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Gulbarga District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಜಯಶ್ರೀ ಗಂಡ ಸತೀಷ ಸಂಗಾಣಿ ಸಾ:ಮನೆ ನಂ 98 ಸರಸ್ವತಿ ಬ್ಲಾಕ ಆರ್.ಎಂ.ಪಿ ಕಾಲೋನಿ ಇಲವಾಲ್ ಏರಿಯಾ ಮೈಸೂರ ಹಾ:ವ:ಪ್ಲಾಟ ನಂ 81 ಗುರು ಕೃಪಾ ಜೈಯತಿರ್ಥ ನಗರ ಉದನೂರ ರೋಡ ಗುಲಬರ್ಗಾ ಇವರ ಮದುವೆಯು 02/02/2014 ರಂದು ಗುಲಬರ್ಗಾ ನಗರದ ಕೋಠಾರಿ ಭವನದಲ್ಲಿ ಸತೀಷ ತಂದೆ ಕಲ್ಯಾಣಪ್ಪ ಸಂಗಾಣಿ ಸಾ:ಮಹಾಗಾಂವ ಹಾ:ವ ಮೈಸೂರ ಇವರೊಂದಿಗೆ ಆಗಿದ್ದು ಮದುವೆ ಕಾಲಕ್ಕೆ ತನ್ನ ತವರು ಮನೆಯವರಿಂದ 17 ½ ತೋಲಿ ಬಂಗಾರ ಹಾಗು ಒಂದು ಲಕ್ಷದ ಹನ್ನೋಂದು ಸಾವಿರ ರೂಪಾಯಿ ಹಾಗು ಗೃಹ ಉಪಯೋಗ ಸಾಮಾನುಗಳು ಕೊಟ್ಟು ಮದುವೆ ಮಾಡಿದ್ದು ತನ್ನ ಗಂಡನು ಮದುವೆ ಆದ ನಂತರ ಸರಿಯಾಗಿ ಇದ್ದು ನಂತರ ಗಂಡ ಸತೀಷ ಮಾವ ಕಲ್ಯಾಣಪ್ಪ ಅತ್ತೆ ಕುಸಮಾವತಿ ಇವರು ನಿನಗೆ ಸರಿಯಾಗಿ ಅಡಿಗೆ ಮಾಡಲು ಬರುವುದಿಲ್ಲಾ ನೀನು ನಮ್ಮ ಮನೆಗೆ ಒಪ್ಪುವುದಿಲ್ಲಾ ಹಾಗು ನೀನು ನನ್ನೊಂದಿಗೆ ಇರಬೇಕಾದರೇ ತವರು ಮನೆಯಿಂದ ಕಾರು ಬಂಗಲೇ ಕಟ್ಟಿಸಲು ಹಣ ತೆಗೆದುಕೊಂಡು ಬಾ ಅಂತಾ ದಿನಾಲು ಹೊಡೆ ಬಡೆ ಮಾಡಿ ಮಾನಸಿಕ ಹಾಗು ದೈಹಿಕ ಹಿಂಸೆ ನೀಡಿ ಮನೆಯಿಂದ ತವರು ಮನೆಗೆ ಕಳಿಸಿಕೊಟ್ಟಿದ್ದು ದಿನಾಂಕ: 06/07/2014 ರಂದು ಸಾಯಾಂಕಾಲ 06:00 ಗಂಟೆ ಸುಮಾರಿಗೆ ತನ್ನ ಗಂಡ ಅತ್ತೆ ಮಾವ ಇವರು ತಾನು ವಾಸವಾಗಿರುವ ಜಯತಿರ್ಥ ನಗರ ಸೋದರಮಾವನ ಮನೆಗೆ ಬಂದು ಅಲ್ಲಿಯೂ ಕೂಡಾ ಹೊಡೆ ಬಡೆ ಮಾಡಿರುತ್ತಾರೆ ಮುಂದೆ ಎಲ್ಲಾ ಸರಿ ಹೋಗಬಹದು ಅಂತಾ ತಿಳಿದು ಮನೆಯಲ್ಲಿದ್ದೆ ಇನ್ನುವರೆಗೂ ಕರೆಯಲು ಬಂದಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಿವಕುಮಾರ ತಂದೆ ಶಿವಶರಣಪ್ಪ ಸಿಂದೆ ಸಾ: ಮನೆ ನಂ 3/1 ಎಮ್.ಎಸ್.ಕೆ.ಮೀಲ ಕ್ವಾಟರ್ಸ ಗುಲಬರ್ಗಾ ರವರು ದಿನಾಂಕ 20-07-2014 ರಂದು ರಾತ್ರಿ 8-15 ಗಂಟೆ ಸುಮಾರಿಗೆ ತಮ್ಮ ಮನೆಯಿಂದ ತನ್ನ ಸಂಬಂದಧಿಯಾದ ಸಂಜಯ ಇತನನ್ನು ತನ್ನ ಮೋಟಾರ ಸೈಕಲ ನಂಬರ ಕೆಎ-32 ಇಸಿ-3984 ನೇದ್ದರ ಹಿಂದುಗಡೆ ಕೂಡಿಸಿಕೊಂಡು ಮನೆಯಿಂದ ರೇಲ್ವೆ ಸ್ಟೇಶನ ಏರಿಯಾದಲ್ಲಿ ಹೋಟಲದಲ್ಲಿ ಊಟ ಮಾಡುವ ಸಲುವಾಗಿ ಕೇಂದ್ರ ಬಸ ನಿಲ್ದಾಣದ ಮೂಲಕ ಹೋಗುವಾಗ ರಾವೂರ ಹೇರಟಿಜ ಎದುರಿನ ರೋಡ ಮೇಲೆ ಹಿಂದಿನಿಂದ ಯಾವುದೊ ಒಂದು ಮೋಟಾರ ಸೈಕಲ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋಟಾರ ಸೈಕಲ ಹ್ಯಾಡಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಗಾಯಗೊಳಿಸಿ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಗೆ ಪ್ರಯತ್ನ ಮಾಡಿದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮುನ್ನಾ ಕುಮಾರ ಚೌದರಿ ತಂದೆ ಜಗದೀಶ ಚೌದರಿ ಇವರು ಮಾತನಾಡುವ ಸ್ಥಿತಿಯಲ್ಲಿ ಇರದ ಕಾರಣ ದಿನಾಂಕಃ 20/07/2014 ರಂದು ಬೆಳಗಿನ ಜಾವ 01:45 ಎ.ಎಂ. ಕ್ಕೆ ಶ್ರೀ ಗುರುಪ್ರಸಾದ ಹಾಸ್ಟಲಿನ ಜನರೇಟರ್ ಆಪರೇಟರ ಇವರು ಪೋನ್ ಮಾಡಿ ತಿಳಿಸಿದ್ದೇನೆಂದರೇ, ನಮ್ಮ ಹಾಸ್ಟಲಿನ ಒಬ್ಬ ಹುಡುಗ ಸಿಂಗಲ್ ಬ್ಲಾಕ್ ನಲ್ಲಿರುವ ಇತನು 02 ನೇ ಅಂತಸ್ತಿನಿಂದ ಬಿದ್ದಿರುತ್ತಾನೆ. ಇದರಿಂದ ಆತನ ತಲೆಗೆ ಪೆಟ್ಟಾಗಿದ್ದು ಕಂಡು ಬರುತ್ತದೆ ಅಂತಾ ತಿಳಿಸಿದ್ದು ನಂತರ ನಾನು ನಮ್ಮ ಆಸ್ಪತ್ರೆಗೆ ಸದರಿ ಹುಡುಗನಿಗೆ ನೋಡಲಾಗಿ ಮುನ್ನಾ ಕುಮಾರ ಚೌದರಿ ತಂದೆ ಜಗದೀಶ ಚೌದರಿ ಇತನ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿದ್ದು ಈ ಬಗ್ಗೆ ಆಸ್ಪತ್ರೆಯ ಆಡಳಿತ ರವರಿಗೆ ಸದರಿ ವಿಷಯವನ್ನು ತಿಳಿಸಿದ್ದು ಅಲ್ಲದೇ ಮುನ್ನಾ ಕುಮಾರ ಚೌದರಿ ಇತನ ಸಹೋದರ ದೂರವಾಣಿ ಸಂಖ್ಯೆ 09525414620 ನೇದ್ದಕ್ಕೆ ಕರೆ ಮಾಡಿ ಸದರಿ ವಿಷಯವನ್ನು ತಿಳಿಸಿರುತ್ತೇನೆ. ಸದರಿಯವನು ಆತ್ಮಹತ್ಯೆಗೆ ಪ್ರಯತ್ನಿಸಿರಬಹುದು ಅಥವಾ ತಾನಾಗಿ ಬಿದ್ದಿರಬಹುದು. ಅಂತಾ ಶ್ರೀ ಚಂದ್ರಶೇಖರ ಪಾಟೀಲ ಮೆಡಿಕಲ್ ಹುಡುಗರ ಹಾಸ್ಟಲ್ ವಾರ್ಡನಾದ ಡಾಃ ಎಸ್. ಆರ್ ನಿಗ್ಗುಡಗಿ ತಂದೆ ರಾಜಕುಮಾರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಸಂಜುಕುಮಾರ ತಂದೆ ರೇವಣಸಿದ್ದಪ್ಪ ಉಪ್ಪಾರ  ಸಾ; ರಾಜನಾಳ ಇವರು ದಿನಾಂಕ 19-07-2014 ರಂದು ಸಾಯಾಂಕಾಲ 4 ಗಂಟೆ ಸುಮಾರಿಗೆ ಕಮಲಾಪೂರದಿಂದ ಟಂ,ಟಂ ನಲ್ಲಿ ರಾಜನಾಳ ಗ್ರಾಮಕ್ಕೆ ಬಂದು ನಮ್ಮೂರ ಸರ್ಕಾರಿ ಶಾಲೆಯ ಮುಂದೆ ರಸ್ತೆಯ ಮೇಲೆ ಬರುತ್ತಿದ್ದಾಗ , ನಮ್ಮ ಗ್ರಾಮದ ಉದಯಕುಮಾರ ತಂದೆ ಬಸವರಾಜ ಮಾಳಗೆ, ಲಕ್ಷ್ಮಿಕಾಂತ ತಂದೆ ಬಸವರಾಜ ಮಾಳಗೆ ಇವರು ನನ್ನ ಮುಂದೆ ಬಂದು , ಈ ಹಿಂದೆ ನನ್ನ ತಂಗಿ ಶಿಲ್ಪಾಳ ಕೈ ಹಿಡಿದು ಜಗ್ಗಾಡಿ ವಿಷಯದಲ್ಲಿ ತಕರಾರು ಮಾಡಿಕೊಂಡ ಹಳೆಯ ವೈಷಮ್ಯದಿಂದ ನನಗೆ ತಡೆದು ನಿಲ್ಲಿಸಿ, ಅವಾಚ್ಯ ಶಭ್ದಗಳಿಂದ ಬೈದ್ದು, ಲಕ್ಷ್ಮಿಕಾಂತನು ನನಗೆ   ಕಬ್ಬಿಣದ ರಾಡನಿಂದ ನನ ಎಡಬುಜದ ಹಿಂದೆ ಬೆನ್ನಿಗೆ ಹಾಗೂ ನನ್ನ ಕೈಗಳಿಗೆ ಅಡ್ಡಾದಿಡ್ಡಿಯಾಗಿ ಹೊಡೆದಾಗ ನನ್ನ ಕೈ ಮುರಿದಂತಾಗಿದ್ದು, ಈ ಜಗಳ ನೋಡಿ ಬಸವರಾಜ ಮಾಳಗೆ ಮತ್ತು ಆತನ ಹೆಂಡತಿ ಕವಿತಾ ಮಾಳಗೆ ಇವರು ಬಂದು ನನಗೆ ಹೊಡೆಯುವದನ್ನು ನೋಡಿ, ಇವನಿಗೆ ಬಿಡಬೇಡರಿ ಖಲಾಸ ಮಾಡ್ರಿ ಬಂದಿದ್ದು ನೋಡಿಕೊಳ್ಳುತ್ತಿವಿ ಅಂತ ಪ್ರಚೋದನೆ ನೀಡಿದ್ದಾಗ ಉದಯಕುಮಾರನು ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ತೊಡ್ಡಿಗೆ ಹಾಗೂ ಹೊಟ್ಟೆಗೆ ಬಕನೆ ಒದ್ದು ,ಲಕ್ಮಿಕಾಂತನು ನನಗೆ ಮನಸ್ಸಿಗೆ ಬಂದತೆ ಎಲ್ಲಿ ಬೇಕಲ್ಲಿ ಹೊಡೆಬಡೆ ಮಾಡಿರುತ್ತಾನೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀಮತಿ ಅಕ್ಕಮಹಾದೇವಿ ಗಂಡ ಸಿದ್ರಾಮಪ್ಪ ಪಾಟೀಲ ಸಾ|| ಮನೆ ನಂ. ಹೆಚ್‌ಐಜಿ-25 ಹೌಸಿಂಗ ಬೋರ್ಡ ಕಾಲೂನಿ ಗುಲಬರ್ಗಾ ರವರು ದಿನಾಂಕ. 19.07.2014 ರಂದು 8.00 ಪಿ.ಎಂಕ್ಕೆ ನಮ್ಮ ಮನೆಗೆ ಕೀಲಿ ಹಾಕಿಕೊಂಡು ಕೊರ್ಟ ಹಿಂದುಗಡೆ ಇರುವ ನನ್ನ ಮಗಳ ಮನೆಗೆ ಹೋಗಿ ಅಲ್ಲಿಯೇ ಇದ್ದೇನು ಇಂದು ದಿನಾಂಕ. 20.07.2014 ರಂದು ಬೆಳಿಗ್ಗೆ 7.00 ಗಂಟೆಗೆ ನಮ್ಮ ಪಕ್ಕದ ಮನೆಯವರಾದ ಶ್ರೀ ವೀರಣ್ಣಾ ರವರು ನಿಮ್ಮ ಮನೆಯ ಬಾಗಿಲು ತೆರದಿದೆ ಬಂದು ನೋಡರಿ ಅಂತಾ ತಿಳಿಸಿದ ಮೇರೆಗೆ ನಾನು ಬೆಳಿಗ್ಗೆ 8.00 ಗಂಟೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿರುವ ಎಲ್ಲಾ ಅಲಮಾರಿಗಳನ್ನು ತೆರೆದು ಬೆಡರೂಮಿನ ಅಲಮಾರಿಯಲ್ಲಿಟ್ಟಿದ್ದ ಎರಡು ತೊಲೆಯ ಬಂಗಾರದ ಗೋದಿಮಣಿ ಸರ ಅ.ಕಿ|| 50,000/- ರೂ ನೆದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.