POLICE BHAVAN KALABURAGI

POLICE BHAVAN KALABURAGI

29 October 2013

Gulbarga District Reported Crimes

ಹಲ್ಲೆ ಪ್ರಕರಣಗಳು :
ವಾಡಿ ಠಾಣೆ : ಶ್ರೀ  ಇರ್ಫನ ತಂದೆ ಮಹ್ಮದ ಇಬ್ರಾಹಿಂ ಸಾಬ ಕೆ.ಇ.ಬಿ ವಾಲೆ  ಸಾ||ಫತೆ ಮಂಜೀಲ್ ವಾಡಿ ರವರು ದಿನಾಂಕ 28-10-2013 ರಂದು ರಾತ್ರಿ 7-00 ಸುಮಾರು ಅಬ್ಜಲ್ ಈತನು ನಮಾಜ ಮೂಗಿಸಿಕೊಂಡು ಮನೆಗೆ ಬರುವಾಗ ಶೆಲ್ಲು ತಂದೆ ಮಹ್ಮದ ಪಟೇಲ ಈತನು ಜಗಳ ಮಾಡಿ ಕೈಯಿಂದ ಹೊಡೆಬಡೆ ಮಾಡಿದ್ದು ಈ ವಿಷಯ ಶಮಶಿರ ತಂದೆ ನಾಸೀರ ಈತನಿಗೆ ಫೊನ ಮಾಡಿ ತಿಳಿಸಿದ್ದಕ್ಕೆ ಅದೆ ವೈಮನಸ್ಸಿನಿಂದ ರಾತ್ರಿ 8 ಗಂಟೆಯ ಸುಮಾರು ಇರ್ಪಾನ ಈತನು ಒಲಿಮಾ ದಾವತಕ್ಕೆ ಕಮಲಿಬಾಬಾ ದರ್ಗಾದ ಪಕ್ಕದಲ್ಲಿರುವ ಶಾದಿಖಾನಕ್ಕೆ ಹೊಗುವ ಕಾಲಕ್ಕೆ ಇರ್ಫಾನ ತಂದೆ ಮಹ್ಮದ ಪಟೇಲ್ ಸದ್ದಾಂ ತಂದೆ ಮಹ್ಮದ ಪಟೆಲ್, ಶಲ್ಲು ತಂದೆ ಮಹ್ಮದ ಪಟೆಲ್, ಇಮ್ರಾನ ಹಾಗು ಸಂಗಡ 8,10 ಜನರು ಕೈಯಲ್ಲಿ ರಾಡ ಮತ್ತು ತಲವಾರ ಹಿಡಿದುಕೊಂಡು ಬಂದವರೆ ಇರ್ಪಾನ ಈತನಿಗೆ ಸುತ್ತುವರೆದು ತಡೆದು ನಿಲ್ಲಿಸಿ ಇರ್ಪಾನ ಈತನು ಮಾರೊ ಸಾಲೆಕು, ಹಮಾರಾ ಭಾಯಿ ಶಮಶಿರಕೊ ಫೊನ ಕರಕೆ ಬೊಲತಾ ಸಾಲೆ ಅಂತಾ ಬೈಯುತ್ತಿದ್ದಂತೆ ಸದ್ದಾಂ ತನ್ನ ಕೈಯಲ್ಲಿದ್ದ ತಲವಾರದಿಂದ ತೆರೆಕು ಖಲಾಸ ಕರತಾಹು ಅಂತಾ ಕುತ್ತಿಗೆಗೆ ಹೊಡೆಯಲು ಹೊದಾಗ ತಪ್ಪಿಸಿಕೊಳ್ಳಲು ಎಟು ತಲೆಯ ಮದ್ಯದಲ್ಲಿ ಬಿದ್ದು ಖಾರಿ ರಕ್ತಗಾಯವಾಗಿದ್ದು ಮೈತುಂಬ ಗಾಯಗಳಾಗಿದ್ದು ನನಗೆ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಫರತಾಬಾದ ಠಾಣೆ : ಕುಮಾರಿ  ಭೀಮಾರತಿ ತಂದೆ ದೇವಿಂದ್ರಪ್ಪಾ ಭಾಸಗಿ  ಸಾ: ಜೋಗೂರು ತಾ:ಜಿ: ಗುಲಬರ್ಗಾ ಇವರು ದಿನಾಂಕ: 28-10-2013 ರಂದು ಬೆಳಗ್ಗೆ 10-00 ಗಂಟೆಯ ಸುಮಾರಿಗೆ ತಮ್ಮ ಹೊಲ ಸರ್ವೆ ನಂ: 18 ರಲ್ಲಿ ನಾನು, ನಮ್ಮ ತಾಯಿ ಜಗದೇವಿ ಮತ್ತು ನನ್ನ ತಮ್ಮ ಶರಣು ಭಾಸಗಿ ಎಲ್ಲರು ಕೂಡಿ ನಮ್ಮ ಹೊಲದಲ್ಲಿ ಹತ್ತಿ ಬೆಳೆಗೆ ಎಣ್ಣೆ ಹೊಡೆಯಲು ಹೋಗಿರುತ್ತೇವೆ. ನಮ್ಮ ಹೊಲದ ಪಕ್ಕದಲ್ಲಿರುವ ಇರುವ ನಮ್ಮ ದೊಡ್ಡಪ್ಪನಾದ ಬೈಲಪ್ಪಾ ಭಾಸಗಿ ಇವರ ಎತ್ತುಗಳು ಸಾಯಂಕಾಲ 5-00 ಗಂಟೆಯ ಸುಮಾರಿಗೆ ನಮ್ಮ ಹೊಲದಲ್ಲಿ ಬಂದು ಮೆಣಸಿನ ಬೆಳೆ ಹಾಳು ಮಾಡುತ್ತಿರುವದನ್ನು ನೋಡಿ ನಮ್ಮ ತಮ್ಮನು ದೊಡ್ಡಪ್ಪನಿಗೆ ನಿಮ್ಮ ಎತ್ತುಗಳು ಹೊಡೆದುಕೊಳ್ಳಿ ಅಂತಾ ಅಂದಾಗ ಸದರಿ ನಮ್ಮ ದೊಡ್ಡಪ್ಪ ಬೈಲಪ್ಪನು ನಮ್ಮ ತಮ್ಮನಿಗೆ ಏ ಭೊಸಡಿ ಮಗನೇ ನಿಮದು ಬಹಳ ಆಗ್ಯದಾ ಅಂತಾ ಬೈಯುತ್ತಿದ್ದಾಗ ನಾನು ಯಾಕೇ ಬೈಯುತ್ತಿ ದೊಡ್ಡಪ್ಪ ಅಂತಾ ಅಂದಾಗ ನಮ್ಮ ದೊಡ್ಡಪ್ಪ ಬೈಲಪ್ಪ,  ದೊಡ್ಡವ್ವ ಅಂಬಾಬಾಯಿ, ಬೈಲಪ್ಪನ ಮಗ ನಾಗಪ್ಪಾ ಭಾಸಗಿ  ಹಾಗೂ ನಮ್ಮೂರಿನ ಶ್ರೀಶೈಲ ಸಣ್ಣಮನಿ, ಹುಲೇಪ್ಪಾ ಸಣ್ಣಮನಿ ಇವರೆಲ್ಲರೂ ಕೂಡಿಕೊಂಡು ನಮ್ಮ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಬಂದವರೇ ಅವರಲ್ಲಿ ದೊಡ್ಡಪ್ಪ ಬೈಲಪ್ಪನು ನನಗೆ ಏ ರಂಡಿ ನಿಮದು ಬಹಳ ಆಯಿತು ಅಂತಾ ಅನ್ನುತ್ತಾ ನನಗೆ ಕೈಯಿಂದ ಕಪ್ಪಾಳ ಮೇಲೆ ಹೊಡೆದು ಕಾಲಿನಿಂದ ಹೊಟ್ಟೆಯ ಮೇಲೆ ಒದ್ದು ಗುಪ್ತಗಾಯ ಮಾಡಿರುತ್ತರೆ  ಎಲ್ಲರು ಕುಡಿ ನನಗೆ ಎಳದಾಡಿ ಕಟ್ಟಿಗೆಯಿಂದ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಮಟಕಾ ಜೂಜಾಟ ನಿರತವರ ಬಂಧನ :
ಫರತಾಬಾದ ಠಾಣೆ : ದಿನಾಂಕ: 28-10-2013 ರಂದು ಮದ್ಯಾಹ್ನ 3-30 ಗಂಟೆಗೆ ಶ್ರೀ ಶರಣಪ್ಪಾ ಯು. ಪಿ.ಐ ಡಿಸಿಐಬಿ ಘಟಕ ಗುಲಬರ್ಗಾ ರವರು ಠಾಣೆಗೆ ಬಂದು ಹಾಜರಾಗಿ ವರದಿ ಮತ್ತು ಜಪ್ತಿ ಪಂಚನಾಮೆ ನೀಡಿದ್ದರ ಸಾರಾಂಶವೆನೆಂದರೆ, ದಿನಾಂಕ:28-10-2013 ರಂದು ಫರಹತಬಾದ ಪೊಲೀಸ್ ಠಾಣೆಯ ವ್ಯಾಪ್ತಿಯ ಪೈಕಿ ತಾಡ ತೆಗನೂರ ಗ್ರಾಮದ ಮರಗೇಮ್ಮ ಗುಡಿಯ ಹತ್ತಿರ ಎರಡು ಜನರು ದೈವ ಲೀಲೆಯ ಮಟಕಾ ಜೂಜಾಟ ನಡೆಯಿಸುತ್ತಿರುವ ಬಗ್ಗೆ ಮಾಹಿತಿ ಬಂದ ಮರೆಗೆ ನಮ್ಮ ಸಿಬ್ಬಂದಿವರಾದ 1) ಬಸವರಾಜ ಎ.ಎಸ್.ಐ    2) ದತ್ತಾತ್ರಯ ಎ.ಎಸ್.ಐ 3) ಅಣ್ಣಪ್ಪಾ ಹೆಚ್,ಸಿ 332 4) ಬಸವರಾಜ ಹೆಚ್,ಸಿ 409, 5) ಶಿವಯೋಗಿ ಹೆಚ್,ಸಿ 220 6) ಸುರೇಶ ಹೆಚ್ಚ,ಸಿ 431, 7) ಲಕ್ಕಪ್ಪಾ ಹೆಚ್,ಸಿ 260, 8) ಮಲ್ಲಣ್ಣ ಹೆಚ್,ಸಿ 98 ಹಾಗೂ ನಮ್ಮ ಜೀಪ ಚಾಲಕ ಈರಣ್ಣಾ ಎಪಿಸಿ 49 ಕೂಡಿಕೊಂಡು ನಮ್ಮ ಪೊಲೀಸ್ ಜೀಪ್ ನಂ: ಕೆಎ-32 ಜಿ-476 ಮುಖಾಂತರ ಫರಹತಾಬಾದ ಪೊಲೀಸ್ ಠಾಣೆಗೆ ಬಂದು ಸದರಿ ಮಟಕಾ ಜೂಜಾಟ ನಡೆಯುಸುತ್ತಿದ್ದ ಖಚಿತ ಪಡಿಸಿಕೊಂಡು ಠಾಣೆಗೆ ಇಬ್ಬರು ಪಂಚರನ್ನು  ಬರಮಾಡಿಕೊಂಡು ವಿಷಯ ತಿಳಿಸಿದ ನಂತರ ಪಿ.ಎಸ್.ಐ ಫರಹತಾಬಾದ ಮತ್ತು ಅವರ ಸಿಬ್ಬಂಧಿಯವರಾದ 1) ಪ್ರಕಾಶ ಸಿಪಿಸಿ 1065, 2) ಮಲ್ಲಿಕಾರ್ಜುನ ಸಿಪಿಸಿ 463, 3) ವಿಜಯಕುಮಾರ ಸಿಪಿಸಿ 908 4) ಕಿಶೋರ ಸಿಪಿಸಿ 1010 ಎಲ್ಲರೂ ಕೂಡಿಕೊಂಡು ಫರಹತಾಬಾದ ಪೊಲೀಸ್ ಠಾಣೆಯ ಜೀಪಿನಲ್ಲಿ ಹಾಗೂ ನಮ್ಮ ಜೀಪಿನ ಮೂಖಾಂತರ ತಾಡ ತೆಗನೂರ ಗ್ರಾಮದ ಹೋರ ವಲಯದಲ್ಲಿರುವ ಮರೆಗೆಮ್ಮ ಗುಡಿಯ ದೂರದಲ್ಲಿ ಗಿಡಗಂಟೆಗಳ ಪಕ್ಕದಲ್ಲಿ ನಿಂತ್ತು ನೋಡಲು ಒಬ್ಬ ಮನುಷ್ಯನು ಗುಡಿಯ ಮುಂದೆ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಕರೆದು 1 ರೂಪಾಯಿಗೆ 80 ರೂಪಾಯಿ ಅಂತಾ ಕೊಡುತ್ತೇವೆ ಅಂತಾ ಮಟಕಾ ಜೂಜಾಟ ಆಡುವಂತೆ ಕರೆಯುತ್ತಿದ್ದನು. ಇನ್ನೊಬ್ಬನು ಅವನ ಹತ್ತಿರ ಕುಳಿತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ಚೀಟಿ ಬರೆದು ಕೊಡುವುದನ್ನು ನೋಡಿ ಪಂಚರಿಗೆ ತೋರಿಸಿ ನಂತರ ಪೊಲೀಸರು ಆ ಎರೆಉ ಜನರಿಗೆ ಮುತ್ತಿಗೆ ಹಾಕಿ ಹಿಡಿದು ವಿಚಾರಿಸಲು ಅವರಲ್ಲಿ ಒಬ್ಬನು ತನ್ನ ಹೆಸರು 1) ಮಹಾಂತಪ್ಪಾ ತಂದೆ ಚಂದ್ರಶ್ಯಾ ಹರಕಂಚಿ ಸಾ: ತಾಡ ತೆಗನೂರ ಅಂತಾ ತಿಳಿಸಿದ ಸದರಿಯವನು ದಾರಿಯಿಂದ ಹೋಗಿ ಬರುವ ಜನರಿಗೆ ಮಟಕಾ ಜೂಜಾಟ ಆಡಲು ಆಹ್ವಾನಿಸುತ್ತಿದ. 2) ಈಶ್ವರರಾಜ ತಂದೆ ಸೈಬಣ್ಣಾ ಕಡಣಿ ಸಾ: ತಾಡತೆಗನೂರ ಅಂತಾ ತಿಳಿಸಿದ ಸದರಿಯವನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ಚೀಟಿ ಬರೆದು ಕೊಡುತ್ತಿದ್ದ. ಸದರಿಯವರನ್ನು ತಮ್ಮ ಲಾಭಕ್ಕಾಗಿ ಮಟಕಾ ಜೂಜಾಟ ನಡೆಸುತ್ತಿರುವವನ್ನು ಮಟಕಾ ಬುಕ್ಕಿ ನಡೆಸುತ್ತಿದ್ದ ರಾಜಶೇಖರ ಪಾಟೀಲ ಕಮನೂರ ಸಾ:ಗಣೇಶ ನಗರ ಗುಲಬರ್ಗಾ ರವರಿಗೆ ಕೊಡುತ್ತಿದ್ದ ಬಗ್ಗೆ ತಿಳಿಸಿದರು. ಪಿ.ಐ ಸಾಹೇಬರು ಸದರಿ ಇಬ್ಬರಿಗು  ದಸ್ತಗಿರಿ ಮಾಡುವ ಬಗ್ಗೆ ತಿಳಿಸಿ ಅವರ ಅಂಗ ಜಡತ ಮಾಡಲು ಮಹಾಂತಪ್ಪ ಈತನ ಹತ್ತಿರ 2000=00 ರೂಪಾಯಿ ಹಾಗೂ ಎರಡು ಮೊಬೈಲ್‌ಗಳು ಒಂದು ಕಾರ್ಬನ್ ಕಂಪನಿಯದ್ದು , ಮತ್ತೊಂದು ನೊಕಿಯ ಕಂಪನಿಯದಾಗಿರುತ್ತದೆ. ಸದರ ಹಣ ಮಟಕಾ ಜೂಜಾಟಕ್ಕೆ ಸಂಬಂಧಿಸಿದ್ದು ಅಂತಾ ತಿಳಿಸಿ ಎರಡು ಮೊಬೈಯಲ್‌ಗಳು ಮಟಕಾ ಜೂಜಾಟ ನಡೆಸಲು ಉಪಯೋಗಿಸುತ್ತಿದ್ದ ಬಗ್ಗೆ ತಿಳಿಸಿದನು. ಈಶ್ವರರಾಜ ನ ಅಂಗ ಜಡತಿ ಮಾಡಲು ಅವರ ಹತ್ತಿರ 20,000=00 ರೂಪಾಯಿಗಳು ಮತ್ತು ಎರಡು ಮೊಬೈಯಲ್ಗಳು ಅದರಲ್ಲಿ ಒಂದು ಐಡಿಯಾ ಕಂಪನಿಯದ್ದು, ಮತ್ತೊಂದು ಸ್ಪೈಸ್ ಕಂಪನಿಯದಾಗಿರುತ್ತವೆ. ಮತ್ತು ಮಟಕಾ ನಂಬರ ಬರೆದ ಒಂದು ಚೀಟಿ, ಒಂದು ಬಾಲ ಪೆನ್ ಸಿಕ್ಕವು. ಸದರಿಯವುಗಳು ಮಟಕಾ ಜೂಜಾಟಕ್ಕೆ ಬಳಸಿದವುಗಳಾಗಿರುತ್ತವೆ ಅಂತಾ ಹೇಳಿದನು. ಸದರ ನಾಲ್ಕು ಮೊಬೈಯಲ್ ಗಳ ಒಟ್ಟು ಅಂದಾಜು ಕಿಮ್ಮತ್ತು 5,000=00 ರೂ. ಆಗಬಹುದು. ಸದರ ನಗದು ಹಣ 22,000=00 ರೂ, 4 ಮೊಬೈಯಲ್, ಮಟಕಾ ಚೀಟಿ, ಒಂದು ಬಾಲ ಪೆನ್ನ ಗಳು ಆರೋಪಿತರಿಂದ ಜಪ್ತಿ ಮಾಡಿಕೊಂಡಿದ್ದು ಆರೋಪಿತರು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಈ ಕೃತ್ಯ ಮಾಡಿರುತ್ತಾರೆ ಅಂತಾ ವರದಿಯನ್ನು ಸಲ್ಲಿಸಿದ್ದುರ ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 28-10-2013 ರಂದು 2:00 ಪಿ.ಎಮ್ ಕರಜಗಿ ಗ್ರಾಮದ ಐ,ಬಿ ಮುಂದೆ ರೊಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿದ್ದ  ಸಿಬ್ಬಂದಿಯವರೊಂದಿಗೆ ಮತ್ತು ಪಂಚರೊಂದಿಗೆ ಠಾಣೆಯ ಕೀಪಿನಲ್ಲಿ 03:00 ಪಿ ಎಮ್ ಕ್ಕೆ ಸ್ಥಳಕ್ಕೆ ಹೊಗಿ ಸ್ವಲ್ಪ ದೂರು ಮರೆಯಾಗಿ ನಿಂತುಕೊಂಡು ನೋಡಲಾಗಿ. ಕರಜಗಿ ಗ್ರಾಮದ ಐ..ಬಿ ಮುಂದುಗಡೆ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಯನ್ನು ಬರೆದು ಕೋಳ್ಳುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ 1) ಸಿದ್ದಪ್ಪ ತಂದೆ ದೇವರು ಹೋರ್ತಿ 2) ಮಂಜುನಾಥ ತಂದೆ ವಿಠೋಬಾ ಹೋರ್ತಿ ಸಾ|| ಇಬ್ಬರು ಕರಜಗಿ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಠಾಣೆಗೆ ಬಂದು ಅಫಜಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 
ಅಫಜಲಪೂರ ಠಾಣೆ : ದಿನಾಂಕ 28-10-2013 ರಂದು 5:30 ಪಿ.ಎಮ್ ಕ್ಕೆ ಮಣ್ಣೂರ  ಗ್ರಾಮದ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿದ್ದ ಸಿಬ್ಬಂದಿ ಇಬ್ಬರು ಪಂಚರ ಸಮಕ್ಷಮ ಠಾಣೆಯ ಜೀಪಿನಲ್ಲಿ ಮಣೂರ ಗ್ರಾಮಕ್ಕೆ ಹೊಗಿ 7:00 ಪಿ ಎಮ್ ಕ್ಕೆ ಸ್ಥಳಕ್ಕೆ ಹೊಗಿ ಸ್ವಲ್ಪ ದೂರು ಮರೆಯಾಗಿ ನಿಂತುಕೊಂಡು ನೋಡಲಾಗಿ. ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಯನ್ನು ಬರೆದು ಕೋಳ್ಳುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ನಾಗು @ ನಾಗಪ್ಪ ತಂದೆ ಶಾಂತಪ್ಪ ಪಾಟೀಲ ಸಾ|| ಮಣ್ಣೂರ ಇತನನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಮೌಲಾಲಿ ತಂದೆ ಲಾಲಸಾಬ ಕಡಬೂಡ ಸಾ ಮಾಡಿಯಾಳ ತಾ : ಆಳಂದ ರವರು   ದಿನಾಂಕ 28-10-2013 ರಂದು ತಾಜ ಮುಸ್ಲೀಮ ಸಂಘದಲ್ಲಿ ತಮ್ಮ ಸಂಬಂಧೀಕರ ಮದುವೆ ಕಾರ್ಯಕ್ರಮಕ್ಕೆ ತನ್ನ ಹೀರೋ ಹೊಂಡಾ ಸಿಡಿ 100 ನಂ ಕೆಎ 25 ಕೆ 3696 ನೇದ್ದನ್ನು ತೆಗೆದುಕೊಂಡು ಬಂದಿದ್ದು ಕಾರ್ಯಕ್ರಮ ಮುಗಿಸಿಕೊಂಡು  ಮಾಡಿಯಾಳ ಗ್ರಾಮಕ್ಕೆ ವಾಪಾಸ ಹೋಗುವಾಗ ಪಟ್ಟಣ ಕ್ರಾಸ ಹತ್ತಿರ 11-30 ಗಂಟೆಯ ಸುಮಾರಿಗೆ ಎದುರಿನಿಂದ ಯಾವುದೋ ವಾಹನ ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನನ್ನ ಮೋಠಾರ ಸೈಕಲ್ಲಗೆ ಅಪಘಾತಪಡಿಸಿದ್ದರಿಂದ ನನಗೆ ಭಾರಿಗಾಯಗಾಳಾಗಿದ್ದು ತನ್ನ ವಾಹನ ಸಮೇತ ಓಡಿಹೋಗಿರುತ್ತನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಮೈನೊದ್ದಿನ ತಂದೆ ಮಹ್ಮದ ಸಾಬ ನಧಾಫ ರವರು ದಿನಾಂಕ 28-10-2013 ರಂದು 3-30ಪಿ,ಎಮ್ ಕ್ಕೆ ನಾನು ಮತ್ತು ಖಾಸಿಮನಬೀ ಮೂರು ಜನರು ಕೂಡಿಕೊಂಡು ಎಮ್.ಎಸ್.ಕೆ.ಮೀಲ ಕಡೆಯಿಂದ ಕೇಂದ್ರ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಣ್ಣಿ ಮಾರ್ಕೆಟ ಹತ್ತಿರ ರೋಡಿನ ಮೇಲೆ ಮೋಟಾರ ಸೈಕಲ ನಂಬರ ಕೆಎ-32 ವಿ-3830 ನೇದ್ದರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ :
ಬ್ರಹ್ಮಪೂರ ಠಾಣೆ : ದಿನಾಂಕ: 28-10-2013 ರಂದು 1700 ಗಂಟೆಗೆ ಅಶೋಕ ಸಿಪಿಸಿ 494 ಬ್ರಹ್ಮಪೂರ ಪೊಲೀಸ್ ಠಾಣೆ ಗುಲಬರ್ಗಾ ರವರು  ಠಾಣೆಗೆ ಹಾಜರಾಗಿ ವರದಿ ನೀಡುವುದೆನಂದರೆ. ದಿನಾಂಕ: 26-10-2013 ರಂದು ನಾನು ಜಿಲ್ಲಾ ಸರಕಾರಿ ಆಸ್ಪತ್ರೆಯ ಓ.ಪಿ ಕರ್ತವ್ಯದ ಮೇಲೆ ಇದ್ದಾಗ ಅಪರಿಚಿತ ವಯಸ್ಸಾಗಿದ್ದ ಹೆಣ್ಣು ಮಗಳನ್ನು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ 108 ಆರೋಗ್ಯ ಕವಚದ ವಾಹನದವರು ಸೇರಿಕೆ ಮಾಡಿದ್ದುಸದರಿ ಹೆಣ್ಣು ಮಗಳು ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ: 28-10-2013 ರಂದು ಬೆಳಿಗ್ಗೆ  10:30 ಗಂಟೆಯ ಸುಮಾರಿಗೆ ಮರಣ ಹೊಂದಿದ್ದು ಇರುತ್ತದೆ. ಸದರಿ ಹೆಣ್ಣು ಮಗಳ ವಾರಸುದಾರರು ಯಾರು ಎಂಬುದು ಗೊತ್ತಾಗಿರುವದಿಲ್ಲ. ಅಂದಾಜು ವಯಸ್ಸು 60-65ರ ವರೆಗೆ ಇರುತ್ತದೆ. ಯಾವುದೋ ಒಂದು ಕಾಯಿಲೆಯಿಂದ ನರಳಿ ಮರಣ ಹೊಂದಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶ್ರಿಕಾಂತ ತಂದೆ ಶಿವಶರಣಪ್ಪಾ ಖಾನಾಪುರ ಸಾಃ ಗುಬ್ಬಿಕಾಲೊನಿ ಗುಲಬರ್ಗಾ ಇವರು ಮತ್ತು  ಹೆಂಡತಿ ಮಕ್ಕಳ್ಳೊಂದಿಗೆ ಹಬ್ಬವಿದ್ದ ಪ್ರಯುಕ್ತ ಗಾಜಿಪುರದ ಮಾರ್ಕೇಟಗೆ ಹೊಗಿ ನನ್ನ ಹೆಂಡತಿಯ ಅಕ್ಕನ ಹತ್ತಿರ ಬಿಟ್ಟು ಮರಳಿ ನಾನು 03:00 ಪಿ,ಎಂ,ಕ್ಕೆ ಎಲ್,ಜಿ ಬಾರಗೆ ಹೊಗಿ ಶರಾಯಿ ಕುಡಿದು ಮನೆಗೆ 04:00 ಪಿ,ಎಂ, ಕ್ಕೆ ಬಂದು ನೊಡಲು ಮನೆಯ ಬಾಗಿಲದ ಕಿಲಿಕಪ್ಪೆ ಇರಲಿಲ್ಲಾ, ನಂತರ ಮನೆಯೊಳಗೆ ಹೊಗಿ ಅಲಮಾರಿಯನ್ನು ನೊಡಲು ಅಲಮಾರಿಯಲ್ಲಿಟ್ಟ 1) 59 ಗ್ರಾಂ ಬಂಗಾರದ ಆಭರಣ ಮತ್ತು 16 ತೊಲೆ 05 ಗ್ರಾಂ ಬೆಳ್ಳಿಯ ಆಭರಣಗಳು ಇರಲಿಲ್ಲಾ, ಹೀಗೆ ಒಟ್ಟು ಅಃಕಿಃ 1,40,000/ರೊ ಬೆಲೆ ಬಾಳುವ ಸಾಮಾನುಗಳು ಇರಲಿಲ್ಲಾ, ಎಲ್ಲಾ ಸಾಮಾನುಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದು ನಂತರ  ನನ್ನ ಹೆಂಡತಿಗೆ ಪೋನ ಮಾಡಿ ಮನೆಗೆ ಬರಲು ತಿಳಿಸಿದೆನು, ಮನೆ ಕಳ್ಳತನವಾದ ದುಖಃ ದಲ್ಲಿ  ಗಾಬರಿಗೊಂಡು ಆ ದಿವಸ ಪಿರ್ಯಾಧಿ ಕೊಡದೆ ಇಂದು ತಡವಾಗಿ ಬಂದು ಪಿರ್ಯಾದಿಯನ್ನು ಕೊಟ್ಟಿರುತ್ತೆನೆ, ಕಾರಣ ದಿನಾಂಕಃ 25-10-2013 02:30 ಪಿ.ಎಂ. ದಿಂದ 04:00 ಪಿ.ಎಂ. ರ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಕೀಲಿ ಮುರಿದು ಮನೆಯೊಳಗೆ ಪ್ರವೇಶ ಮಾಡಿ ಅಲಮಾರಿಯಲ್ಲಿಟ್ಟ ಬಂಗಾರ ಮತ್ತು ಬೆಳ್ಳಿಯ ಆಬರಣಗಳು ಹಾಗು ಸಾಮಾನುಗಳು ಅಃಕಿಃ 1,40,000/- ರೂ. ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಎಮ್.ಬಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ವಿಶ್ವವಿದ್ಯಾಲಯ ಠಾಣೆ : ದಿನಾಂಕ: 28-10-2013 ರಂದು 12-30 ಪಿಎಮಕ್ಕೆ ಸುಮಾರಿಗೆ ಠಾಣೆಯ ಹದ್ದಿಯ ಪೈಕಿ ಬಾಪೂ ನಾಯಕ ತಾಂಡಾದ ಸಂತೋಷ ತಂದೆ ಶಂಕರ ಜಾಧವ ಇವರ ಮನೆಯ ಎದುರು ಅನಧೀಕೃತವಾಗಿ ಯಾವುದೆ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಧ್ಯ ಮಾರಾಟ ಮಾಡುತ್ತಿದ್ದಾರೆಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಮತ್ತು ಠಾಣೆಯಲ್ಲಿದ್ದ ಶ್ರೀ ಪ್ರದೀಪ ಭಿಸೆ ಪಿ.ಎಸ.ಐ(ಅವಿ), ಸಿಬ್ಬಂದಿಯವರಾದ ರವೀಂದ್ರ ಸಿಪಿಸಿ-227, ಮಶಾಕ ಪಿಸಿ-556, ರವರಿಗೆ ಕರೆದುಕೊಂಡು ಠಾಣೆಯ ಸರಕಾರಿ ಜೀಪ ನಂ. ಕೆಎ-32-ಎಂ-1594 ನೇದ್ದರಲ್ಲಿ ಕರೆದುಕೊಂಡು 1-00 ಪಿ.ಎಮಕ್ಕೆ ಠಾಣೆಯಿಂದ ಶಹಬಾದ ರೋಡ ಮುಖಾಂತರ ಹೊರಟು ಬಾಪೂ ನಾಯಕ ತಾಂಡಾದ ಸಂತೋಷ ಜಾಧವ ಇವರ ಮನೆ ಇನ್ನು ಮುಂದೆ ಇರುವಂತೆ ಜೀಪ ನಿಲ್ಲಿಸಿ ಇಳಿದು ಬಾಪೂ ನಾಯಕ ತಾಂಡಾದ ಒಂದು ಮನೆಯ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬನು ಮನೆಯ ಮುಂದೆ ನಿಂತು ಗಿರಾಕಿಗಳಿಗೆ ಮಧ್ಯದ ಬಾಟಲಗಿಳನ್ನು ಮಾರಾಟ ಮಾಡುತ್ತಿದ್ದು ಅವರಿಂದ ಹಣವನ್ನು ಪಡೆದುಕೊಳ್ಳುತ್ತಿದ್ದುದ್ದನ್ನು ನೋಡಿ ಖಚಿತ ಪಡಿಸಿಕೊಂಡು ನಾನು ಮತ್ತು ಪಿ.ಎಸ.ಐ(ಅವಿ) ಹಾಗೂ ಸಿಬ್ಬಂದಿಯವರ ಸಹಾಯದಿಂದ ಮುತ್ತಿಗೆ ಹಾಕಿ ಮನೆಯ ಮುಂದೆ ನಿಂತು ಮಧ್ಯದ ಬಾಟಲಿಗಳನ್ನು ಕೊಡುತ್ತಿದ್ದವನಿಗೆ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಸಂತೋಷ ತಂದೆ ಶಂಕರ ಜಾಧವ  ಸಾ|| ಬಾಪೂ ನಾಯಕ ತಾಂಡಾ ನಂದೂರ(ಬಿ) ತಾ|ಜಿ|| ಗುಲಬರ್ಗಾ ಅಂತಾ ಹೇಳಿದನು. ಸದರಿಯವನಿಗೆ ಮಧ್ಯದ ಮಾರಾಟ ಮಾರುವ ಬಗ್ಗೆ ಪರವಾನಿಗೆ ಕುರಿತು ವಿಚಾರಿಸಲು ಯಾವುದೆ ಪರವಾನಿಗೆ ಇರುವದಿಲ್ಲ ಅಂತಾ ತಿಳಿಸಿದನು. ಸದರಿ ಮನೆಯ ಮುಂದೆ ಇಟ್ಟಿದ್ದ ಮಧ್ಯದ ಬಾಟಲಿಗಳನ್ನು ಚೆಕ್ ಮಾಡಲಾಗಿ 1) ಕಿಂಗ ಫಿಶರ ಬಿಯರ 650 ಎಂ.ಎಲನ 3 ಬಾಕ್ಸಗಳು (36 ಬಾಟಲ) ಅ||ಕಿ||3240/-ರೂ, 2) ನಾಕ ಔಟ ಬೀಯರ 330 ಎಂ.ಎಲನ 4 ಟಿನ್ ಅ||ಕಿ|| 200/-ರೂ, 3) ರಾಯಲ್ ಸ್ಟ್ಯಾಗ 180 ಎಂ.ಎಲನ 6 ಬಾಟಲಿಗಳು ಅ||ಕಿ| 900/-ರೂ, 4) ಆಫೀಸರ ಚಾಯ್ಸ 180 ಎಂ.ಎಲನ 6 ಬಾಟಲಿಗಳು ಅ||ಕಿ| 400/-ರೂ ಮತ್ತು ನಗದು ಹಣ 500/-ರೂ ಒಟ್ಟು ಮುದ್ದೆ ಮಾಲು ಮತ್ತು ನಗದು ಹಣ ಸೇರಿ ಒಟ್ಟು 5240/-ರೂಪಾಯಿ ಕಿಮ್ಮತ್ತಿನ ಮುದ್ದೆ ಮಾಲನ್ನು ಜಪ್ತು ಮಾಡಿಕೊಂಡು. ಸದರಿ ಸಂತೋಷ ತಂದೆ ಶಂಕರ ಜಾಧವ ಇತನಿಗೆ ದಸ್ತಗಿರಿ ಮಾಡಿಕೊಂಡು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.