POLICE BHAVAN KALABURAGI

POLICE BHAVAN KALABURAGI

20 August 2014

Gulbarga District Reported Crimes

ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀ ಗುಂಡೆರಾಯ ತಂದೆ ಸಿದ್ರಾಮಪ್ಪ ಪಾಟ್ಲಿ ಸಾ: ಸಾ: ಜಂಬಗಾ ತಾ:ಜಿ: ಗುಲಬರ್ಗಾ ರವರ 3ನೇ ಮಗಳಾದ ಹೀರಾಬಾಯಿ ಇವಳಿಗೆ ಶ್ರೀನಿವಾಸ ಸರಡಗಿ ಗ್ರಾಮದ ಹಣಮಂತರಾಯ ಇವನ ಮಗನಾದ ಸಂತೋಷ ಎಂಬುವನಿಗೆ ಮೂರುವರೆ ವರ್ಷದ ಹಿಂದೆ ಸಾಂಪ್ರದಾಯಕವಾಗಿ ಮದುವೆ ಮಾಡಿಕೊಟ್ಟಿದ್ದು. ಮದುವೆ ಕಾಲಕ್ಕೆ 5.1/2 ತೊಲೆ ಬಂಗಾರ ಮತ್ತು ಒಂದು ಲಕ್ಷ ರೂಪಾ ಹಾಗೂ ಗೃಹ ಬಳಕೆ ಸಾಮಾನುಗಳು ಕೊಟ್ಟು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿಕೊಟ್ಟಿರುತ್ತೇವೆ. ಮದುವೆ ನಂತರ ಅದರ ಪ್ರತಿಫಲದಿಂದ ಒಂದು ಹೆಣ್ಣು ಮಗು ಜನಿಸಿದ್ದು. ಮದುವೆಯಾದ 6 ತಿಂಗಳು ಸರಿಯಾಗಿದ್ದು ನಂತರ ನಿಮ್ಮ ತವರು ಮನೆಯಿಂದ ನಿನ್ನ ತಂದೆ ಹತ್ತಿರ ಇನ್ನು ಹಣ ತೆಗೆದುಕೊಂಡು ಬಾ ಎಂದು ಮಾನಸಿಕ ಕಿರುಕುಳ ಮತ್ತು ದೈಹಿಕವಾಗಿ ದಂಡಿಸಿ ಇದರಲ್ಲಿ ಸಂತೋಷನ  ತಾಯಿ ಶಿವಗಂಗಮ್ಮ, ಸಿದ್ದು ತಂದೆ ಹಣಮಂತರಾಯ, ಮಹೇಶ ತಂದೆ ಹಣಮಂತರಾಯ ಸಹೋದರರು ಸೇರಿ ದಿನನಿತ್ಯ ಕಿರುಕುಳ ನೀಡುವದು ಹೊಡೆಬಡೆ ಮಾಡುತ್ತಿದ್ದರು. ಇದರ ಬಗ್ಗೆ ನನ್ನ ಮಗಳು ಆಗಾಗ ತಿಳಿಸುತ್ತಿದ್ದಳು. ಆದರೂ ನಾನು ಮತ್ತು ನನ್ನೂರಿನ ಹಿರಿಯರು ತಿಳಿಹೇಳಿ ಬಂದಿದ್ದು ದಿನಾಂಕ: 20/08/2014 ರಂದು ಮದ್ಯರಾತ್ರಿ 12 ಗಂಟೆ ಸುಮಾರಿಗೆ ಶ್ರೀನಿವಾಸ ಸರಡಗಿ ನನ್ನ ಮಗಳು ಮೊಬಾಯಿಲದಿಂದ ಕರೆ ಮಾಡಿ ನನಗೆ ನನ್ನ ಗಂಡ ಸಂತೋಷ ಮತ್ತು ಅತ್ತೆ ಶಿವಗಂಗಮ್ಮ ಇವರುಗಳು ತವರು ಮನೆಯಿಂದ ಹಣ ಒಂದು ಲಕ್ಷ ರೂಪಾಯಿ ತೆಗೆದುಕೊಂಡು ಬಾ ಎಂದು ಹೇಳಿ ಹೊಡೆಯುತ್ತಿದ್ದಾರೆ ಎಂದು ಹೇಳಿ ಮೊಬಾಯಿಲ ಕರೆ ಬಂದಗೊಳಿಸಿದಳು ಪುನಃ ನಾನು ಮರಳಿ ಅಳಿಯನಿ ಪೋನಗೆ ಕರೆ ಮಾಡಿದಾಗ ಯಾವುದೇ ಪ್ರತುಕ್ರೀಯೆ ನೀಡಲಿಲ್ಲ ಆದರೆ ಮನೆಯಲ್ಲಿ ಜಗಳದ ಸಪ್ಪಳ ಜೋರಾಗಿ ಕೇಳಿ ಬರುತ್ತಿತ್ತು. ನಂತರ ಗಾಬರಿಗೊಂಡು ನಾನು ಮತ್ತು ನನ್ನ ಹೆಂಡತಿ ಸುಜಾತ ನನ್ನ ತಮ್ಮ ನಾಗೇಂದ್ರಪ್ಪ, ಹಣಮಂತರಾಯ ಭೂತಿ ಇನ್ನಿತರ ಊರಿನ ಜನ ಸೇರಿ ಶ್ರೀನಿವಾಸ ಸರಡಗಿಗೆ ಹೋಗಿ ನೋಡಲು ಮನೆಯಲ್ಲಿ ಯಾರೂ ಇರಲಿಲ್ಲ ನನ್ನ ಮಗಳು ಮನೆಯಲ್ಲಿ ಕಾಣಲಿಲ್ಲ ನಂತರ ಪೊಲೀಸ ಠಾಣೆಗೆ ಮಾಹಿತಿ ನೀಡಿ ಪೊಲೀಸ ಸಿಬ್ಬಂದಿ ಬಂದ ನಂತರ ನನ್ನ ಮಗಳನ್ನು ಹುಡುಕಲು ಮನೆಯ ಅಂಗಳದಲ್ಲಿರುವ ಬಾವಿಯಲ್ಲಿ ಬ್ಯಾಟರಿ ಹಾಕಿ ನೋಡಲು ಬಾವಿಯಲ್ಲಿ ಮಗಳ ಶವ ಕಂಡಿದ್ದು. ನನ್ನ ಮಗಳಿಗೆ ಅತ್ತೆ ಶಿವಗಂಗಮ್ಮ, ಗಂಡ ಸಂತೋಷ ಇವರು ತವರು ಮನೆಯಿಂದ ಇನ್ನು ಒಂದು ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಎಂದು ಹೇಏಳಿ ಮಾನಸಿಕ ದೈಹಿಕ ಕಿರುಕುಳ ನೀಡಿ ಹೊಡೆಬಡೆ ಮಾಡಿ ಕೊಲೆ ಮಾಡಿ ಬಾವಿಯಲ್ಲಿ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಶಾಮಲಾಬಾಯಿ ಗಂಡ ವಿಠಲಭಟ ಸಾ: ರಾಘವೇಂದ್ರ ಕಾಲೋನಿಗುಲಬರ್ಗಾ ರವರು ದಿನಾಂಕ 19-08-2014 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ಕೊಠಾರಿ ಭವನ ಹಿಂದುಗಡೆ ಇರುವ ವಿದ್ಯಾಸಾಗರ ಕುಲಕರ್ಣಿ ರವರ ಮನೆಯಲ್ಲಿ ಕಾರ್ಯಾಕ್ರಮ ಮುಗಿಸಿಕೊಂಡು ನಮ್ಮ ಮನೆಗೆ ಅಟೋರಿಕ್ಷಾ ಮೂಲಕ ಹೋಗುವ ಸಲುವಾಗಿ ಕೊಠಾರಿ ಭವನ ಹಿಂದುಗಡೆಯಿಂದ ನಡೆದುಕೊಂಡು ಕೊಠಾರಿ ಭವನ ಎದುರಿನ ಪಕ್ಕದ ರೋಡ ದಾಟುತ್ತಿರುವಾಗ ಆರ್.ಪಿ ಸರ್ಕಲ ಕಡೆಯಿಂದ ಮೋ/ಸೈಕಲ ನಂಬರ ಕೆಎ-32 ಹೆಚ್-2926 ನೇದ್ದರ ಸವಾರ ಕಲ್ಯಾಣಿ ತಂದೆ ಬಸಣ್ಣ ಇತನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶರಣಬಸಪ್ಪಾ ತಂದೆ ರೇವಣಸಿದ್ದಪ್ಪಾ ಓಗಿ ಸಾ: ಬಸವಣ್ಣ ಟೆಂಪಲ ಎದುರುಗಡೆ ಭಾರತ ಕಾಲೋನಿ ಗುಲಬರ್ಗಾ  ರವರು ದಿನಾಂಕ 19-08-2014 ರಂದು ರಾತ್ರಿ 9 ಗಂಟೆ ಸುಮಾರಿಗೆ ನಾನು ಆಮಂತ್ರಣ ಹೋಟಲಕ್ಕೆ ಬಂದು ನಮ್ಮ ಸಾಹೇಬರನ್ನು ಭೇಟಿಯಾಗಿ ವಾಪಸ್ಸ ಮನೆಗೆ ಹೋಗುವ ಕುರಿತು ಬರುವಾಗ ತಂದಿದ್ದ ನನ್ನ ಮೋ/ಸೈಕಲ ನಂಬರ ಕೆಎ-32ಡಬ್ಲೂ-2148 ನೇದ್ದನ್ನು ಚಲಾಯಿಸಿಕೊಂಡು ವಾಪಸ್ಸ ಮನೆಗೆ ಹೋಗುವ ಕುರಿತು ಬಲಗಡೆ ರೋಡಿನಿಂದ ಎಡಗಡೆ ರೋಡಿಗೆ ಹೋಗುವ ಕುರಿತು ರೋಡ ಕ್ರಾಸ್ ಮಾಡುತ್ತಿರುವಾಗ ಜಗತ ಸರ್ಕಲ ಕಡೆಯಿಂದ ಅರುಣಕುಮಾರ ಇತನು ತನ್ನ ಮೋ/ಸೈಕಲ ನಂಬರ ಕೆಎ-32 ಇಇ-2762 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಬಲಗಾಲಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕ ಬೆಂಕಿಗೆ ಗೋದಾಮು ಸುಟ್ಟು ಭಸ್ಮ :
ಚೌಕ ಠಾಣೆ : ಶ್ರೀ ಸ್ನೇಹಲ್ ತಂದೆ ಘನಶ್ಯಾಮ ಸೊನಸಾಳೆ ಸಾ: ಪ್ಲಾಟ ನಂ 139 ಜೆ.ಆರ್. ನಗರ ಗುಲಬರ್ಗಾ ಇವರು ಸುಮಾರು 3 ವರ್ಷಗಳಿಂದ ಗುಲಬರ್ಗಾ ನಗರದ ನೆಹರು ಗಂಜದಲ್ಲಿ ಸವೇರಾ ಹೊಟೆಲ ಪಕ್ಕದಲ್ಲಿ ಶ್ಯಾಪ ನಂ 1279 ನೇದ್ದು ಖರೀದಿಸಿ ಸದರಿ ಶ್ಯಾಪದಲ್ಲಿ ಸಾಯಿ ಇಂಜನಿಯರಿಂಗ್ ಟ್ರೇಡಸ್ಸ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಬಂದಿದ್ದು ನನ್ನ ಅಂಗಡಿಯಲ್ಲಿ ಮಾರಾಟ ಕುರಿತು ಹೊರಗಿನಿಂದ ಸಾಮಾನುಗಳನ್ನು ಖರಿದಿ ಮಾಡಿಕೊಂಡು ಬಂದಿದ್ದು ನನ್ನ ಅಂಗಡಿಯಲ್ಲಿ ಇಟ್ಟಿಕೊಳ್ಳಲು ಸ್ಥಳಾವಕಾಶ ಇಲ್ಲದಕ್ಕೆ ನಾನು ನೆಹರು ಗಂಜದಲ್ಲಿರುವ ಅವಣ್ಣ ಉದನೂರ ಇವರ ಅಂದಾಜ 70 X 30 ಅಳತೆಯ ಅಂಗಡಿಯನ್ನು ಬಾಡಿಗೆಯ ಮೇಲೆ ಪಡೆದುಕೊಂಡು ಗೊಡೌನ ಮಾಡಿಕೊಂಡಿದ್ದು ನಾನು ಹೊರಗಿನಿಂದ ಖರಿದಿಸಿದ ಸಾಮಾನುಗಳಲ್ಲಿ ಸ್ವಲ್ಪ ಪ್ರಮಾಣದ ಸಾಮಾನುಗಳನ್ನು ನನ್ನ ಅಂಗಡಿಯಲ್ಲಿ ಇಟ್ಟಿಕೊಂಡು ಹೆಚ್ಚಿನ ಪ್ರಮಾಣದ ಸಾಮಾನುಗಳನ್ನು ನನ್ನ ಗೊಡೌನನಲ್ಲಿ ಇಟ್ಟಿಕೊಂಡು ಬಂದಿದ್ದು ಇರುತ್ತದೆ. ದಿನಾಂಕ 13.08.2014 ರಂದು ನನ್ನ ಖಾಸಗಿ ಕೇಲಸಕ್ಕೆ ಬೆಂಗಳೂರಕ್ಕೆ ಹೋಗಿದ್ದು ನಮ್ಮ ಅಂಗಡಿಯ ವ್ಯವಹಾರವನ್ನು ನಮ್ಮ ತಂಗಿಯಾದ ಕು: ಪ್ರೀತಿ ಇವರು ನೋಡಿಕೊಂಡು ಬಂದಿರುತ್ತಾಳೆ. ದಿನಾಂಕ 16.08.2014 ರಂದು ರಾತ್ರಿ ನಾನು ಬೆಂಗಳೂರಿನಿಂದ ಗುಲಬರ್ಗಾಕ್ಕೆ ಬರುತ್ತಿದ್ದು ಮಾರ್ಗ ಮಧ್ಯದಲ್ಲಿ ರಾತ್ರಿ 12:10 ಗಂಟೆಯ ಸುಮಾರಿಗೆ ನಮ್ಮ ಗೊಡೌನ ಅಂಗಡಿಯ ಮಾಲಿಕರಾದ ಅವ್ವಣ್ಣ ಉದನೂರ ಇವರು ನನಗೆ ಪೋನ ಮಾಡಿ ನನ್ನ ಗೊಡೌನಕ್ಕೆ ಬೆಂಕಿ ಹತ್ತಿರುವ ವಿಷಯ ತಿಳಿಸಿದ್ದು ಆಗ ನಾನು ನಮ್ಮ ತಂಗಿಗೆ ಹಾಗೂ ನಮ್ಮ ಅಂಗಡಿಯಲ್ಲಿ ಕೇಲಸ ಮಾಡುವ ಹುಡುಗನಾದ ನರೇಂದ್ರ ಇವರಿಗೆ ಗೊಡೌನಕ್ಕೆ ಬೆಂಕಿ ಹತ್ತಿರುವ ವಿಷಯ ತಿಳಿಸಿದ್ದು ನಮ್ಮ ತಂಗಿ ಸ್ಥಳಕ್ಕೆ ಹೋಗಿ ಅಗ್ನಿಶ್ಯಾಮಕ ಸಿಬ್ಬಂದಿಯವರಿಗೆ ಸಹಾಯದಿಂದ ನಮ್ಮ ಗೊಡೌನಕ್ಕೆ ಹತ್ತಿದ ಬೆಂಕಿಯನ್ನು ಆರಿಸಿದ್ದು ದಿನಾಂಕ 17.08.2014 ರಂದು ಬೆಳ್ಳಿಗ್ಗೆ ಬಂದು ನನ್ನ ಗೊಡೌನ ಅಂಗಡಿ ನೋಡಲು ಅದರಲ್ಲಿ ಇಟ್ಟಿದ ಸಾಮಾನುಗಳು ಸುಟ್ಟಿಹೊಗಿದ್ದು ನನ್ನ ಗೊಡೌನಕ್ಕೆ ಬೆಂಕಿ ಹತ್ತಿದ್ದರಿಂದ ಅಂಗಡಿಯಲ್ಲಿ ಇಟ್ಟಿದ್ದ ಸರಿ ಸುಮಾರು 17 ಲಕ್ಷ ರೂಪಾಯಿ ಬೇಲೆಯ ಮಾಲು ಬೆಂಕಿಗೆ ಸುಟ್ಟು ಹಾನಿಯಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು  :
ಮಾದನ ಹಿಪ್ಪರಗಾ ಠಾಣೆ : ಶ್ರೀ.ಕಿರಣ ಕುಮಾರ ತಂದೆ ಅಪ್ಪಾಶಾ ಸಿಂಧೆ ಸಾ: ಹಿರೋಳಿ ತಾ: ಆಳಂದ ಇವರು ದಿನಾಂಕ: 19-08-2014 ರಂದು 08:30 ಪಿ.ಎಂ. ಗಂಟೆಯ ಸುಮಾರಿಗೆ ನಾನು ಅಂಬಾಭವಾನಿ ಗುಡಿಯ ಮುಂದಿನ ರಸ್ತೆಯ ಮೇಲಿಂದ ಬರುವಾಗ ನಮ್ಮೂರಿನ ನಾಗಪ್ಪ ಕಾಂಬಳೆ ಈತನು ಎದುರಿಗೆ ಬಂದು ನನಗೆ ತಡೆದು ನಿಲ್ಲಿಸಿ ಏ ಬೋಸಡಿ ಮಗನೆ ನಿನ್ನದು ಬಹಳ ಆಗಿದೆ ನನಗೆ ಎದರು ಮಾತನಾಡುತ್ತಿ ಅಂತಾ ನನಗೆ ಬೈಯುವಾಗ ಆತನ ಮಕ್ಕಳಾದ ಸೋಮನಾಥ ಕಾಂಬಳೆ ಮತ್ತು ಕಿರಣ ಕಾಂಬಳೆ ಹಾಗೂ ನಾಗಪ್ಪ ಕಾಂಬಳೆ ಈತನ ಅಣ್ಣನ ಮಗನಾದ ಲಕ್ಷ್ಮಣ ತಂದೆ ವಿಲಾಸ ಕಾಂಬಳೆ ಇವರು ಓಡಿ ಬಂದು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿದರು ಆಗ ಅವರಲ್ಲಿಯ ಸೋಮನಾಥ ಕಾಂಬಳೆ ಇತನು ಕೈಯಿಂದ ನನ್ನ ಬೆನ್ನಿನ ಮೇಲೆ ಮತ್ತು ಎದೆಗೆ ಹೊಡೆದನು ಆಗ ಕಿರಣ ಇತನು ನನ್ನ ಸೊಂಟದ ಮೇಲೆ ಕಾಲಿನಿಂದ ಒದ್ದು ಕೈಯಿಂದ ಕಪ್ಪಾಳದ ಮೇಲೆ ಹೊಡೆದನು ಲಕ್ಷ್ಮಣ ಕಾಂಬಳೆ ಇತನು ಸಹ ಕೈಮುಷ್ಠಿ ಮಾಡಿ ನನ್ನ ಬೆನ್ನಿನ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಶಂಕ್ರಮ್ಮಾ ಗಂಡ ಶರಣಪ್ಪಾ ಇವರು ದಿನಾಂಕಃ 18/08/2014 ರಂದು 08:00 ಪಿ.ಎಂ. ಸುಮಾರಿಗೆ ನಾವೆಲ್ಲರೂ ಊಟ ಮಾಡಿ ಮನೆಯ ಮುಂದೆ ಕುಳಿತುಕೊಂಡಾಗ ಅದೇ ವೇಳೆಗೆ ನಮ್ಮ ಓಣಿಯ ಸಂಜು ತಂದೆ ಮಲ್ಲಪ್ಪಾ ಈತನು ಬಂದು ನಾವು ಕುಳಿತಲ್ಲಿಂದಲೇ ದಾಟಿ ಹೋಗುತ್ತಿದ್ದನು. ಆಗ ನನ್ನ ಮಗನಾದ ರಾಜಶೇಖರ ಇತನು ಇಲ್ಲಿ ಹೆಣ್ಣು ಮಕ್ಕಳು ಕುಳಿತ್ತಿದ್ದಾರೆ ಹೀಗೆ ಅವರ ಮೇಲಿಂದ ಹೋಗುವುದು ಸರಿಯಲ್ಲಾ ಅಂತಾ ಅಂದಿದಕ್ಕೆ ಸಂಜು ಈತನು ನನ್ನ ಮಗನಿಗೆ ಇದೆಲ್ಲಾ ಕೇಳುವವ ನೀನು ಯಾರು ರಂಡಿ ಮಗನೆ ಅಂತಾ ಅವಾಚ್ಯವಾಗಿ ಬೈದು ಕೈಗಳಿಂದ ಬೆನ್ನಿನ ಮೇಲೆ ಕಪಾಳದ ಮೇಲೆ ಹೊಡೆಯ ಹತ್ತಿದ್ದ ಆಗ ನಾನು ಮತ್ತು ನನ್ನ ಮಕ್ಕಳಾದ ಸುಭದ್ರ ಮತ್ತು ಸುಧಾಮಣಿ ಎಲ್ಲರೂ ಬಿಡಿಸಿಕೊಳ್ಳುವಾಗ ಸುಭದ್ರ ಇವಳಿಗೆ ಕೈಯಿಂದ ಕಪಾಳಕ್ಕೆ ಹಾಗು ಸುಧಾಮಣಿ ಇವಳಿಗೆ ತಲೆಯ ಕೂದಲು ಹಿಡಿದು ಜಗ್ಗಾಡಿದನು. ಮತ್ತು ಅಲ್ಲೇ ಇದ್ದ ಕಲ್ಲು ತೆಗೆದುಕೊಂಡು ನನ್ನ ಎದೆಗೆ ಹೊಡೆದು ಗಾಯಗೊಳಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.