POLICE BHAVAN KALABURAGI

POLICE BHAVAN KALABURAGI

23 June 2013

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಸೇಡಂ ಪೊಲೀಸ್ ಠಾಣೆ: ಶ್ರೀ, ಭೀಮಣ್ಣ ತಂದೆ ಹಣಮಂತ ನಿಂಗಾಪೊರ ಸಾ:ವಾಲ್ಮಿಕಿ ನಗರ ಶೆಟ್ಟಿ ಹುಡಾ ಸೇಡಂ. ತಾ:ಸೇಡಂ ರವರು ತನ್ನ ಮಗನಾದ ರಾಜು ಇತನು ವಾಸವದತ್ತಾ ಕಂಪನಿಯಲ್ಲಿ ಲೊಡಿಂಗ್ ಕೆಲಸಕ್ಕೆ ಅಂತಾ ರಾತ್ರಿ 10-00  ಗಂಟೆಯಿಂದ ಬೆಳಿಗ್ಗೆ 06-00 ಗಂಟೆಯವರೆಗೆ ಕರ್ತವ್ಯಕ್ಕೆ  ಹಿರೋ ಸ್ಪೆಂಡರ ಪ್ಲಸ್  ಮೋಟಾರು ಸೈಕಲ್ ಚೆಸ್ಸಿ ನಂ: MBL HA 10 AMD HE 25449 ನೇದ್ದರ ಮೇಲೆ ಮನೆಯಿಂದ ಹೋಗುವಾಗ ರೇಲ್ವೇ ಒವರ್ ಬ್ರಿಡ್ಜ ರೋಡಿನ ಮೇಲೆ ಹೋಗುತ್ತಿರುವಾಗ ಸೇಡಂ ಕಡೆಯಿಂದ ಒಂದು ಮಹೇಂದ್ರ ಮ್ಯಾಕ್ಸಿಮೋ ವಾಹನ ನಂ ಕೆಎ-32-ಬಿ-5286 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಸ್ಕಾಳಜೀತನದಿಂದ ನಡೆಸಿಕೊಂಡು ಬಂದು ಎಡಗಡೆ ಸೈಡು ಬಿಟ್ಟು ಬಲಗಡೆಗೆ ಬಂದು ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ್ದರಿಂದ ಭಾರಿರಕ್ತ ಗಾಯವಾಗಿ ಕೀವಿಯಿಂದ, ಬಾಯಿಂದ, ಮೂಗಿನಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಶ್ರೀ, ಭೀಮಣ್ಣ ತಂದೆ ಹಣಮಂತ  ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:153/2013 ಕಲಂ 279 304(ಎ) ಐಪಿಸಿ  ಸಂಗಡ 187 ಐ ಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:

ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ 22/06/2013 ರಂದು ನಾನು ನನ್ನ ವಕೀಲ ವೃತ್ತಿ ಕೆಲಸ ಮುಗಿಸಿಕೊಂಡು  ರಾತ್ರಿ 9-00 ಗಂಟೆಗೆ  ವರ್ದನ ನಗರದಲ್ಲಿರುವ ನಮ್ಮ ಮನೆಗೆ ಬರುತ್ತಿರುವಾಗ ನಮ್ಮ ಮನೆಯ ಹತ್ತಿರ ಇರುವ ಮಹೇಂದ್ರ ಸರ್ವಿಸ ಸೆಂಟರನ ಮುಂದೆ ನನ್ನ ಮುಂದುಗಡೆಯಿಂದ 20-25 ವಯಸ್ಸಿನ ಒಬ್ಬ ಮೋಟರ ಸೈಕಲ ಸವಾರನು ತನ್ನ ಮೋಟಾರ ಸೈಕಲ ತಂದವನೇ ನನ್ನ ಮೈ ಮೇಲೆ ತಂದು ನನ್ನ ಕೊರಳಿಗೆ  ಕೈ ಹಾಕಿ ನನ್ನ ಕೊರಳಲ್ಲಿದ್ದ ಬಂಗಾರದ ಗೊಪು  ನಮೂನೆಯ ಸರ್‌ ಅದಕ್ಕೆ ಹೃದಯದಾಕಾರದ ಪದಕವಿದ್ದು  ಎರಡುವರೆ ತೋಲೆ ಬಂಗಾರ ಮತ್ತು 1 ಗ್ರಾಂ ಹವಳದ ಪದಕ  ಅಂದಾಜು ಕಿಮ್ಮತ್ತು  ರೂ. 62,000/- ಬೆಲೆಬಾಳುವುದು ನನ್ನ ಕೊರಳನಿಂದ ಕಿತ್ತುಕೊಂಡು ಹೋಗಿರುತ್ತಾನೆ ಅಂತಾ  ಸರಸಿಜ ರಾಜನ್ ವಕೀಲ ಸಾ|| ವರ್ದನ ನಗರ ಗುಲಬರ್ಗಾ ರವರು ಲಿಖಿತ ಅರ್ಜಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:99/2013 ಕಲಂ. 392 ಐಪಿಸಿ ಪ್ರಕಾರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.