POLICE BHAVAN KALABURAGI

POLICE BHAVAN KALABURAGI

07 August 2013

GULBARGA DIST REPORTED CRIMES

ಅಪಘಾತ ಪ್ರಕರಣ:
  
ದೇವಲಗಾಣಗಾಪೂರ ಪೊಲೀಸ ಠಾಣೆ:


ದಿನಾಂಕ: 06-08-13 ರಂದು ಫಿರ್ಯಾದಿ ಯಲ್ಲಪ್ಪ ಜಮಾದಾರ ಸಾ|| ಜೇವರ್ಗಿ (ಕೆ) ರವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದ ನೀಡಿದ್ದರ ಸಾರಾಂಶವೇನೆಂದರೆ, ದಿ; 06-08-2013 ರಂದು ಚವಡಾಪೂರ ಗುಲಬರ್ಗಾ ಮುಖ್ಯೆ ರಸ್ತೆಯ ಮೇಲೆ ಬಸಯ್ಯಾ ಗುತ್ತೇದಾರ ರವರ ಹೊಲದ ಹತ್ತಿರ ನಮ್ಮ ಚಿಕ್ಕಮ್ಮನ ಮಗ ಅಶೋಕ ಸುತಗೋಡೆ ಮತ್ತು ಸಂತೋಷ ಹಂದ್ರಕಿ ರವರು ತಮ್ಮ ಮೋಟರ ಸೈಕಲ್ ಮೇಲೆ ಗುಲಬರ್ಗಾ ದಿಂದ  ಅಫಜಲಪೂರ ಕಡೆಗೆ ಬರುತ್ತಿರುವಾಗ ಚವಡಾಪೂರ ಕಡೆಯಿಂದ ಜೀಪ ಚಾಲಕನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ತನ್ನ ಜೀಪನ್ನು ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ಡಿಕ್ಕಿ ಪಡಿಸಿ ಅಪಘಾ ಮಾಡಿದ್ದು, ಅಪಘಾತದಲ್ಲಿ ಅಶೋಕನಿಗೆ ಮುಖಕ್ಕೆ ಮತ್ತು ಎದೆಗೆ ಹಾಗು ಇತರೆ ಕಡೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ ಸ್ಥಳದಲ್ಲೆ ಮೃತ ಪಟ್ಟಿರುತ್ತಾನೆ. ಸಂತೋಷನಿಗು ಭಾರಿ ಗಾಯಗಳಾಗಿದ್ದು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರಿಕೆ ಮಾಡಿರುತ್ತೇವೆ. ಸದರಿ ಜೀಪಿನ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಹೇಳಿಕೆ ಫಿರ್ಯಾದಿ ಮೇಲಿಂದದೇವಲಗಾಣಗಾಪೂರ ಪೊಲೀಸ ಠಾಣೆಯಲ್ಲಿ ಪ್ರಕ್ರಣದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.