POLICE BHAVAN KALABURAGI

POLICE BHAVAN KALABURAGI

19 March 2015

Kalaburagi District Reported Crimes

ದರೋಡೆ ಮಾಡಲು ಪ್ರಯತ್ನಿಸುತ್ತಿದ್ದವರ ಬಂಧನ :
ಅಫಜಲಪೂರ ಠಾಣೆ : ಶ್ರೀ ಪಿ.ವ್ಹಿ.ಸಾಲಿಮಠ  ಸಿ.ಪಿ.ಐ. ರವರು ದಿನಾಂಕ 19-03-2015 ರಂದು ನಸುಕಿನ ಜಾವ 05:15 ಗಂಟೆ ಸುಮಾರಿಗೆ ನಮ್ಮ ಜೀಪ ಚಾಲಕ ಭೀಮಾಶಂಕರ ಎಪಿಸಿ-109 ರವರನ್ನು ಸಂಗಡ ಕರೆದುಕೊಂಡು ಅಫಜಲಪೂರ ಪಟ್ಟಣದಲ್ಲಿ ಗುಡ್ ಮಾರ್ನಿಂಗ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆಅಫಜಲಪೂರ-ಕರಜಗಿ ರೋಡಿಗೆ ಇರುವ ಬಳೂಂಡಗಿ ಕ್ರಾಸ ಹತ್ತಿರ 4-5 ಜನರು ಡಕಾಯಿತಿ ಮಾಡಲು ಹೊಂಚುಹಾಕಿ ಕುಳಿತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ನಮ್ಮ ವೃತ್ತ ಕಛೇರಿಯ ಅಫರಾದ ಪತ್ತೆದಳದ ಸಿಬ್ಬಂದಿಯವರಾದ 1) ಅರವಿಂದ ಪಿಸಿ-501 2) ಗುರುರಾಜ ಪಿಸಿ-1214 3) ರಾಜು ಪಿಸಿ-1249 ರವರನ್ನು ಹಾಗೂ ಅಫಜಲಪೂರ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಜಗನ್ನಾಥ ಪಿಸಿ-530, ನಾಗರಾಜ ಪಿಸಿ-816, ಚಿದಾನಂದ ಪಿಸಿ-1225, ತುಳಜಪ್ಪ ಪಿಸಿ-831ರವರನ್ನು ಹಾಗೂ ಇಬ್ಬರು ಪಂಚರನ್ನು ಕರೆದುಕೊಂಡು ಬಳೂಂಡಗಿ ಕ್ರಾಸ ಹತ್ತಿರ ಬಂದು ಸುಮಾರು 5  ಜನರು ಇದ್ದುಅದರಲ್ಲಿ ಜನರು ರೊಡಿನ ಆಚೆಗೆ ಒಬ್ಬ ಮತ್ತು ಇಚೇಗೆ ಒಬ್ಬ ನಿಂತುಕೊಂಡು ಹಗ್ಗವನ್ನು ರೋಡಿಗೆ ಅಡ್ಡಲಾಗಿ ಹಿಡಿದುಕೊಂಡಿದ್ದರು. ಇನ್ನೂ ಜನರು ಅಲ್ಲೆ ಮರೆಯಲ್ಲಿ ಆಯುಧಗಳನ್ನು ಹಿಡಿದುಕೊಂಡು ನಿಂತಿದ್ದರುನಾವು ವಾಹನದಿಂದ ಕೆಳಗೆ ಇಳಿಯುವಾಗ ಸಮವಸ್ತ್ರದಲ್ಲಿ ಇದ್ದ ನಮ್ಮನ್ನು ನೋಡಿ ಎಲ್ಲರೂ ಓಡಹತ್ತಿದರುಆಗ ನಾನು ಮತ್ತು ನಮ್ಮ ಸಿಬ್ಬಂದಿಯವರು ಪಂಚರ ಸಮಕ್ಷಮ ಸದರಿಯವರನ್ನು ಬೆನ್ನು ಹತ್ತಿ ಎಲ್ಲಾ 05 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಅರ್ಜುನ ತಂದೆ ಧರ್ಮಣ್ಣ ಪಡಸಾಲಗಿ ಸಾ|| ಭೋಸಗಾ ತಾ|| ಅಫಜಲಪೂರ 2) ಸಂತೋಷ ತಂದೆ ಈರಣ್ಣ ದೇವರನಾವದಗಿ ಸಾ|| ಸೋನ್ನ ತಾ|| ಅಫಜಲಪೂರ 3) ನೀಲಕಂಠಯ್ಯ ರಾಕೇಶ ತಂದೆ ಬಸಲಿಂಗಯ್ಯ ಗವಿಮಠ ಸಾ|| ಅತನೂರ ತಾ|| ಅಫಜಲಪೂರ 4) ಪ್ರಕಾಶ ತಂದೆ ಮಲ್ಲಪ್ಪ ಅನಂತ ಸಾ||ಸೋನ್ನ ತಾ|| ಅಫಜಲಪೂರ 5) ಶಿವಲಿಂಗಪ್ಪ ತಂದೆ ಸಿದ್ದಣ್ಣ ಕಿಣಗಿ ಸಾ|| ಸೋನ್ನ ತಾ|| ಅಫಜಲಪೂರ ಅಂತಾ ತಿಳಿಸಿದ್ದುಸದರಿಯವರ ಅಂಗ ಶೋಧನೆ ಮಾಡಲಾಗಿ ಅರ್ಜುನ ಪಡಸಾಲಗಿ ಈತನ ಹತ್ತಿರ ಒಂದು ನಾಡ ಪಿಸ್ತೂಲು ದೊರೆತಿದ್ದುಸಂತೋಷ ದೇವರನಾವದಗಿ ಈತನ ಹತ್ತಿರ ಒಂದು ನಾಡ ಪಿಸ್ತೂಲುನೀಲಕಂಠಯ್ಯ ರಾಕೇಶ ಗವಿಮಠ ಈತನ ಹತ್ತಿರ ಒಂದು ಬಟನ್ ಚಾಕು ದೊರೆತಿದ್ದು. ಪ್ರಕಾಶ ಅನಂತ ಈತನ ಹತ್ತಿರ ಒಂದು ಪ್ಲಾಸ್ಟಿಕ ಕ್ಯಾರಿ ಬ್ಯಾಗದಲ್ಲಿ ಖಾರದ ಪುಡಿ ದೊರೆತಿದ್ದುಶಿವಲಿಂಗಪ್ಪ ಕಿಣಗಿ ಈತನ ಹತ್ತಿರ ಒಂದು ಅಂದಾಜು 15 ಪೀಟ ಉದ್ದವಾದ ನೂಲಿನ ಬಿಳಿಯ ಬಣ್ಣದ ಹಗ್ಗ ದೊರೆತಿರುತ್ತವೆ. ಸದರಿಯವರಿಗೆ ತಮ್ಮ ಬಳಿ ಇದ್ದ ಪಿಸ್ತೂಲಗಳ ಪರವಾನಿಗೆ ಬಗ್ಗೆ ವಿಚಾರಿಸಲಾಗಿಸದರಿಯವರು ತಡವರಿಸುತ್ತಾ ಇವು ನಾಡ ಪಿಸ್ತೂಲ ಇದ್ದು,ಯಾವುದೆ ಪರವಾನಿಗೆ ಇರುವುದಿಲ್ಲ ಅಂತಾ ತಿಳಿಸಿದರುಸದರಿಯವರು ಹೊಂಚುಹಾಕಿ ಕುಳಿತುಕೊಂಡು ರೋಡಿಗೆ ಹೋಗಿ ಬರುವ ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸಿ. ವಾಹನದಲ್ಲಿ ಓಡಾಡುವ ಜನರ ಹತ್ತಿರ ಇರುವ ಹಣ ಒಡವೆಗಳನ್ನು ಕಿತ್ತುಕೊಂಡು ದರೋಡೆ ಮಾಡಲು ಹೊಂಚುಹಾಕಿ ಕಾಯುತ್ತಿರುವುದು ಖಚಿತವಾಗಿದ್ದು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಾಳ ಸಂತೆಯಲ್ಲಿ ಪಡಿತರ ಗೋದಿ ಸಾಗಿಸುತ್ತಿದ್ದವರ ಬಂಧನ :
ಗ್ರಾಮೀಣ ಠಾಣೆ : ದಿನಾಂಕ 18-03-2015 ರಂದು ಮಧ್ಯಾಹ್ನ ಆಳಂದ ರೋಡ ವಿಶ್ವರಾಧ್ಯ ಗುಡಿಯ ಹಿಂದೆ ಇರುವ ಸರಕಾರಿ ಗ್ರಾಮೀಣ  ಸಗಟು ಮಳಿಗೆ ಗೋಡಾವನದಲ್ಲಿ  ದಾಸ್ತಾನು ಇದ್ದ ಸಾರ್ವಜನಿಕ ವಿತರಣಾ ಪದ್ದತಿ ಅಡಿಯಲ್ಲಿ ಪಡೀತರ ಚೀಟಿದಾರರಿಗೆ ವಿತರಿಸುವ ಗೋಧಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿಮೇರೆಗೆ  ಫಿರ್ಯಾದಿ ಮತ್ತು ಶ್ರೀ. ಇಲಿಯಾಜ ಅಹೇಮದ ಇಸಾಮದಿ ಸಹಾಯಕ ಆಯುಕ್ತರು ಕಲಬುರಗಿ ಹಾಗೂ ಶ್ರೀ.ಬಸಲಿಂಗಪ್ಪಾ ನಾಯಿಕೋಡಿ ತಹಶೀಲ್ದಾರರು ಕಲಬುರಗಿ ಹಾಗೂ ಅವರ ಸಿಬ್ಬಂದಿಯವರಾದ  ಶ್ರೀ.ವಿಜಯಾನಂದ .ಕೆ. ಡಿಗ್ಗಿಕರ ಆಹಾರ ಶಿರಸ್ಥೇದಾರರು,ಅಲ್ಲಾ ಭಕ್ಷ ಆಹಾರ ನಿರೀಕ್ಷಕರು, ಚಂದ್ರನಾಥ ಖೂಬಾ  ಆಹಾರ ನಿರೀಕ್ಷಕರು  , ಹಾಗೂ ಇಬ್ಬರು ಪಂಚರೊಂದಿಗೆ ಹೋಗಿ ನೋಡಲಾಗಿ ಲಾರಿ ಕೆಎ 44 1382 ನೇದ್ದರಲ್ಲಿ ಲೋಡ ಮಾಡುತ್ತಿದ್ದ 150 ಕ್ವಿಂಟಾಲ ನೋಡಿ ಮಾಲು ಮತ್ತು ಲಾರಿ ಜಪ್ತಿ ಪಡಿಸಿಕೊಂಡಿದ್ದು, ಇರುತ್ತದೆ. ಸದರಿ ಗೋಡಾನ ಮ್ಯಾನೇಜರ ಎಂಕೆ.ಪರಗೊಂಡ ಮತ್ತು ಲಾರಿ ಚಾಲಕ ಸಾರ್ವಜನಿಕ ಪಡೀತರ ವಿತರಣಾ ಗೋಧಿಯನ್ನು ಇಬ್ಬರು ಕೂಡಿಕೊಂಡು ಸರಕಾರದಿಂದ ಬಿಡುಗಡೆಯಾದ 50 ಕೆ.ಜಿ. ಬ್ಯಾಗನಲ್ಲಿದ್ದ ಗೋಧಿಯನ್ನು ಬದಲಾಯಿಸಿ ಒಂದು ಕ್ವಿಂಟಲ್ ಚೀಲದಲ್ಲಿ ಹಾಕಿ  ತನ್ನ ಅಧಿಕಾರ ದುರುಪಯೋಗಿಸಿ ಕೊಂಡು , ತನ್ನ ಸ್ವಂತ ಲಾಭಕ್ಕಾಗಿ ಕಾಳ ಸಂತೆಯಲ್ಲಿ ಗೋದಿಯನ್ನು  ಮಾರಾಟ ಮಾಡಲು ಸಾಗಾಣಿಕೆ ಮಾಡಿ ಸರಕಾರಕ್ಕೆ ಮತ್ತು ಸಾರ್ವಜನಿಕ ಪಡೀತರ ಚೀಟಿದಾರರಿಗೆ ಮೋಸ ಮಾಡಿರುತ್ತಾರೆ.ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಸ ಮಾಡಿದ ಪ್ರಕರಣ :
ಜೇವರ್ಗಿ ಠಾಣೆ : 1) ಶೇಖ್ ಯುನುಸ್ ತಂದೆ ಶೇಖ್ ಹಬೀಬ್ 2) ಕಲ್ಯಾಣ ತಂದೆ ವಿನಾಯಕ್ರಾವ್ ಸಾಬಳೆ 3) ಶೇಖ್ ನಿಜಾಮ್ ತಂದೆ ಶೇಖ್ ಶಬ್ಬೀರ 4) ಸೈಯದ್ ಸರೋವರ್ ತಂದೆ ಸೈಯದ್ ನೂರ್ 5) ರವೂಫ್ ಬೇಗ್ ತಂದೆ ರಸೂಲ್ ಬೇಗ್ ಮಿರ್ಜಾ 6) ಕಚೂರ್ ತಂದೆ ಕಾಶಿನಾಥ ಬಚಾಟೆ 7) ಮನೋಹರ ತಂದೆ ಕಡೂಬಾ ಬಚಾಟೆ ಇವರೆಲ್ಲರು ಕೂಡಿಕೊಂಡು ನನ್ನ ಹತ್ತಿರ ಬಂದು ನನಗೆ ನಾವು ಹತ್ತಿ ವ್ಯಾಪಾರಸ್ಥರು ಇರುತ್ತೆವೆ. ಹತ್ತಿ ತುಂಬಿದ ಹಣ ಸ್ಥಳದಲ್ಲಿಯೆ ಎಲ್ಲರಿಗಿಂತ ಹೆಚ್ಚಿಗೆ ಕೊಡುತ್ತೆವೆ ಅಂತ ಹೇಳಿ 3-4 ಲಾರಿ ಲೋಡ್ ಮಾಡಿದ ಹತ್ತಿಯ ಹಣ ಕೊಟ್ಟಂತೆ ಮಾಡಿ ನಂತರ ದಿನಾಂಕ ೦1.03.2015  ರಂದು 16:00 ಗಂಟೆಯಿಂದ ೦8.03.2015 ರಂದು 19:00 ಗಂಟೆವರೆಗೆ ರ ಮಧ್ಯದ ಅವಧಿಯಲ್ಲಿ ರೈತರ ಹತ್ತಿ 1) 109 ಕ್ವಿಂಟಾಲ್ 40 ಕೆ.ಜಿ ಹತ್ತಿ ಅದರ ಅಂ.ಕಿ 4.26.660/- ರೂ 2) 107 ಕ್ವಿಂಟಾಲ್ 80 ಕೆಜಿ ಅದರ ಅಂ.ಕಿ 4.20.420/- ರೂ 3) 103 ಕ್ವಿಂಟಾಲ್ 75 ಕೆ.ಜಿ ಹತ್ತಿ ಅದರ ಅಂ.ಕಿ 4.04.625/- ರೂ 4) 112 ಕ್ವಿಂಟಾಲ್ 20 ಕೆ.ಜಿ ಹತ್ತಿ ಅದರ ಅಂ.ಕಿ 4.37.758/- ರೂ 5) 114 ಕ್ವಿಂಟಾಲ್ 35 ಕೆ.ಜಿ ಅಂ.ಕಿ 4.45.965/- ರೂ 6) 104 ಕ್ವಿಂಟಾಲ್ 40 ಕೆ.ಜಿ ಹತ್ತಿ ಅಂ.ಕಿ 4.07.160/- ರೂ ಹೀಗೆ ಒಟ್ಟು 25.42.588/- ರೂ ಗಳ ಕಿಮ್ಮತ್ತಿನ ಒಟ್ಟು 651 ಕ್ವಿಂಟಾಲ್ 90 ಕೆ.ಜಿ ಹತ್ತಿ ತೆಗೆದುಕೊಂಡು ಹೋಗಿ ನನಗೆ ಮತ್ತು ಗಂವ್ಹಾರ್ ಗ್ರಾಮದ ರೈತರಿಗೆ ಹಣ ನೀಡದೆ ಮೋಸ ವಂಚನೆ ಮಾಡಿ ಓಡಿ ಹೋಗಿ ಹೋಗಿರುತ್ತಾರೆ ಅಂತಾ ಶ್ರೀ ದಾವಲಸಾಬ್ ತಂದೆ ಅಬ್ದುಲ್‌ಸಾಬ್ ಚೌಧರಿ ಸಾ|| ಮುಡಬೂಳ ತಾ|| ಶಹಾಪುರ ಜಿ|| ಯಾದಗೀರ್  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಆಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಜೇವರ್ಗಿ ಠಾಣೆ : ದಿನಾಂಕ 18.03.2015 ರಂದು ಪಿ.ಎಸ್.ಐ. ಜೇವರ್ಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ನರಿಬೋಳ ಗ್ರಾಮದಲ್ಲಿ ಆರೋಪಿತನು ತನ್ನ ಹೋಟಲ್‌ ಎದುರುಗಡೆ  ಸಾರ್ವಜನಿಕ  ಸ್ಥಳದಲ್ಲಿ  ಅಕ್ರಮವಾಗಿ  ಸರಾಯಿ ಮಾರಾಟ ಮಾಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಅವನ ಮೇಲೆ ಸಿಬ್ಬಂದಿ ಜನರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ನಿಂಗಪ್ಪ ತಂದೆ ತಿಪ್ಪಣ್ಣ ಬಾದೇಪುರ ಸಾ|| ನರಿಬೋಳ  ಇವನನ್ನು ವಶಕ್ಕೆ ತೆಗೆದುಕೊಂಡು ಅವನಿಂದ ಒಟ್ಟು 6.400/- ರೂ ಕಿಮ್ಮತ್ತಿ ಮಧ್ಯದ ಬಾಟಲಿ ಮತ್ತು ಪೌಚ್‌ಗಳನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:17/03/2015 ರಂದು ಸಾಯಂಕಾಲ ರಾಘವೇಂದ್ರ ನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿಬರುವ ಎಮ.ಎಸ್.ಕೆ.ಮಿಲ್ ಬಡಾವಣೆಯ ಖದೀರ ಚೌಕ ಹತ್ತಿರ   ಖುಲ್ಲಾ ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಯುವಕನು ನಿಂತು ರಸ್ತೆಗೆ ಹೋಗಿ ಬರುವ ಸಾರ್ವಜಕನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿರುವ  ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಡಿಸಿಆರ್‌‌ಬಿ ಘಟಕದ ಅಧಿಕಾರಿ & ಸಿಬ್ಬಂದಿಯವರು ಖದೀರ ಚೌಕ ಹತ್ತಿರ ಬಂದು ಬಿಲ್ಟಿಂಗ ಮರೆಯಲ್ಲಿ ನಿಂತು ನೋಡಲು ಒಬ್ಬ ಯುವಕನು  ನಿಂತು ಬಾಂಬೆ ಕಲ್ಯಾಣ ಮಟಕಾ ನಂಬರಿಗೆ ಒಂದು ರೂಪಾಯಿಗೆ 80 ರೂಪಾಯಿ ಕೊಡುತ್ತೆವೆ  ಅಂತ ಕೂಗುತ್ತಾ.  ರಸ್ತೆಗೆ ಹೊಗಿ ಬರುವ  ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆಯುತ್ತಾ ಒಂದು ಚೀಟಿ ಸಾರ್ವಜನಿಕರಿಗೆ ಕೊಡುತ್ತಾ ಇನ್ನೋಂದು ಚೀಟಿ ತಮ್ಮ ಹತ್ತೀರ ಇಟ್ಟು ಕೊಳ್ಳುತ್ತಿದ್ದನು ನಾವೆಲ್ಲರೂ ದಾಳಿ ಮಾಡಿ ಹಿಡಿದು ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಜಾವೇದ ತಂದೆ ಇಬ್ರಾಹಿಂಖಾನ ಸಾ||ದೀಲದಾರ ಕಾಲೋನಿ ಎಂ.ಎಸ್‌.ಕೆ.ಮೀಲ್‌ ಕಲಬುರಗಿ ಅಂತಾ ತಿಳಿಸಿದನು.  ಆತನ ಅಂಗಶೋಧನೆ ಮಾಡಲು ಅವನ ಹತ್ತೀರ ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದ ಹಣ 4,215/- ರೂ, ಒಂದು ಬಾಲ್‌ಪೆನ್  ಮತ್ತು ನಾಲ್ಕು ಮಟಕಾ ನಂಬರ ಬರೆದ ಚೀಟಿ ದೊರೆತಿದ್ದು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಕಾಳಗಿ ಠಾಣೆ : ದಿನಾಂಕ 18/03/15 ರಂದು ಮುಂಜಾನೆ 8-00 ಗಂಟೆಯ ಸುಮಾರಿಗೆ ನಮ್ಮ ತಂದೆ ಮತ್ತು ನಮ್ಮ ತಮ್ಮ ಮಲ್ಲಿಕಾರ್ಜುನ ಇವರು ನಮ್ಮ ಮೋ.ಸೈ ನಂ ಕೆ.ಎ 28 ಆರ್-1897 ನೇದ್ದರ ಮೇಲೆ ಕುಳಿತು ಕೊಡಂಬಲ ಗ್ರಾಮಕ್ಕೆ ಕೆಂಪು ಕಲ್ಲು ತರುವ ಕುರಿತು ಹೋಗಿದ್ದರು 10-00 ಎ.ಎಂ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ತಮ್ಮ ಫೋನ ಮಾಡಿ ನಾವು ಬೆಡಸೂರ (ಎಂ) ತಾಂಡಾದ ಸಮೀಪ ರೋಡಿನ ಮೇಲೆ ಬಿದ್ದು ಭಾರಿ ಗಾಯ ಹೊಂದಿರುತ್ತೆವೆ ಅಂತಾ ತಿಳಿಸಿದ್ದನು ಆಗ ನಾನು ಮತ್ತು ಇನ್ನೊಬ್ಬ ತಮ್ಮ ಲಕ್ಷ್ಮಣ ಕೂಡಿ ಟಂಟಂ ತೆಗೆದುಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ  ನನ್ನ ತಂದೆಯ ಎರಡು ಮೇಲಕಿಗೆ ರಕ್ತ ಗಾಯವಾಗಿ, ಕಿವಿಯೊಳಗಿನಿಂದ ರಕ್ತ ಸೋರುತ್ತಿತ್ತು ಎರಡು ಕೈಗಳಿಗೂ, ಎರಡು ಮೋಳಕಾಲುಗಳಿಗೂ ರಕ್ತ ಗಾಯವಾಗಿತ್ತು ನನ್ನ ತಮ್ಮನಿಗೂ ಎಡ ಪಾದಕ್ಕು, ಕಪಾಳಕ್ಕು, ಮತ್ತು ಎರಡು ಕೈಗಳಿಗೂ ರಕ್ತ ಗಾಯಗಳಾಗಿದ್ದವು ವಿಚಾರಿಸಲಾಗಿ ನಮ್ಮ ಎದುರಿಗೆ ಮಂಗಗಳು ಬರುತ್ತಿದ್ದವು ನಾನು ಸ್ವಲ್ಪ ಜೋರಾಗಿ ಒಂದು ಸೈಡಿನಿಂದ ಮುಂದೆ ಹೋಗಬೇಕು ಎನ್ನುವಷ್ಟರಲ್ಲಿ ಮೋ.ಸೈ  ಆಯಾ ತಪ್ಪಿ ಒಮ್ಮೆಲ್ಲೆ ಬಿದ್ದು ಬಿಟ್ಟೆವು ಅಂತಾ ಹೇಳಿದನು ನನ್ನ ತಮ್ಮ, ತಂದೆಗೆ ಉಪಚಾರಕ್ಕಾಗಿ ಆಸ್ಪತ್ರೆಗೆ ತೆಗೆದುಕೊಂಡು ಬರುವಾಗ ಕಂದಗೂಳ ಕ್ರಾಸನ ಹತ್ತಿರ ನಮ್ಮ ತಂದೆ ಭಾರಿ ಗಾಯದಿಂದ ಮೃತ ಪಟ್ಟಿರುತ್ತಾರೆ ಅಂತಾ ಶ್ರೀ ಖಂಡೆರಾವ ತಂದೆ ಗುರುನಾಥ ಪಾಟೀಲ ಸಾ:ನಿಪ್ಪಣಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ :  ದಿನಾಂಕ 18-03-2015 ರಂದು ಮಾಧವರೆಡ್ಡಿ ತನ್ನ ಬಜಾಜ್ ಪಲ್ಸರ್ ಮೊ.ಸೈ ನಂ-AP-29AM-0750 ನೇದ್ದನ್ನು ತೆಗೆದುಕೊಂಡುಪರಸಿ ಲೋಡ ಮಾಡಿಸಲು ಹೋಗಿ ಬರುತ್ತೇನೆ ಅಂತ ಹೇಳಿ ಹೋಗಿದ್ದನು ಆತ ಹೋದ ನಂತರ ನಾನು ಆತನ ಮೊಬೈಲಗೆ ಫೋನ ಮಾಡಲು, ಆತನ ಮೊಬೈಲ್ ಬೇರೆ ಯಾರೊ ಒಬ್ಬರು ರಿಸಿವ್ ಮಾಡಿ ತಿಳಿಸಿದ್ದೇನೆಂದರೆ, ನೀವು ಫೋನ ಮಾಡಿದವರೆಗೆ ಟಿಪ್ಪರ ಹಾಯಿಸಿದ್ದು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸೇಡಂಕ್ಕೆ 108 ಅಂಬ್ಯೂಲೆನ್ಸದಲ್ಲಿ ತೆಗೆದುಕೊಂಡು ಹೋಗುತ್ತಿದ್ದೇವೆ ಅಂತ ತಿಳಿಸಿದಾಗ ನಾನು ಆಸ್ಪತ್ರೆಗೆ ಹೋಗಿ ನೋಡಲು ಮಧಾವರೆಡ್ಡಿ ಇತನಿಗೆ ಹೊಟ್ಟೆಗೆ ಭಾರಿ ಗುಪ್ತಗಾಯವಾಗಿ ಮೃತಪಟ್ಟಿದ್ದನು. ಈ ಘಟನೆಯ ಬಗ್ಗೆ ಕೇಳಲು, ಮಾಧವರೆಡ್ಡಿ ಇತನು ವಿ.ಸಿ.ಎಫ್ ಕಡೆಯಿಂದ ಗುರುರಾಜ ವೈನ್ಸ ಅಂಗಡಿ ಹತತಿರ ಬರುತ್ತಿರುವಾಗ ಜಿ.ಕೆ. ಕ್ರಾಸ್ ದಿಂದ ಟಿಪ್ಪರ್ ವಾಹನ ನಂ-KA32-C-3419ನೇದ್ದರ ಚಾಲಕ ತನ್ನ ವಾಹನ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡೆಯಿಸಿದ್ದು ಇರುತ್ತದೆ ಸದರಿ ಘಟನೆ ಅಂದಾಜು 1230 ಗಂಟೆಗೆ ಆಗಿರುತ್ತದೆ, ಈ ಅಪಘಾತ ನೋಡಿ ಟಿಪ್ಪರ ಚಾಲಕ ತನ್ನ ವಾಹನ ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತಾನೆ ಅಂತಾ ಶ್ರೀ ಪವನ ತಂದೆ ಭೀಮೇಶ್ವರರಾವ ಘಂಟಾ ಸಾ:ನೆಲ್ಲಜರ್ಲಾ ಸೀತಾರಾಮ ಗುಡಿ ಹತ್ತಿರ, ಜಿಲ್ಲಾ:ಪಶ್ಚಿಮ ಗೋದಾವರಿ (ಎ.ಪಿ) ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 11.01.15 ರಂದು ಮುಂಜಾನೆ ಜೇವರ್ಗಿ ಕಲಬುರಗಿ ಮೇನ್‌ ರೋಡ್‌ ಮೇಲೆ ಕಟ್ಟಿ ಸಂಗಾವಿ ಕ್ರಾಸ್‌ ಹತ್ತಿರ ಮೇನ್‌ ರೋಡಿನಲ್ಲಿ ಫಿರ್ಯಾದಿಯ ಮಗ ವಿಶಾಲ್ ಈತನು ರೋಡಿನ ಸೈಡಿನಿಂದ ನಡೆದುಕೊಂಡು ಬರುತ್ತಿದ್ದಾಗ ಆ ವೇಳೆಗೆ ಜೇವರ್ಗಿ ಕಡೆಯಿಂದ ಬಂದ ಕಾರ್‌ ನಂ ಎಮ್.ಹೆಚ್.11ಬಿ.ಹೆಚ್.9311 ನೇದ್ದರ ಚಾಲಕನು ತನ್ನ ಕಾರ್‌‌  ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಫಿರ್ಯಾದಿಯ ಮಗನಿಗೆ ಡಿಕ್ಕಿ ಪಡಿಸಿ ಗಾಯಪಡಿಸಿದ್ದು  ಈ ಬಗ್ಗೆ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಗಾಯಾಳು ಬಾಲಕ ವಿಶಾಲ ಇತನು ಉಪಚಾರ ಫಲಕಾರಿಯಾಗದೆ ದಿನಾಂಕ 12.03.2015 ರಂದು ಸೊಲ್ಲಾಪುರ ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಂಗಪ್ಪಾ ತಂದೆ ಶಿವರಾಜ ಕೊಡ್ಲಿ  ಸಾ: ಮಹಾದೇವ ನಗರ ಶಹಾಬಜಾರ   ಕಲಬುರಗಿ ರವರು  ದಿನಾಂಕ 19-03-2015 ರಂದು ರಾತ್ರಿ 00-30 ಗಂಟೆಗೆ ಕ್ರಿಸ್ಟಲ್ ಪ್ಯಾಲೇಸ ಬಾರ & ರೆಸ್ಟೊರೆಂಟ್ ನಲ್ಲಿ ಕೆಲಸ ಮುಗಿಸಿಕೊಂಡು ಬಾರ ಮುಚ್ಚಿದ ನಂತರ ಮನೆಗೆ ಹೋಗುವ ಕುರಿತು ನಾನು ನನ್ನ ಮೋಟಾರ ಸೈಕಲ ಮೇಲೆ ಮತ್ತು ನಾಗರಾಜ ಇತನು ತನ್ನ ಮೋಟಾರ ಸೈಕಲ ನಂ ಕೆಎ-04-ಹೆಚ.ಎ-1365 ನೇದ್ದನ್ನು ರಾಮ ಮಂದಿರ ರಿಂಗ ರೋಡ ಮೂಖಾಂತರವಾಗಿ ಆರ.ಪಿ. ಸರ್ಕಲ ಕಡೆಗೆ ಚಲಾಯಿಸಿಕೊಂಡು ಹೋಗುವಾಗ ಕರುಣೇಶ್ವರ ನಗರ ಹತ್ತೀರ ಶ್ರೀ ಗುರು ಸಿದ್ದರಾಮೇಶ್ವರ ಫೈನಾನ್ಸ ಎದುರು ರೋಡ  ಮೇಲೆ ಕಾರ ನಂ ಕೆಎ-33-ಎಮ್-4049 ನೇದ್ದರ ಚಾಲಕ ವಿನಾಯಕ ಇತನು ತನ್ನ ಕಾರನ್ನು ರಾಂಗ ಸೈಡ ಮೂಲಕ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನಾಗರಾಜ ಇತನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನಾಗರಾಜ ಇತನಿಗೆ ಬಲಗಾಲು ತೊಡೆಗೆ ಭಾರಿ ಗುಪ್ತಪೆಟ್ಟು ಬಲಗಾಲು ಮೊಳಕಾಲ ಕೆಳೆಗೆ ಭಾರಿ ಪೆಟ್ಟು ಎಡಗೈ ಮುಂಗೈಗೆ ರಕ್ತಗಾಯ ಮತ್ತು ತರಚಿದಗಾಯ ಎಡ ಕಿವಿಗೆ ಪೆಟ್ಟು ಬಿದ್ದು ಕಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 17/03/2015 ರಂದು ಆನೂರ ಗ್ರಾಮದ ಜಟ್ಟಿಂಗರಾಯ ಮಾದರ ರವರ ಮದುವೇ ಸೊಲಾಪೂರದಲ್ಲಿ ಇರುವುದರಿಂದ ಶ್ರೀ ಪೀರಪ್ಪಾ ತಂದೆ ಧರ್ಮಣ್ಣಾ ಬಬಲಾದ ಸಾ : ಆನೂರ  ಹಾಗೂ ಹಣಮಂತ ಮಾಂಗಭಾಗಪ್ಪಾ ಬಬಲಾದಿಶರಣು ಬಬಲಾದಿ,ಬಸಣ್ಣ ಆನೂರಕರ ಹಾಗೂ ಗೌಡಪ್ಪಾ ಆನೂರಕರ ರವರೇಲ್ಲರು ಕೂಡಿ ಆನೂರ ಗ್ರಾಮದ ನಿಂಗಣ್ಣ ಸಿಂಗೆ ರವರ ಜೀಪ ನಂ ಕೆಎ-19 ಎಮ್ - 8847 ನೇದ್ದರಲ್ಲಿ ಹೋಗಿ ಮದುವೆ ಮುಗಿಸಿ ಮರಳಿ ಆನೂರ ಗ್ರಾಮಕ್ಕೆ ಬರುವಾಗ ರಾತ್ರಿ 9.00ಪಿಎಮ್ ಸುಮಾರಿಗೆ ಆನೂರ ಗ್ರಾಮದ ಅಂಬಣ್ಣ ಭೂಸನೂರ ರವರ ಹೊಲದ ಹತ್ತಿರ ರೋಡಿನ ಬಲಭಾಗಕ್ಕೆ ಜೀಪ ಚಾಲಕನಾದ ನಿಂಗಣ್ಣ ಇತನು ತನ್ನ ಜೀಪ ಅತಿವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿ ಪಲ್ಟಿ ಮಾಡಿ ಫಿರ್ಯಾದಿ ಹಾಗೂ ಉಳಿದವರಿಗೆ ಗಾಯಪಡಿಸಿರುತ್ತಾನೆ ಅಂತ5ಆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಹಿರೆಗೆಪ್ಪ ಸಾಲುಟಗಿ ಸಾ||ಹಿಂಚಗೇರಾ ಇವರ ತಂದೆಯ ಅಣ್ಣ ತಮ್ಮಕಿಯವರಾದ ಅಮೋಗಿ ತಂದೆ ಶರಣಪ್ಪ ಸಾಲುಟಗಿಕಾಮಣ್ಣ ತಂದೆ ಶರಣಪ್ಪ ಸಾಲುಟಗಿ ಇವರೊಂದಿಗೆ ಹೊಲದ ಸಂಬಂಧ ಈ ಮೋದಲಿನಿಂದಲು ತಕರಾರು ಇದ್ದು ದಿನಾಂಕ 18-03-2015 ರಂದು ಬೆಳಿಗ್ಗೆ  ನಾನು ನಮ್ಮ ಮನೆಯಿಂದ ಹೊಳೆಯ ಕಡೆಗೆ ಹೋಗುತ್ತಿದ್ದಾಗ ನಮ್ಮ ಗ್ರಾಮದ ಶಾ ಹುಸೇನ ಬಾಷಾ ದರ್ಗಾದ ಹತ್ತಿರ ಬಂದಾಗ ನನ್ನ ತಂದೆಯ ಅಣ್ಣ ತಮ್ಮರಾದ 1) ಅಮೋಗಿ ತಂದೆ ಶರಣಪ್ಪ ಸಾಲುಟಗಿ, 2) ಕಾಮಣ್ಣ ತಂದೆ ಶರಣಪ್ಪ ಸಾಲುಟಗಿ ಹಾಗೂ ಅವರ ಮಕ್ಕಳಾದ 3) ಸಿದ್ದಪ್ಪ ತಂದೆ ಅಮೋಗಿ ಸಾಲುಟಗಿ 4) ಶಿವರಾಯ ತಂದೆ ಭೀಮಶಾ ಸಾಲುಟಗಿ 5)ಶಿರಪ್ಪ ತಂದೆ ಶಿವರಾಯ ಸಾಲುಟಗಿ ಸಾ|| ಎಲ್ಲರೂ ಹಿಂಚಗೇರಾ ಇವರು ನನ್ನ ಹತ್ತಿರ ಬಂದು ನನಗೆ ತಡೆದು ನಿಲ್ಲಿಸಿ ಏನೊ ಸೂಳೆ ಮಗನಾ ನಿಮ್ಮ ಅಪ್ಪ ಮಾಳ್ಯಾಗ ಊರ ಬಿಟ್ಟು ಕಳಸಿವಿಹೊಲದ ತಂಟೆಗೆ ಬಂದರೆ ನಿನಗೆ ಮತ್ತು ನಿನ್ನ ಅಣ್ಣ ಮಾಹಾಂತೇಶನಿಗೆ ಇಬ್ಬರಿಗೂ ಊರು ಬಿಟ್ಟು ಕಳಸ್ತಿವಿ ಎಂದು  ಬೈಯುತ್ತಿದ್ದರು. ಆಗ ನಾನು ಯಾಕ ಬೈತಿರಿ ಈಗ ನಾನೇನು ಮಾಡಿನಿ ಅಂತಾ ಹೇಳಿದೆನುಅದಕ್ಕೆ ಅಮೋಗಿ ಮತ್ತು ಕಾಮಣ್ಣ ಇಬ್ಬರು ಮಗನೆ ನಮಗೆ ಎದರ ಮಾತಾಡ್ತಿ ಅಂತಾ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಹೊಡೆದರುಆಗ ಸಿದ್ದಪ್ಪ ಮತ್ತು ಶಿವರಾಯ ಇವರು ಈ ಮಗನಿಗೆ ಈ ತರ ಹೇಳಬಾರದು ಅಂತಾ ಅಂದು ಅಲ್ಲಿಯೆ ಬಿದ್ದ ಒಂದು ಬಡಿಗೆಯನ್ನು ತಗೆದುಕೊಂಡು ನನ್ನ ತಲೆಗೆ ಹೊಡೆದನುಶಿವರಾಯ ಮತ್ತು ಶಿರಪ್ಪ ಇವರು ಕೈಯಿಂದ ನನ್ನ ಹೊಟ್ಟೆಗೆ ಹಾಗೂ ಮೈ ಕೈಗೆ ಹೊಡೆದರು ,ಆಗ ನಾನು ಕೇಳಗೆ ಬಿದ್ದಾಗ ಎಲ್ಲರೂ ಕೂಡಿ ನನಗೆ ಕಾಲಿನಿಂದ ಒದ್ದಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ  17/03/15 ರಂದು ಸಾಯಂಕಾಲ 6 ಗಂಟೆಗೆ ಪಿರ್ಯಾದಿ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದಿ ಹೇಳಿಕೆ ಸಾರಾಂಶವೇನೆಂದರೆ ಕಮಲಾಬಾಯಿ ಗಂಡ ಚಂದ್ರಕಾಂತ ಇವಳು 10-12 ವರ್ಷ ಹಿಂದೆ ಮದುವೆ ಮಾಡಿಕೊಂಡು ಬಂದಿದ್ದು ಆಗಿನಿಂದ ಗಂಡ ಹಾಗು ಅತ್ತೆಮಾವ ಕಿರುಕುಳ ನೀಡುತ್ತಿದ್ದು ಆಕೆಗೆ 3 ಹೆಣ್ಣು ಹಾಗು 1 ಗಂಡು ಮಗು ಇದ್ದು ಅವಳ ಗಂಡನಿಗೆ ಹಾಗು ಮಾವನಾದ ಯಲ್ಲಪ್ಪನಿಗೆ ಪಿರ್ಯಾದಿಯು ತೊಂದರೆ ಕೊಡಬೇಡಿ ಎಂದು ತಿಳಿಸಿರುತ್ತಾರೆ. ಈ ದಿನ ಸಾಯಂಕಾಲ 4 ಗಂಟೆಗೆ ಮನೆಗೆ ಬಂದಾಗ ಸದರಿ ಕಮಲಾಬಾಯಿ ಇವಳು ತನ್ನ ಮಕ್ಕಳಾದ ಸುನಿತಾ 6 ವರ್ಷ ಹಾಗು ಮಗನಾದ ಅಂಬರೀಶ 3 ವರ್ಷ ಇವರನ್ನು ಕರೆದುಕೊಂಡು ಚಂದ್ರನಗರದಲ್ಲಿರುವ ಹೂಗಾರ ರವರ ಹೊಲದಲ್ಲಿರುವ ಬಾವಿಯಲ್ಲಿ ಇಬ್ಬರು ಮಕ್ಕಳನ್ನು ತಳ್ಳಿ ತಾನು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ ಎಂದು ತಿಳಿದು ಹೋಗಿ ನೋಡಲಾಗಿ ಸಂಜೆ 5:30 ಗಂಟೆಗೆ ನೀರಿನಿಂದ ಹೊರಗಡೆ ತೆಗೆದಿದ್ದು ಕಾರಣ  ಅವಳು ತನ್ನ ಗಂಡಅತ್ತೆ , ಮಾವನ ಕಿರುಕುಳ ತಡೆಯದೆ ಮಕ್ಕಳನ್ನು ಸಾಯಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ, ಅಂತಾ ಶ್ರೀ ಪಂಡಿತ್ ತಂದೆ ಭೀಮಶಾ ಒಡೆಯರ್ ಸಾ : ಚಂದ್ರನಗರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಗಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಿರುಕಳ ನೀಡಿ ಆತ್ಮ ಹತ್ಯ ಮಾಡಿಕೊಳ್ಳಲು ಪ್ರಚೋದನೆ ಮಾಡಿದ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಮರೆಪ್ಪ ತಂ, ನಾಗಯ್ಯ ಬಂಡಿವಡ್ಡರ, ಸಾ:ಭೂಂಯಾರ, ತಾ:ಜಿ:ಕಲಬುರಗಿ ಹಾ:ವ: ಸರಡಗಾಂಡ ತಾ:ಪಲ್ಟಾನ್, ಜಿ:ಸತಾರ ಮಹಾರಾಷ್ಟ್ರ ಇವರಿಗೆ ಇಬ್ಬರೂ ಅಕ್ಕತಂಗಿಯರಿದ್ದು ಈಗ ಸುಮಾರು 10-12 ವರ್ಷಗಳ ಹಿಂದೆ ನನ್ನ ತಂಗಿಯಾದ ಕಮಲಾಬಾಯಿ ಇವಳನ್ನು ಚಂದ್ರನಗರ ಗ್ರಾಮದ ಯಲ್ಲಪ್ಪ ವಡ್ಡರ ಇತನ ಮಗನಾದ ಚಂದ್ರಕಾಂತ @ ಚಂದ್ರು ಇತನೊಂದಿಗೆ ಕೊಟ್ಟು ಲಗ್ನ ಮಾಡಿದ್ದು ನಂತರ ಅವಳಿಗೆ ಒಂದು ಹೆಣ್ಣು ಮಗು ಜನಿಸಿದಾಗ ಗಂಡನ ಮನೆಯವರು ನಿನಗೆ ಗಂಡು ಮಗು ಆಗಿಲ್ಲ ಅಂತಾ ಕಿರುಕುಳ ನೀಡುತ್ತಿದ್ದರು ಇದು ಗೋತ್ತಾಗಿ ನಾವು ತಂದೆ ತಾಯಿಯೊಂದಿಗೆ ಚಂದ್ರನಗರಕ್ಕೆ ಹೋಗಿ ಅವರಿಗೆ ತಿಳುವಳಿಕೆ ನೀಡಿರುತ್ತೇವೆ ನಂತರ ನನ್ನ ತಂಗಿ ಕಮಲಾಬಾಯಿ ಇವಳು ಪು:ನ 2 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದಾಗ ಆಕೆಯ ಗಂಡನ ಮನೆಯವರು ಮತ್ತೆ ಕಿರುಕುಳ ನೀಡುವದನ್ನು ಹೆಚ್ಚು ಮಾಡಿದರು ನಿನಗೆ ಗಂಡು ಮಕ್ಕಳು ಆಗುವದಿಲ್ಲ ನಮ್ಮ ಮಗ ಚಂದ್ರು @ ಚಂದ್ರಕಾಂತನಿಗೆ 2ನೇ ಮದುವೆ ಮಾಡುತ್ತೇವೆ ಅಂತಾ ಅತ್ತೆ ಮಾವ ಹೇಳುತ್ತಿದ್ದರು ಈ ವಿಷಯ ಕಮಲಾಬಾಯಿ ಇವಳು ನನಗೆ ಆಗಾಗ ಫೋನ್ ಮುಖಾಂತರ ತಿಳಿಸಿದಳು ಕೊನೆಯದಾಗಿ ಕಮಲಾಬಾಯಿ ಒಂದು ಗಂಡು ಮಗುವಿಗೆ ಜನ್ಮ ನೀಡಿದಾಗ ಸಮಸ್ಯೆ ಬಗೆಹರಿಯುತ್ತೇಂದು ನಾವು ಸುಮ್ಮನಾದೇವು ಈಗ ನಾಲ್ಕು ತಿಂಗಳ ಹಿಂದೆ ನಮ್ಮ ಭೂಂಯಾರ ಗ್ರಾಮದಲ್ಲಿ ಮೋಹರಂ ಹಬ್ಬ ಇದ್ದಿದ್ದು ಮೋಹರಂ ಹಬ್ಬದ ವೇಳೆಯಲ್ಲಿ ಮನೆಯ ಹೆಣ್ಣು ಮಕ್ಕಳು ತಂದೆತಾಯಿಗೆ ಆಹೇರಿ ಮಾಡುವ ವಾಡಿಕೆ ಇರುತ್ತದೆ ಅದರಿಂದ ನಾನು ಕಮಲಾಬಾಯಿಗೆ ಊರಿಗೆ ಕರೆತರಲು ನನ್ನ ಹೆಂಡತಿ ಶ್ರೀದೇವಿ ಇವಳಿಗೆ ಚಂದ್ರ ನಗರಕ್ಕೆ ಕಳುಹಿಸಿ ಕೊಟ್ಟಾಗ ಅವಳ ಗಂಡನ ಮನೆಯವರು ಕಳುಹಿಸಿ ಕೊಟ್ಟಿರುವದಿಲ್ಲ ಅಲ್ಲದೆ ಆಹೇರಿ ಕೂಡ ಕಳುಹಿಸಿ ಕೊಟ್ಟಿರುವದಿಲ್ಲ ಇದನ್ನು ನೋಡಿ ಕಮಲಾಬಾಯಿ ಇವಳು ನೋಂದಿಕೊಂಡಿದಳು ಈಗ ಸುಮಾರು 2 ತಿಂಗಳ ಹಿಂದೆ ನನ್ನ ತಂಗಿ ಕಮಲಾಬಾಯಿ ಇವಳು ತನ್ನ ಮಕ್ಕಳಾದ ಅಂಬಿಕಾ, ಅನ್ನಪೂರ್ಣ, ಸುನೀತಾ, ಮತ್ತು ಅಂಬ್ರೇಶ ಇವರೆಲ್ಲರೊಂದಿಗೆ ನಾನು ಕೆಲಸ ಮಾಡುತ್ತಿರುವ ಊರಿಗೆ ಬಂದಿದಳು. ಇದರಿಂದ ನಾನು ಅವಳ ಗಂಡ ಅತ್ತೆ ಮತ್ತು ಮಾವನಿಗೆ ನನ್ನ ತಂಗಿ ನಿಮ್ಮ ಕಿರುಕುಳಕ್ಕೆ ಬೇಸತ್ತು ಇಲ್ಲಿಗೆ ಬಂದಿದ್ದಾಳೆ ಅಂತಾ ವಿಷಯ ತಿಳಿಸಿದ್ದು ಇರುತ್ತದೆ, ನಂತರ ಕಮಲಾಬಾಯಿಯ ಗಂಡನಾದ ಚಂದ್ರು @ ಚಂದ್ರಕಾಂತ ನನ್ನ ಹತ್ತಿರ ಬಂದು ಕಮಲಾಬಾಯಿ ಹಾಗೂ ಅವಳ ಮಕ್ಕಳಿಗೆ ಕರೆದುಕೊಂಡು ಹೋಗಿ ಸ್ವಲ್ಪ ದಿವಸದ ವರೆಗೆ ದೌಂಡದಲ್ಲಿ ನೆಲೆಸಿ ಕೆಲಸ ಮಾಡಿ ಈಗ 3 ದಿವಸಗಳ ಹಿಂದೆ ತನ್ನ ಹೆಂಡತಿ ಮಕ್ಕಳೊಂದಿಗೆ ಚಂದ್ರನಗರಕ್ಕೆ ಬಂದಿರುತ್ತಾನೆ ಇಂದು ದಿನಾಂಕ: 17/03/2015 ರಂದು ಬೆಳಿಗ್ಗೆ 11:00 ಗಂಟೆ ಸುಮಾರಿಗೆ ನನ್ನ ಹಿರಿಯ ಅಣ್ಣನಾದ ಚಂದ್ರಕಾಂತ ಇತನು ಹಳ್ಲಿಖೇಡ (ಕೆ) ಗ್ರಾಮದಿಂದ ಫೋನ್ ಮಾಡಿ ತಂಗಿ ಕಮಲಾಬಾಯಿ ಇವಳು ತನ್ನ ಮಕ್ಕಳಾದ ಸುನಿತಾ ಮತ್ತು ಅಂಬ್ರೇಶನೊಂದಿಗೆ ಚಂದ್ರನಗರದಲ್ಲಿರುವ ಭಾವಿಯೊಂದರಲ್ಲಿ ಜಿಗಿದು ಸತ್ತಿರುತ್ತಾಳೆ ಎಂದು ತಿಳಿಸಿದಾಗ ನಾನು ಸಾಯಂಕಾಲ 5:30 ಗಂಟೆಗೆ ಚಂದ್ರನಗರಕ್ಕೆ ಬಂದು ಅವಳ ಹಿರಿಯ ಮಗಳಾದ ಅಂಬಿಕಾ ಇವಳನ್ನು ವಿಚಾರಿಸಿದಾಗ ನಿನ್ನೆ ರಾತ್ರಿ ತಾಯಿಗೆ ಯಲ್ಲಪ್ಪ ಇವರು ಜಗಳ ತೆಗೆದು ನನ್ನ ಮಗನಿಗೆ ಪೂ:ನದಲ್ಲಿ ನಿನ್ನ ಅಣ್ಣ ಯಾಕೆ ಹೊಡೆದಿದ್ದಾರೆ ಅಂತಾ ಅವಾಚ್ಯವಾಗಿ ಬೈದಿರುತ್ತಾನೆ ನಂತರ ಶಾರಮ್ಮ ಮತ್ತು ಚಂದ್ರು @ ಚಂದ್ರಕಾಂತ ಇವರು ಕೂಡ ಬೈದಿದ್ದರಿಂದ ತಾಯಿ ಇವಳು ಎಲ್ಲಾದರೂ ಹೋಗಿ ಸತ್ತುಹೋಗುತ್ತೇನೆ ಅಂತಾ ಹೇಳಿದಾಗ ಅವರು 3 ಜನ ಸಾಯಿ ನಮಗೇನು ಆಗುತ್ತದೆ ಅಂತಾ ಹೇಳಿದ್ದರಿಂದ ಇಂದು ತಾಯಿಯು ಮಾನಸಿಕ ಮತ್ತು ದೈಹಿಕ ಕಿರುಕುಳ ತಾಳಲಾರದೇ ಸುನೀತಾ ಹಾಗೂ ಅಂಬ್ರೀಶ ಇವರಿಗೆ ಕರೆದುಕೊಂಡು ಚಂದ್ರನಗರದಲ್ಲಿರುವ ಬಾವಿಯಲ್ಲಿ ಜಿಗಿದು ಆತ್ಮಹತ್ಯ ಮಾಡಿಕೊಂಡಿರುತ್ತಾಳೆ ಅಂತಾ ತಿಳಿಸಿರುತ್ತಾಳೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.